English-Kannada Nighantu (University of Mysore)
University of Mysore
D
ಸಂಕೇತ
deuterium.
D, d
ನಾಮವಾಚಕ
- ಇಂಗ್ಲಿಷ್ ವರ್ಣಮಾಲೆಯ ನಾಲ್ಕನೆಯ ಅಕ್ಷರ.
- (ಸಂಗೀತ) ಸಪ್ತಸ್ವರದಲ್ಲಿ ‘ರಿ’; ಋಷಭ.
- (ಪರೀಕ್ಷೆಯಲ್ಲಿ ಅಂಕ, ವರ್ಗ, ಐಶ್ವರ್ಯಕ್ಕೆ ಅನುಗುಣವಾಗಿ ಜನಸಂಖ್ಯೆ, ಮೊದಲಾದವುಗಳ ವಿಷಯದಲ್ಲಿ) ನಾಲ್ಕನೆಯದು; ಚತುರ್ಥ: D group ಚತುರ್ಥವರ್ಗ.
- D ಆಕೃತಿ; D ಅಕ್ಷರದ ಆಕಾರ: D block, D trap, D valve, ಮೊದಲಾದವು.
- = Dee.
- D (ರೋಮನ್ ಸಂಖ್ಯಾಲಿಪಿಯಲ್ಲಿ) 500; ಐನೂರು.
D-Day
ನಾಮವಾಚಕ
ಡಿ – ದಿನ:
- ವಿಮೋಚನಾ ದಿನ; ಬ್ರಿಟಿಷ್ ಮತ್ತು ಅಮೆರಿಕಾ ಸೈನ್ಯಗಳು ಉತ್ತರ ಹ್ರಾನ್ಸ್ ದೇಶದ ಮೇಲೆ ದಾಳಿ ನಡೆಸಿದ ದಿನ (ಜೂನ್ 6,1944).
- ಬ್ರಿಟನ್ನಿನಲ್ಲಿ ದಶಾಂಶ ನಾಣ್ಯಪದ್ಧತಿ ಜಾರಿಗೆ ಬಂದ ದಿನ (15ನೇ ಹೆಬ್ರವರಿ 1971) .
- ಪ್ರಾರಂಭದ ದಿನ; ಯಾವುದೇ ಕಾರ್ಯಾಚರಣೆ ಪ್ರಾರಂಭವಾಗಲು ನಿಗದಿ ಮಾಡಿರುವ ದಿನ.
D-layer
ನಾಮವಾಚಕ
ಡಿ–ಸ್ತರ, ಪದರ; ಅಯಾನುಮಂಡಲದ ಅತ್ಯಂತ ಕೆಳಗಿನ ಸ್ತರ.
D-notice
ನಾಮವಾಚಕ
(ಬ್ರಿಟಿಷ್ ಪ್ರಯೋಗ) ಡಿ – ಸೂಚನೆ; ರಕ್ಷಣಾ ಕಾರಣಗಳಿಗಾಗಿ ಕೆಲವು ವಿಶೇಷ ವಿಷಯಗಳನ್ನು ಕುರಿತ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಪತ್ರಿಕಾ ಸಂಪಾದಕರನ್ನು ಕೇಳಿಕೊಳ್ಳುವ ಅಧಿಕೃತ ಕೋರಿಕೆ.
D.
ಸಂಕ್ಷಿಪ್ತ
- (ಅಮೆರಿಕನ್ ಪ್ರಯೋಗ) Democrat.
- dimension(3D).
d.
ಸಂಕ್ಷಿಪ್ತ
- daughter.
- deci-
- delete
- departs.
- died.
- (ಬ್ರಿಟಿಷ್ ಪ್ರಯೋಗ) (ಹಿಂದೆ) penny
d.and c.
ಸಂಕ್ಷಿಪ್ತ
(ವೈದ್ಯಶಾಸ್ತ್ರ) dilatation and curettage.
D.Litt.
ಸಂಕ್ಷಿಪ್ತ
Doctor of letters.
D.Mus
ಸಂಕ್ಷಿಪ್ತ
Doctor of Music.
D.Phil.
ಸಂಕ್ಷಿಪ್ತ
Doctor of Philosophy.
D.Sc.
ಸಂಕ್ಷಿಪ್ತ
Doctor of Science.
d.w.t
ಸಂಕ್ಷಿಪ್ತ
dead-weight tonnage.
DA
ಸಂಕ್ಷಿಪ್ತ
- deposit account.
- (ಅಮೆರಿಕನ್ ಪ್ರಯೋಗ) District Attorney.
- (ಭಾರತ) Dearness Allowance.
- (ಭಾರತ) Daily Allowance.
da
ಸಂಕ್ಷಿಪ್ತ
deca-.
da capo
ಕ್ರಿಯಾವಿಶೇಷಣ
ಡಾ ಕಾಪೋ; (ಸಂಗೀತ ನಿರ್ದೇಶನದಲ್ಲಿ) ಮೊದಲಿನಿಂದ ಪುನರಾವರ್ತಿಸಿ; ಮತ್ತೆ – ಪ್ರಾರಂಭಿಸಿ, ಮೊದಲು ಮಾಡಿ.
dab
ಕ್ರಿಯಾಪದ
ಸಕರ್ಮಕ ಕ್ರಿಯಾಪದ
- ಲಘುವಾಗಿ ತಟ್ಟು; ಮೃದುವಾಗಿ ಹೊಡೆ ( ಅಕರ್ಮಕ ಕ್ರಿಯಾಪದ ಸಹ).
- ಮೆಲ್ಲಗೆ ಬಡಿ ( ಅಕರ್ಮಕ ಕ್ರಿಯಾಪದ ಸಹ).
- ಕೊಕ್ಕಿನಿಂದ ಮೆತ್ತಗೆ ಕುಟುಕು ಯಾ ಕುಕ್ಕು ( ಅಕರ್ಮಕ ಕ್ರಿಯಾಪದ ಸಹ).
- (ಸ್ಪಂಜು, ವಸ್ತ್ರ, ಮೊದಲಾದವುಗಳಿಂದ ಉಜ್ಜದೆ ಮೃದುವಾಗಿ) ಒತ್ತು: she dabbed her eyes with her handkerchief ಆಕೆ ತನ್ನ ಕೈಚೌಕದಿಂದ ಕಣ್ಣನ್ನು ಒತ್ತಿಕೊಂಡಳು.
- ಇರಿ.
- (ಬಣ್ಣ ಮೊದಲಾದವನ್ನು ಕುಂಚ ಮೊದಲಾದವುಗಳಿಂದ) ಹಗುರವಾಗಿ – ಬಳಿ, ಸವರು, ಲೇಪಿಸು, ಹಚ್ಚು.
- (ಕಲ್ಲನ್ನು) ಕಡೆ; ಕೆತ್ತು; ಕೆತ್ತಿ ಮಟ್ಟಮಾಡು.
dab
ನಾಮವಾಚಕ
- (ಮೆತ್ತಗಿನ ಯಾ ಥಟ್ಟನೆಯ) ಹೊಡೆತ; ತಟ್ಟು; ಒತ್ತು; ಪೆಟ್ಟು.
- (ಸ್ಪಂಜು, ಚೌಕ, ಮೊದಲಾದವನ್ನು ಉಜ್ಜದೆ) ಒತ್ತವುದು.
- ಮೃದುವಾದಿ, ಹಗುರವಾಗಿ – ಲೇಪಿಸಿದ ಬಣ್ಣ, ದ್ರವ, ಮೊದಲಾದವು.
- (ಬಹುವಚನದಲ್ಲಿ, ಅಶಿಷ್ಟ) ಬೆರಳಚ್ಚುಗಳು; ಬೆರಳ ಗುರುತುಗಳು.
dab
ನಾಮವಾಚಕ
- ಲಿಮಾಂಡ ಕುಲದ ಸಣ್ಣಚಪ್ಪಟೆಈನು.
- ಅರೇಬಿಯ, ಈಜಿಪ್ಟ್, ಮೊದಲಾದ ಕಡೆ ಇರುವ, ಮುಳ್ಳುಬಾಲದ ದೊಡ್ಡ ಓತಿಕೇತ.
dab
ನಾಮವಾಚಕ
(ಆಡುಮಾತು) (ಆಟಪಾಠಗಳಲ್ಲಿ, ಕೆಲಸಕಾರ್ಯಗಳಲ್ಲಿ) ಜಾಣ; ದಕ್ಷ; ನಿಪುಣ; ಚತುರ; ಕುಶಲ.