भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

faddy

ಗುಣವಾಚಕ

  • (ವ್ಯಕ್ತಿಗಳ ವಿಷಯದಲ್ಲಿ) ಗೀಳು ಹಿಡಿದ; ಚಟಕ್ಕೆ ಬಿದ್ದಿರುವ; ಚಪಲ ಹತ್ತಿರುವ.
  • (ವಸ್ತುಗಳ ವಿಷಯದಲ್ಲಿ) ಗೀಳಿನಂತಹ; ಚಟದಂಥ; ಖಯಾಲಿಯ ಹಾಗಿರುವ.

fade

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • ಬಣ್ಣಗುಂದಿಸು; ಮಸುಳಿಸು; ಬಣ್ಣಹೋಗಿಸು.
  • (ಚಲನಚಿತ್ರದಲ್ಲಿ ಯಾ ದೂರದರ್ಶನದಲ್ಲಿ ಚಿತ್ರವನ್ನು) ಕ್ರಮೇಣ ಸ್ಫುಟವಾಗಿ ಮೂಡಿಸು ಯಾ ಕ್ರಮೇಣ ಕಾಣದೆ ಹೋಗುವಂತೆ ಮಾಡು; ಕಾಣುವಂತಾಗಿಸು ಯಾ ಕಾಣದಂತಾಗಿಸು; ಕ್ರಮೇಣ ದೃಶ್ಯವಾಗಿಸು ಯಾ ಅದೃಶ್ಯಗೊಳಿಸು.
  • (ಚಲನಚಿತ್ರದಲ್ಲಿ ಯಾ ರೇಡಿಯೋ ಪ್ರಸಾರದಲ್ಲಿ) ಧ್ವನಿಯನ್ನು ಕ್ರಮೇಣ ಏರಿಸು ಯಾ ಕುಗ್ಗಿಸು; ಕ್ರಮೇಣ ಕೇಳುವಂತಾಗಿಸು ಯಾ ಕೇಳದಂತಾಗಿಸು; ಕ್ರಮೇಣ ಹೆಚ್ಚಿಸು ಯಾ ಅಡಗಿಸು.
  • (ಗಾಲ್ಫ್‍ ಚೆಂಡು ಮೊದಲಾದವನ್ನು) ನೇರವಾಗಿ ಹಾಕಿದ ಚೆಂಡು ಉದ್ದೇಶಪೂರ್ವಕವಾಗಿ ಕೋರೆಯಲ್ಲಿ ತಿರುಗುವಂತೆ ಆಡು.

fade

ನಾಮವಾಚಕ

ನುಡಿಗಟ್ಟು

= fading. do a fade (ಅಶಿಷ್ಟ) ತೊಲಗು; ಜಾಗ ಖಾಲಿ ಮಾಡು; ಹೊರಟುಹೋಗು.

fade-away

ನಾಮವಾಚಕ

= fade-out.

fade-in

ನಾಮವಾಚಕ

  • (ಚಲನಚಿತ್ರ ದೂರದರ್ಶನಗಳಲ್ಲಿ) ಒಂದು ದೃಶ್ಯ ಕ್ರಮೇಣ ಸ್ಫುಟವಾಗುತ್ತಾ ಹೋಗುವಿಕೆ.
  • (ಧ್ವನಿಪ್ರಸಾರ ಯಾ ಧ್ವನಿಮುದ್ರಣಗಳಲ್ಲಿ) ಧ್ವನಿಯು ಕ್ರಮೇಣ ಸ್ಪಷ್ಟವಾಗಿ ಕೇಳುವಂತಾಗುವಿಕೆ.

fade-out

ನಾಮವಾಚಕ

  • (ಚಲನಚಿತ್ರ, ದೂರದರ್ಶನಗಳಲ್ಲಿ) ಒಂದು ದೃಶ್ಯ ಕ್ರಮೇಣ ಕಾಣದಂತಾಗುವಿಕೆ.
  • ಧ್ವನಿಯು ಕ್ರಮೇಣ ಕೇಳದಂತಾಗುವಿಕೆ.
  • (ಮುಖ್ಯವಾಗಿ ಕ್ರಮೇಣ) ಮಾಯವಾಗುವಿಕೆ; ಅದೃಶ್ಯವಾಗುವಿಕೆ.

fadeless

ಗುಣವಾಚಕ

  • ಬಾಡದ; ಕಂದದ; ಕಳೆಗುಂದದ; ಹೊಸತನ ಮತ್ತು ಶಕ್ತಿ ಕಳೆದು ಕೊಳ್ಳದ.
  • (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗದ; ಬಣ್ಣಗುಂದದ; ಮಾಸಿಹೋಗದ; ಮಸಕಾಗದ ಕಾಂತಿಹೀನವಾಗದ.
  • ಕಾಣದಾಗದ; ಮರೆಯಾಗದ; ಅದೃಶ್ಯವಾಗದ; ಅಗೋಚರವಾಗದ; ಅಳಿಸಿಹೋಗದ.
  • ಕಡಮೆಯಾಗದ; ಕುಗ್ಗದ; ಕ್ಷೀಣಿಸದ; ಕ್ಷಯಿಸದ.

fadelessly

ಕ್ರಿಯಾವಿಶೇಷಣ

  • ಬಾಡದಂತೆ; ಕಂದದಂತೆ; ಕಳೆಗುಂದದಂತೆ; ಹೊಸತನ ಮತ್ತು ಶಕ್ತಿ ಕಳೆದುಕೊಳ್ಳದಂತೆ.
  • (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗದಂತೆ; ಮಸಕಾಗದಂತೆ; ಕಾಂತಿಹೀನವಾಗದಂತೆ.
  • ಕಾಣದಾಗದಂತೆ; ಮರೆಯಾಗದಂತೆ; ಅದೃಶ್ಯವಾಗದಂತೆ; ಅಗೋಚರವಾಗದಂತೆ; ಅಳಿಸಿಹೋಗದಂತೆ.
  • ಕುಗ್ಗದಂತೆ; ಕಡಮೆಯಾಗದಂತೆ.

fading

ನಾಮವಾಚಕ

  • ಬಾಡುವುದು; ಕಂದುವಿಕೆ; ಕಳೆಗುಂದುವುದು; ಹೊಸತನವನ್ನೂ ಶಕ್ತಿಯನ್ನೂ ಕಳೆದುಕೊಳ್ಳುವುದು.
  • (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗುವುದು; ಬಣ್ಣಗುಂದುವಿಕೆ; ಮಾಸಿಹೋಗುವುದು; ಮಸಕಾಗುವಿಕೆ; ಕಾಂತಿಹೀನವಾಗುವಿಕೆ.
  • ಬಣ್ಣಗುಂದಿಸುವಿಕೆ; ಬಣ್ಣಹೋಗಿಸುವುದು.
  • (ಕ್ರಮೇಣ) ಕಾಣದಾಗುವಿಕೆ; ಮರೆಯಾಗುವಿಕೆ; ಅದೃಶ್ಯವಾಗುವುದು; ಅಗೋಚರವಾಗುವುದು; ಅಳಿಸಿಹೋಗುವಿಕೆ.
  • (ಚಲನಚಿತ್ರದಲ್ಲಿ ಯಾ ರೇಡಿಯೋ ಪ್ರಸಾರದಲ್ಲಿ ಚಿತ್ರವನ್ನು ಯಾ ಧ್ವನಿಯನ್ನು) ಕ್ರಮೇಣ ಸ್ಫುಟವಾಗಿ ಮೂಡಿಸುವುದು ಯಾ ಕ್ರಮೇಣ ಅಳಿಸಿಬಿಡುವುದು.
  • (ಸ್ವೀಕೃತ ರೇಡಿಯೋ ಅಲೆಗಳ ತೀವ್ರತೆಯಲ್ಲಾಗುವ) ಏರುಪೇರು; ಏರಿಳಿತ; ಅಸ್ಥಿರತೆ.

fado

ನಾಮವಾಚಕ

Portuguese (ಪೋರ್ಚುಗೀಸರ) ಶೋಕಗೀತೆ; ಕರುಣಾಜನಕವಾದ ಜನಪದ ಗೀತೆ.

faecal

ಗುಣವಾಚಕ

  • ಗಸಿಯ; ಮಡ್ಡಿನ; ಮಷ್ಟಿನ; ರಾಡಿಯ; ಚರಟದ.
  • ಹೇಲಿನ; ಸಗಣಿಯ; ಲದ್ದಿಯ; ಹಿಕ್ಕೆಯ; ಮಲದ; ಅಮೇಧ್ಯದ.

faeces

ನಾಮವಾಚಕ

(ಬಹುವಚನ)

  • (ದ್ರವದ ತಳದಲ್ಲಿ ನಿಲ್ಲುವ) ಗಸಿ; ಮಡ್ಡು; ಮಷ್ಟು; ರಾಡಿ; ಒಂಡು; ಚರಟ.
  • (ದೇಹದ) ಹೇಲು; ಸಗಣಿ; ಲದ್ದಿ; ಹಿಕ್ಕೆ; ಮಲ; ಅಮೇಧ್ಯ; ಹೆಂಡೆ.

faerie

ನಾಮವಾಚಕ

(ಪ್ರಾಚೀನ ಪ್ರಯೋಗ)

  • ಹೇರಿಗಳ ಲೋಕ; ಯಕ್ಷಲೋಕ; ಕಿನ್ನರಲೋಕ.
  • (ಮುಖ್ಯವಾಗಿ ಇಂಗ್ಲಂಡಿನ ಸ್ಪೆನ್ಸರ್‍ ಕವಿ ವರ್ಣಿಸಿರುವಂತೆ) ಹೇರಿಗಳು; ಯಕ್ಷಯಕ್ಷಿಣಿಯರು; ಕಿನ್ನರಕಿನ್ನರಿಯರು; ಅಲ್ಪಗಾತ್ರದ ಮಾಂತ್ರಿಕ ಶಕ್ತಿಯುಳ್ಳ ಮತ್ತು ಮನುಷ್ಯರ ವ್ಯವಹಾರಗಳಲ್ಲಿ ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಪ್ರವೇಶಿಸುವ, ಅತಿ ಮಾನುಷ ವ್ಯಕ್ತಿಗಳು.

faerie

ಗುಣವಾಚಕ

(ಪ್ರಾಚೀನ ಪ್ರಯೋಗ) ಊಹಾಲೋಕದ; ಕಾಲ್ಪನಿಕ.

Faeroese

ಗುಣವಾಚಕ

1Faroeseನ ರೂಪಾಂತರ.

Faeroese

ನಾಮವಾಚಕ

2Faroeseನ ರೂಪಾಂತರ.

faery

ನಾಮವಾಚಕ

= 1faerie.

faery

ಗುಣವಾಚಕ

= 2faerie.

faff

ಅಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ರಂಪವಾಗು; ಕೋಲಾಹಲ ಏಳು.

faff

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು) ಅವಾಂತರ; ರಂಪ; ಗದ್ದಲ; ಗಲಭೆ; ಕೋಲಾಹಲ.

Search Dictionaries

Loading Results

Follow Us :   
  Download Bharatavani App
  Bharatavani Windows App