भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

facial angle

ನಾಮವಾಚಕ

ಮುಖಕೋನ; ಮೂಗಿನ ಹೊಳ್ಳೆಯಿಂದ ಕಿವಿಗೆ, ಹಣೆಗೆ ಹಾಯುವ ಎರಡು ಗೆರೆಗಳ ನಡುವಣ ಕೋನ.

facies

ನಾಮವಾಚಕ

(ಬಹುವಚನ ಅದೇ).

  • (ವೈದ್ಯಶಾಸ್ತ್ರ) ಮುಖರೂಪ; ಮುಖಭಾವ; ಮುಖಮುದ್ರೆ.
  • (ಭೂವಿಜ್ಞಾನ) ಶಿಲಾಲಕ್ಷಣ; ಶಿಲಾ ಗುಣ, ರಚನೆ; ಪಳೆಯುಳಿಕೆಯಿರುವ ಭಾಗ, ಅಂಶ, ಮೊದಲಾದವುಗಳಿಂದ ಗುರುತಿಸಲಾಗುವ ಶಿಲೆಯ ಲಕ್ಷಣ.

facile

ಗುಣವಾಚಕ

  • (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಸುಲಭ ಸಾಧ್ಯ; ಸುರಳಿತ; ಸುಲಭವಾಗಿ ಮಾಡಬಲ್ಲ ಯಾ ಪಡೆಯಬಲ್ಲ: a facile victory ಸುಲಭವಾಗಿ ಗಳಿಸಿದ ಜಯ.
  • (ಕೆಲಸ, ವಿಧಾನ, ಮೊದಲಾದವುಗಳ ವಿಷಯದಲ್ಲಿ) ಸರಾಗವಾದ; ಸುಲಭವಾದ; ಸರಾಗವಾಗಿ ಕೆಲಸ ಮಾಡುವ.
  • ಸಿದ್ಧವಾಗಿರುವ; ತಡೆಯಿಲ್ಲದ; ನಿರರ್ಗಳ; ತಡೆಬಡೆಯಿಲ್ಲದ; ಪ್ರವಾಹರೂಪದ; ಧಾರಾಕಾರವಾದ.
  • (ಪ್ರಾಚೀನ ಪ್ರಯೋಗ) (ವ್ಯಕ್ತಿ ನಡತೆಗಳ ವಿಷಯದಲ್ಲಿ) ಶಾಂತಮನಸ್ಸಿನ; ಸೌಮ್ಯ ಮನಸ್ಸಿನ; ಸೌಮ್ಯ ಸ್ವಭಾವದ; ಮೃದುವಾದ.
  • (ಸ್ವಭಾವ ಮೊದಲಾದವುಗಳ ವಿಷಯದಲ್ಲಿ) ವಿನೇಯ; ಅನುನೇಯ; ಸುಲಭವಾಗಿ ತಿರುಗಿಸಬಲ್ಲ.
  • (ಮಾತಿನ ಯಾ ಬರವಣಿಗೆಯ ವಿಷಯದಲ್ಲಿ) ಸರಾಗವಾದ; ಸುಗಮವಾದ; ಸುಲಭವಾದ ಆದರೆ ಗುಣಮಟ್ಟಕ್ಕೆ ಅಷ್ಟಾಗಿ ಗಮನಕೊಡದ: a facile pen ಸುಗಮವಾದ ಲೇಖನಿ, ಬರವಣಿಗೆ.

facile princeps

ಗುಣವಾಚಕ

ಸುಲಭವಾಗಿ – ಮೊದಲ, ಮೊದಲನೆಯ; ಸರಾಗವಾಗಿ – ಪ್ರಥಮವಾದ, ಪ್ರಮುಖವಾದ.

facile princeps

ನಾಮವಾಚಕ

  • ಸುಲಭವಾಗಿ ಮೊದಲನೆಯನವನಾದವನು.
  • ಅಂಗೀಕೃತ ನೇತಾರ; ಒಪ್ಪಿಗೆಯಾದ ನಾಯಕ.

facilitate

ಸಕರ್ಮಕ ಕ್ರಿಯಾಪದ

  • (ಕಾರ್ಯವನ್ನು, ಫಲವನ್ನು) ಸುಲಭಮಾಡು. ಸುರಳಿತಗೊಳಿಸು; ಸರಾಗಮಾಡು; ಸುಗಮವಾಗಿಸು; ಸುಕರಗೊಳಿಸು; ಮುಂದುವರಿಯಲು ಸಹಾಯಮಾಡು.
  • (ವ್ಯಕ್ತಿಯ ಕೆಲಸದಲ್ಲಿ) ಸಹಾಯಮಾಡು; ಅನುಕೂಲ ಒದಗಿಸು.

facilitation

ನಾಮವಾಚಕ

(ಕಾರ್ಯವನ್ನು, ಫಲವನ್ನು) ಸುಲಭಗೊಳಿಸುವುದು; ಸರಾಗ ಮಾಡುವುದು; ಸುಗಮಗೊಳಿಸುವುದು; ಸುಕರಗೊಳಿಸುವುದು; ಮುಂದುವರಿಯಲು ಸಹಾಯ ಮಾಡುವುದು.

facility

ನಾಮವಾಚಕ

  • ಸೌಲಭ್ಯ; ಸೌಕರ್ಯ; ಸುಲಭವಾಗಿರುವುದು; ಸರಾಗವಾಗಿರುವಿಕೆ; ಕಷ್ಟವಿಲ್ಲದಿರುವಿಕೆ.
  • ಸಹಾಯ; ಅನುಕೂಲ; ಸದವಕಾಶ; ತಡೆಯಿಲ್ಲದ, ಅಡ್ಡಿಆತಂಕವಿಲ್ಲದ ಅವಕಾಶ: give facilities for ಮಾಡಲು ಅನುಕೂಲ ಒದಗಿಸು.
  • (ಮುಖ್ಯವಾಗಿ ಬಹುವಚನದಲ್ಲಿ) ಸೌಲಭ್ಯಗಳು; ಸೌಕರ್ಯಗಳು; ಸಹಾಯಗಳು; ಸುಗಮಗೊಳಿಸುವ ಸಾಮಗ್ರಿ, ಸಲಕರಣೆ, ಸಾಧನ, ಮತ್ತು ಪರಿಸ್ಥಿತಿಗಳು: washing facilities ತೊಳೆಯುವ ಸಲಕರಣೆಗಳು. travel facilities ಪ್ರಯಾಣದ ಸೌಲಭ್ಯಗಳು (ಬಸ್ಸು, ರೈಲು, ವಿಮಾನಗಳು). sports facilities ಕ್ರೀಡಾಸೌಕರ್ಯಗಳು (ಓಟದ ಮೈದಾನ, ಈಜುಕೊಳ, ಮೊದಲಾದವು).
  • (ಭಾಷಣ ಮೊದಲಾದವುಗಳ)
    1. ಸೌಲಭ್ಯ; ಸುಗಮತೆ.
    2. ಸಾಮರ್ಥ್ಯ; ಶಕ್ತಿ.
    3. ಕುಶಲತೆ; ಕೌಶಲ; ಚಾತುರ್ಯ.
    4. ನಿರರ್ಗಳತೆ.
  • (ಪ್ರಾಚೀನ ಪ್ರಯೋಗ) ಬಗ್ಗುವಿಕೆ; ಅನುನೇಯತೆ; ನಮ್ಯತೆ.

facing

ನಾಮವಾಚಕ

ನುಡಿಗಟ್ಟು

  • (ಆತ್ಮವಿಶ್ವಾಸದಿಂದ, ಉದ್ಧಟತನದಿಂದ ಯಾ ಧೈರ್ಯವಾಗಿ) ಎದುರಿಸುವುದು; ಹಿಮ್ಮೆಟ್ಟದಿರುವುದು; ಹಿಂದೆಗೆಯದಿರುವುದು; ಹಿಂಜರಿಯದಿರುವುದು; ಎದುರಿಸಿ ನಿಲ್ಲುವುದು.
  • (ಇಸ್ಪೀಟೆಲೆಯನ್ನು) ಮೇಲ್ಮುಖ ಮಾಡುವುದು; ಅಂಗಾತನಾಗಿ ಇಡುವುದು; ಮೇಲುಮುಖವಾಗಿ ತಿರುಗಿಸುವುದು.
  • (ಸೈನ್ಯ) (ನಿಂತಿರುವ ಸ್ಥಳದಲ್ಲಿಯೇ ನಿರ್ದೇಶಿತ ದಿಕ್ಕಿಗೆ) ತಿರುಗಿಕೊಳ್ಳುವುದು; ತಿರುಗಿಸುವುದು.
  • (ಉಡುಪಿಗೆ) ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳನ್ನು ಬೇರೆ ಬಟ್ಟೆಯಲ್ಲಿ ಹಾಕುವುದು.
  • (ಮೇಲ್ಮೈಯನ್ನು) ನಯಗೊಳಿಸುವುದು.
  • (ಟೀ ಸೊಪ್ಪಿಗೆ) ಬಣ್ಣಕೊಡುವುದು.
  • (ಮುಖ್ಯವಾಗಿ ಬಹುವಚನದಲ್ಲಿ) ಸೈನಿಕನ ಕವಚಕ್ಕೆ ಹಾಕಿರುವ ಬೇರೆ ಬಣ್ಣದ ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳು.
  • ಮುಖವರಸೆ; ಹೊರಹೊದಿಕೆ; ಗೋಡೆಯ ಹೊರಮೈಗೆ ಬೇರೆ ವಸ್ತುವಿನಿಂದ (ಮುಖ್ಯವಾಗಿ ಕಲ್ಲಿನಿಂದ ) ಕಟ್ಟಿರುವ ವರಸೆ.
  • ಒಲವು; ಅಭಿಮುಖತೆ; ಪ್ರವೃತ್ತಿ; ಒಬ್ಬನಿಗೆ ಯಾವುದೇ ದಿಶೆಯಲ್ಲಿ ಇರುವ ಪ್ರವೃತ್ತಿ.

facing

ಗುಣವಾಚಕ

ಎದುರಾಗಿರುವ; ಎದುರಿನಲ್ಲಿರುವ; ಅಭಿಮುಖವಾಗಿರುವ; ಮುಖಾಮುಖಿಯಾಗಿರುವ.

facon de parler

ನಾಮವಾಚಕ

  • ವಾಗ್ಧೋರಣೆ; ವಾಕ್‍ಸರಣಿ; ವಾಕ್‍ಶೈಲಿ; ಮಾತನಾಡುವ ರೀತಿ, ಧೋರಣೆ.
  • ಕೇವಲ ಪದಗಳ ಗುಂಪು ಯಾ ಸೂತ್ರ.

facsimile

ನಾಮವಾಚಕ

ನುಡಿಗಟ್ಟು

in facsimile ಸರಿಯಾಗಿ ತದ್ರೂಪವಾಗಿ; ಇದ್ದದ್ದನ್ನು ಇದ್ದಂತೆಯೇ; ಯಥಾವತ್ತಾಗಿ.

  • (ಬರಹ, ಮುದ್ರಣ, ಚಿತ್ರ, ಮೊದಲಾದವುಗಳ) ಸರಿಯಾದ ನಕಲು; ಯಥಾವತ್ತಾದ ಪಡಿಯಚ್ಚು; ಯಥಾಪ್ರತಿ.
  • ನಕಲು ವರ್ಗಾವಣೆ; ಪಡಿಯಚ್ಚು ವರ್ಗಾವಣೆ; ಮುದ್ರಿತವಸ್ತು, ನಕ್ಷೆ, ಬರಹ, ಚಿತ್ರ, ಮೊದಲಾದವನ್ನು ರೇಡಿಯೋ ಪ್ರಸರಣ ಮೊದಲಾದವುಗಳ ಮೂಲಕ ಕಳುಹಿಸುವ ವ್ಯವಸ್ಥೆ.

facsimile

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಒಂದರ) ಸರಿಯಾದ ನಕಲು ಮಾಡು; ಪಡಿಯಚ್ಚು ತೆಗೆ; ಯಥಾಪ್ರತಿ ತಯಾರಿಸು. (ಒಂದರ) ನಕಲಾಗಿರು; ಪಡಿಯಚ್ಚಾಗಿರು; ಯಥಾಪ್ರತಿಯಾಗಿರು.

fact

ನಾಮವಾಚಕ

ಪದಗುಚ್ಛ

  • (ಮಾಡಿದ ಯಾ ನಡೆದ) ಕೃತ್ಯ; ಘಟನೆ; ಸಂಗತಿ; (ಮುಖ್ಯವಾಗಿ) ತಪ್ಪಿತ ಯಾ ಅಪರಾಧ: before the fact ಕೃತ್ಯ ನಡೆಯುವ ಮುಂಚೆ. after the fact ಕೃತ್ಯ ನಡೆದ ಮೇಲೆ. confess the fact ಮಾಡಿದ ಕೃತ್ಯ ಒಪ್ಪಿಕೊ.
  • ಘಟನೆ; ಸಂಗತಿ; ವಿದ್ಯಮಾನ; ಅನುಭವದ ವಿಷಯ; ಖಂಡಿತವಾಗಿ ನಡೆದದ್ದೆಂದು ಯಾ ನಿಜವಾದುದೆಂದು ಗೊತ್ತಾಗಿರುವ ವಿಷಯ: the fact that fire burns ಬೆಂಕಿ ಸುಡುತ್ತದೆಂಬ ಸಂಗತಿ.
  • (ಅನುಮಾನ ಯಾ ನಿರ್ಣಯದ) ಆಧಾರ; ಆಧಾರಾಂಶ: his facts are disputable ಆತನ ಆಧಾರಾಂಶಗಳು ವಿವಾದಾಸ್ಪದವಾದುವು.
  • (ಏಕವಚನದಲ್ಲಿ) ಸತ್ಯಸಂಗತಿ; ನಿಜವಾದ ವಿಷಯ; ವಾಸ್ತವಾಂಶ; ಸತ್ಯಾಂಶ; ನಿಜಸ್ಥಿತಿ; ವಾಸ್ತವಸ್ಥಿತಿ.

fact-finding

ಗುಣವಾಚಕ

ಸತ್ಯಶೋಧಕ; ಸತ್ಯಶೋಧನೆಯ; ಸತ್ಯಾಂಶಗಳನ್ನು, ವಾಸ್ತವಾಂಶಗಳನ್ನು, ಕಂಡುಹಿಡಿಯಲು ತೊಡಗಿರುವ, ಉದ್ಯುಕ್ತವಾಗಿರುವ.

fact-finding

ನಾಮವಾಚಕ

ಸತ್ಯಶೋಧನೆ; ವಾಸ್ತವಾಂಶಗಳ – ಅನ್ವೇಷಣೆ, ನಿರ್ಧಾರ; ಸತ್ಯಾಸತ್ಯಗಳ ಪರೀಕ್ಷೆ.

factice

ನಾಮವಾಚಕ

(ರಸಾಯನವಿಜ್ಞಾನ) ಹ್ಯಾಕ್ಟಿಸ್‍; ಸಂರ್ಪೂಣಗೊಳ್ಳದ ಸಸ್ಯತೈಲಗಳನ್ನು ಗಂಧಕದ ಸಂಸ್ಕಾರಕ್ಕೆ ಒಳಪಡಿಸುವುದರಿಂದ ಬರುವ ರಬ್ಬರಿನಂಥ ಪದಾರ್ಥ.

faction

ನಾಮವಾಚಕ

  • (ಮುಖ್ಯವಾಗಿ ರಾಜಕೀಯದಲ್ಲಿ) (ಸ್ವಾರ್ಥಸಾಧಕವಾದ, ಎದುರು ಬೀಳುವ ಮನೋಭಾವದ, ನೀತಿನಿಯಮಗಳಿಲ್ಲದ) ಪಕ್ಷ; ಒಳಪಂಗಡ; ಒಳಗುಂಪು.
  • ಒಡಕು; ವೈಷಮ್ಯ; ಅಂತಃಕಲಹ; ಪಕ್ಷಮನೋಭಾವ; ಗುಂಪುಗಾರಿಕೆ; ಗುಂಪುಗುಳಿತನ; ಒಳಜಗಳ.

factional

ಗುಣವಾಚಕ

  • (ಸ್ವಾರ್ಥಸಾಧಕವಾದ, ಎದುರುಬೀಳುವ ಮನೋಭಾವದ, ನೀತಿ ನಿಯಮಗಳಿಲ್ಲದ) ಪಕ್ಷದ; ಒಳಗುಂಪಿನ; ಒಳ ಪಂಗಡದ.
  • ಪಕ್ಷೀಯ; ಗುಂಪುಗುಳಿತನದ; ಗುಂಪುಗಾರಿಕೆಯ.

factious

ಗುಣವಾಚಕ

  • (ವ್ಯಕ್ತಿಗಳ, ಅವರ ಪ್ರವೃತ್ತಿಗಳ, ವಿಷಯದಲ್ಲಿ) ಪಕ್ಷೀಯ ಮನೋಭಾವದ; ಗುಂಪುಗಾರಿಕೆಯ; ಪಕ್ಷೀಯ ಉದ್ದೇಶಗಳಿಗಾಗಿ ಕೆಲಸ ಮಾಡುವ; ಗುಂಪುಕಟ್ಟುವ ಪ್ರವೃತ್ತಿಯ.
  • (ಕೆಲಸಗಳು, ಹೇಳಿಕೆಗಳು, ಮೊದಲಾದವುಗಳ ವಿಷಯದಲ್ಲಿ) ಗುಂಪುಗಾರಿಕೆಯ; ಗುಂಪುರಾಜಕೀಯಕ್ಕೆ ಸಂಬಂಧಿಸಿದ; ಪಕ್ಷೀಯ ವೈಷಮ್ಯದಿಂದ ಕೂಡಿದ.

Search Dictionaries

Loading Results

Follow Us :   
  Download Bharatavani App
  Bharatavani Windows App