भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

fabled

ಗುಣವಾಚಕ

  • ಪುರಾಣಪ್ರಸಿದ್ಧ; ಪುರಾಣಪ್ರಖ್ಯಾತ; ಕಥೆಗಳಲ್ಲಿ, ಪುರಾಣಗಳಲ್ಲಿ, ದಂತಕಥೆಗಳಲ್ಲಿ ಹೆಸರಾಂತ.
  • ಐತಿಹ್ಯದ; ದಂತಕಥೆಗಳ ಪ್ರಪಂಚಕ್ಕೆ ಸೇರಿದ; ವಾಸ್ತವಿಕ ಆಧಾರ ಸಿಕ್ಕದ.
  • ಕಲ್ಪಿತ; ಕಾಲ್ಪನಿಕ; ಬರಿಯ ಕಟ್ಟುಕಥೆಗೆ ಸೇರಿದ.

fabler

ನಾಮವಾಚಕ

(ಮುಖ್ಯವಾಗಿ ತಿರಸ್ಕಾರವಾಗಿ) ಕಟ್ಟು ಕಥೆಗಾರ; ಕಟ್ಟುಕಥೆಗಳನ್ನು ರಚಿಸುವವನು ಯಾ ಹೇಳುವವನು.

fabliau

ನಾಮವಾಚಕ

ಆದಿಕಾಲದ ಹ್ರೆಂಚ್‍ ಕಾವ್ಯದಲ್ಲಿ ಕೆಲವೊಮ್ಮೆ ಒರಟು ಹಾಸ್ಯದಿಂದ ಕೂಡಿರುತ್ತಿದ್ದ ಛಂದೋಬದ್ಧ ಕಥೆ.

fabric

ನಾಮವಾಚಕ

  • ಜೋಡಣೆ; ಜೋಡಿಸಿದ ವಸ್ತು; ಒಟ್ಟಿಗೆ ಕೂಡಿಸಿ ನಿರ್ಮಿಸಿದ ಯಾವುದೇ ವಸ್ತು.
  • (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ದೊಡ್ಡ) ಕಟ್ಟಡ; ಸೌಧ; ಭವನ.
  • ಚೌಕಟ್ಟು; ಬಂಧ; ಕಟ್ಟಡ; ಆಧಾರವಾದ ರಚನೆ (ರೂಪಕವಾಗಿ ಸಹ).
  • (ರೂಪಕವಾಗಿ) ಸೃಷ್ಟಿ; ರಚನೆ; ನಿರ್ಮಾಣ: this goodly fabric of heaven and earth ಈ ದ್ಯಾವಾಪೃಥಿವಿಗಳ ಸುಂದರಸೃಷ್ಟಿ.
  • ನೆಯ್ದ ಯಾ ಹೆಣೆದ ಬಟ್ಟೆ, ವಸ್ತ್ರ: textile fabric ನೆಯ್ದ ಬಟ್ಟೆ.
  • ನೆಯ್ದ ಬಟ್ಟೆಯನ್ನು ಹೋಲುವ ಯಾವುದೇ ವಸ್ತು.
  • ರಚಿಸುವಿಕೆ; ರಚನೆ; ನಿರ್ಮಾಣ.
  • ಹೆಣಿಗೆ ನೆಯ್ಗೆ; ಬಂಧ (ರೂಪಕವಾಗಿ ಸಹ).
  • ಕಟ್ಟಡ; ಕಟ್ಟಡದ ಗೋಡೆ, ನೆಲ ಮತ್ತು ಚಾವಣಿ.

fabricate

ಸಕರ್ಮಕ ಕ್ರಿಯಾಪದ

  • ರಚಿಸು; ನಿರ್ಮಿಸು; ತಯಾರಿಸು; ಮುಖ್ಯವಾಗಿ ಅರ್ಧ ಮುಗಿಸಿದ ಲೋಹಭಾಗಗಳು ಮೊದಲಾದವಕ್ಕೆ ಪೂರ್ಣ ರೂಪಕೊಡು.
  • ಜೋಡಿಸು; ಸಂಯೋಜಿಸು; ಬಿಡಿ ಭಾಗಗಳನ್ನು ಒಟ್ಟುಗೂಡಿಸಿ ತಯಾರಿಸು.
  • (ಸಂಗತಿಗಳನ್ನು) ಹುಟ್ಟಿಸು; ಕಲ್ಪಿಸು; ಸೃಷ್ಟಿಸು.
  • (ದಸ್ತಾವೇಜನ್ನು) ಸೃಷ್ಟನೆಮಾಡು: ಬನಾವಟುಮಾಡು.

fabrication

ನಾಮವಾಚಕ

  • ಕಟ್ಟೋಣ; ಕಟ್ಟುವಿಕೆ.
  • ತಯಾರಿಸುವಿಕೆ; ತಯಾರಿಕೆ; ನಿರ್ಮಾಣ.
  • (ಸಂಗತಿಗಳು, ಹೇಳಿಕೆ, ಮೊದಲಾದವನ್ನು) ಹುಟ್ಟಿಸುವುದು; ಕಲ್ಪಿಸುವುದು; ಸೃಷ್ಟನೆ ಮಾಡುವುದು.
  • (ಸುಳ್ಳು ದಸ್ತಾವೇಜು) ಸೃಷ್ಟಿಸುವುದು; ಬನಾವಟು ಮಾಡುವುದು.
  • ಸೃಷ್ಟನೆ; ಕಲ್ಪಿಸಿದ ಸಂಗತಿ; ಸೃಷ್ಟನೆ ಮಾಡಿದ ವಿಷಯ, ಹೇಳಿಕೆ, ಮೊದಲಾದವು.
  • ಖೋಟಾ (ತಯಾರಿ); ನಕಲಿ.

fabricator

ನಾಮವಾಚಕ

  • ತಯಾರಕ; ನಿರ್ಮಾಪಕ; ಕಟ್ಟುವವನು ಯಾ ಕಟ್ಟುವಂಥದು.
  • (ಸುಳ್ಳು ಹೇಳಿಕೆ, ಪತ್ರ, ಮೊದಲಾದವನ್ನು) ಸೃಷ್ಟನೆ ಮಾಡುವವ; ಖೋಟಾ ತಯಾರಕ.

fabulist

ನಾಮವಾಚಕ

  • ನೀತಿಕಥೆಗಾರ; ನೀತಿಕಥೆಗಳನ್ನು ರಚಿಸುವವನು.
  • ಪುರಾಣಕರ್ತ; ಪುರಾಣಕಥೆ ರಚಿಸುವವನು.
  • ಕಟ್ಟು ಕಥೆಗಾರ; ಕಲ್ಪಿತ ಕಥೆಗಳನ್ನು ರಚಿಸುವವನು.
  • ಸುಳ್ಳ; ಸುಳ್ಳುಗಾರ; ಸಟೆಗಾರ.

fabulosity

ನಾಮವಾಚಕ

  • (ವ್ಯಕ್ತಿಗಳ ವಿಷಯದಲ್ಲಿ) ಪುರಾಣಪ್ರೀತಿ; ದಂತಕಥೆಯೊಲವು; ಪುರಾಣಕಥೆಗಳನ್ನು ಹೇಳುವುದರಲ್ಲಿ ಪ್ರೀತಿಯಿರುವಿಕೆ.
  • (ಕಥನ, ಕಥೆ ಮೊದಲಾದವುಗಳ ವಿಷಯದಲ್ಲಿ) ಪೌರಾಣಿಕತೆ; ಪುರಾಣಸದೃಶತೆ; ಪುರಾಣಕಥೆಗಳಂತೆ ಯಾ ದಂತಕಥೆಗಳಂತೆ ಇರುವಿಕೆ; ಪೌರಾಣಿಕವಾಗಿ ತೋರುವಿಕೆ.

fabulous

ಗುಣವಾಚಕ

  • ಐತಿಹ್ಯನಿರೂಪಕ; ಪುರಾಣಕಥೆಗಳನ್ನು, ದಂತಕಥೆಗಳನ್ನು ಹೇಳುವ ಅಭ್ಯಾಸವುಳ್ಳ: fabulous historians ಪೌರಾಣಿಕ ಯಾ ದಂತಕಥೆಗಳನ್ನು ಹೇಳುವ ಚರಿತ್ರಕಾರರು.
  • ಪುರಾಣಪ್ರಸಿದ್ಧ; ಪುರಾಣಕಥೆಗಳಲ್ಲಿ ಮಾತ್ರ ಹೆಸರಾದ.
  • ಚಾರಿತ್ರಿಕವಲ್ಲದ; ಅನೈತಿಹಾಸಿಕ.
  • ಪೌರಾಣಿಕ; ಪುರಾಣದ ಕಥೆಗಳಂಥ.
  • ನಂಬಲಾಗದ; ಅವಿಶ್ವಸನೀಯ.
  • ಅಸಂಬದ್ಧ; ಅಸಂಗತ; ಅರ್ಥಶೂನ್ಯ.
  • ಅಸಾಧಾರಣ; ಉತ್ಪ್ರೇಕ್ಷಿತ.
  • ಅವಾಸ್ತವಿಕ; ಕಾಲ್ಪನಿಕ; ಕಲ್ಪಿತ; ಅತಿಶಯೋಕ್ತಿಯಿಂದ ತುಂಬಿದ; ವಾಸ್ತವತೆಯನ್ನು ಈರಿದ.
  • (ಆಡುಮಾತು) ಅದ್ಭುತ; ಅಮೋಘ; ವಿಸ್ಮಯಕಾರಿಯಾದ.

fabulously

ಕ್ರಿಯಾವಿಶೇಷಣ

  • ಪೌರಾಣಿಕ ರೀತಿಯಲ್ಲಿ; ಪುರಾಣಕಥೆಯ ಶೈಲಿಯಲ್ಲಿ; ಪುರಾದಲ್ಲಿರುವಂತೆ.
  • ನಂಬಲಾಗದಂತೆ; ನಂಬಲಾಗದಷ್ಟು; ಅಸಂಭಾವ್ಯವಾಗಿ.
  • ಅಸಾಧಾರಣವಾಗಿ; ಅದ್ಭುತವಾಗಿ; ಅಮೋಘವಾಗಿ.
  • ಸುಳ್ಳಾಗಿ; ಸತ್ಯಾಂಶದಿಂದ ದೂರವಾಗಿ; ಕಾಲ್ಪನಿಕವಾಗಿ; ಕಲ್ಪಿತವಾಗಿ.

fabulousness

ನಾಮವಾಚಕ

= fabulosity.

facade

ನಾಮವಾಚಕ

  • ಮುಖಭಾಗ; ಮುಂಭಾಗ; (ಬೀದಿಯ ಕಡೆಗೆ ಯಾ ಖಾಲಿ ಜಾಗ ಬಿಟ್ಟಿರುವ ಕಡೆಗೆ ಇರುವ) ಕಟ್ಟಡದ ಮುಖ.
  • (ಯಾವುದೇ ಒಂದರ) ಮುಖ; ಮುಂಬದಿನೋಟ; ಹೊರನೋಟ; ಮುಂದುಗಡೆ ಯಾ ಹೊರಗಡೆ ಕಾಣಿಸುವ ದೃಶ್ಯ.
  • (ರೂಪಕವಾಗಿ) (ಮುಖ್ಯವಾಗಿ ಮೋಸಗೊಳಿಸುವ ಯಾ ವಂಚಿಸುವ) ತೋರ್ಕೆ; ಹೊರನೋಟ; ಬಾಹ್ಯದೃಶ್ಯ.

face

ನಾಮವಾಚಕ

ನುಡಿಗಟ್ಟು

  • ಮುಖ; ಮೋರೆ; ಮೊಗ.
  • ಮುಖ; ಮುಖಭಾವ; ಮುಖಭಂಗಿ; ಮುಖಮುದ್ರೆ; ಮುಖಲಕ್ಷಣ.
  • ಮುಖವಿಕಾರ; ಮುಖಚೇಷ್ಟೆ; ಅಣಕ; ಅಣಕಿಸುವ ಮುಖ.
  • ಧೈರ್ಯ; ಧೃಷ್ಟತೆ; ಧಾರ್ಷ; ನಿರ್ಲಜ್ಜತೆ; ಸಂಕೋಚ ಭಯಗಳೇ ಇಲ್ಲದಿರುವಿಕೆ.
  • ಹೊರತೋರ್ಕೆ; ಹೊರಲಕ್ಷಣ; ಹೊರನೋಟ; ಬಾಹ್ಯಲಕ್ಷಣ.
  • ಮೇಲ್ಮೈ; ಹೊರಮೈ; ತಲ: from the face of the earth ಭೂತಲದಿಂದಲೇ.
  • ಎದುರು; ಮುಂಭಾಗ; ಮುಮ್ಮುಖ: ಮುಂಪಾರ್ಶ; ಮುಂದುಗಡೆಯ ಯಾ ಮೇಲ್ಗಡೆಯ ಭಾಗ.
  • ಗಡಿಯಾರ ಮೊದಲಾದವುಗಳ ಫಲಕ, ಇಸ್ಪೀಟು ಎಲೆಯ ಮುಖಭಾಗ, ಮೊದಲಾದವು.
  • (ಉಪಕರಣ ಮೊದಲಾದವುಗಳ) ಮುಖ; ಅಗ್ರಭಾಗ.
  • (ಜ್ಯಾಮಿತಿ) ತಲ; ಮುಖ; ಪಾರ್ಶ; ಘನವಸ್ತುವಿನ ಮುಖ.
  • ಅಚ್ಚುಮೊಳೆಯ ಮುಖ.
  • (ಗಣಿಯಲ್ಲಿ) ಕಲ್ಲಿದ್ದಿಲಿನ ಪದರದ ಮುಖ; ಹೊರಕ್ಕೆ ಕಾಣಿಸುವ ಕಲ್ಲಿದ್ದಲಿನ ಮೈ.
  • ಕೀರ್ತಿ; ಪ್ರತಿಷ್ಠೆ; ಒಳ್ಳೆಯ ಹೆಸರು: save one’s face ಒಳ್ಳೆಯ ಹೆಸರು ಕಾಪಾಡಿಕೊ.

face

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

ನುಡಿಗಟ್ಟು

face the music ಅಹಿತಕರ ಪರಿಣಾಮವನ್ನು, ಮುಖ್ಯವಾಗಿ ಟೀಕೆಯನ್ನು, ಧೈರ್ಯವಾಗಿ ಎದುರಿಸಿ ನಿಲ್ಲು.

  • ಆತ್ಮವಿಶ್ವಾಸದಿಂದ ಯಾ ಉದ್ಧಟತನದಿಂದ ಎದುರಿಸು.
  • (ವಾಸ್ತವಾಂಶ ಮೊದಲಾದವುಗಳಿಂದ) ಹಿಮ್ಮೆಟ್ಟದಿರು; ಹಿಂದೆಗೆಯದಿರು.
  • (ಸ್ಪರ್ಧೆ ಮೊದಲಾದವುಗಳನ್ನು) ಎದುರಿಸಿ ನಿಲ್ಲು; ಎದುರಿಸು.
  • ನೇರವಾಗಿ ಎದುರಿಸು; ಮುಖಾಮುಖಿಯಾಗಿ ನಿಲ್ಲು.
  • ಎದುರಾಗು; ಎದುರಿಗಿರು; ಮುಂದೆ ಬರು; ಮುಂದಿರು; ಒದಗಿ ಬರು; ಪ್ರಾಪ್ತವಾಗಿರು; ಎದುರಿಸು: the problem that faces us ನಮ್ಮನ್ನು ಎದುರಿಸುವ ಸಮಸ್ಯೆ; ನಮ್ಮ ಮುಂದೆ ಬಂದಿರುವ ಸಮಸ್ಯೆ; ನಮಗೊದಗಿರುವ ಸಮಸ್ಯೆ.
  • (ಇಸ್ಪೀಟೆಲೆಯನ್ನು) ಅಂಗಾತನಾಗಿ ಇಡು; ಮೇಲುಮುಖ ಮಾಡು; ಮೇಲ್ಮುಖವಾಗಿಸು; ಮೇಲುಮುಖವಾಗಿ ತಿರುಗಿಸು.
  • (ಯಾವುದೇ ಒಂದರ) ಕಡೆಗೆ ನೋಡುತ್ತಿರು; ಮುಖ ಮಾಡಿಕೊಂಡಿರು; ಎದುರಾಗಿರು; ಅಭಿಮುಖವಾಗಿರು: to face page 20 ಇಪ್ಪತ್ತನೆಯ ಪುಟಕ್ಕೆ ಎದುರಾಗಿರುವಂತೆ.
  • (ಲಕ್ರಾಸ್‍, ಐಸ್‍ಹಾಕಿ, ಮೊದಲಾದ ಆಟಗಳಲ್ಲಿ) (ಚೆಂಡು, ರಬ್ಬರ್‍ ಚಕ್ರ, ಮೊದಲಾದವುಗಳನ್ನು) ಉಭಯದಳಗಳ ಆಟಗಾರರಿಬ್ಬರ ಬ್ಯಾಟುಗಳ ನಡುವೆ ಆಟದ ಆರಂಭಸೂಚಕವಾಗಿ ಇಡು ಯಾ ಈ ರೀತಿ ಆಟ ಪ್ರಾರಂಭಿಸು: face off (ಲಕ್ರಾಸ್‍, ಐಸ್‍ಹಾಕಿ ಮೊದಲಾದ ಆಟಗಳಲ್ಲಿ) ಆಟ ಆರಂಭಿಸು.
  • (ಉಡುಪಿಗೆ) ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳನ್ನು ಬೇರೆ ಬಣ್ಣದ ಬಟ್ಟೆಯಲ್ಲಿ ಹಾಕು.
  • (ಒಂದರ) ಮೇಲ್ಮೈಯನ್ನು ನಯಗೊಳಿಸು.
  • (ಟೀ ಸೊಪ್ಪಿಗೆ) ಬಣ್ಣಕೊಡು.
  • (ಅಮೆರಿಕನ್‍ ಪ್ರಯೋಗ) (ಸೈನ್ಯ) (ನಿಂತಲ್ಲಿಯೇ ನಿರ್ದೇಶಿತ ದಿಕ್ಕಿಗೆ) ತಿರುಗಿಸು: he faced his men about ಅವನು ತನ್ನ ಸೈನಿಕರನ್ನು ಹಿಂದಕ್ಕೆ ತಿರುಗಿಸಿದ.
  • ಮುಖವರಿಸೆ ಕಟ್ಟು; ಹೊರಹೊದಿಕೆ ಹೊದಿಸು; (ಬೇರೊಂದು ಪದಾರ್ಥದ) ಮೇಲ್ಪದರ ಹಾಕು; (ಪದಾರ್ಥವೊಂದರ ಮೇಲ್ಮೈಯನ್ನು ಬೇರೊಂದು ಪದಾರ್ಥದ) ಪದರದಿಂದ ಮುಚ್ಚು.

face value

ನಾಮವಾಚಕ

  • (ನಾಣ್ಯ, ನೋಟು, ಮೊದಲಾದವುಗಳ ಮೇಲೆ ಮುದ್ರಿಸಿರುವ) ಮುಖಬೆಲೆ; ನಮೂದು ಬೆಲೆ.
  • (ರೂಪಕವಾಗಿ) ಮುಖಬೆಲೆ; ತೋರ್ಕೆ ಬೆಲೆ; ಹೊರಗಿನಿಂದ ಕಾಣುವ ಬೆಲೆ.

face-ache

ನಾಮವಾಚಕ

ಮುಖಶೂಲೆ; ಮುಖದ ನರಶೂಲೆ, ಮುಖ್ಯವಾಗಿ ಅರದಲೆನೋವು.

face-card

ನಾಮವಾಚಕ

ಇಸ್ಪೀಟಿನಲ್ಲಿ ರಾಜ, ರಾಣಿ, ಯಾ ಗುಲಾಮ; ಮುಖದ ಚಿತ್ರವಿರುವ ಎಲೆ.

face-cloth

ನಾಮವಾಚಕ

  • ಮುಖಬಟ್ಟೆ; ಮುಖಮಾರ್ಜಕ; ಮುಖವನ್ನು ಒರೆಸಿಕೊಳ್ಳುವ ಬಟ್ಟೆ.
  • ನಯವಾದ ಉಣ್ಣೆ; ನುಣುಪಾದ ಮೇಲ್ಮೈಯಿರುವ ಉಣ್ಣೆಬಟ್ಟೆ.

face-cream

ನಾಮವಾಚಕ

ಮುಖಕೆನೆ; ಮುಖಕ್ರೀಮು; ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಚ್ಚುವ ಕ್ರೀಮು.

Search Dictionaries

Loading Results

Follow Us :   
  Download Bharatavani App
  Bharatavani Windows App