भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

eye-strain

ನಾಮವಾಚಕ

ಕಣ್ಣುಬಳಲಿಕೆ; ಕಣ್ಣುದಣಿವು; ನೇತ್ರಶ್ರಮ; ನೇತ್ರಾಯಾಸ; ಕಣ್ಣಿಗೆ ವಿಪರೀತ ಕೆಲಸವಾಗಿ ಇಲ್ಲವೆ ದೃಷ್ಟಿದೋಷದಿಂದಾಗಿ ಕಣ್ಣಿಗೆ ಉಂಟಾಗುವ ಆಯಾಸ, ಬಳಲಿಕೆ.

eye-strings

ನಾಮವಾಚಕ

ಕಣ್ಣುಹುರಿಗಳು; ನೇತ್ರತಂತುಗಳು; ಕಣ್ಣಿನ ಸ್ನಾಯುಗಳು, ನರಗಳು, ಮೊದಲಾದವು.

eye-tooth

ನಾಮವಾಚಕ

ನುಡಿಗಟ್ಟು

(ಮುಖ್ಯವಾಗಿ ಮೇಲ್ದವಡೆಯ) ಕಣ್ಣಿನ ಕೆಳಗಿನ ಯಾ ಪಕ್ಕದ ಕೋರೆಹಲ್ಲು. cut one’s eye-tooth ಲೌಕಿಕ ಜ್ಞಾನ ಯಾ ಬುದ್ಧಿ — ಬರು, ಪಡೆ.

eyeball

ನಾಮವಾಚಕ

ನುಡಿಗಟ್ಟು

eyeball to eyeball (ಆಡುಮಾತು) ಮುಖಾಮುಖಿ; ಎದುರುಬದುರು.

  • ಪಾಪೆ.
  • ಕಣ್ಣುಗುಡ್ಡೆ.

eyeblack

ನಾಮವಾಚಕ

ಕಾಡಿಗೆ; ಅಲಂಕಾರ ಮೊದಲಾದವುಗಳಿಗಾಗಿ ಕಣ್ಣು, ಎವೆ, ಮೊದಲಾದವುಗಳಿಗೆ ಹಚ್ಚುವ ಕಪ್ಪು.

eyebright

ನಾಮವಾಚಕ

ಯುಹ್ರೇಸಿಯ ಕುಲದ, ಹಿಂದೆ ದುರ್ಬಲ ಕಣ್ಣುಗಳಿಗೆ ಔಷಧಿಯಾಗಿ ಬಳಸುತ್ತಿದ್ದ, ಒಂದು ಸಸ್ಯ.

eyebrow

ನಾಮವಾಚಕ

ನುಡಿಗಟ್ಟು

  • ಹುಬ್ಬು; ಹುಬ್ಬಿನ ಗೆರೆ.
  • ಹೆಂಚಿನ ಮಾಡಿನ ಮೇಲಿರುವ ಹುಬ್ಬಿನ ಗೆರೆಯಾಕಾರದ ಗವಾಕ್ಷಿ.

eyebrow pencil

ನಾಮವಾಚಕ

ಹುಬ್ಬುಕಡ್ಡಿ; ಹುಬ್ಬನ್ನು ತಿದ್ದಲು ಬಳಸುವ ಪೆನ್ಸಿಲ್ಲು, ಕಡ್ಡಿ.

eyebrow tweezers

ನಾಮವಾಚಕ

ಹುಬ್ಬು ಚಿಮುಟ; ಹುಬ್ಬಿನಲ್ಲಿ ಬೆಳೆದಿರುವ ಅನಾವಶ್ಯಕವಾದ ಕೂದಲುಗಳನ್ನು ಕೀಳಲು ಬಳಸುವ ಸಣ್ಣ ಚಿಮುಟ.

eyed

ಗುಣವಾಚಕ

  • ಕಣ್ಣಿನಂತಿರುವ; ನೇತ್ರಸದೃಶ: they were swimming making a long eyed line ಕಣ್ಣಿನಂತಿರುವ ಸಾಲು ನಿರ್ಮಿಸಿಕೊಂಡು ಅವರು ಈಜುತ್ತಿದ್ದರು.
  • ಕಣ್ಣುಳ್ಳ; ನೇತ್ರಯುಕ್ತ: a blue eyed girl ನೀಲಿ ಕಣ್ಣಿನ ಹುಡುಗಿ.
  • (ಕಣ್ಣಿನ ಹಾಗೆ) ತೂತಿರುವ; ಕುಣಿಕೆಯುಳ್ಳ: an eyed fish-hook ತೂತಿರುವ ಮೀನುಗಾಳ.
  • ನೇತ್ರಾಂಕಿತ; ನಯನಾಂಕಿತ; ಕಣ್ಣನ್ನು ಹೋಲುವ ಮಚ್ಚೆ ಯಾ ಗುರುತುಗಳನ್ನುಳ್ಳ: eyed like a peacock ನವಿಲುಗರಿಯ ಕಣ್ಣಿಂಥ ಕಣ್ಣುಳ್ಳದ್ದಾಗಿ.
  • (ಮೀನಿನ ತತ್ತಿಯ ವಿಷಯದಲ್ಲಿ) ಕಣ್ಣುಗಳು ಸ್ಪಷ್ಟವಾಗಿ ಕಾಣಿಸುವಷ್ಟು ಮಟ್ಟಿಗೆ ವಿಕಾಸವಾದ, ಬೆಳೆದ.

eyeful

ನಾಮವಾಚಕ

(ಮುಖ್ಯವಾಗಿ ಆಡುಮಾತು)

  • ಕಣ್ಣು ಭರ್ತಿ; ಕಣ್ಣುತುಂಬಿದ್ದು; ಕಣ್ಣಿನೊಳಕ್ಕೆ ಬಿದ್ದ (ಧೂಳು ಮೊದಲಾದ) ವಸ್ತು: an eyeful of dust ಕಣ್ಣುತುಂಬಾ ಬಿದ್ದ ಧೂಳು.
  • ಕಣ್ತುಂಬು; ಕಣ್ತುಂಬು ನೋಡಲು ಇಷ್ಟಪಡುವಂಥದು; ನೋಡಬಯಸುವಂಥ ವಸ್ತು, ದೃಶ್ಯ, ಮೊದಲಾದವು: the tourists got an eyeful of slum life ಪ್ರವಾಸಿಗಳಿಗೆ ಕಣ್ತುಂಬ ನೋಡುವಷ್ಟು ಕೊಳಚೆ ಪ್ರದೇಶದ ಜೀವನ ಸಿಕ್ಕಿತು.
  • (ಕಣ್ತುಂಬ ನೋಡುವಂಥ) ಚೆಲುವೆ; ಅತಿಸುಂದರಿ: a statuesque blonde eyeful ಪುತ್ತಳಿಯಂಥ ಹೊಂಗೂದಲ ಚೆಲುವೆ.

eyeglass

ನಾಮವಾಚಕ

  • ಕಣ್ಣುಕನ್ನಡಿ; ನೇತ್ರ ಮಸೂರ; ದೃಷ್ಟಿಯನ್ನು ಉತ್ತಮಪಡಿಸಿಕೊಳ್ಳಲು ಬಳಸುವ ಲೆನ್ಸು.
  • (ಬಹುವಚನದಲ್ಲಿ) ಕನ್ನಡಕ; ಚಾಳೀಸು; ಸುಲೋಚನ.

eyehole

ನಾಮವಾಚಕ

  • ಕಣ್ಣಕುಳಿ; ಕಣ್ಣಿನಗೂಡು.
  • ಕಂಡಿ; ತೂತು; ಇಣುಕುಗಂಡಿ; ಪರದೆ, ಮುಖವಾಡ, ಬಾಗಿಲು, ಮೊದಲಾದವುಗಳಲ್ಲಿರುವ, ಕಣ್ಣಿಟ್ಟು ನೋಡಬಹುದಾದ, ತೂತು.
  • ಕಣ್ಣು; ದಾರ ಮೊದಲಾದವನ್ನು ತೂರಿಸಬಹುದಾದ ಕಂಡಿ.

eyelash

ನಾಮವಾಚಕ

  • ಎವೆ; ರೆಪ್ಪೆಗೂದಲು.
  • (ರೂಪಕವಾಗಿ) ಕೂದಲೆಳೆಯಷ್ಟು ಪ್ರಮಾಣ.

eyeless

ಗುಣವಾಚಕ

  • ಕುರುಡು; ಕಂಗಾಣದ; ಕಣ್ಣು ಕಾಣಿಸದ: eyeless fishes in caves ನೀರಿನ ತಳದಲ್ಲಿನ ಕಣ್ಣು ಕಾಣದ ಮೀನುಗಳು.
  • ಕಣ್ಣಿಲ್ಲದ; ನೇತ್ರಹೀನ; ತೂತಿಲ್ಲದ: eyeless needle ಕಣ್ಣಿಲ್ಲದ ಸೂಜಿ.
  • ಕಣ್ಣುಹೋದ; ನೇತ್ರಹೀನ; ಕುರುಡಾದ; ಕಣ್ಣು ಕಳೆದುಕೊಂಡ: blind as an eyeless beggar ಕಣ್ಣಿಲ್ಲದ ತಿರುಕನಷ್ಟು ಕುರುಡಾದ.
  • ಕಣ್ಣಿದ್ದೂ ಕುರುಡಾಗಿರುವ; ಕಣ್ಣಿದ್ದೂ — ಕಾಣದ, ನೋಡದ; ಬೇಕೆಂದೇ ಕುರುಡನಾಗಿರುವ; ಕುರುಡನಂತೆ ವರ್ತಿಸುವ: an eyeless leader ಕಣ್ಣಿದ್ದೂ ಕುರುಡನಂತೆ ವರ್ತಿಸುವ ನಾಯಕ.

eyelet

ನಾಮವಾಚಕ

  • (ಬಟ್ಟೆ, ಹಾಯಿ, ಮೊದಲಾದವುಗಳಲ್ಲಿ ದಾರ, ಹಗ್ಗ, ಬಳೆ, ಮೊದಲಾದವಕ್ಕೆ ಮಾಡಿರುವ) ಸಣ್ಣತೂತು.
  • ಕುಣಿಕೆ ಕಂಡಿ.
  • ಸಣ್ಣ ಕಣ್ಣು; ಕಿರುಗಣ್ಣು.

eyelet-hole

ನಾಮವಾಚಕ

(ನೋಡಲು ಯಾ ಗುಂಡುಹಾರಿಸಲು ಬಳಸುವ) ಚಿಕ್ಕ ತೂತು ಯಾ ರಂಧ್ರ.

eyepiece

ನಾಮವಾಚಕ

ನೇತ್ರಕ; ನೇತ್ರಯವ; ದೂರದರ್ಶಕ ಮತ್ತು ಸೂಕ್ಷ್ಮದರ್ಶಕಗಳಲ್ಲಿ ಕಣ್ಣಿಟ್ಟು ನೋಡುವ ತುದಿಯಲ್ಲಿನ ಮಸೂರ ಯಾ ಮಸೂರುಗಳ ವ್ಯವಸ್ಥೆ.

eyeshot

ನಾಮವಾಚಕ

ಕಣ್ಣೆಟುಕು; ನೇತ್ರದೂರ; ದೃಷ್ಟಿದೂರ; ಕಣ್ಣಿಗೆ ಕಾಣಿಸುವಷ್ಟು ದೂರ: beyond eyeshot ಕಣ್ಣೆಟುಕಿಗೂ ಮೀರಿದ; ದೃಷ್ಟಿಯ ವ್ಯಾಪ್ತಿಯಿಂದಾಚೆ; ಕಣ್ಣಿಗೆ ಕಾಣದಷ್ಟು ಆಚೆ ಇರುವ.

eyesight

ನಾಮವಾಚಕ

(ಕಣ್ಣಿನ) ದೃಷ್ಟಿ; ನೋಡುವ ಶಕ್ತಿ.

Search Dictionaries

Loading Results

Follow Us :   
  Download Bharatavani App
  Bharatavani Windows App