English-Kannada Nighantu (University of Mysore)
University of Mysore
eating
ಗುಣವಾಚಕ
- ತಿನ್ನಬಲ್ಲ; ತಿನ್ನಲು ಬರುವ; ಖಾದ್ಯ.
- ತಿನ್ನಲು ಬಳಸುವ, ಉಪಯೋಗಿಸುವ.
eating-house
ನಾಮವಾಚಕ
ಖಾನಾವಳಿ; ಹೋಟೆಲು; ಫಲಾಹಾರ ಮಂದಿರ; ತಿಂಡಿಯಂಗಡಿ; ಭೋಜನಗೃಹ.
eats
ನಾಮವಾಚಕ
(ಆಡುಮಾತು) (ಬಹುವಚನ) ಆಹಾರ; ತಿನಸುಗಳು; ತೀನಿಗಳು; ಖಾದ್ಯಗಳು.
eau
ನಾಮವಾಚಕ
- ಪರಿಮಳ ದ್ರವ್ಯ; ಸುಗಂಧದ್ರವ್ಯ.
- ನೀರಿನಂಥ ದ್ರವ.
- ನೀರು; ಜಲ.
eau de Javelle
ನಾಮವಾಚಕ
= Javelle water.
eau sucree
ನಾಮವಾಚಕ
ಸಕ್ಕರೆನೀರು; ನೀರು ಮತ್ತು ಸಕ್ಕರೆ.
eau-de-Cologne
ನಾಮವಾಚಕ
(ಮೊದಲಿಗೆ ಹ್ರಾನ್ಸಿನ) ಕಲೋನ್ ಪಟ್ಟಣದಲ್ಲಿ ತಯಾರಾದ ಪರಿಮಳ ದ್ರವ್ಯ.
eau-de-Nil
ನಾಮವಾಚಕ
(ನೈಲ್ ನದಿಯ ನೀರಿನ ಬಣ್ಣವನ್ನು ಹೋಲುವುದೆಂದು ಭಾವಿಸಲಾದ) ಹಸಿರು ಬಣ್ಣ.
eau-de-vie
ನಾಮವಾಚಕ
ಮದ್ಯ, ಮುಖ್ಯವಾಗಿ ಬ್ರಾಂದಿ.
eaves
ನಾಮವಾಚಕ
(ಬಹುವಚನ) (ಮೇಲ್ಛಾವಣಿಯ ಮುಂದಕ್ಕೆ ಚಾಚಿರುವ) ಸೂರು; ಮುಂಜೂರು.
eavesdrop
ಅಕರ್ಮಕ ಕ್ರಿಯಾಪದ
- (ಹಿಂದೆ) ಸೂರಿನ ಕೆಳಗೆ ನಿಂತು (ಗುಟ್ಟು ಮಾತನ್ನು) ಕದ್ದು ಕೇಳು.
- (ರೂಪಕವಾಗಿ) ಸೂರಾಲಿಸು; ಹೊಂಚು ಕೇಳು; ಗುಟ್ಟಿನ ಮಾತುಕತೆಯನ್ನು ಕದ್ದು ಕೇಳು.
eavesdropper
ನಾಮವಾಚಕ
(ಸಾಮಾನ್ಯವಾಗಿ ರೂಪಕವಾಗಿ) ಸೂರಾಲಿಸುವವನು; ಕದ್ದು ಕೇಳುವವನು; ಗುಟ್ಟು ಮಾತನ್ನು ಹೊಂಚಿಕೇಳುವವ.
ebb
ನಾಮವಾಚಕ
ಪದಗುಚ್ಛ
ebb and flow ಉಬ್ಬರವಿಳಿತ; ಏರಿಳಿತ; ಭರತ ಇಳಿತ.
- (ಸಮುದ್ರದ) ಉಬ್ಬರದ ನೀರಿನ ಇಳಿತ.
- ಇಳಿತ; ಇಳಿಗಾಲ; ಕ್ಷೀಣಗತಿ; ಅವನತಿ: at a low ebb ತುಂಬಾ ಹೀನ ಸ್ಥಿತಿಯಲ್ಲಿ; ಇಳಿಗಾಲದಲ್ಲಿ.
ebb
ಅಕರ್ಮಕ ಕ್ರಿಯಾಪದ
- (ಉಬ್ಬರದ ನೀರು) ಹಿಂದೆ ಸರಿ; ಇಳಿ.
- ಕುಗ್ಗು; ಕ್ಷಯಿಸು; ಕ್ಷೀಣಿಸು.
ebb-tide
ನಾಮವಾಚಕ
- ಇಳಿಪ್ರವಾಹ; ಇಳಿತದ ಪ್ರವಾಹ.
- ಇಳಿಗಾಲ; ಅವನತಿ; ಕ್ಷೀಣಗತಿ; ಕ್ಷಯ.
ebon
ಗುಣವಾಚಕ
- ಕರಿಮರದಿಂದ, ಎಬನಿಯಿಂದ — ಮಾಡಿದ.
- ಎಬನಿಯಷ್ಟು ಕಪ್ಪಾದ; ಕಡುಗಪ್ಪಾದ.
ebonite
ನಾಮವಾಚಕ
ಗಂಧಕ ರಬ್ಬರು; ಗಂಧಕೀಕರಣ ಮಾಡಿದ ಗಡಸು ರಬ್ಬರು.
ebonize
ಸಕರ್ಮಕ ಕ್ರಿಯಾಪದ
ಎಬನಿಮರದಂಥ ಕಪ್ಪು ಬಣ್ಣ ಹಾಕು; ಕರಿ ಬಣ್ಣವೂರಿಸು; ಕಪ್ಪು ಮೆರಗು ಕೊಡು.
ebony
ನಾಮವಾಚಕ
- ಎಬನಿ; ಕರಿಮರ; ಉಷ್ಣವಲಯದ, ಮುಖ್ಯವಾಗಿ ಡಯಸ್ಪೈರಸ್ ಕುಲದ, ಮರ.
- ಇಂಥ ದಾರನ್ನು ಕೊಡುವ ಯಾವುದೇ ಮರ.
- ಇದನ್ನೇ ಹೋಲುವ ಇತರ ಮರಗಳು ಯಾ ಅವುಗಳ ದಾರುಗಳು.
- ಕಡುಗಪ್ಪುಬಣ್ಣ; ಗಾಢ ಷ್ಣವರ್ಣ; ಹೊಳೆಯುವ ಕಡು ಕಪ್ಪು ಬಣ್ಣ.
ebony
ಗುಣವಾಚಕ
= ebon.