भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

face-flannel

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) = face-cloth(1).

face-fungus

ನಾಮವಾಚಕ

(ಆಡುಮಾತು) ಗಡ್ಡ; ದಾಡಿ.

face-lift

ನಾಮವಾಚಕ

  • ಮುಖಮರ್ದನ; ಮುಖತಿದ್ದಿಕೆ; ವಯಸ್ಸು ಕಾಣಿಸದಂತೆ ಮಾಡಲು ಸುಕ್ಕುಗಳೆದು ಮುಖವನ್ನು ಬಿಗಿಮಾಡುವ ಪ್ಲಾಸ್ಟಿಕ್‍ ಶಸ್ತ್ರಕ್ರಿಯೆ.
  • (ರೂಪಕವಾಗಿ) ರೂಪವರ್ಧನೆ; ಹೊಸದಾಗಿ ಯಾ ಹೆಚ್ಚು ಸುಂದರವಾಗಿ ಕಾಣುವಂತೆ ವಸ್ತು, ಕಟ್ಟಡ, ಮೊದಲಾದವುಗಳ ಮೇಲ್ಮೈಯನ್ನು ತಿದ್ದುವುದು, ಉತ್ತಮಗೊಳಿಸುವುದು.

face-lifting

ನಾಮವಾಚಕ

= face-lift(1).

face-off

ನಾಮವಾಚಕ

ಆಟದ ಪ್ರಾರಂಭ; ಆಟ ಶುರುಮಾಡುವಿಕೆ; (ಲಕ್ರಾಸ್‍, ಐಸ್‍ಹಾಕಿ, ಮೊದಲಾದ ಆಟಗಳಲ್ಲಿ ಚೆಂಡು, ರಬ್ಬರ್‍ಚಕ್ರ, ಮೊದಲಾದವನ್ನು) ಉಭಯದಳಗಳ ಆಟಗಾರರಿಬ್ಬರ ಬ್ಯಾಟುಗಳ ನಡುವೆ ಆರಂಭಸೂಚಕವಾಗಿ ಇಡುವಿಕೆ.

face-powder

ನಾಮವಾಚಕ

ಮುಖದ ಪೌಡರು; ಹೇಸ್‍ಪೌಡರು; ಮುಖದ ಹೊಳಪನ್ನು ತಗ್ಗಿಸಲು ಬಳಸುವ ಪೌಡರು.

face-saving

ನಾಮವಾಚಕ

ಮುಖರಕ್ಷಣೆ; ಮಾನರಕ್ಷಣೆ; ಮುಖ ಉಳಿಸಿಕೊಳ್ಳುವಿಕೆ; ತನ್ನ ಪ್ರತಿಷ್ಠೆ ಯಾ ಗೌರವವನ್ನು ಕಾಪಾಡಿಕೊಳ್ಳುವ ಯಾ ಕಾಪಾಡುವ ಯಾವುದೇ ಕ್ರಿಯೆ ಯಾ ಯೋಜನೆ.

face-worker

ನಾಮವಾಚಕ

ಕಲ್ಲಿದ್ದಲ ಗಣಿಯ ಮುಖಭಾಗದಲ್ಲಿ ಕೆಲಸ ಮಾಡುವ ಕೆಲಸಗಾರ.

faced

ಗುಣವಾಚಕ

ಮುಖದ; ಮುಖವಿರುವ; ಮುಂಭಾಗವಿರುವ (ಸಾಮಾನ್ಯವಾಗಿ ವಿಶೇಷಣಗಳ ಜೊತೆಯಲ್ಲಿ ಬಳಕೆ): marble-faced brick building ಅಮೃತಶಿಲೆಯ ಮುಖದ ಇಟ್ಟಿಗೆ ಕಟ್ಟಡ.

faceless

ಗುಣವಾಚಕ

  • ಮುಖವಿಲ್ಲದ; ಮುಖರಹಿತ.
  • ವ್ಯಕ್ತಿತ್ವವಿಲ್ಲದ; ವೈಶಿಷ್ಟ್ಯವಿಲ್ಲದ: faceless mob ವೈಶಿಷ್ಟ್ಯವಿಲ್ಲದ ಗುಂಪು.
  • ಗುರುತಿಸಲಾಗದ; ಮರೆಮಾಡಿಕೊಂಡಿರುವ; ಉದ್ದೇಶಪೂರ್ವಕವಾಗಿ ಗುರುತಿಸಲಾಗದಂತೆ ಮಾಡಿಕೊಂಡಿರುವ: faceless kidnapper ಗುರುತಿಸಲಾಗದ ಅಪಹರಣಕಾರ.

facer

ನಾಮವಾಚಕ

(ಆಡುಮಾತು)

  • ತಪರಾಖು; ಮುಖದ ಮೇಲೆ ಏಟು, ಪೆಟ್ಟು, ಹೊಡೆತ.
  • ಹಠಾತ್‍ ಆಪತ್ತು; ಥಟ್ಟನೆ ಒದಗಿದ ಭಾರಿ ಕಷ್ಟ; ಧಿಡೀರ್‍ ಎಡರು; ಹಠಾತ್ತನೆ ಸಂಭವಿಸಿದ ವಿಪತ್ತು.

facet

ನಾಮವಾಚಕ

  • (ಬಹುಮುಖವುಳ್ಳ ಕಾಯದ ಯಾ ವಸ್ತುವಿನ, ಮುಖ್ಯವಾಗಿ ಕಡೆದ ರತ್ನದ) ಒಂದು ಮುಖ ಯಾ ಪಾರ್ಶ್ವ.
  • (ಸಂಯುಕ್ತ ನೇತ್ರದ) ಒಂದು ಖಂಡ.
  • (ವಸ್ತು ಯಾ ವಿಷಯದ) ಮುಖ; ಅಂಶ; ಭಾಗ: another facet of his genius ಅವನ ಪ್ರತಿಭೆಯ ಇನ್ನೊಂದು ಮುಖ.

faceted

ಗುಣವಾಚಕ

ಮುಖವುಳ್ಳ; ಪಾರ್ಶ್ವವುಳ್ಳ; ಅಂಶವುಳ್ಳ.

facetiae

ನಾಮವಾಚಕ

(ಬಹುವಚನ)

  • ವಿನೋದಗಳು; ತಮಾಷೆಗಳು; ಹಾಸ್ಯಗಳು; ಚಮತ್ಕಾರದ ಮಾತುಗಳು.
  • (ಪುಸ್ತಕಗಳ ಪಟ್ಟಿಗಳಲ್ಲಿ ಯಾ ಪುಸ್ತಕ ವ್ಯಾಪಾರದಲ್ಲಿ) ಕೀಳುಹಾಸ್ಯದ ಯಾ ಕಾಮಸಂಬಂಧವಾದ ಪುಸ್ತಕಗಳು.

facetious

ಗುಣವಾಚಕ

  • ತಮಾಷೆಯ; ಹಾಸ್ಯ ಪ್ರವೃತ್ತಿಯ; ತಮಾಷೆ ಮಾಡುವ ಅಭ್ಯಾಸವುಳ್ಳ; ಹಾಸ್ಯಮಾಡುವ ಅಭ್ಯಾಸದ.
  • ಗೇಲಿಮಾಡುವ; ಲೇವಡಿ ಮಾಡುವ; ಕುಚೋದ್ಯ ಮಾಡುವ.

facetiously

ಕ್ರಿಯಾವಿಶೇಷಣ

  • ತಮಾಷೆಯಾಗಿ; ಹಾಸ್ಯವಾಗಿ.
  • ಕುಚೋದ್ಯವಾಗಿ.

facetiousness

ನಾಮವಾಚಕ

  • ಹಾಸ್ಯ ಪ್ರಕೃತಿ; ತಮಾಷೆ ಮಾಡುವ ಅಭ್ಯಾಸ.
  • ಗೇಲಿಗಾರತನ; ಲೇವಡಿಗಾರತನ; ಕುಚೋದ್ಯ – ಬುದ್ಧಿ ಯಾ ಪ್ರವೃತ್ತಿ.

facia

ನಾಮವಾಚಕ

  • (ಅಂಗಡಿಯವನ ಹೆಸರು ಮೊದಲಾದವನ್ನು ಬರೆದು ಅಂಗಡಿಯ ಮುಂದೆ ಹಾಕಿರುವ) ಹೆಸರುಹಲಗೆ; ನಾಮಫಲಕ; ಹೆಸರಿನ ಬೋರ್ಡು; ಹೆಸರುತಗಡು.
  • ಸಲಕರಣೆ – ಅರೆ, ಗೂಡು, ಕಪಾಟು; ಮೋಟಾರುವಾಹನದಲ್ಲಿ ವೇಗಮಾಪಕವೇ ಮೊದಲಾದ ಸಲಕರಣೆಗಳನ್ನು ಅಳವಡಿಸಿರುವ ಅರೆ, ಹಲಗೆ.

facial

ಗುಣವಾಚಕ

(ಮುಖ್ಯವಾಗಿ ಅಂಗರಚನಾಶಾಸ್ತ್ರ) ಮುಖ; ಮೌಖಿಕ; ಮುಖದ; ಮುಖದಲ್ಲಿನ; ಮುಖದಲ್ಲಿರುವ: facial artery ಮುಖದಲ್ಲಿನ ಅಪಧಮನಿ; ಮುಖಾಪಧಮನಿ.

facial

ನಾಮವಾಚಕ

ಮುಖನೀವುವುದು; ಮುಖಮರ್ದನ; ಮುಖಕ್ಕೆ ನೀಡುವ ಸೌಂದರ್ಯ ಚಿಕಿತ್ಸೆ.

Search Dictionaries

Loading Results

Follow Us :   
  Download Bharatavani App
  Bharatavani Windows App