भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

factiously

ಕ್ರಿಯಾವಿಶೇಷಣ

  • ಪಕ್ಷೀಯ ಮನೋಭಾವದಿಂದ; ಗುಂಪುಗುಳಿತನದಿಂದ; ಪಕ್ಷೀಯ ಹಿತಕ್ಕಾಗಿ; ಪಕ್ಷಕಟ್ಟುವ ಪ್ರವೃತ್ತಿಯಿಂದ.
  • ಪಕ್ಷರಾಜಕೀಯಕ್ಕೆ ಸಂಬಂಧಿಸಿದಂತೆ; ಪಕ್ಷೀಯ ವೈಷಮ್ಯದಿಂದ ಕೂಡಿ.

factiousness

ನಾಮವಾಚಕ

  • ಪಕ್ಷೀಯ ಮನೋಭಾವ; ಗುಂಪುಗುಳಿತನ; ಪಕ್ಷೀಯ ಸ್ವಾರ್ಥಪರತೆ; ಪಕ್ಷಕಟ್ಟುವ ಪ್ರವೃತ್ತಿ.
  • ಪಕ್ಷೀಯ ವೈಷಮ್ಯದಿಂದ ತುಂಬಿರುವುದು.

factitious

ಗುಣವಾಚಕ

  • ಉದ್ದೇಶಪೂರ್ವಕವಾಗಿ ಏರ್ಪಡಿಸಿದ; ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಿದ ಯಾ ತಯಾರಿಸಿದ.
  • ಅಸ್ವಾಭಾವಿಕ; ಅಸಹಜ; ಕೃತಕ; ಕೃತ್ರಿಮ: factitious laughter ಅಸಹಜ ನಗೆ.

factitiously

ಕ್ರಿಯಾವಿಶೇಷಣ

  • ಉದ್ದೇಶಪೂರ್ವಕವಾಗಿ ಏರ್ಪಡಿಸಿ; ನಿರ್ದಿಷ್ಟ ಉದ್ದೇಶ ಯಾ ಸಂದರ್ಭಕ್ಕಾಗಿ ಮಾಡಿ ಯಾ ತಯಾರಿಸಿ.
  • ಅಸ್ವಾಭಾವಿಕವಾಗಿ; ಅಸಹಜವಾಗಿ; ಕೃತಕವಾಗಿ.

factitiousness

ನಾಮವಾಚಕ

ಅಸ್ವಾಭಾವಿಕ ವ್ಯವಸ್ಥೆ; ಅಸಹಜ ವರ್ತನೆ; ಕೃತಕ ಏರ್ಪಾಟು.

factitive

ಗುಣವಾಚಕ

(ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಪ್ರೇರಣಾರ್ಥಕ; ಕಾರಕ ಕರ್ಮಪದವನ್ನು ಮತ್ತು ಅದಕ್ಕೆ ಅನ್ವಯಿಸುವ ಪೂರಕ ವಿಶೇಷಣವನ್ನೂ ತೆಗೆದುಕೊಳ್ಳುವ.

factitive verb

ನಾಮವಾಚಕ

(ವ್ಯಾಕರಣ)

  • ಮಾಡು, ಕರೆ, ಯೋಜಿಸು ಎಂಬರ್ಥಗಳನ್ನು ಹೊಂದಿದ್ದು, ಕರ್ಮಪದವನ್ನೂ ಪೂರಕ ಕರ್ಮಪದವನ್ನೂ ತೆಗೆದುಕೊಳ್ಳುವ ಕ್ರಿಯಾಪದ: they made him president, they painted the wall green, I called him a fool, he thought her mad.
  • ಕಾರಕ ಕ್ರಿಯಾಪದ; ಪ್ರೇರಣಾರ್ಥಕ ಕ್ರಿಯಾಪದ.

factor

ನಾಮವಾಚಕ

ಪದಗುಚ್ಛ

factor of safety ಸುರಕ್ಷಣಾಂಶ:

  • ಏಜೆಂಟು; ಪ್ರತಿನಿಧಿ; ನಿಯೋಗಿ; ಕಾರ್ಯಭಾರಿ; ಇನ್ನೊಬ್ಬರ ಕಾರ್ಯ ಮಾಡುವವನು.
  • ದಳ್ಳಾಳಿ; ದಳ್ಳಾಳಿ ವರ್ತಕ ಯಾ ವ್ಯಾಪಾರಿ; ರುಸುಮಿಗಾಗಿ ಕೊಳ್ಳುವ ಹಾಗೂ ಮಾರುವ ವ್ಯಾಪಾರಿ.
  • (ಸ್ಕಾಟ್‍ಲಂಡಿನಲ್ಲಿ) ಜಈನಿನ ವ್ಯವಸ್ಥಾಪಕ; ಆಸ್ತಿಪಾಸ್ತಿಯ ಮೇಲ್ವಿಚಾರಕ.
  • (ಗಣಿತ) ಅಪವರ್ತನ; ಯಾವುದೇ ಸಂಖ್ಯೆ ಯಾ ಬೀಜಗಣಿತೋಕ್ತಿಯನ್ನು ಒಂದು ಗುಣಲಬ್ಧವಾಗಿ ನಿರೂಪಿಸಿದಾಗ ಕಂಡುಬರುವ ಅದರ ಅಂಗಭಾಗಗಳಲ್ಲೊಂದು.
  • (ಜೀವವಿಜ್ಞಾನ) ಅಂಶ; ಆನುವಂಶಿಕ ಲಕ್ಷಣಗಳ ಸಮಗ್ರತೆಯನ್ನು ನಿರ್ಧರಿಸುವ ಬಿಡಿ ಅಂಶಗಳಲ್ಲೊಂದು.
  • (ಒಂದು ಫಲಿತಾಂಶಕ್ಕೆ ಕಾರಣವಾದ) ಸಂದರ್ಭ; ಪರಿಸ್ಥಿತಿ; ವಾಸ್ತವಾಂಶ; ಪ್ರಭಾವ; ಅಂಶ; ವಿಷಯ; ಸಂಗತಿ.

factor

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಸಾಲ ಕೊಂಡುಕೊ; ಸಾಲ ವಹಿಸಿಕೊ; ವಸೂಲಿ ಮಾಡಿ ಲಾಭಗಳಿಸಿಕೊಳ್ಳಲು ಇನ್ನೊಬ್ಬನ ಸಾಲಗಳನ್ನು ರಿಯಾಯಿತಿಯಲ್ಲಿ ಕೊಂಡುಕೊ.

  • ಅಂಶಗಳಾಗಿ ಒಡೆ; ಭಾಗಗಳಾಗಿ ವಿಘಟಿಸು; ಘಟಕಗಳಾಗಿ ವಿಭಜಿಸು.
  • (ಗಣಿತ) ಗುಣಕಗಳಾಗಿ ಒಡೆ.

factor cost

ನಾಮವಾಚಕ

ಉತ್ಪಾದನಾ ವೆಚ್ಚ; ಉತ್ಪಾದಕನಿಗೆ ತಗಲುವ ಉತ್ಪನ್ನದ ಬೆಲೆ.

factorage

ನಾಮವಾಚಕ

  • ದಳ್ಳಾಳಿಕೆ; ದಳ್ಳಾಳಿ(ಯಾ ಕೆಲಸ); ದಳ್ಳಾಳಿ ವ್ಯಾಪಾರ.
  • ದಳ್ಳಾಳಿ; ದಳ್ಳಾಳಿಯ ರುಸುಮು.

factorial

ನಾಮವಾಚಕ

(ಗಣಿತ) ಕ್ರಮಗುಣಿತ:

  • ಸಮಾಂತರ ಶ್ರೇಣಿಯಲ್ಲಿನ ಪದಗಳೆಲ್ಲದರ ಗುಣಲಬ್ಧ.
  • ಯಾವುದೇ ಪೂರ್ಣಾಂಕಗಳ ಗುಣಲಬ್ಧ (ಸಂಕೇತ ! ಯಾ $\angle$).

factorial

ಗುಣವಾಚಕ

(ಗಣಿತ) ಕ್ರಮಗುಣಿತದ; ಕ್ರಮಗುಣಿತಕ್ಕೆ ಯಾ ಅಪವರ್ತನಗಳಿಗೆ ಸಂಬಂಧಿಸಿದ: factorial 4 (4 ! ಯಾ $\angle 4) = 4 \times 3 \times 2 \times 1$.

factorisation

ನಾಮವಾಚಕ

= factorization.

factorise

ಕ್ರಿಯಾಪದ

= factorize.

factorization

ನಾಮವಾಚಕ

(ಗಣಿತ) ಅಪವರ್ತನೀಕರಣ; ಅಪವರ್ತನ ಯಾ ಗುಣಕಗಳಾಗಿ ಒಡೆಯುವಿಕೆ, ವಿಭಜಿಸುವಿಕೆ.

factorize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಗಣಿತ) ಅಪವರ್ತನೀಕರಿಸು; ಅಪವರ್ತನಗಳಾಗಿ ಒಡೆ, ವಿಭಜಿಸು. (ಗಣಿತ) ಅಪವರ್ತನೀಯವಾಗಿರು; ಅಪವರ್ತನಗಳಾಗಿ ಒಡೆಯಲು ಸಾಧ್ಯವಾಗಿರು.

factory

ನಾಮವಾಚಕ

  • ಕಾರ್ಖಾನೆ; ಯಂತ್ರೋಪಕರಣಗಳಿಂದ ಯಾವುದೇ ಸರಕನ್ನು ತಯಾರಿಸುವ ಕೇಂದ್ರ.
  • (ಒಂದು ವರ್ತಕ ಮಂಡಲಿಯು ಪರದೇಶದಲ್ಲಿ ಸ್ಥಾಪಿಸಿದ) ವ್ಯಾಪಾರ ಕೋಠಿ.

Factory Acts

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಕಾರ್ಮಿಕ ಕಾಯಿದೆಗಳು; ಹ್ಯಾಕ್ಟರಿ ಕಾನೂನುಗಳು; ಕಾರ್ಮಿಕರ ಹಿತಗಳಿಗಾಗಿ ಕಾರ್ಖಾನೆಯ ಆಡಳಿತವನ್ನು ನಿಯಂತ್ರಿಸುವ ಕಾನೂನುಗಳು.

factory farm

ನಾಮವಾಚಕ

ಕಾರ್ಖಾನೆ ಹಾರಂ; ಕೈಗಾರಿಕಾ ವಿಧಾನಗಳನ್ನು ಬಳಸಿ ಪ್ರಾಣಿಗಳನ್ನು ಸಾಕುವ ಕೇಂದ್ರ.

Search Dictionaries

Loading Results

Follow Us :   
  Download Bharatavani App
  Bharatavani Windows App