English-Kannada Nighantu (University of Mysore)
University of Mysore
cyst
ನಾಮವಾಚಕ
ಕೋಷ್ಠ; ಸಿಸ್ಟು; ಜಿಟ್ಟಿ; ಚೀಲ; ಕೋಶ:
- (ರೋಗಶಾಸ್ತ್ರ) ದೇಹದ ಯಾವುದೇ ಭಾಗದ ಉರಿಯೂತದ ಕಾರಣ ಸ್ರವಿಸುವ ದ್ರವ, ಪರೋಪಜೀವಿಗಳ ಮರಿ ಮೊದಲಾದವನ್ನು ತುಂಬಿಕೊಂಡಿರುವ, ರಂಧ್ರಗಳಿಲ್ಲದ ಚಿಕ್ಕ ಚೀಲದಂಥ ರಚನೆ.
- (ಸಸ್ಯವಿಜ್ಞಾನ) ಪಾಚಿಯ ಬೀಜಾಣುಗಳ ಮೇಲಿನ ಹೊದಿಕೆ.
- (ಜೀವವಿಜ್ಞಾನ) ಭ್ರೂಣ ಮೊದಲಾದವನ್ನು ಒಳಗೊಂಡಿರುವ ಕೋಶ.
- (ಜೀವವಿಜ್ಞಾನ) ಪ್ರಾಣಿ ಯಾ ಸಸ್ಯಗಳಲ್ಲಿರುವ, ದ್ರವರೂಪದ ಸ್ರಾವವನ್ನು ಒಳಗೊಂಡಿರುವ ಟೊಳ್ಳಾದ ಅಂಗ, ಚೀಲ, ಕೋಶ ಮೊದಲಾದವು.
cyst-
ಸಮಾಸ ಪೂರ್ವಪದ
ಚೀಲದಂಥ,ಕೋಶದಂಥ, ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.
cysti-
ಸಮಾಸ ಪೂರ್ವಪದ
= cyst-.
cystic
ಗುಣವಾಚಕ
- ಮೂತ್ರಕೋಶದ
- ಪಿತ್ತಕೋಶದ; ಯಕೃತ್ತಿನ
- ಸಿಸ್ಟಿನಂಥ; ಜಿಟ್ಟಿನಂಥ; ಕೋಶದಂತಿರುವ.
cystiform
ಗುಣವಾಚಕ
ಚೀಲದ ಆಕಾರದ: ಕೋಶರೂಪದ; ಕೋಶರಚನೆಯ.
cystitis
ನಾಮವಾಚಕ
(ರೋಗಶಾಸ್ತ್ರ) ಸಿಸ್ಟೈಟಿಸ್; ಮೂತ್ರಕೋಶದ ಉರಿಯೂತ.
cysto-
ಸಮಾಸ ಪೂರ್ವಪದ
ಚೀಲ; ಕೋಶ; ಮುಖ್ಯವಾಗಿ ಮೂತ್ರಕೋಶ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.
cystoscope
ನಾಮವಾಚಕ
(ವೈದ್ಯಶಾಸ್ತ್ರ) ಮೂತ್ರಕೋಶದರ್ಶಕ; ಮೂತ್ರಕೋಶದ ಒಳಭಾಗವನ್ನು ಪರೀಕ್ಷಿಸಲು ಮತ್ತು ಅದಕ್ಕೆ ಔಷಧಿ ಹಾಕಲು ಬಳಸುವ, ತೆಳುವಾದ ಉರುಳೆಯಾಕಾರದ ಸಲಕರಣೆ.
cystotomy
ನಾಮವಾಚಕ
(ಶಸ್ತ್ರವೈದ್ಯ)
- ಮೂತ್ರಕೋಶಛೇದನ; ಶಸ್ತ್ರಚಿಕಿತ್ಸೆಗಾಗಿ ಮೂತ್ರಕೋಶವನ್ನು ಕತ್ತರಿಸುವಿಕೆ.
- ಪಿತ್ತಕೋಶಛೇದನ; ಶಸ್ತ್ರಚಿಕಿತ್ಸೆಗಾಗಿ ಪಿತ್ತಕೋಶವನ್ನು ಕತ್ತರಿಸುವಿಕೆ.
cyt-
ಸಮಾಸ ಪೂರ್ವಪದ
(ಜೀವವಿಜ್ಞಾನ) ಜೀವಕೋಶದ ಎಂಬರ್ಥದ ಪೂರ್ವಪ್ರತ್ಯಯ.
cytase
ನಾಮವಾಚಕ
(ಜೀವರಸಾಯನ ವಿಜ್ಞಾನ) ಸೈಟೇಸ್ ಜೀವಕೋಶದ ಭಿತ್ತಿಯನ್ನು ಕರಗಿಸಬಲ್ಲ ಎಂಜೈಮು.
cytidine
ನಾಮವಾಚಕ
ಸೈಟಿಡೀನು; ರೈಬೊನ್ಯೂಕ್ಲಿಯಿಕ್ ಮ್ಲದ ಜಲವಿಚ್ಛೇದನೆಯಿಂದ ಪಡೆಯುವ ಒಂದು ನ್ಯೂಕ್ಲಿಯೊಸೈಡು, $({\rm C}_9{\rm H}_{ 13}{\rm N}_5{\rm O}_5)$.
cyto-
ಸಮಾಸ ಪೂರ್ವಪದ
= cyt-.
cytochemistry
ನಾಮವಾಚಕ
ಕೋಶರಸಾಯನಶಸ್ತ್ರ; ಜೀವಕೋಶದಲ್ಲಿ ನಡೆಯುವ ರಾಸಾಯನಿಕ ವ್ಯಾಪಾರಗಳನ್ನು ಕುರಿತ ವಿಜ್ಞಾನ ವಿಭಾಗ.
cytochrome
ನಾಮವಾಚಕ
(ಜೀವರಸಾಯನ ವಿಜ್ಞಾನ) ಸೈಟಕ್ರೋಮು; ಶ್ವಾಸೋಚ್ಛ್ವಾಸ ಕ್ರಿಯೆಯಲ್ಲಿ ಹೀಮೊಗ್ಲಾಬಿನ್ನಂಥ ಒಂದು ವರ್ಣದ್ರವ್ಯ.
cytologist
ನಾಮವಾಚಕ
ಜೀವಕೋಶ ಶಾಸ್ತ್ರಜ್ಞ; ಕೋಶವಿಜ್ಞಾನಿ; ಜೀವಕೋಶವನ್ನು ಕುರಿತ ಶಾಸ್ತ್ರವನ್ನು ಅಭ್ಯಾಸಮಾಡಿರುವವ.
cytology
ನಾಮವಾಚಕ
ಜೀವಕೋಶಶಾಸ್ತ್ರ; ಕೋಶವಿಜ್ಞಾನ; ಜೀವಕೋಶವನ್ನು, ಮುಖ್ಯವಾಗಿ ಅವುಗಳ ರಚನೆ, ಕ್ರಿಯೆಗಳನ್ನು, ಕುರಿತ ಜೀವವಿಜ್ಞಾನದ ಶಾಖೆ.
cytoplasm
ನಾಮವಾಚಕ
ಕೋಶದ್ರವ್ಯ; ಜೀವಕೋಶದಲ್ಲಿ ನ್ಯೂಕ್ಲಿಯಸ್ ಉಳಿದು ಮಿಕ್ಕ ಭಾಗ.
czar
ನಾಮವಾಚಕ
- ಸಾರ್; ರಷ್ಯಾದ ಚಕ್ರವರ್ತಿ.
- ನಿರಂಕುಶ ರಾಜ.
- ನಿರಂಕುಶ ಸರ್ವಾಧಿಕಾರಿ.
czardas
ನಾಮವಾಚಕ
= csardas.