भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Easter

ನಾಮವಾಚಕ

  • ಈಸ್ಟರ್‍ (ಹಬ್ಬ); (ಮಾರ್ಚ್‍ 21ನೇ ತಾರೀಖು ಯಾ ಅದರ ನಂತರ ಬರುವ ಹುಣ್ಣಿಮೆ ಯಾ ಮೊದಲನೆಯ ಭಾನುವಾರ ಆಚರಿಸುವ) ಕ್ರಿಸ್ತನ ಪುನರುತ್ಥಾನದ ಉತ್ಸವ.
  • ಈಸ್ಟರ್‍ (ದಿನದಿಂದ ಆರಂಭವಾದ) ವಾರ.

Easter day

ನಾಮವಾಚಕ

= Easter(1).

Easter eggs

ನಾಮವಾಚಕ

ಈಸ್ಟರ್‍ ಮೊಟ್ಟೆಗಳು; ಈಸ್ಟರ್‍ ಹಬ್ಬದಲ್ಲಿ ಸ್ನೇಹಿತರಿಗೆ ಕೊಡುವ ಬಣ್ಣಬಣ್ಣದ ತಕ ಮೊಟ್ಟೆಗಳು, ಮೊಟ್ಟೆಯಾಕಾರದ ಸಿಹಿ ತಿಂಡಿಗಳು (ಮುಖ್ಯವಾಗಿ ಚಾಕಲೇಟ್‍) ಯಾ ಬೇಯಿಸಿದ ಮೊಟ್ಟೆಗಳು.

Easter eve

ನಾಮವಾಚಕ

ಈಸ್ಟರ್‍ ದಿನದ ಹಿಂದಿನ ದಿನ.

Easter offering(s)

ನಾಮವಾಚಕ

ಈಸ್ಟರ್‍ ಕಾಣಿಕೆ; ಈಸ್ಟರ್‍ ದಿನದಂದು ಮಠದ ಕ್ರೈಸ್ತಪಾದ್ರಿಗೆ ಮಾಮೂಲಾಗಿ ನೀಡುವ (ಮಠದಲ್ಲಿ ವಸೂಲಾದ) ಹಣ.

Easter Sunday

ನಾಮವಾಚಕ

= Easter(1).

Easter week

ನಾಮವಾಚಕ

= Easter(2).

easterly

ಕ್ರಿಯಾವಿಶೇಷಣ

  • ಮೂಡಲಿಗೆ; ಪೂರ್ವದಿಕ್ಕಿಗೆ.
  • ಮೂಡಲ ಕಡೆಯಲ್ಲಿ; ಪೂರ್ವದಿಕ್ಕಿನಲ್ಲಿ.

easterly

ಗುಣವಾಚಕ

  • ಮೂಡಲ; ಪೂರ್ವದಿಕ್ಕಿನ.
  • (ಗಾಳಿಯ ವಿಷಯದಲ್ಲಿ) ಮೂಡಲಿಂದ ಬರುವ; ಪೂರ್ವದಿಕ್ಕಿನಿಂದ ಬೀಸುವ.

easterly

ನಾಮವಾಚಕ

ಮೂಡಲಗಾಳಿ; ಪೂರ್ವಮಾರುತ.

eastern

ಗುಣವಾಚಕ

  • ಮೂಡಲ ಭಾಗದ; ಮೂಡಲ ಭಾಗದಲ್ಲಿ ವಾಸಿಸುವ.
  • ಪೂರ್ವದಿಕ್ಕಿಗಿರುವ; ಮೂಡಲಿಗಿರುವ; ಪೌರಸ್ತ್ಯ.
  • (Eastern) ಪೂರ್ವ ದೇಶಗಳ; ಪ್ರಾಚ್ಯ ದೇಶಗಳ; ಪೌರಸ್ತ್ಯ ದೇಶಗಳ: Far Eastern ದೂರಪ್ರಾಚ್ಯದ. Middle Eastern ಮಧ್ಯಪ್ರಾಚ್ಯದ. Near Eastern ಸಮೀಪಪ್ರಾಚ್ಯದ.

eastern

ನಾಮವಾಚಕ

  • ಮೂಡಲಿನವ; ಮೂಡಲ ಸೀಮೆಯವನು; ಪೌರಸ್ತ್ಯ.
  • ಈಸ್ಟರ್ನ್‍ ಯಾ ಗ್ರೀಕ್‍ ಚರ್ಚಿನ ಸದಸ್ಯ.

Eastern Church

ನಾಮವಾಚಕ

ಈಸ್ಟರ್ನ್‍ ಚರ್ಚು; ಗ್ರೀಕ್‍ ಚರ್ಚು; ಪ್ರಾಚ್ಯ ಚರ್ಚು; ಪೂರ್ವ ರೋಮನ್‍ ಯಾ ಬೈಸಾಂಟೈನ್‍ ಸಾಮ್ರಾಜ್ಯದ ಯಾವುದೇ ದೇಶಕ್ಕೆ ಸೇರಿದ ಚರ್ಚು.

Eastern Empire

ನಾಮವಾಚಕ

ಪೂರ್ವ ಸಾಮ್ರಾಜ್ಯ; ಈಸ್ಟರ್ನ್‍ ಎಂಪೈರ್‍; ಕ್ರಿ.ಶ. 395ರ ನಂತರದ ಕಾನ್‍ಸ್ಟ್ಯಾಂಟಿನೋಪಲ್‍ ರಾಜಧಾನಿಯಾಗಿದ್ದ, 476ರಲ್ಲಿ ಪಶ್ಚಿಮ ರೋಮನ್‍ ಸಾಮ್ರಾಜ್ಯದ ಪತನವಾದರೂ ಉಳಿದುಕೊಂಡು ಬಂದ ರೋಮನ್‍ ಸಾಮ್ರಾಜ್ಯದ ಪೂರ್ವಭಾಗ.

Eastern hemisphere

ನಾಮವಾಚಕ

ಪೂರ್ವಾರ್ಧಗೋಳ; ಏಷ್ಯ, ಆಹ್ರಿಕ, ಆಸ್ಟ್ರೇಲಿಯ ಮತ್ತು ಯೂರೋಪು ಇವುಗಳನ್ನೊಳಗೊಂಡ ಭೂಗೋಳದ ಪೂರ್ವಭಾಗ.

Eastern Time

ನಾಮವಾಚಕ

ಪೂರ್ವ ಕಾಲಮಾನ; ಪೌರಸ್ತ್ಯ ಕಾಲಮಾನ; ಕೆನಡ ಮತ್ತು ಅಮೆರಿಕ ಯಾ ಪೂರ್ವ ಆಸ್ಟ್ರೇಲಿಯಗಳಲ್ಲಿ ಬಳಸುವ ಕಾಲಮಾನ.

easterner

ನಾಮವಾಚಕ

ಪೌರಸ್ತ್ಯ; ಮೂಡಲ ಸೀಮೆಯವ; ಪೂರ್ವ ಪ್ರದೇಶದಲ್ಲಿ (ಮುಖ್ಯವಾಗಿ ಅಮೆರಿಕದಲ್ಲಿ) ಹುಟ್ಟಿದವ ಯಾ ವಾಸಿಸುವವ.

easternmost

ಗುಣವಾಚಕ

ಅತ್ಯಂತ ಪೂರ್ವದಿಕ್ಕಿನ.

Eastertide

ನಾಮವಾಚಕ

(ಪ್ರಾಚೀನ ಪ್ರಯೋಗ) ಈಸ್ಟರ್‍ ದಿನ ಮತ್ತು ಮುಂದಿನ ದಿನಗಳು ಯಾ ವಾರಗಳು.

easting

ನಾಮವಾಚಕ

  • (ನೌಕಾಯಾನ) ಮೂಡಲದೂರ; ಪೂರ್ವದೂರ; ನೇರವಾಗಿ ಮೂಡಲ ದಿಕ್ಕಿನಲ್ಲಿ (ಹಡಗು) ಪ್ರಯಾಣ ಮಾಡಿದ ದೂರ.
  • ಮೂಡಲ ದಿಕ್ಕು; ಪೂರ್ವ.

Search Dictionaries

Loading Results

Follow Us :   
  Download Bharatavani App
  Bharatavani Windows App