भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

futile

ಗುಣವಾಚಕ

  • ಕೆಲಸಕ್ಕೆ ಬಾರದ; ಪ್ರಯೋಜನವಿಲ್ಲದ; ಪರಿಣಾಮಕಾರಿಯಲ್ಲದ; ನಿರರ್ಥಕ; ವ್ಯರ್ಥ; ನಿಷ್ಫಲ; ವಿಫಲ: a futile effort ನಿಷ್ಫಲ ಪ್ರಯತ್ನ.
  • ಕ್ಷುದ್ರ; ಕ್ಷುಲ್ಲಕ; ಹುಲು; ಅಲ್ಪ; ಬೆಲೆಬಾಳದ: a head filled with futile ideas ಕ್ಷುದ್ರ ಭಾವನೆಗಳಿಂದ ತುಂಬಿದ ತಲೆ.

futilely

ಕ್ರಿಯಾವಿಶೇಷಣ

  • ಕೆಲಸಕ್ಕೆ ಬಾರದ ರೀತಿಯಲ್ಲಿ; ಪ್ರಯೋಜನವಿಲ್ಲದೆ; ನಿಷ್ಪರಿಣಾಮಕಾರಿಯಾಗಿ; ನಿರರ್ಥಕವಾಗಿ; ವ್ಯರ್ಥವಾಗಿ; ನಿಷಲವಾಗಿ.
  • (ವಿರಳ ಪ್ರಯೋಗ) ಕ್ಷುದ್ರವಾಗಿ; ಅಲ್ಪವಾಗಿ.

futilitarian

ಗುಣವಾಚಕ

  • ವ್ಯರ್ಥ ಕೆಲಸಗಳಲ್ಲಿ ತೊಡಗಿರುವ ಯಾ ತೊಡಗುವ.
  • ಮಾನವನ ಆಸೆ ಆಕಾಂಕ್ಷೆಗಳು ನಿರರ್ಥಕ ಮತ್ತು ಮಾನವ ಪ್ರಯತ್ನಗಳು ವ್ಯರ್ಥ ಎಂದು ನಂಬುವ.

futilitarian

ನಾಮವಾಚಕ

  • ವ್ಯರ್ಥಕ್ರಿಯಾಸಕ್ತ; ವ್ಯರ್ಥ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿ.
  • ನಿಷ್ಫಲವಾದಿ; ಮಾನವನ ಆಸೆ ಆಕಾಂಕ್ಷೆಗಳೆಲ್ಲವೂ ನಿರರ್ಥಕ ಮತ್ತು ಮಾನವನ ಶ್ರಮವೆಲ್ಲವೂ ವ್ಯರ್ಥ ಎಂಬ ನಂಬಿಕೆಯುಳ್ಳವ.

futility

ನಾಮವಾಚಕ

  • ನಿರುಪಯುಕ್ತತೆ; ನಿಷ್ಪ್ರಯೋಜಕತೆ; ನಿರರ್ಥಕತೆ; ನಿಷ್ಪಲತೆ; ನಿಷ್ಫರಿಣಾಮಕತೆ.
  • ವೈಹಲ್ಯ; ನಿಷ್ಫಲ ಯತ್ನ ಯಾ ನಿಷ್ಪ್ರಯೋಜಕ ವ್ಯವಹಾರ: the futilities of debate for its own sake ಚರ್ಚೆಗೋಸ್ಕರವೇ ಮಾಡುವ ಚರ್ಚೆಯ ವೈಹಲ್ಯಗಳು.
  • ಹುಡುಗಾಟಿಕೆ; ಚೆಲ್ಲಾಟ; ಕ್ಷುಲ್ಲಕ ವರ್ತನೆ: futilities of an aristocracy ಶ್ರೀಮಂತವರ್ಗದ ಚೆಲ್ಲಾಟಗಳು.
  • ಕೆಲಸಕ್ಕೆ ಬಾರದ ವಸ್ತು ಯಾ ಘಟನೆ; ವ್ಯರ್ಥವಾದದ್ದು; ನಿರುಪಯುಕ್ತವಾದದ್ದು; ಪ್ರಯೋಜನಕ್ಕೆ ಬಾರದ್ದು: his mouth, full of loud futilities ಗಟ್ಟಿ ದನಿಯ ವ್ಯರ್ಥಾಲಾಪಗಳಿಂದ ತುಂಬಿದ ಅವನ ಬಾಯಿ.

futtock

ನಾಮವಾಚಕ

ಪದಗುಚ್ಛ

ಹಟಕ್‍; ನೌಕೆಯ ನಡುಮರ ಕಟ್ಟು; ಹಡಗಿನ ತಳಮರಕ್ಕೂ ತುದಿಮರಕ್ಕೂ ನಡುವಣ ಮರಕಟ್ಟುಗಳಲ್ಲೊಂದು.

  • futtock plates ಹಟಕ್‍ ಹಲಗೆಗಳು; ಹಡಗಿನ ನೆತ್ತಿಯಲ್ಲಿರುವ, ಕೆಳಕೂವೆಯ ತುದಿಗೆ ಕಟ್ಟಿದ ಕಬ್ಬಿಣದ ಹಲಗೆಗಳು.
  • futtock shrouds ಹಟಕ್‍ ಕಂಬಿಗಳು; ತುದಿಕೂವೆಯ ಹಾಯಿಗಳನ್ನು ಕೆಳಕೂವೆಗೆ ಸೇರಿಸುವ ಚಿಕ್ಕ ಕಬ್ಬಿಣದ ಕಂಬಿಗಳು.

future

ಗುಣವಾಚಕ

ಪದಗುಚ್ಛ

ನುಡಿಗಟ್ಟು

future shock ಭವಿಷ್ಯದಾಘಾತ; ತ್ವರಿತ ಪ್ರಗತಿಯೊಡನೆ ಹೊಂದಿಕೊಳ್ಳಲಾಗದಿರುವಿಕೆ.

  • ಆಗಲಿರುವ; ಸಂಭವಿಸಲಿರುವ; ಬರಲಿರುವ; ಮುಂದೆ ಆಗುವ; ಮುಂಬರುವ; ಮುಂದಿನ; ಭವಿಷ್ಯದ: future events ಭವಿಷ್ಯದ ಘಟನೆಗಳು.
  • ಭಾವೀ; ಮುಂದೆ ಆಗಲಿರುವ; my future wife ನನ್ನ ಭಾವೀ ಪತ್ನಿ; ಮುಂದೆ ನನ್ನ ಹೆಂಡತಿಯಾಗಲಿರುವವಳು.
  • ಭವಿಷ್ಯಕಾಲದ; ಮುಂದಿನ, ಮುಂಬರುವ – ಕಾಲದ; ಬರಲಿರುವ ಕಾಲದ: future prospects ಮುಂದಿನ ನಿರೀಕ್ಷೆಗಳು.
  • (ವ್ಯಾಕರಣ) ಭವಿಷ್ಯತ್ಕಾಲದ; ಮುಂದಾಗಲಿರುವ ಘಟನೆಯನ್ನು ವರ್ಣಿಸುವ.

future

ನಾಮವಾಚಕ

ಪದಗುಚ್ಛ

  • ಮುಂಬರುವ ಕಾಲ; ಭವಿಷ್ಯತ್ಕಾಲ; ಮುಂದಿನ ಕಾಲ; ಮುಂದಿನದು; past, present, and future ಭೂತ, ವರ್ತಮಾನ, ಮತ್ತು ಭವಿಷ್ಯತ್ಕಾಲ.
  • ಮುಂದೆ ಆಗುವುದು; ಮುಂದೆ ನಡೆಯುವುದು; ಭವಿಷ್ಯ: the past determines the future ಗತಕಾಲವು ಭವಿಷ್ಯವನ್ನು ನಿರ್ಧರಿಸುತ್ತದೆ.
  • (ವ್ಯಕ್ತಿ, ದೇಶ, ವಿಜಯ, ಮೊದಲಾದವುಗಳ) ಭವಿಷ್ಯಸ್ಥಿತಿ: that project has no future ಆ ಯೋಜನೆಗೆ ಭವಿಷ್ಯವಿಲ್ಲ, ಅದು ಸಹಲವಾಗುವುದಿಲ್ಲ. such a country has no future ಅಂಥ ನಾಡಿಗೆ ಯಾವುದೇ ಭವಿಷ್ಯವಿಲ್ಲ; ಆ ನಾಡು ಏಳಿಗೆಗೆ ಬರುವುದಿಲ್ಲ. I gave up that job, because there was no future in it ನಾನು ಆ ಕೆಲಸ ಬಿಟ್ಟೆ, ಏಕೆಂದರೆ ಅದರಲ್ಲಿ ಯಾವ ಭವಿಷ್ಯವೂ (ಅಂದರೆ ಹೆಚ್ಚಿನ ಸಂಬಳ, ಬಡ್ತಿ, ಮೊದಲಾದವು) ಇರಲಿಲ್ಲ.
  • (ವ್ಯಾಕರಣ) ಭವಿಷ್ಯತ್ಕಾಲ.
  • ಗೊತ್ತಾದ ಗಂಡು ಯಾ ಹೆಣ್ಣು; ನಿಶ್ಚಿತ ಪತಿ ಯಾ ಪತ್ನಿ: he took his pretty future to the church ಅವನು ತಾನು ಮದುವೆಯಾಗಲಿರುವ ಚೆಲುವೆಯನ್ನು ಚರ್ಚಿಗೆ ಕರೆದೊಯ್ದ.
  • (ಬಹುವಚನದಲ್ಲಿ) (ವಾಣಿಜ್ಯ)
    1. ~ಮುಮ್ಮಾರಿಕೆಯ ಸರಕುಗಳು ಮತ್ತು ಸಾಲಪತ್ರಗಳು; ಕೊಳ್ಳುವ ಕಾಲದಲ್ಲಿ ಒಪ್ಪಂದವಾದ ಬೆಲೆಗಳಿಗೆ ಕೊಂಡ, ಆದರೆ ಅನಂತರದ ಕಾಲದ ದುಡ್ಡು ಕೊಡಬೇಕಾದ ಮತ್ತು ಒದಗಿಸಬೇಕಾದ ಸರಕುಗಳು ಮತ್ತು ಸ್ಟಾಕುಪತ್ರಗಳು: American futures are in better demand ಅಮೆರಿಕದ ಮುಮ್ಮಾರಿಕೆಯ ಸರಕುಗಳಿಗೆ ಹೆಚ್ಚಿನ ಬೇಡಿಕೆಯಿದೆ.
    2. ಮುಮ್ಮಾರಿಕೆಯ ಒಪ್ಪಂದಗಳು, ಕರಾರುಗಳು; ಭಾವೀ ಸರಕಿನ ಯಾ ಸಾಲಪತ್ರಗಳ ಒಪ್ಪಂದಗಳು.

futureless

ಗುಣವಾಚಕ

ಭವಿಷ್ಯರಹಿತ; ಭವಿಷ್ಯವಿಲ್ಲದ; ಮುಂದಿನ ಅಭಿವೃದ್ಧಿ ಯಾ ಏಳಿಗೆಯ ನಿರೀಕ್ಷೆಯಿಲ್ಲದ.

futurism

ನಾಮವಾಚಕ

ಭವಿಷ್ಯದ್ವಾದ; ಹ್ಯೂಚರಿಸಂ; ಕಲೆ, ಸಾಹಿತ್ಯ, ಸಂಗೀತ ಮೊದಲಾದವುಗಳಲ್ಲಿ ಸಾಂಪ್ರದಾಯಿಕ ಯಾ ಪ್ರಾಚೀನ ರೂಢಿ ಪದ್ಧತಿಗಳನ್ನು ಸಂಪೂರ್ಣವಾಗಿ ತೊರೆದು, ಸಮಕಾಲೀನ ಬದುಕಿನ ರಭಸ, ಶಕ್ತಿ, ವೇಗ, ಯಾಂತ್ರೀಕರಣ, ಚಲನೆ ಮತ್ತು ಬೆಳವಣಿಗೆಗಳನ್ನು ಅಭಿವ್ಯಕ್ತಿಗೊಳಿಸಲು ಹೊರಟ, 20ನೇ ಶತಮಾನದ ಆದಿಭಾಗದಲ್ಲಿನ ಒಂದು ಚಳವಳಿ.

futurist

ನಾಮವಾಚಕ

  • (ದೇವತಾಶಾಸ್ತ್ರ) (ಬೈಬಲ್ಲಿನ) ಭವಿಷ್ಯತಾವಾದಿ; ಭವಿಷ್ಯ ವಿಶ್ವಾಸಿ; ಬೈಬಲ್ಲಿನ ದಿವ್ಯ ದರ್ಶನ ಪ್ರಕರಣ ಮೊದಲಾದವುಗಳ ಭವಿಷ್ಯ ನುಡಿಗಳು ನೆರವೇರಲಿವೆಯೆಂದು ನಂಬಿರುವವ.
  • (ಕಲೆ) ‘ಹ್ಯೂಚರಿಸಂ’ವಾದಿ.
  • ಭವಿಷ್ಯತ್ತಿನ ಅಧ್ಯಯನ ನಡೆಸುವವ; ಭವಿಷ್ಯತ್ತಿನಲ್ಲಿ, ಮಾನವನ ಪ್ರಗತಿಯಲ್ಲಿ ನಂಬಿಕೆ, ಶ್ರದ್ಧೆ ಇರುವವ.

futuristic

ಗುಣವಾಚಕ

  • ಬೈಬಲಿನ ಪ್ರವಾದಿತ್ವದಲ್ಲಿ ನಂಬಿಕೆಯುಳ್ಳ; ಭವಿಷ್ಯವಾದದಲ್ಲಿ ವಿಶ್ವಾಸವುಳ್ಳ; ಬೈಬಲ್ಲಿನ ದಿವ್ಯ ದರ್ಶನ ಪ್ರಕರಣ ಮೊದಲಾದವುಗಳ ಭವಿಷ್ಯ ನುಡಿಗಳು ಇನ್ನೂ ನೆರವೇರಬೇಕಾಗಿವೆಯೆಂದು ನಂಬಿರುವ.
  • ಭವಿಷ್ಯತ್ತಿಗೆ ಸಂಬಂಧಿಸಿದ.
  • (ಕಲೆ) ‘ಹ್ಯೂಚರಿಸಂ’ ಗುಣಗಳುಳ್ಳ; ಅತಿ ನವ್ಯ.

futurity

ನಾಮವಾಚಕ

  • ಭವಿಷ್ಯತ್ಕಾಲ: these events were still in the womb of futurity ಈ ಘಟನೆಗಳು ಇನ್ನೂ ಭವಿಷ್ಯತ್ಕಾಲದ ಗರ್ಭದಲ್ಲಿ ಅಡಗಿದ್ದವು.
  • (ಏಕವಚನ ಯಾ ಬಹುವಚನದಲ್ಲಿ) ಮುಂದಾಗುವ ಘಟನೆಗಳು; ಭಾವೀಘಟನೆಗಳು; ಭವಿಷ್ಯದ ಘಟನೆಗಳು: curiosity to know futurities ಮುಂದಾಗುವ ಘಟನೆಗಳನ್ನು ತಿಳಿಯುವ ಕುತೂಹಲ.
  • ಮುಂದಿನ ಸ್ಥಿತಿ; ಭವಿಷ್ಯ.
  • ಸತ್ತಮೇಲಿನ ಸ್ಥಿತಿ, ಬದುಕು; ಮರಣೋತ್ತರ ಸ್ಥಿತಿ, ಬಾಳು.

futurity stakes

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಮುಂಗಡ ಪಣ; ಪಂದ್ಯ ನಡೆಯುವ ಕೆಲವು ತಿಂಗಳುಗಳ ಮೊದಲೇ ಕುದುರೆಗಳ ಮೇಲೆ ಒಡ್ಡುವ ಪಣ, ಬಾಜಿ.

futurologist

ನಾಮವಾಚಕ

ಭವಿಷ್ಯಾನುಮಾನಿ(ಗ); ಭವಿಷ್ಯದ ಅಂದಾಜುಗಾರ.

futurology

ನಾಮವಾಚಕ

ಭವಿಷ್ಯಾನುಮಾನ; ಮುಖ್ಯವಾಗಿ ಸಮಾಜದ ವರ್ತಮಾನ ಪ್ರವೃತ್ತಿಗಳಿಂದ ಭವಿಷ್ಯದ ಸ್ಥಿತಿಗತಿಗಳನ್ನು ವ್ಯವಸ್ಥಿತವಾಗಿ ಊಹಿಸುವುದು, ಅಂದಾಜುಮಾಡುವುದು.

fuze

ನಾಮವಾಚಕ

= 4fuse.

fuze

ಸಕರ್ಮಕ ಕ್ರಿಯಾಪದ

= 5fuse.

fuzee

ನಾಮವಾಚಕ

= fusee.

fuzz

ನಾಮವಾಚಕ

  • ಜಾಳುದೂಳು; ಹಗುರ ತುಪ್ಪುಳು; ತೂಲ.
  • ತುಪ್ಪಳ ಕೂದಲು ಯಾ ಗುಂಗುರು ಕೂದಲು.
  • (ಅಶಿಷ್ಟ) ಪೊಲೀಸಿನವನು.

Search Dictionaries

Loading Results

Follow Us :   
  Download Bharatavani App
  Bharatavani Windows App