भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

factory ship

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಹಿಡಿದ ಈನುಗಳನ್ನು ಸಂಸ್ಕರಿಸುವ ವ್ಯವಸ್ಥೆಯುಳ್ಳ, ಈನು ಹಿಡಿಯುವ ಹಡಗು.

factotum

ನಾಮವಾಚಕ

  • ಎಲ್ಲ ಬಗೆಯ ಕೆಲಸವನ್ನೂ ಮಾಡುವ ಆಳು (ಹೆಣ್ಣಾಳು ಯಾ ಗಂಡಾಳು).
  • ಪಾರುಪತ್ತೆ ಸೇವಕ; ದಣಿಯ ವ್ಯವಹಾರಗಳನ್ನೆಲ್ಲ ನಿರ್ವಹಿಸುವ ಸೇವಕ.

factual

ಗುಣವಾಚಕ

  • ನಡೆದದ್ದಕ್ಕೆ ಸಂಬಂಧಿಸಿದ; ವಾಸ್ತವಿಕ; ನಿಜಸ್ಥಿತಿಗೆ ಯಾ ನಿಜವಾದ ಸಂಗತಿಗೆ ಸಂಬಂಧಿಸಿದ.
  • ನಿಜವಾದ; ವಾಸ್ತವವಾದ.

factualism

ನಾಮವಾಚಕ

  • ವಾಸ್ತವತಾಶ್ರದ್ಧೆ; ವಾಸ್ತವ ಸಂಗತಿಗಳಲ್ಲಿ ಶ್ರದ್ಧೆ ಯಾ ಅವುಗಳನ್ನು ಬಹಳವಾಗಿ ಅವಲಂಬಿಸಿರುವುದು.
  • (ತತ್ತ್ವಶಾಸ್ತ್ರ) ವಾಸ್ತವತಾವಾದ; ವಾಸ್ತವ ಅಂಶಗಳು ಯಾ ಸಂಗತಿಗಳು ಪ್ರಧಾನ ಮತ್ತು ಮೂಲಭೂತ ಎಂಬ ಸಿದ್ಧಾಂತ.

factualist

ನಾಮವಾಚಕ

ವಾಸ್ತವತಾವಾದಿ.

factuality

ನಾಮವಾಚಕ

= factualness.

factually

ಕ್ರಿಯಾವಿಶೇಷಣ

ವಾಸ್ತವಿಕವಾಗಿ; ನಿಜವಾಗಿ.

factualness

ನಾಮವಾಚಕ

ವಾಸ್ತವತೆ; ನಿಜಸ್ಥಿತಿ; ವಾಸ್ತವಸ್ಥಿತಿ.

factum

ನಾಮವಾಚಕ

(ನ್ಯಾಯಶಾಸ್ತ್ರ)

  • ಕಾರ್ಯ; ಕೃತ್ಯ.
  • ಸಂಗತಿಗಳ ಹೇಳಿಕೆ; ಘಟನೆಗಳ ವರದಿ; ಸತ್ಯಾಂಶಗಳ ಯಾ ವಾದಾಂಶಗಳ ಪಟ್ಟಿ.

facture

ನಾಮವಾಚಕ

  • ವರ್ಣಚಿತ್ರದ (ಮುಖ್ಯವಾಗಿ ಹೊರಮೈನ) ಚಿತ್ರಣದ ಗುಣ(ಮಟ್ಟ).
  • ರಚನೆ; ನಿರ್ಮಾಣ; ತಯಾರಿಕೆ; ಯಾವುದನ್ನೇ ಮಾಡುವ ಯಾ ತಯಾರಿಸುವ ಕ್ರಿಯೆ, ವಿಧಾನ, ರೀತಿ.
  • ಕೃತಿ; ತಯಾರಿಕೆ; ತಯಾರು ಮಾಡಿದ ವಸ್ತು, ಪದಾರ್ಥ.

facula

ನಾಮವಾಚಕ

(ಖಗೋಳ ವಿಜ್ಞಾನ) ಅತಿಭೆ; ಸಾಮಾನ್ಯವಾಗಿ ಸೂರ್ಯನ ಒಡಲಲ್ಲಿ ಕಾಣಬರುವ ಹೆಚ್ಚು ಪ್ರಕಾಶಮಯ ಪ್ರದೇಶ.

facular

ಗುಣವಾಚಕ

(ಖಗೋಳ ವಿಜ್ಞಾನ) ಅತಿಭೆಯ ಯಾ ಅದಕ್ಕೆ ಸಂಬಂಧಿಸಿದ.

faculous

ಗುಣವಾಚಕ

(ಖಗೋಳ ವಿಜ್ಞಾನ) ಅತಿಭಾಯುತ; ಅತಿಭೆಯಿಂದ ಕೂಡಿದ.

facultative

ಗುಣವಾಚಕ

  • ಅನುಮೋದಕ; ಅನುಜ್ಞಾತ್ಮಕ; ಅನುಮತಿ ಕೊಡುವ; ಯಾವುದನ್ನೇ ಮಾಡಲು ಯಾ ಮಾಡದಿರಲು ಅನುಜ್ಞೆ, ಅವಕಾಶ ಯಾ ಅಧಿಕಾರ ಕೊಡುವ.
  • ಐಚ್ಛಿಕ; ಆಯ್ದುಕೊಳ್ಳಬಹುದಾದ; ಇಚ್ಛೆಗೆ ಯಾ ಇಷ್ಟಕ್ಕೆ ಬಿಟ್ಟ.
  • ಆಗಂತುಕ; ಅನಿಶ್ಚಿತ; ಸಂದರ್ಭವನ್ನು ಅವಲಂಬಿಸುವ.
  • (ದೈಹಿಕ ಯಾ ಮಾನಸಿಕ) ಶಕ್ತಿಯ ಯಾ ಅದಕ್ಕೆ ಸಂಬಂಧಿಸಿದ.
  • (ಜೀವವಿಜ್ಞಾನ) ಐಚ್ಛಿಕ; ನಿರ್ದಿಷ್ಟ ಕ್ರಿಯೆ ಜೀವನದ ರೀತಿ, ಮೊದಲಾದವುಗಳಿಗೆ ಸೀಮಿತವಾಗಿಲ್ಲದ.

faculty

ನಾಮವಾಚಕ

ಪದಗುಚ್ಛ

  • (ಯಾವುದೇ ವಿಶೇಷ ಕಾ ಮಾಡಲು ಒಬ್ಬನಿಗಿರುವ) ಸಹಜ ಶಕ್ತಿ; ಯೋಗ್ಯತೆ; ಸಾಮರ್ಥ್ಯ.
  • (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಕಾರ್ಯನಿರ್ವಾಹಕ ಶಕ್ತಿ; ಆಡಳಿತಸಾಮರ್ಥ್ಯ.
  • (ದೇಹದ ಯಾ ಅವಯವದ) ಸಹಜಶಕ್ತಿ; ಸ್ವಾಭಾವಿಕ ಶಕ್ತಿ.
  • (ಸಂಕಲ್ಪ, ನೆನಪು, ವಿವೇಚನೆ, ಮೊದಲಾದ) ಮನಶ್ಶಕ್ತಿ.
  • (ಮಾನವಿಕ, ಕಲೆ, ಯಾ ವಿಜ್ಞಾನದ ಯಾವುದೇ) ಶಾಖೆ.
  • (ವಿಶ್ವವಿದ್ಯಾನಿಲಯದ ಯಾವುದೇ) ಬೋಧನಾಂಗ; ಬೋಧನ ವಿಭಾಗ.
  • (ಅಮೆರಿಕನ್‍ ಪ್ರಯೋಗ) ಒಂದು ವಿಶ್ವವಿದ್ಯಾನಿಲಯದ ಯಾ ಕಾಲೇಜಿನ ಅಧ್ಯಾಪಕವರ್ಗ; ಶಿಕ್ಷಕವರ್ಗ.
  • (ಮುಖ್ಯವಾಗಿ ಕ್ರೈಸ್ತಮಠಕ್ಕೆ ಸಂಬಂಧಪಟ್ಟಂತೆ) (ಯಾವುದೇ ಕೆಲಸ ಮಾಡಲು ಕಾಯಿದೆಯಿಂದಲೋ ಮೇಲಧಿಕಾರಿಯಿಂದಲೋ ಕೊಡಲಾದ) ಸ್ವಾತಂತ್ರ್ಯ , ಅಧಿಕಾರ, ಯಾ ಅಪ್ಪಣೆ.
  • ವೃತ್ತಿಬಾಂಧವರು; ವೃತ್ತಿಗರು; ವೃತ್ತಿಗವರ್ಗ; ಒಂದು ವೃತ್ತಿಯವರು ಯಾ ವೃತ್ತಿಗೆ (ಮುಖ್ಯವಾಗಿ ವೈದ್ಯವೃತ್ತಿಗೆ) ಸೇರಿದವರು.

fad

ನಾಮವಾಚಕ

  • ಖಯಾಲು; ಗೀಳು; ಚಟ; ಹುಚ್ಚು:
    1. ಯಾವುದೇ ವಿಷಯ, ಭಾವನೆ, ಕಾರ್ಯನೀತಿ, ಮೊದಲಾದವುಗಳ ಬಗ್ಗೆ ವಿಶೇಷ ಒಲವು.
    2. ಅಂತಹ ಒಲವಿನ ವಿಷಯ, ಭಾವನೆ, ಇತ್ಯಾದಿ.
  • ವಿಚಿತ್ರ ಭಾವನೆ; ವಿಲಕ್ಷಣ ಅಭಿಪ್ರಾಯ.
  • ವಿಚಿತ್ರವರ್ತನೆ; ವಿಲಕ್ಷಣ ನಡೆನುಡಿ.

faddish

ಗುಣವಾಚಕ

  • ಗೀಳಿನ; ಚಟದ; ಖಯಾಲಿನ; ಗೀಳಿನಂಥ.
  • ವಿಚಿತ್ರ ಅಭಿಪ್ರಾಯದ ಯಾ ವರ್ತನೆಯ.

faddishness

ನಾಮವಾಚಕ

ಖಯಾಲಿ ಪ್ರವೃತ್ತಿ; ಗೀಳಿನ ಸ್ವಭಾವ; ಯಾವುದೇ ವಸ್ತು ಯಾ ವಿಷಯದಲ್ಲಿ ಹೆಚ್ಚು ಆಸಕ್ತಿ ತಳೆಯುವ ಸ್ವಭಾವ.

faddism

ನಾಮವಾಚಕ

ಗೀಳುಪ್ರಿಯತೆ; ಚಟದ ಮೋಹ:

  • ಯಾವುದೇ ಗೀಳು, ಚಟ ಯಾ ಚಪಲದ ವಿಷಯದಲ್ಲಿ ಮೋಹ.
  • ಅತಿ ಮೆಚ್ಚಿನ ಹವ್ಯಾಸ ಯಾ ಅಭಿರುಚಿಯನ್ನು ಅನುಸರಿಸುವ ಮನೋವೃತ್ತಿ.

faddist

ನಾಮವಾಚಕ

  • ಗೀಳಿಗ; ಖಯಾಲುಗಾರ; ಯಾವುದೇ ವಿಷಯದಲ್ಲಿ ಹುಚ್ಚಾಗುವವನು.
  • ಮೆಚ್ಚಿನ ಹವ್ಯಾಸ, ಗೀಳು ಯಾ ಚಪಲವನ್ನು ಅನುಸರಿಸುವವನು.

Search Dictionaries

Loading Results

Follow Us :   
  Download Bharatavani App
  Bharatavani Windows App