भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

caco-

ಸಮಾಸ ಪೂರ್ವಪದ

‘ದುರ್‍’, ಕೆಟ್ಟದ್ದು ಎಂಬ ಅರ್ಥಕೊಡುವ ಸಮಾಸ ಪೂರ್ವಪದ: cacomorphia ರಚನಾ ವಿಕೃತಿ. cacodorous ಕೆಟ್ಟನಾತದ; ದುರ್ನಾತದ.

cacod(a)emon

ನಾಮವಾಚಕ

  • ಭೂತ; ಪಿಶಾಚಿ; ಕೆಟ್ಟಶಕ್ತಿ; ದುಷ್ಟಶಕ್ತಿ.
  • ಕಡುವೈರಿ; ಬದ್ಧದ್ವೇಷಿ; ಕೆಡುಕಿ.
  • (ಜ್ಯೋತಿಷ) (ಕೇಡು ಸೂಚಿಸುವ) ಹನ್ನೆರಡನೆಯ ಮನೆ; ದ್ವಾದಶಸ್ಥಾನ.

cacodyl

ನಾಮವಾಚಕ

(ರಸಾಯನವಿಜ್ಞಾನ) ಕ್ಯಾಕಡಿಲ್‍:

  • ದುರ್ವಾಸನೆಯುಳ್ಳ, ವಿಷಪೂರಿತವಾದ, ಬಣ್ಣವಿಲ್ಲದ, ಒಂದು ಸಾವಯವ ಆರ್ಸನಿಕ್‍ ಸಂಯುಕ್ತ, ${\rm As}_2({\rm CH}_3)_4$.
  • ದುರ್ವಾಸನೆ ಬೀರುವ, ವಿಷಮಯವಾದ ಆರ್ಸನಿಕ್‍ ಮತ್ತು ಮೀಥೈಲ್‍ಗಳಿರುವ ಒಂದು ಅಣ್ವಂಗ, ${\rm As(CH}_3)_2$.

cacodylic

ಗುಣವಾಚಕ

(ರಸಾಯನವಿಜ್ಞಾನ) ಕ್ಯಾಕಡಿಲಿಕ್‍; ಕ್ಯಾಕಡಿಲ್‍ಗೆ ಸಂಬಂಧಿಸಿದ: cacodylic acid ಕ್ಯಾಕಡಿಲಿಕ್‍ ಆಮ್ಲ, ${\rm (CH}_3)_2 {\rm As OOH}$.

cacoepy

ನಾಮವಾಚಕ

ತಪ್ಪು ಉಚ್ಚಾರ; ಕೆಟ್ಟ ಉಚ್ಚಾರಣೆ.

cacoethes

ನಾಮವಾಚಕ

ಪದಗುಚ್ಛ

(ಯಾವುದೇ ಒಂದನ್ನು ಕುರಿತ) ಹುಚ್ಚು; ಹಂಬಲ; ಗೀಳು. cacoethes scribendi ಬರೆವ—ಚಟ, ಹುಚ್ಚು, ಗೀಳು.

cacographer

ನಾಮವಾಚಕ

  • ಕಾಕಲಿಪಿಕಾರ; ಕೋಚು ಕೋಚು ಅಕ್ಷರ ಬರೆಯುವವ; ಅಂದವಿಲ್ಲದ ಲಿಪಿ ಬರೆಯುವವನು.
  • ಕಾಗುಣಿತ ತಪ್ಪು ಬರೆಯುವವನು; ತಪ್ಪುಕಾಗುಣಿತದವ.

cacographic

ಗುಣವಾಚಕ

  • ಅಂದವಿಲ್ಲದ ಬರವಣಿಗೆಯ; ವಿಕಾರಾಕ್ಷರದ.
  • ತಪ್ಪು ಕಾಗುಣಿತದ; ತಪ್ಪು ಅಕ್ಷರದ.

cacography

ನಾಮವಾಚಕ

  • ಕಾಕಲಿಪಿ; ಕೋಚು ಕೋಚು ಬರೆವಣಿಗೆ; ವಿಕಾರ ಬರೆವಣಿಗೆ; ಅಂದವಿಲ್ಲದ ಬರೆವಣಿಗೆ.
  • ತಪ್ಪು ಕಾಗುಣಿತ; ತಪ್ಪು ಅಕ್ಷರ ಜೋಡಣೆ.

cacology

ನಾಮವಾಚಕ

  • ಅಪಶಬ್ದಪ್ರಯೋಗ; ಅನುಚಿತ ಪದಪ್ರಯೋಗ.
  • ತಪ್ಪು ಉಚ್ಚಾರ; ಅಶುದ್ಧೋಚ್ಚಾರಣೆ.

cacomistle

ನಾಮವಾಚಕ

ಕ್ಯಾಕಮಿಸಲ್‍; ಉತ್ತರ ಅಮೆರಿಕದ ದಕ್ಷಿಣ ಭಾಗದಲ್ಲಿ ವಾಸಿಸುವ, ಬ್ಯಾಸ್ಕರಿಸ್ಕಸ್‍ ಅಸ್ಪೂಟಸ್‍ ಕುಲದ, ಉದ್ದವಾದ ಪೊದೆಬಾಲವೂ ಚೂಪಾದ ಮೂತಿಯೂ ಇರುವ, ಒಂದು ಚಿಕ್ಕ ಮಾಂಸಾಹಾರಿ ಪ್ರಾಣಿ.

cacoon

ನಾಮವಾಚಕ

ಕಕೂನು; ಉಷ್ಣವಲಯದಲ್ಲಿ ಬೆಳೆಯುವ, 6 ರಿಂದ 8 ಅಡಿ ಉದ್ದದ ಕಾಯಿ ಬಿಡುವ, ಹೆವಿಲಿಯ ಕಾರ್ಡಿಹೋಲಿಯ ಕುಲದ ಪೊದೆಬಳ್ಳಿಯೊಂದರ, ಅಗಲವಾದ ಚಪ್ಪಟೆ ಬೀಜ.

cacophonic

ಗುಣವಾಚಕ

ಅಪಸ್ವರದ; ಅಪಶೃತಿಯ; ಸ್ವರಮೇಳನವಿಲ್ಲದ; ಕರ್ಕಶವಾದ.

cacophonous

ಗುಣವಾಚಕ

= cacophonic.

cacophony

ನಾಮವಾಚಕ

  • ಕರ್ಕಶಧ್ವನಿ.
  • ಅಪಸ್ವರ; ಅಪಶ್ರುತಿ; ಸ್ವರವಿಕಾರ; ಸ್ವರವೈಷಮ್ಯ; ಧ್ವನಿಗಳ ಕರ್ಕಶತೆ.
  • (ರೂಪಕವಾಗಿ) (ನೈತಿಕ) ವೈಷಮ್ಯ; ಹೊಂದಿಕೆಗೇಡು; ಅಸಾಂಗತ್ಯ.
  • (ಸಂಗೀತ) ಅಪಸ್ವರ; ಅಪಶ್ರುತಿ.

cactaceous

ಗುಣವಾಚಕ

ಕಳ್ಳಿಯ; ಪಾಪಾಸುಕಳ್ಳಿಯ ಯಾ ಕ್ಯಾಕ್ಟಯೇಸಿ ಕುಲಕ್ಕೆ ಸೇರಿದ.

cactal

ಗುಣವಾಚಕ

ಕಳ್ಳಿಯ; ಕಳ್ಳಿಗಳಿಗೆ ಸಂಬಂಧಿಸಿದ.

cactoid

ಗುಣವಾಚಕ

ಕಳ್ಳಿಯಾಕಾರದ; (ರಚನೆಯಲ್ಲಿ ಯಾ ಆಕಾರದಲ್ಲಿ) ಕಳ್ಳಿಯನ್ನು ಹೋಲುವ.

cactus

ನಾಮವಾಚಕ

ಕಳ್ಳಿ; ಪಾಪಾಸುಕಳ್ಳಿ; ಮೊಂಡುಗಳ್ಳಿ; ಕ್ಯಾಕ್ಟ ವಂಶದ, ದಪ್ಪವೂ ಮಾಂಸಲವೂ ಆದ ಕಾಂಡವುಳ್ಳ, ಸಾಮಾನ್ಯವಾಗಿ ಮುಳ್ಳುಗಳಿರುವ, ಆದರೆ ಎಲೆಗಳಿಲ್ಲದ ಮತ್ತು ಉಜ್ಜ್ವಲ ವರ್ಣದ ಹೂಗಳನ್ನು ಬಿಡುವ, ಹಲವು ವಿಧದ ಗಿಡಗಳು.

cactus dahlia

ನಾಮವಾಚಕ

ಕಳ್ಳಿಡೇಲಿಯ; ಕಳ್ಳಿಡೇರೆ ಹೂ; ಹೂವಿನ ಹೊರ ದಳವಲಯ ಹಿಂದಕ್ಕೆ ಸುತ್ತಿದಂತಿರುವ, ಕಳ್ಳಿಹೂವನ್ನು ಹೋಲುವ ಡೇರೆಹೂ.

Search Dictionaries

Loading Results

Follow Us :   
  Download Bharatavani App
  Bharatavani Windows App