भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

earful

ನಾಮವಾಚಕ

(ಆಡುಮಾತು)

  • ಕಿವಿಭರ್ತಿ; ಕಿವಿ ತುಂಬುವಷ್ಟು ಮಾತು, ಸಮಾಚಾರ, ಬುದ್ದಿವಾದ ಮೊದಲಾದವು.
  • ಕಟುಟೀಕೆ; ತೀವ್ರ ಖಂಡನೆ; ಪ್ರಬಲ ನಿಂದೆ ಯಾ ದೂಷಣೆ.

earing

ನಾಮವಾಚಕ

(ನೌಕಾಯಾನ) ಕಿವಿದಾರ; ಹಾಯಿ ಪಟದ ಮೇಲ್ಮೂಲೆಯನ್ನು ಕೂವೆ ಮರದ ಅಡ್ಡಕ್ಕೆ ಬಿಗಿಯುವ (ಹಲವು ಹಗ್ಗಗಳಲ್ಲಿ) ಸಣ್ಣ — ಹಗ್ಗ, ಮಿಣಿ.

earl

ನಾಮವಾಚಕ

(ಸ್ತ್ರೀಲಿಂಗ countess) ಅರ್ಲ್‍; ‘ಮಾರ್ಕ್ವಿಸ್‍’ ಹಾಗೂ ‘ವೈಕೌಂಟ್‍’ ಪದವಿಗಳ ಮಧ್ಯವರ್ತಿ ಪದವಿಯ ಶ್ರೀಮಂತ.

Earl Marshal

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಅರ್ಲ್‍ ಮಾರ್ಷಲ್‍; ಕಾಲೇಜ್‍ ಆಹ್‍ ಆರ್ಮ್ಸ್‍ ಯಾ ವಂಶಲಾಂಛನ ಸಂಸ್ಥೆಯ ಮುಖ್ಯಾಧಿಕಾರಿ, ಅಧ್ಯಕ್ಷ.

earldom

ನಾಮವಾಚಕ

ಅರ್ಲ್‍ಗಿರಿ; ಅರ್ಲನ ಆಧಿಪತ್ಯ ಯಾ ಪದವಿ.

earless

ಗುಣವಾಚಕ

  • ಕಿವಿಯಿಲ್ಲದಿರುವ; ಕಿವಿಯಿಲ್ಲದ; ಕರ್ಣರಹಿತ.
  • (ಸಂಗೀತದ ವಿಷಯದಲ್ಲಿ) ಕಿವಿಯಿಲ್ಲದ; ಸ್ವರನಾದಗಳನ್ನು ಗ್ರಹಿಸದ; ಸಂಗೀತ ಜ್ಞಾನವಿಲ್ಲದ; ಸ್ವರಜ್ಞಾನವಿಲ್ಲದ; ನಾದ ಸಂವೇದನೆಯಿಲ್ಲದ.

earliness

ನಾಮವಾಚಕಮುಂಚಿತವಾಗಿರುವಿಕೆ; ಶೀಘ್ರವಾಗಿರುವಿಕೆ.

early

ಗುಣವಾಚಕ

ಪದಗುಚ್ಛ

ನುಡಿಗಟ್ಟು

keep early hours ಬೇಗ ಮಲಗಿ ಬೇಗ ಏಳು.

  • ಮುಂಚಿನ; ಹೊತ್ತಿಗೆ ಮುಂಚಿನ; ಮೊದಲಿನ; ಬೇಗನೆಯ; ಮುಂಚಿತವಾದ: an early visit ಹೊತ್ತಿಗೆ ಮುಂಚಿನ ಭೇಟಿ. early risers ಬೆಳಿಗ್ಗೆ ಬೇಗ ಯಾ ಹೊತ್ತಿಗೆ ಮುಂಚೆ ಏಳುವವರು.
  • ಮುಂಬೆಳೆಯುವ; ಕಾಲಕ್ಕೆ ಮುಂಚೆ ಬಿಡುವ: early peaches ಮುಂಬೆಳೆ ಪೀಚ್‍ ಹಣ್ಣುಗಳು; ಕಾಲಕ್ಕೆ ಮುಂಚೆ ಬಿಟ್ಟ ಪೀಚ್‍ ಹಣ್ಣುಗಳು.
  • (ಕಾಲ, ಅವಧಿ, ಬೆಳವಣಿಗೆ, ಮೊದಲಾದವುಗಳ) ಹತ್ತಿರದ; ಸಮೀಪದ: fix an early date ಒಂದು ಹತ್ತಿರದ ದಿನವನ್ನು ಗೊತ್ತುಮಾಡು.
  • ಮೊದಲ(ನೆಯ); ಆದಿ; ಆರಂಭದ; ಶುರುವಿನ: the early part of the century ಶತಮಾನದ ಆದಿಭಾಗ. the early spring ವಸಂತದ ಆದಿಭಾಗ. the early morning ಪ್ರಾತಃಕಾಲದ ಆರಂಭ; ಮುಂಜಾನೆ.
  • ಪ್ರಾಚೀನ; ಪುರಾತನ; ಆದಿಕಾಲದ: early man ಆದಿಮಾನವ. early art form ಪ್ರಾಚೀನ ಕಲಾರೂಪ.

early

ಕ್ರಿಯಾವಿಶೇಷಣ

ಪದಗುಚ್ಛ

ಮೊದಲೇ; ಬೇಗನೆ; ಶೀಘ್ರವಾಗಿ; ಮುಂಚೆ; ಮುಂಚಿತವಾಗಿ: awoke early in the morning ಬೆಳಿಗ್ಗೆ ಹೊತ್ತಿಗೆ ಮುಂಚೆ ಎದ್ದ. the train arrived early ರೈಲು ಮುಂಚಿತವಾಗಿ ಬಂತು. earlier on (later on ಎನ್ನುವಂತೆ)

  • ಇನ್ನೂ ಮುಂಚೆಯೇ; ಮೊದಲೇ; ಹಿಂದೆಯೇ.
  • ಆರಂಭದಲ್ಲಿಯೇ; ಶುರುವಿನಲ್ಲಿಯೇ; ಪ್ರಾರಂಭದ ಹಂತದಲ್ಲಿಯೇ: he realised earlier on that it was impossible ಅದು ಆಸಾಧ್ಯವೆಂದು ಅವನು ಪ್ರಾರಂಭದಲ್ಲಿಯೇ ತಿಳಿದುಕೊಂಡ.

early bird

ನಾಮವಾಚಕ

ನುಡಿಗಟ್ಟು

(ಹಾಸ್ಯ ಪ್ರಯೋಗ) ಹೊತ್ತಿಗೆ ಮುಂಚೆ ಏಳುವವನು, ಬರುವವನು, ಮೊದಲಾದವು. the early bird catches the worm ಬೇಗ ಏಳುವ ಹಕ್ಕಿಗೆ ಬೇಕಾದಷ್ಟು ಹುಳು ಹುಪ್ಪಟೆ; ಚುರುಕು ಮನುಷ್ಯನಿಗೆ ಬಯಸಿದ್ದು ಸಿಕ್ಕುತ್ತದೆ.

early closing

ನಾಮವಾಚಕ

ಬೇಗ ಮುಚ್ಚುವಿಕೆ; ವಾರದಲ್ಲಿ ಒಂದು ನಿರ್ದಿಷ್ಟ ದಿನ ಅಂಗಡಿ ಮೊದಲಾದ ಉದ್ಯಮ ಕೇಂದ್ರಗಳನ್ನು ಮಧ್ಯಾಹ್ನವೇ ಮುಚ್ಚುವುದು.

early days

ನಾಮವಾಚಕ

  • ಮುಂಚಿನ ದಿನಗಳು; ಪ್ರಾರಂಭದ ಕಾಲ.
  • (ಯಾವುದೇ ಘಟನೆ ನಡೆಯುವುದು ಮೊದಲಾದವುಗಳ ವಿಷಯದಲ್ಲಿ) ಮುಂಚಿತವಾಗಿರುವುದು; ಕಾಲಕ್ಕೆ ಮೊದಲೇ ಆಗುವುದು.

early door

ನಾಮವಾಚಕ

ಮುಂಚಿನ ಬಾಗಿಲು; ಮುಂಚಿನ ಪ್ರವೇಶದ ಬಾಗಿಲು; ನಿಗದಿಯಾದ ಕಾಲಕ್ಕಿಂತ ಮುಂಚೆಯೇ ಹೆಚ್ಚು ಹಣ ವಸೂಲು ಮಾಡಿ, ಪ್ರೇಕ್ಷಕರನ್ನು ನಾಟಕ ಶಾಲೆಯ ಒಳಕ್ಕೆ ಬಿಡುವ ಬಾಗಿಲು.

Early English style

ನಾಮವಾಚಕ

(ವಾಸ್ತುಶಿಲ್ಪ) (ಆರಂಭಕಾಲದ ಚರ್ಚ್‍ ಕಟ್ಟಡಗಳ) ಆದಿಮ ಇಂಗ್ಲಿಷ್‍ ಶೈಲಿ; ಚೂಪಾದ ಕಮಾನುಗಳು, ಮೊನಚುಕಮಾನಿನ ಕಿಟಕಿಗಳು ಮತ್ತು ಸರಳವಾದ ಜಾಲರಿ ಕೆಲಸವನ್ನು ಒಳಗೊಂಡ, 13ನೆ ಶತಮಾನದ ಇಂಗ್ಲಿಷ್‍ ಗಾತಿಕ್‍ ಶೈಲಿಯ ಪ್ರಾರಂಭದ ಹಂತ.

early night

ನಾಮವಾಚಕ

ಬೇಗ ಮಲಗುವಿಕೆ; ಮಾಮೂಲಿಗಿಂತ ಮೊದಲೇ ಮಲಗುವುದು.

early warning

ನಾಮವಾಚಕ

ಮುನ್ನೆಚ್ಚರಿಕೆ; ವಿಮಾನ ದಾಳಿ ಮೊದಲಾದವುಗಳ ಸಂದರ್ಭದಲ್ಲಿ ಮೊದಲೇ ಕೊಡುವ ಎಚ್ಚರಿಕೆ.

earmark

ನಾಮವಾಚಕ

  • ಕಿವಿಗುರುತು; ಯಾರಿಗೆ ಸೇರಿದ್ದೆಂದು ತೋರಿಸಲು ಕುರಿ ಮೊದಲಾದವುಗಳ ಕಿವಿಯ ಮೇಲೆ ಮಾಡುವ ಗುರುತು.
  • (ರೂಪಕವಾಗಿ) ಮಾಲಿಕ ಮುದ್ರೆ; ಸ್ವಾಮ್ಯ ಮುದ್ರೆ; ಸ್ವಾಮ್ಯ ಚಿಹ್ನೆ; ಒಡೆತನದ ಗುರುತು; ಯಾವುದೇ ವಸ್ತುವಿನ ಮೇಲೆ ಹಾಕುವ ಒಡೆತನದ ಗುರುತು.

earmark

ಸಕರ್ಮಕ ಕ್ರಿಯಾಪದ

  • ಕುರಿಗೆ ಮುದ್ರೆ ಯಾ ಗುರುತು ಹಾಕು.
  • (ರೂಪಕವಾಗಿ) ಮೀಸಲಿಡು; ಯಾವುದಾದರೂ ಖಚಿತ ಉದ್ದೇಶಕ್ಕಾಗಿ ಹಣ ಮೊದಲಾದವನ್ನು ಮೀಸಲಾಗಿಡು.

earn

ಸಕರ್ಮಕ ಕ್ರಿಯಾಪದ

  • (ಮನುಷ್ಯ, ಕಾರ್ಯ, ನಡತೆ, ಮೊದಲಾದವುಗಳ ವಿಷಯದಲ್ಲಿ)ಗಳಿಸು; ಸಂಪಾದಿಸು; ಅರ್ಜಿಸು; ಶ್ರಮಕ್ಕೆ ಯಾ ಯೋಗ್ಯತೆಗೆ ಪ್ರತಿಫಲವಾಗಿ ಪಡೆ.
  • (ನಿಂದೆ, ಆಕ್ಷೇಪ, ಅಪಾಯ, ಮೊದಲಾದವುಗಳನ್ನು) ತಂದುಕೊ; ಮೇಲೆ ಎಳೆದುಕೊ.
  • (ಆದಾಯ ಯಾ ಲಾಭವಾಗಿ) ಪಡೆ; ಗಳಿಸು; ಸಂಪಾದಿಸು.
  • (ಬೇಸ್‍ಬಾಲ್‍) ಎದುರಾಳಿಯ ಸಹಾಯವಿಲ್ಲದೆ ರನ್ನುಗಳನ್ನುಗಳಿಸು, ಪಡೆ.

earnest

ಗುಣವಾಚಕ

  • (ಉದ್ದೇಶ, ಪ್ರಯತ್ನ, ಮೊದಲಾದವುಗಳ ವಿಷಯದಲ್ಲಿ) ಶ್ರದ್ಧಾವಂತ; ಶ್ರದ್ಧಾಪೂರ್ವಕವಾದ; ಮನಃಪೂರ್ವಕವಾದ; ಆಸಕ್ತ; ಅಸಡ್ಡೆಯಿಲ್ಲದ.
  • (ಆಪೇಕ್ಷೆ ಮೊದಲಾದವುಗಳ ವಿಷಯದಲ್ಲಿ) ತೀವ್ರ; ಕಟ್ಟಕ್ಕರೆಯ; ತೀವ್ರಾಸಕ್ತಿಯ.

Search Dictionaries

Loading Results

Follow Us :   
  Download Bharatavani App
  Bharatavani Windows App