भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

faint-heartedness

ನಾಮವಾಚಕ

  • ಎದೆಗೇಡಿತನ; ಅಂಜುಕುಳಿತನ; ಅಂಜುಬುರುಕತನ; ಪುಕ್ಕತನ; ಪುಕ್ಕಲು; ಹೇಡಿತನ; ಭೀರುತ್ವ.
  • ಅರೆ ಮನಸ್ಸು; ದುರ್ಬಲತೆ.

faintish

ಗುಣವಾಚಕ

  • ತುಸ ಅಸ್ಪಷ್ಟವಾಗಿರುವ; ಕಾಣಿಸುವುದೇ ಕಷ್ಟವಾದ.
  • ಸ್ವಲ್ಪ ಅರೆ ಮನಸ್ಸಿನ.

faintly

ಕ್ರಿಯಾವಿಶೇಷಣ

  • ಅಸ್ಪಷ್ಟವಾಗಿ; ಮಸುಕು ಮಸುಕಾಗಿ; ಮಂಕಾಗಿ; ಮಲಿನವಾಗಿ.
  • ಕ್ಷೀಣವಾಗಿ; ಕೇಳಿಯೂ ಕೇಳದಂತೆ.
  • (ಪ್ರತಿಭಟನೆ ಮೊದಲಾದವುಗಳ ವಿಷಯದಲ್ಲಿ) ದುರ್ಬಲವಾಗಿ; ಬಲಹೀನವಾಗಿ; ಅರೆಮನಸ್ಸಿನಿಂದ.

faintness

ನಾಮವಾಚಕ

  • ದುರ್ಬಲತೆ; ಬಲಹೀನತೆ; ನಿತ್ರಾಣ; ಅತಿಸುಸ್ತು; ಪೇಲವತೆ; ಬಳಲಿಕೆ.
  • ಅಂಜುಕುಳಿತನ; ಅಂಜುಬುರುಕತನ; ಪುಕ್ಕಲ ಸ್ವಭಾವ; ಹೃದಯದೌರ್ಬಲ್ಯ.
  • ಮೂರ್ಛೆ ಹೋಗುವಂತಿರುವುದು.
  • ಅಸ್ಪಷ್ಟತೆ; ಮಸುಕಾಗಿರುವಿಕೆ; ಮಂಕಾಗಿರುವಿಕೆ.
  • ಅರೆಮನಸ್ಸು; ದುರ್ಬಲತೆ.

faints

ನಾಮವಾಚಕ

(ಬಹುವಚನ) (ಆಸವನಕ್ರಿಯೆಯಲ್ಲಿ ಯಾ ಆಸವ ಇಳಿಸುವಾಗ ಮೊದಲಲ್ಲೂ ಕೊನೆಯಲ್ಲೂ ಹೊರಡುವ ಕಲ್ಮಷಗೂಡಿದ) ಅಶುದ್ಧ ಸಾರಾಯಿ.

fair

ನಾಮವಾಚಕ

ನುಡಿಗಟ್ಟು

a day after the fair ಸಂತೆ ಮುಗಿದ ಮೇಲೆ; ಕಾಲ ಈರಿದ ಮೇಲೆ.

  • ಜಾತ್ರೆ; ಪರಿಷೆ; ಸಂತೆ; ಸನ್ನದು, ಕಾನೂನು ಯಾ ರೂಢಿ ಅನುಸರಿಸಿ ಗೊತ್ತಾದ ಸ್ಥಳ ಮತ್ತು ಕಾಲಗಳಲ್ಲಿ ವ್ಯಾಪಾರಕ್ಕಾಗಿ, ಅನೇಕ ವೇಳೆ ಪ್ರದರ್ಶನ, ವಿನೋದಗಳಿಂದ ಕೂಡಿ, ಆಗಾಗ ಸೇರುವ ನೆರವಿ.
  • ಪ್ರದರ್ಶನ; ಮುಖ್ಯವಾಗಿ ವಿಶೇಷ ಉತ್ಪನ್ನಗಳನ್ನು ಏರ್ಪಡಿಸುವ ಪ್ರದರ್ಶನ.
  • = funfair.

fair

ಗುಣವಾಚಕ

ನುಡಿಗಟ್ಟು

  • ಚೆಲುವಾದ; ಅಂದವಾದ; ಚೆನ್ನಾದ; ಸೊಗಸಾದ; ಸುಂದರವಾದ; ರಮ್ಯ.
  • ತೃಪ್ತಿಕರ: his work is only fair, certainly not distinguished ಅವನ ಕೆಲಸ ತೃಪ್ತಿಕರವಾಗಿದೆ ಅಷ್ಟೆ, ಖಂಡಿತ ಶ್ರೇಷ್ಠಮಟ್ಟದ್ದಲ್ಲ.
  • ಸಮೃದ್ಧ; ಯಥೇಚ್ಛವಾದ; ಹೇರಳವಾದ; ಪುಷ್ಕಳ; ಸಾಕಷ್ಟು: a fair heritage ಹೇರಳವಾದ ಪಿತ್ರಾರ್ಜಿತ.
  • ಹೊರಗೆ ಚೆನ್ನಾಗಿ ತೋರುವ; ಮೇಲೆ ನ್ಯಾಯವಾಗಿ ಕಾಣುವ; ಮೇಲ್ನೋಟಕ್ಕೆ ಸರಿಯಿರಬಹುದೆಂದು ತೋರುವ, ಒಪ್ಪುವಂತೆ ಕಾಣುವ: fair speeches ನ್ಯಾಯಸಮ್ಮತವಾಗಿ ತೋರುವ ಭಾಷಣಗಳು.
  • ನಸು ಹೊಂಬಣ್ಣದ; ಕಪ್ಪಲ್ಲದ; ಗೌರ: a fair complexion ಗೌರವರ್ಣ.
  • ಚೊಕ್ಕಟವಾದ; ಶುಭ್ರ; ಸ್ವಚ್ಛ; ನಿರ್ಮಲವಾದ: fair water ನಿರ್ಮಲವಾದ ನೀರು.
  • ಚೊಕ್ಕ; ಸ್ಪಷ್ಟ; ತಪ್ಪಿಲ್ಲದ: fair copy ಚೊಕ್ಕ ಪ್ರತಿ; ತಪ್ಪಿಲ್ಲದ ಪ್ರತಿ.
  • ಕಳಂಕವಿಲ್ಲದ; ನಿಷ್ಕಳಂಕ; ನಿರ್ದುಷ್ಟ; ಕುಂದಿಲ್ಲದ: fair fame ನಿಷ್ಕಳಂಕ ಯಶಸ್ಸು.
  • ನ್ಯಾಯವಾದ; ಪಕ್ಷಪಾತವಿಲ್ಲದ; ನ್ಯಾಯಪರ; ನಿಷ್ಪಕ್ಷಪಾತವಾದ; ನ್ಯಾಯಸಮ್ಮತವಾದ; ಕ್ರಮಬದ್ಧವಾದ; ಯುಕ್ತವಾದ.
  • (ವಸ್ತು, ಆರೋಗ್ಯ, ಮೊದಲಾದವುಗಳ ವಿಷಯದಲ್ಲಿ) ತಕ್ಕಮಟ್ಟಿನ; ಸಾಮಾನ್ಯ ಗುಣದ; ಸಾಧಾರಣಮಟ್ಟದ; ಇದ್ದ ಮಟ್ಟಿಗೆ ಚೆನ್ನಾಗಿರುವ; ಮಧ್ಯಮಗುಣದ.
  • (ಹವೆಯ ವಿಷಯದಲ್ಲಿ) ಹಿತವಾದ; ಗಾಳಿಮಳೆಯಿಲ್ಲದ.
  • (ಗಾಳಿಯ ವಿಷಯದಲ್ಲಿ) (ಹಡಗು, ವಿಮಾನ, ಮೊದಲಾದವುಗಳಿಗೆ) ಅನುಕೂಲವಾದ; ಸಾಧಕವಾದ.
  • (ಭವಿಷ್ಯ ಮೊದಲಾದವುಗಳ ವಿಷಯದಲ್ಲಿ) ಭರವಸೆ ಕೊಡುವ; ಆಶಾದಾಯಕ.
  • (ಮಾತು, ಕ್ರಮ, ವಿಧಾನಗಳ ವಿಷಯದಲ್ಲಿ) ನಯವಾದ; ಮೃದುವಾದ; ಘರ್ಷಣೆಗಳಿಲ್ಲದ.
  • ತಡೆಯಿಲ್ಲದ; ಅಡಚಣೆಯಿಲ್ಲದ; ಸಲೀಸಾದ.
  • (ಆಕಾಶದ ವಿಷಯದಲ್ಲಿ) ನಿರ್ಮಲ; ಮೋಡಗಳಿಲ್ಲದ.
  • (ಬ್ರಿಟಿಷ್‍ ಪ್ರಯೋಗ, ಆಸ್ಟ್ರೇಲಿಯ, ನ್ಯೂಸಿಲಂಡ್‍) (ಅಶಿಷ್ಟ) ಪೂರ್ತಿ ಸಂಪೂರ್ಣವಾದ.

fair

ನಾಮವಾಚಕ

ಪದಗುಚ್ಛ

ನುಡಿಗಟ್ಟು

the fair ಮಹಿಳೆಯರು; ಹೆಣ್ಣುಮಕ್ಕಳು.

  • (ಪ್ರಾಚೀನ ಪ್ರಯೋಗ) ಸುಂದರವಾದ ಹೆಂಗಸು.
  • ಸುಂದರವಾದ, ಅಂದವಾದ ವಸ್ತು.
  • ಹೆಣ್ಣುಮಗಳು; ಹೆಂಗಸು: a fair ಒಬ್ಬ ಹೆಂಗಸು.
  • ಪ್ರಿಯೆ; ನಲ್ಲೆ.

fair

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಹವೆಯ ವಿಷಯದಲ್ಲಿ) ಹಿತವಾಗು; ಅನುಕೂಲವಾಗು.

  • (ದಸ್ತಾವೇಜಿನ) ಶುದ್ಧಪ್ರತಿ ಮಾಡು; ಚೊಕ್ಕಪ್ರತಿ ಮಾಡು; ಚೊಕ್ಕಪ್ರತಿ ತಯಾರು ಮಾಡು.
  • (ನೌಕಾನಿರ್ಮಾಣ ಮೊದಲಾದವುಗಳಲ್ಲಿ ನೌಕೆಯ ಮೇಲ್ಮೈ ಮೊದಲಾದವನ್ನು) ನಯಗೊಳಿಸು; ಮಟ್ಟಸಮಾಡು.

fair

ಕ್ರಿಯಾವಿಶೇಷಣ

ಪದಗುಚ್ಛ

  • ಚೆನ್ನಾಗಿ; ಅಂದವಾಗಿ; ಸೊಗಸಾಗಿ.
  • ಪೂರ್ತಿಯಾಗಿ; ಸಂಪೂರ್ಣವಾಗಿ; ಪೂರ್ಣವಾಗಿ: it all happened so suddenly that it fair took my breath away ಅದೆಲ್ಲ ಎಷ್ಟು ಹಠಾತ್ತಾಗಿ ಆಗಿಹೋಯಿತೆಂದರೆ ನನ್ನ ಉಸಿರು ಕಟ್ಟಿಹೋಯಿತು, ಪೂರ್ತಿ ನಿಂತುಹೋಯಿತು.
  • ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ; ಸಂಪೂರ್ಣವಾಗಿ.

fair and square

ಗುಣವಾಚಕ

ನೇರವಾದ; ನ್ಯಾಯವಾದ; ಸಾಚಾ; ಮುಚ್ಚುಮರೆಯಿಲ್ಲದ; ಕೃತ್ರಿಮವಿಲ್ಲದ: he was admired for being fair and square in his dealings ವ್ಯವಹಾರಗಳಲ್ಲಿ ನ್ಯಾಯವಾಗಿ ವರ್ತಿಸಿದ್ದಕ್ಕಾಗಿ ಅವನು ಮೆಚ್ಚುಗೆ ಪಡೆದ.

fair and square

ಕ್ರಿಯಾವಿಶೇಷಣ

  • ನ್ಯಾಯವಾಗಿ; ಸಾಚಾ ಆಗಿ; ನೇರವಾಗಿ; ಕೃತ್ರಿಮವಿಲ್ಲದೆ; ಮುಚ್ಚುಮರೆಯಿಲ್ಲದೆ.
  • ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ: fair and square in the middle ಸರಿಯಾಗಿ ಮಧ್ಯದಲ್ಲಿ.

fair game

ನಾಮವಾಚಕ

ಸರಿಯಾದ ಗುರಿ; ಒಳ್ಳೆಬೇಟೆ; ಅರ್ಹಬೇಟೆ; ಗುರಿ, ಸಾಧನೆ, ಟೀಕೆ, ಖಂಡನೆ, ಮೊದಲಾದವುಗಳಿಗೆ ಸರಿಯಾದ ಯಾ ನ್ಯಾಯವಾದ ವ್ಯಕ್ತಿ ಯಾ ವಸ್ತು.

Fair Isle

ನಾಮವಾಚಕ

  • ಷೆಟ್ಲಂಡ್‍ ದ್ವೀಪ ಸಮುದಾಯದಲ್ಲಿ ಒಂದು ದ್ವೀಪ.
  • ಬಣ್ಣ ಬಣ್ಣದ ನಮೂನೆಗಳಲ್ಲಿ ಹೆಣೆದಿರುವ ಕವಚ ಮೊದಲಾದವು.

Fair Isle

ಗುಣವಾಚಕ

ಪದಗುಚ್ಛ

ಬಣ್ಣ ಬಣ್ಣದ ನಮೂನೆಗಳಲ್ಲಿ ಹೆಣೆದ. Fair Isle pullover, sweater ಹೇರ್‍ ಐಲ್‍ ಸ್ವೆಟರು; ಮೂರ್‍ ಪಂಗಡದ ಜನದ್ದೆಂದು ಹೇಳಲಾದ ಮಾದರಿಗಳಲ್ಲಿ ಹೆಣೆದ, ಬಣ್ಣಬಣ್ಣದ ಉಣ್ಣೆಯ ಕವಚ.

fair play

ನಾಮವಾಚಕ

  • ನ್ಯಾಯ ವರ್ತನೆ; ಏಕರೂಪವಾದ ವರ್ತನೆ; ಸಮಾನವರ್ತನೆ; ನ್ಯಾಯಯುತವಾದ ಯಾ ನಿಷ್ಪಕ್ಷಪಾತವಾದ ಯಾ ಎಲ್ಲರಿಗೂ ಒಂದೇ ರೀತಿಯದಾಗಿರುವ ಕ್ರಿಯೆ, ನಡವಳಿಕೆ, ಆಚರಣೆ.
  • ನ್ಯಾಯವಾದ ಅವಕಾಶ; ಏಕರೂಪವಾದ ಅವಕಾಶ; ಸಮಾನಾವಕಾಶ; ಎಲ್ಲರಿಗೂ ಒಂದೇ ರೀತಿಯದಾಗಿರುವ ಪರಿಸ್ಥಿತಿ.

fair-faced

ಗುಣವಾಚಕ

(ಇಟ್ಟಿಗೆ ಕೆಲಸ ಮೊದಲಾದವುಗಳ ವಿಷಯದಲ್ಲಿ) ಗಿಲಾವು ಮಾಡಿಲ್ಲದ; ಪ್ಲಾಸ್ಟರ್‍ ಮಾಡಿಲ್ಲದ; ಗಾರೆ ಬಳಿಯದ.

fair-haired

ಗುಣವಾಚಕ

  • ನಸು ಹೊಂಬಣ್ಣದ ಕೂದಲಿನ.
  • (ರೂಪಕವಾಗಿ) ಪ್ರೀತಿಪಾತ್ರ; ಪ್ರಿಯ; ನೆಚ್ಚಿನ.

fair-haired

ನಾಮವಾಚಕ

(ರೂಪಕವಾಗಿ) ಪ್ರೀತಿಪಾತ್ರ; ಪ್ರಿಯವ್ಯಕ್ತಿ; ನೆಚ್ಚಿನ ವ್ಯಕ್ತಿ.

fair-minded

ಗುಣವಾಚಕ

ನ್ಯಾಯದೃಷ್ಟಿಯ; ನಿಷ್ಪಕ್ಷಪಾತವಾದ; ಪೂರ್ವಗ್ರಹವಿಲ್ಲದ.

Search Dictionaries

Loading Results

Follow Us :   
  Download Bharatavani App
  Bharatavani Windows App