English-Kannada Nighantu (University of Mysore)
University of Mysore
cacuminal
ಗುಣವಾಚಕ
(ಭಾಷಾಶಾಸ್ತ್ರ) ಮೂರ್ಧನ್ಯ; (ಉಚ್ಚಾರಣೆಯ ವಿಷಯದಲ್ಲಿ) ನಾಲಗೆಯ ತುದಿಯನ್ನು ಮಡಿಚಿ, ಅದರ ಕೆಳಭಾಗವನ್ನು ಅಂಗುಳಿಗೆ ತಾಕಿಸಿ ಉಚ್ಚರಿಸುವ.
cad
ನಾಮವಾಚಕ
- ಮರ್ಯಾದೆ ತಿಳಿಯದವನು; ಕೀಳು ತೆರದವನು.
- ಅಸಭ್ಯ (ವರ್ತನೆಯವನು); ಅನಾಗರಿಕ; ಅಸಂಸ್ಕೃತ.
- ನೀಚ; ಭಂಡ; ಕೀಳ; ತುಚ್ಛ; ಹಲ್ಕಾ.
- (ಗತಪ್ರಯೋಗ) ಬಸ್ ಕಂಡಕ್ಟರು.
- (ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ) (ಅಶಿಷ್ಟ) (ಗತಪ್ರಯೋಗ) ತೈನಾತಿ; ಆಟಗಳ ಆಳು; ಆಟಗಳಲ್ಲಿ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಾ ಅವರ ಬಳಿಯಲ್ಲೇ ಓಡಾಡುತ್ತಿರುವವ.
cadastral
ಗುಣವಾಚಕ
- (ನಕಾಶೆ ಯಾ ಸರ್ವೆಯ ವಿಷಯದಲ್ಲಿ) (ಕಂದಾಯ ಗೊತ್ತುಪಡಿಸಲು ರಚಿಸಿರುವ) ಜಮೀನುದಾಖಲೆಯ; ಪಟ್ಟೆಯ; ವಿಸ್ತೀರ್ಣ, ವಾರಸುದಾರ, ಬೆಲೆ ಮೊದಲಾದವನ್ನು ಒಳಗೊಂಡಿರುವ, ತೋರಿಸುವ.
- ಖಾತೆಯ; ಪಹಣಿಯ; ಜಮೀನಿನ ಪಟ್ಟೆಗೆ ಸಂಬಂಧಿಸಿದ.
cadastre
ನಾಮವಾಚಕ
(ಅಧಿಕೃತ) ಖಾತೆ; ಪಹಣಿ; ಪಟ್ಟೆ; ಜಮೀನು–ದಾಖಲೆ, ರಿಜಿಸ್ಟರು.
cadaver
ನಾಮವಾಚಕ
(ಮುಖ್ಯವಾಗಿ ಮನುಷ್ಯನ) ಹೆಣ; ಶವ; ಕಳೇಬರ.
cadaveric
ಗುಣವಾಚಕ
(ವೈದ್ಯಶಾಸ್ತ್ರ) (ಶರೀರ ವಿಜ್ಞಾನ)
- ಕಳೇಬರದಂಥ; ಶವದ; ಶವಕ್ಕೆ ಸಂಬಂಧಿಸಿದ.
- ಹೆಣ ಮುಟ್ಟಿದ್ದರಿಂದ ಉಂಟಾದ; ಶವಸ್ಪರ್ಶದಿಂದ ಉಂಟಾದ.
cadaverous
ಗುಣವಾಚಕ
- ಹೆಣದ; ಶವದ; ಹೆಣಕ್ಕೆ ಸಂಬಂಧಿಸಿದ; ಶವಸಂಬಂಧಿ.
- ಹೆಣದಂಥ; ಶವದಂಥ; ಶವಸದೃಶ.
- ಪ್ರೇತಕಳೆಯ; ಹೆಣಮೋರೆಯ; ತೀರ ಬಿಳಿಚಿಕೊಂಡ; ನಿಸ್ತೇಜ.
- ಕಂಗೆಟ್ಟ; ಬಡಕಲಾಗಿರುವ; ಮೂಳೆಬಿಟ್ಟುಕೊಂಡು ವಿಕಾರವಾಗಿರುವ.
caddice
ನಾಮವಾಚಕ
=caddis.
caddie
ನಾಮವಾಚಕ
- (ದಾಂಡು ಮೊದಲಾದವುಗಳನ್ನು ಒಯ್ಯುವ) ಕ್ಯಾಡಿ; ಗಾಲ್ ಆಟಗಾರನ ಪರಿಚರ.
- (ಸ್ಕಾಟ್ಲಂಡ್) ಯಾವುದಾದರೂ ಕೆಲಸ ಹುಡುಕುತ್ತ ಕಾದಿರುವವನು.
- (ಸ್ಕಾಟ್ಲಂಡ್) (ಸಲಿಗೆಯಾಗಿ) ಹೈದ; ಹುಡುಗ.
- (ಬಳಕೆಗೆ ಸಿದ್ಧವಾಗಿರುವಂತೆ ಸಣ್ಣಪುಟ್ಟ ಪದಾರ್ಥಗಳನ್ನು ಇರಿಸುವ) ಸಣ್ಣ—ಡಬ್ಬಿ, ಪೆಟ್ಟಿಗೆ, ಸಂಪುಟ.
caddie car
ನಾಮವಾಚಕ
(ಗಾಲ್ ಆಟದ) ದಾಂಡುಬಂಡಿ; ಆಟ ಆಡುವಾಗ ಗಾಲ್ ದಾಂಡುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಬಳಸುವ, ಎರಡು ಚಕ್ರದ ಹಗುರ ಬಂಡಿ.
caddie cart
ನಾಮವಾಚಕ
=caddie car.
caddis
ನಾಮವಾಚಕ
ಒಂದು ಗೆಯ ಉಣ್ಣೆಯ ದಾರ ಯಾ ಪಟ್ಟಿ.
caddis-fly
ನಾಮವಾಚಕ
ಕ್ಯಾಡಿಸ್–ಕೀಟ, ನೊಣ; ನೀರಿನ ಹತ್ತಿರ ವಾಸಿಸುವ, ಎರಡು ಜೊತೆ ಪೊರೆಯಂಥ ರೋಮಮಯ ರೆಕ್ಕೆಗಳೂ ಸೂಕ್ಷ್ಮವಾದ ಸ್ಪರ್ಶತಂತುಗಳೂ ಇರುವ, ಚೆನ್ನಾಗಿ ಹಾರಲು ಬಾರದ, ಟ್ರಿಕಾಪ್ಟರ ಗಣದ ಒಂದು ಕೀಟ.
caddis-worm
ನಾಮವಾಚಕ
ಕ್ಯಾಡಿಸ್ ಹುಳು; ನೀರಿನಲ್ಲಿ ವಾಸಿಸುವ, ಮರಳು, ಮರ ಯಾ ಒಣ ಹುಲ್ಲು ಮೊದಲಾದವುಗಳಿಂದ ಕಟ್ಟಿದ ಉರುಳೆ ಯಾ ಸುರಳಿಯಾಕಾರದ ಕೋಶದಲ್ಲಿ ಜೀವಿಸುವ, ಎರೆಯಾಗಿ ಬಳಸುವ, ಕ್ಯಾಡಿಸ್ ನೊಣದ ಮರಿಹುಳು.
caddish
ಗುಣವಾಚಕ
ಅಸಭ್ಯ; ಕೆಟ್ಟ ನಡತೆಯ; ನೀಚ; ಹಲ್ಕಾ.
caddy
ನಾಮವಾಚಕ
- ಟೀ ಎಲೆ ಡಬ್ಬಿ; ಟೀಡಬ್ಬಿ.
- (ಪದೇಪದೇ ಬಳಸುವ ಸಾಮಾನುಗಳನ್ನು ಬೇಕೆನಿಸಿದಾಗ ಸಿಗುವಂತೆ ಇಟ್ಟುಕೊಳ್ಳುವ) ಸಣ್ಣ ಡಬ್ಬಿ, ಡಬ್ಬ, ಪೆಟ್ಟಿಗೆ.
caddy
ನಾಮವಾಚಕ
=caddie.
cade
ನಾಮವಾಚಕ
- (ತಾಯಿಯನ್ನು ಕಳೆದುಕೊಂಡು, ಮನುಷ್ಯರಿಂದ ಸಾಕಲ್ಪಟ್ಟ) ಮರಿ; ಮೃಗ ಪೋತ.
- ಮುದ್ದಿನ–ಮರಿ, ಪ್ರಾಣಿ, ಮುಖ್ಯವಾಗಿ ಕುರಿಮರಿ.
- (ಮುದ್ದುಮಾಡಿ ಕೆಡಿಸಿದ) ಮಗು.
- ಪೀಪಾಯಿ.
- ಕೋನಕೋನವಾಗಿರುವ ಕಿರು ಕೊಂಬೆಗಳನ್ನೂ, ಚೂಪಾದ ಮುಳ್ಳುಗಳನ್ನೂ, ಕೆಂಗಂದುಬಣ್ಣದ ಹಣ್ಣುಗಳನ್ನೂ ಬಿಡುವ, ಚರ್ಮರೋಗಗಳಲ್ಲಿ ಬಳಸುವ ತೈಲವನ್ನು ಕೊಡುವ, ಜೂನಿಪರ್ ಆಕ್ಸಿಸೀಡ್ರಸ್ ಕುಲದ, ಯೂರೋಪಿನ ಜೂನಿಪರ್ ಪೊದೆ ಯಾ ಮರ.
cadence
ನಾಮವಾಚಕ
- (ಧ್ವನಿ ಯಾ ಪದಗಳ) ಲಯ.
- (ಮುಖ್ಯವಾಗಿ ಸ್ವರಗಳ) ಕ್ರಮಗತಿ; ಕ್ರಮಬದ್ಧ ಓಟ; ತಾಳಬದ್ಧ ಓಟ; ಛಂದೋಬದ್ಧ ಗತಿ.
- (ಮುಖ್ಯವಾಗಿ ವಾಕ್ಯ, ಗಾಯನ ಮೊದಲಾದವನ್ನು ಮುಗಿಸುವಾಗ ಆಗುವ) ಧ್ವನಿಯಿಳಿತ; ಸ್ವರಾವರೋಹಣ.
- (ಸಂಗೀತಭಾಗದ) ಕೊನೆ; ಮುಕ್ತಾಯ; ಸಮಾಪ್ತಿ.
- (ಉಚ್ಚಾರಣೆಯ) ಏರಿಳಿತ.
cadenced
ಗುಣವಾಚಕ
- ತಾಳಬದ್ಧ; ಕ್ರಮಬದ್ಧ; ಲಯಬದ್ಧವಾದ.
- (ಉಚ್ಚಾರಣೆಯ ವಿಷಯದಲ್ಲಿ) ಏರಿಳಿತದಿಂದ ಕೂಡಿದ.