भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cabal

ನಾಮವಾಚಕ

ಪದಗುಚ್ಛ

the Cabal = 1cabal(3).

  • ಒಳಸಂಚು; ಪಿತೂರಿ; ಹೊಂತ; ಗುಪ್ತಕಾರ್ಯ.
  • (ರಾಜಕೀಯದಲ್ಲಿ) ಪಿತೂರಿತಂಡ; ಪಿತೂರಿಗಾರರ ಕೂಟ; ಸಂಚುಕೂಟ; ಪಿತೂರಿ, ಸ್ವಾರ್ಥ, ಉಪದ್ರವ, ಮೊದಲಾದವುಗಳಿಗಾಗಿ ಕೆಲಸ ಮಾಡುವ ಗುಂಪು.
  • (ಚರಿತ್ರೆ) ಸಚಿವಪಂಚಕ; ಮಂತ್ರಿಪಂಚಕ ಮಂಡಲಿ; ಇಂಗ್ಲಂಡಿನ ಎರಡನೆಯ ಚಾರ್ಲ್ಸ್‍ನ ಆಳ್ವಿಕೆಯಲ್ಲಿ ವಿದೇಶ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ, C,A,B,A, ಮತ್ತು Lಗಳಿಂದ ಕ್ರಮವಾಗಿ ಪ್ರಾರಂಭವಾಗುವ ಕುಲನಾಮಗಳನ್ನು ಹೊಂದಿದ್ದ, ಇಂದಿನ ಸಚಿವ ಸಂಪುಟಗಳ ಮೂಲವಾದ, ಐದು ಜನ ಮಂತ್ರಿಗಳನ್ನೊಳಗೊಂಡ ಸಮಿತಿ.

cabal

ಅಕರ್ಮಕ ಕ್ರಿಯಾಪದ

ಪಿತೂರಿ ಹೂಡು; ಒಳಸಂಚು ನಡೆಸು; ಒಳಕೂಟ ಕಟ್ಟು.

cabala

ನಾಮವಾಚಕ

= cabbala.

caballer

ನಾಮವಾಚಕ

ಪಿತೂರಿಗ; ಪಿತೂರಿಗಾರ; ಸಂಚುಗಾರ; ಹೊಂತಗಾರ.

caballero

ನಾಮವಾಚಕ

(ಸ್ಪೇನ್‍ ದೇಶದ) ಸಭ್ಯ; ಮಹಾಶಯ; ಘನಸ್ಥ; ದೊಡ್ಡ ಮನುಷ್ಯ.

cabana

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಸಮುದ್ರದಂಡೆಯ ಯಾ ಈಜುಕೊಳದ ಬಳಿಯ) ಮರೆದಾಣ; ಮರೆಕೋಣೆ; ಕೋಣೆಯ ಯಾ ಗುಡಾರದ ರೀತಿಯ ಕಟ್ಟಡ.

cabaret

ನಾಮವಾಚಕ

  • (ಹ್ರಾನ್ಸಿನಲ್ಲಿ) ಪಾನಗೃಹ; ಮದ್ಯದಂಗಡಿ.
  • (ಇಂಗ್ಲಂಡು, ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ) ಕ್ಯಾಬರೆ; ಭೋಜನವಿನೋದ; ಭೋಜನೋಲ್ಲಾಸ; ಊಟದವರಿಗಾಗಿ ಹೋಟೆಲು ಮೊದಲಾದವುಗಳಲ್ಲಿ ಊಟದ ಜತೆಗೆ ಏರ್ಪಡಿಸುವ ನೃತ್ಯ, ಗಾಯನ, ಮೊದಲಾದ ಕಾರ್ಯಕ್ರಮಗಳು.

cabbage

ನಾಮವಾಚಕ

ಪದಗುಚ್ಛ

sea cabbage

  • (ತರಕಾರಿಯಾಗಿ ಬಳಸುವ) ಎಲೆಕೋಸು ಯಾ ಅದರ ಗಿಡ. Figure: cabbage
  • ಕೋಸಿನ – ಗೊಂಡೆ, ತಲೆ.
  • (ಆಡುಮಾತು) ಮಹತ್ತ್ವಾಕಾಂಕ್ಷೆ ಯಾ ಆಸಕ್ತಿಗಳಿಲ್ಲದ–ವ್ಯಕ್ತಿ.
  • (ಅಶಿಷ್ಟ) (ಹಣದ) ನೋಟು.

cabbage butterfly

ನಾಮವಾಚಕ

ಕೋಸುಚಿಟ್ಟೆ; ಮರಿಹುಳುಗಳಾಗಿದ್ದಾಗ ಕೋಸಿನ ಎಲೆಗಳನ್ನು ತಿನ್ನುವ, ಅನೇಕ ಬಗೆಯ ಬಿಳಿಚಿಟ್ಟೆ.

cabbage white

ನಾಮವಾಚಕ

= cabbage butterfly.

cabbage-head

ನಾಮವಾಚಕ

  • = cabbage(2).
  • (ಅಶಿಷ್ಟ) (ರೂಪಕವಾಗಿ) ದಡ್ಡ.

cabbage-palm

ನಾಮವಾಚಕ

ಕೋಸುತಾಳೆ; ತರಕಾರಿಯಾಗಿ ಬಳಸುವ, ಕೋಸಿನಂತೆ ಇರುವ ಎಲೆ ಸುಳಿ ಮೂಡುವ ತಾಳೆಮರ.

cabbage-rose

ನಾಮವಾಚಕ

ಕೋಸುಗುಲಾಬಿ; ನೆಟ್ಟಗೆ ಮೇಲಕ್ಕೆ ಬೆಳೆವ ಕೊಂಬೆಗಳಿರುವ, ಗುಲಾಬಿಬಣ್ಣದ ಸುವಾಸನೆ ಹೂವುಬಿಡುವ, ಕೋಸಿನಾಕಾರದ, ದೊಡ್ಡ ದುಂಡು ಗುಲಾಬಿ.

cabbage-tree

ನಾಮವಾಚಕ

= cabbage-palm.

cabbagy

ಗುಣವಾಚಕ

  • ಎಲೆಕೋಸಿನ ಬಣ್ಣ, ರುಚಿ ಯಾ ವಾಸನೆ ಇರುವ.
  • ಎಲೆಕೋಸಿನಂಥ.

cabby

ನಾಮವಾಚಕ

(ಆಡುಮಾತು) = cabman.

caber

ನಾಮವಾಚಕ

ಒರಟು ತೊಲೆ, ದೂಲ; ಮುಖ್ಯವಾಗಿ ಸ್ಕಾಟ್ಲಂಡಿನಲ್ಲಿ tossing the caber ಎಂಬ ಆಟದಲ್ಲಿ ಎಸೆಯುವ, ಒರಟಾಗಿ ಕೆತ್ತಿದ, ಮರದ ಕಾಂಡ.

cabin

ನಾಮವಾಚಕ

  • ಜೋಪಡಿ; ಗುಡಿಸಲು; ಕುಟೀರ; ಗುಡಿ.
  • ಹಡಗು, ವಿಮಾನ ಯಾ ಆಕಾಶನೌಕೆಯಲ್ಲಿ ಪ್ರಯಾಣಿಕರಿಗೆ ಯಾ ಚಾಲಕವರ್ಗಕ್ಕೆ ನಿಗದಿಯಾದ ಕೋಣೆ.
  • ವಿಮಾನದಲ್ಲಿ ಸಾಮಾನಿನ–ಕೋಣೆ, ವಿಭಾಗ.
  • (ಹಡಗು, ವಿಮಾನ, ರೈಲು, ಮೊದಲಾದ ವಾಹನಗಳಲ್ಲಿ) ಚಾಲಕ ಕೋಣೆ; ನಡೆಸುವವನ ಕೋಣೆ.

cabin

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಭೂತಕೃದಂತದಲ್ಲಿ) ಇಕ್ಕಟ್ಟಿನಲ್ಲಿರಿಸು; ಕಿರಿದಾದ ಜಾಗದಲ್ಲಿ–ತುರುಕು, ಗಿಡಿ.

cabin class

ನಾಮವಾಚಕ

(ಹಡಗಿನಲ್ಲಿ) ಕ್ಯಾಬಿನ್‍ ದರ್ಜೆ; ಮಧ್ಯಮ ದರ್ಜೆ; ಪ್ರಯಾಣದಲ್ಲಿ ಪ್ರಥಮ ತರಗತಿಗೂ ಕೊನೆಯದಕ್ಕೂ ನಡುವಣ ವರ್ಗದ ಸ್ಥಳಾವಕಾಶ.

Search Dictionaries

Loading Results

Follow Us :   
  Download Bharatavani App
  Bharatavani Windows App