भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

cadency

ನಾಮವಾಚಕ

(ಮುಖ್ಯವಂಶದಿಂದ ಹೊರಟ) ಕಿರಿಯ ಶಾಖೆಯ ಸಂತತಿ.

cadential

ಗುಣವಾಚಕ

ಗಾಯನದ ಯಾ ವಾದನದ—ಮುಕ್ತಾಯದ ಯಾ ಮುಕ್ತಾಯಕ್ಕೆ ಸಂಬಂಧಿಸಿದ.

cadenza

ನಾಮವಾಚಕ

(ಸಂಗೀತ) ಮುಕ್ತಾಯದ ವೈಖರಿ; ಮುಕ್ತಾಯದಲ್ಲಿ ಮಾಡುವ ಗಾಯನದ ಯಾ ವಾದನದ—ವೈಖರಿ ಯಾ ವೈಖರಿಯ ಆಡಂಬರದ ಕೃತಿಭಾಗ.

cadet

ನಾಮವಾಚಕ

  • ಕಿರಿಯ ಮಗ; ಚಿಕ್ಕಮಗ.
  • ಕನಿಷ್ಠಪುತ್ರ; ಎಲ್ಲರಿಗಿಂತ ಕಿರಿಯ ಮಗ; ಕೊನೆಯ ಮಗ.
  • ಸೈನ್ಯ ಕಾಲೇಜು ವಿದ್ಯಾರ್ಥಿ; ನೌಕಾಸೇನೆ ಯಾ ಭೂಸೈನ್ಯ ಯಾ ವಾಯುಸೇನೆಯ ಕಾಲೇಜಿನ ವಿದ್ಯಾರ್ಥಿ.
  • ತರಪೇತಿ ತಂಡದ ಸದಸ್ಯ; ಪ್ರಾಥಮಿಕ ಸೈನ್ಯಶಿಕ್ಷಣ ಯಾ ಪೊಲೀಸ್‍ ತರಪೇತಿ ಪಡೆಯುವ ತಂಡದ ಸದಸ್ಯ.
  • (ನ್ಯೂಸೀಲಂಡ್‍) ಕುರಿಸಾಕಣೆಯನ್ನು ಕಲಿಯುವ ಹುಡುಗ, ಯುವಕ.

cadet-corps

ನಾಮವಾಚಕ

ಕೆಡೆಟ್‍ಪಡೆ; ಮರಿಯೋಧಪಡೆ; ಪ್ರಾಥಮಿಕ ಸೈನ್ಯಶಿಕ್ಷಣ ಪಡೆಯುತ್ತಿರುವ ಶಾಲಾಮಕ್ಕಳ ತಂಡ.

cadetship

ನಾಮವಾಚಕ

  • (ಸಮರವಿದ್ಯೆಯ) ಮರಿಯೋಧಗಿರಿ; ವಿದ್ಯಾರ್ಥಿದಶೆ.
  • (ಸಮರ ವಿದ್ಯೆಯ) ಕೆಡೆಟ್‍ ಸನ್ನದು; ವಿದ್ಯಾರ್ಥಿ ಸನ್ನದು.

cadge

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ತಿರುಪೆ ಎತ್ತು; ಭಿಕ್ಷೆ ಬೇಡು; ತಿರಿ; ಯಾಚಿಸು.

  • ತಿರುಪೆ ಎತ್ತಿ ಪಡೆ.
  • ಹೊಗಳಿ ಯಾ ಹಲ್ಲುಕಿರಿದು—ಗಿಟ್ಟಿಸು, ಪಡೆ.

cadger

ನಾಮವಾಚಕ

  • ಹಮಾಲ; ಹೊರುವವ.
  • ಹೊತ್ತು ಮಾರುವವ; ಪೇರಿವ್ಯಾಪಾರಿ; ತಿರುಗುಮಾರಾಟಗಾರ.
  • ತಿರುಕ; ಭಿಕ್ಷುಕ; ಯಾಚಕ; ತಿರುಪೆ—ಎತ್ತುವವ, ಬೇಡುವವ.

cadi

ನಾಮವಾಚಕ

(ತುರ್ಕಿ, ಅರೇಬಿಯ, ಪರ್ಷಿಯ, ಮೊದಲಾದ ಮುಸ್ಲಿಮ್‍ ದೇಶಗಳಲ್ಲಿರುವ) ನ್ಯಾಯಾಧೀಶ; ಇಸ್ಲಾಂ ಧರ್ಮದ ನ್ಯಾಯಶಾಸ್ತ್ರದ ಪ್ರಕಾರ ನಿರ್ಣಯಗಳನ್ನು ಮಾಡುವವನು.

cadjan

ನಾಮವಾಚಕ

  • ತಾಳೆಯಗರಿ; ತೆಂಗಿನಗರಿ; (ದಕ್ಷಿಣ ಭಾರತದಲ್ಲಿ) ಛಾವಣಿಗಾಗಿ ಉಪಯೋಗಿಸುವ, ಹೆಣೆದ—ತೆಂಗಿನ ಯಾ ತಾಳೆಯ ಗರಿ.
  • (ಬರೆಯಲು ಬಳಸುವ) ತಾಳೆಗರಿ; ಓಲೆಗರಿ; ಹನೆಗರಿ.
  • ತಾಳೆಗ್ರಂಥ; ಓಲೆಪುಸ್ತಕ; ಓಲೆಗ್ರಂಥ.

Cadmean

ಗುಣವಾಚಕ

ಗ್ರೀಕ್‍ ಅಕ್ಷರಮಾಲೆಯನ್ನು ತಂದನೆಂದು ಪ್ರತೀತಿಯಿರುವ ಕ್ಯಾಡ್‍ಮಸ್‍ನ ಯಾ ಅವನಿಗೆ ಸಂಬಂಧಪಟ್ಟ.

Cadmean victory

ನಾಮವಾಚಕ

=Pyrrhic victory.

cadmic

ಗುಣವಾಚಕ

(ರಸಾಯನವಿಜ್ಞಾನ) ಕ್ಯಾಡ್ಮಿಕ್‍; ಕ್ಯಾಡ್ಮಿಯಂಗೆ ಸಂಬಂಧಿಸಿದ; ಕ್ಯಾಡ್ಮಿಯಮ್ಮಿನ ಯಾ ಅದರಿಂದ ಬಂದ.

cadmiferous

ಗುಣವಾಚಕ

(ರಸಾಯನವಿಜ್ಞಾನ) ಕ್ಯಾಡ್ಮಿಯಂಭರಿತ; ಕ್ಯಾಡ್ಮಿಯಂ—ಉಳ್ಳ, ಇರುವ.

cadmium

ನಾಮವಾಚಕ

(ರಸಾಯನವಿಜ್ಞಾನ) ಕ್ಯಾಡ್ಮಿಯಂ; ಮಿಶ್ರಲೋಹಗಳನ್ನು ತಯಾರಿಸಲು, ಹೊಳಪುಕೊಡಲು, ಮುಖ್ಯವಾಗಿ ಕಬ್ಬಿಣ, ಸ್ಟೀಲ್‍ಗಳಿಗೆ ವಿದ್ಯುಲ್ಲೇಪನವನ್ನು ಮಾಡಲು ಬಳಸುವ, ನೋಡಲು ತವರವನ್ನು ಹೋಲುವ, ಮೆತುವಾದ, ವಿಷಪೂರಿತ, ದ್ವಿವೇಲನ್ಸೀಯ, ಪರಮಾಣ್ವಂಕ 48 ಹಾಗೂ ಪರಮಾಣುತೂಕ $112.4$ ಇರುವ, ನೀಲಿ ಬಿಳಿಯ ಲೋಹಧಾತು; ಸಂಕೇತ Cd.

cadmium cell

ನಾಮವಾಚಕ

ಕ್ಯಾಡ್ಮಿಯಮ್‍ ಕೋಶ; ವಿದ್ಯುತ್ಕೋಶಗಳ ವಿದ್ಯುಚ್ಚಾಲಕಬಲಗಳನ್ನು ಅಳೆಯಲು ಪ್ರಮಾಣಕವಾಗಿ ಬಳಸುವ ವಿದ್ಯುತ್ಕೋಶ.

cadmium yellow

ನಾಮವಾಚಕ

ಕ್ಯಾಡ್ಮಿಯಂ ಹಳದಿ; ಕ್ಯಾಡ್ಮಿಯಂ ಸಲೆಡ್‍ ಉಳ್ಳ, ವರ್ಣಚಿತ್ರಣದಲ್ಲಿ ಬಳಸುವ, ಕಡು ಹಳದಿ ವರ್ಣದ್ರವ್ಯ.

cadre

ನಾಮವಾಚಕ

  • ಚೌಕಟ್ಟು; ರೂಪರೇಖೆ; ವಿನ್ಯಾಸ; ರಚನೆ; ಯೋಜನೆ: he gave the cadre of the project ಅವನು ಯೋಜನೆಯ ರೂಪುರೇಖೆಯನ್ನು ಕೊಟ್ಟ.
  • (ಸೈನ್ಯ ಮೊದಲಾದವು) (ಬೇಕಾದಾಗ ಹೆಚ್ಚಿಸಿಕೊಳ್ಳಬಹುದಾದ, ಕಾಯಂ ಆದ) ಮೂಲಪಡೆ; ಮೂಲಚಮು.
  • ಕಮ್ಯುನಿಸ್ಟ್‍ ಪಕ್ಷದ ಹಿತಾಸಕ್ತಿಗಳ ಅಭಿವೃದ್ಧಿಗಾಗಿ ಶ್ರಮಿಸುವ ಕಾರ್ಯಕರ್ತರ ಗುಂಪು ಯಾ ಆ ಗುಂಪಿನ ಸದಸ್ಯ.
  • ಶಿಕ್ಷಿತವರ್ಗ; ನುರಿತ ತಂಡ; ಧಾರ್ಮಿಕ ಯಾ ರಾಜಕೀಯ ಪಕ್ಷ ಯಾ ಕುಶಲ ಕೆಲಸಗಾರರ ತಂಡ ಮೊದಲಾದ ವ್ಯಾಪಕವಾದ ಸಂಸ್ಥೆಯನ್ನು ರೂಪಿಸಲು, ಯಾ ಅದಕ್ಕಾಗಿ ಶಿಕ್ಷಣ ಕೊಡಲು, ಯಾ ಅದರ ಮುಂದಾಳತ್ವ ವಹಿಸಲು ಬೇಕಾದ ತರಪೇತಿ, ಶಿಕ್ಷಣ ಯಾ ಅರ್ಹತೆ ಪಡೆದಿರುವ—ಗುಂಪು, ವರ್ಗ, ತಂಡ.

caduceus

ನಾಮವಾಚಕ

  • ದೂತದಂಡ; ಪುರಾತನ ಗ್ರೀಕ್‍, ರೋಮನ್‍ ದೂತರು–ಮುಖ್ಯವಾಗಿ ದೇವದೂತರಾದ ಹರ್ಮಿಸ್‍ ಯಾ ಮರ್ಕ್ಯುರಿ–ಹಿಡಿದಿರುವ, ಎರಡು ಸರ್ಪಗಳು ಸುತ್ತಿಕೊಂಡಿರುವ, ಮೇಲೆ ರೆಕ್ಕೆಗಳಂಥ ಕೆತ್ತನೆಯಿರುವ ದಂಡ. Figure: caduceus
  • ವೈದ್ಯವೃತ್ತಿಯ ಯಾ ಅಮೆರಿಕನ್‍ ಸೈನ್ಯದ ವೈದ್ಯಕೀಯ ಪಡೆಯ ಸಂಕೇತ ಯಾ ಲಾಂಛನವಾಗಿ ಬಳಸಿಕೊಂಡಿರುವ ಈ ದಂಡ.

caducity

ನಾಮವಾಚಕ

  • ಭಂಗುರತೆ; ಕ್ಷಣಿಕತೆ; ಅಸ್ಥಿರತೆ: the caducity of life ಜೀವನದ ಕ್ಷಣಿಕತೆ.
  • (ಜೀವವಿಜ್ಞಾನ) ಅಂಗನಾಶ; ಅಂಗಪಾತ; ಅಂಗಗಳು; ಅಂಗಭಾಗಗಳು ಕಾರ್ಯನಿರ್ವಹಣೆಯ ಅನಂತರ ಬಿದ್ದು ಹೋಗುವಿಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App