भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

fag

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

fag out (ಕ್ರಿಕೆಟ್‍) ಹೀಲ್ಡ್‍ ಮಾಡು.

  • (ವೃತ್ತಿಯ ವಿಷಯದಲ್ಲಿ) ಬಳಲಿಸು; ದಣಿಸು; ಆಯಾಸಪಡಿಸು; ಸುಸ್ತುಮಾಡು.
  • (ಬ್ರಿಟಿಷ್‍ ಪ್ರಯೋಗ) (ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ವಿಷಯದಲ್ಲಿ ಕಿರಿಯರ) ಸೇವೆ – ಬಳಸಿಕೊ. ತೆಗೆದುಕೊ.
  • (ಹಗ್ಗದ ತುದಿಯನ್ನು) ಸವೆಸು; ಜೂಲಾಗಿಸು.

fag

ನಾಮವಾಚಕ

  • ಕತ್ತೆಚಾಕರಿ; ಕತ್ತೆದುಡಿಮೆ; ಅತಿಕಷ್ಟದ ಮತ್ತು ಬೇಸರದ ದುಡಿತ.
  • (ಬ್ರಿಟಿಷ್‍ ಪ್ರಯೋಗ) ಬೇಡದ ಕೆಲಸ; ಬೇಜಾರಿನ ಕೆಲಸ; ಮನಸ್ಸಿಲ್ಲದ ಕೆಲಸ; ಇಷ್ಟವಿಲ್ಲದ ಚಾಕರಿ: what a fag! ಎಂಥ ಬೇಜಾರಿನ ಕೆಲಸವಪ್ಪಾ!
  • (ಬ್ರಿಟಿಷ್‍ ಪ್ರಯೋಗ) ಅತಿ ದಣಿವು; ತೀರ ಬಳಲಿಕೆ; ಸಂಪೂರ್ಣ ಬೇಸತ್ತಿರುವಿಕೆ; ಅತಿ ಸುಸ್ತಾಗಿರುವಿಕೆ; ಬಹಳ ಸೋತು ಹೋಗಿರುವಿಕೆ: brain fag ಮೆದುಳು ದಣಿವು.
  • (ಬ್ರಿಟಿಷ್‍ ಪ್ರಯೋಗ) (ಶಾಲೆಗಳಲ್ಲಿ) ಹಿರಿಯ ವಿದ್ಯಾರ್ಥಿಯ ಸೇವೆ ಮಾಡಬೇಕಾದ ಕಿರಿಯ ವಿದ್ಯಾರ್ಥಿ.
  • (ಅಶಿಷ್ಟ) ಸಿಗರೇಟು.

fag

ನಾಮವಾಚಕ

  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಲಿಂಗ ಕಾಮಿ (ಸಾಮಾನ್ಯವಾಗಿ ಗಂಡಸು).

fag-end

ನಾಮವಾಚಕ

  • ಕೀಳ್ತೆರದ ಯಾ ಉಪಯೋಗವಿಲ್ಲದ ಉಳಿಕೆ.
  • (ವಸ್ತು ಮೊದಲಾದವುಗಳ) ಕಟ್ಟಕಡೆ; ಕೊಟ್ಟಕೊನೆ; ತುಟ್ಟತುದಿ.
  • (ಅಶಿಷ್ಟ) ಸಿಗರೇಟು ತುಂಡು; ಸಿಗರೇಟಿನ ಉಳಿಕೆ; ಸೇದಿ ಉಳಿದ ಕೊನೆಯ ಭಾಗ, ತುಂಡು.

faggot

ನಾಮವಾಚಕ

  • ಸೌದೆಯ – ಕಂತೆ, ಹೊರೆ, ಪಿಂಡಿ, ಕಟ್ಟು.
  • (ಬೆಸುಗೆ ಹಾಕುವ) ಸರಳುಕಟ್ಟು; ಉಕ್ಕಿನ ಸರಳುಗಳ ಕಟ್ಟು, ಕಂತೆ.
  • (ಸಾಮಾನ್ಯವಾಗಿ ಬಹುವಚನದಲ್ಲಿ) (ಪ್ರಾಣಿಯ) ಯಕೃತ್ತು ಮೊದಲಾದವನ್ನು ತುಂಡು ತುಂಡುಮಾಡಿ, ಸಂಬಾರ ಬೆರೆಸಿ, ಉಂಡೆ ಯಾ ಸುರುಳಿ ಮಾಡಿ ಬೇಯಿಸಿದ ತಿನಿಸು.
  • ಅಪ್ರಿಯ ಯಾ ಇಷ್ಟವಾಗದ ಹೆಂಗಸು.
  • (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಸಲಿಂಗಕಾಮಿ (ಸಾಮಾನ್ಯವಾಗಿ ಗಂಡಸು).

faggot

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಸೌದೆ ಸೀಳುಗಳನ್ನು) ಕಂತೆಕಟ್ಟು; ಹೊರೆಮಾಡು.
  • (ಉಕ್ಕಿನ ಸಲಾಕಿಗಳನ್ನು) ಕಂತೆಯಾಗಿ ಕಟ್ಟು; ಹೊರೆಯಾಗಿ ಕಟ್ಟು.
  • ಸರಳುಕಟ್ಟು ಅಲಂಕರಣ ಮಾಡು.
  • ಸರಳುಕಟ್ಟು ಕಸೂತಿಯಿಂದ – ಸೇರಿಸು, ಕೂಡಿಸು.

faggot-stitch

ನಾಮವಾಚಕ

ಸರಳು ಹೆಣಿಗೆ; ಕಂತೆ ಹೆಣಿಗೆ; ಉಕ್ಕಿನ ಸರಳುಗಳ ಕಟ್ಟಿನಂತೆ ಕಾಣುವ ಹೆಣಿಗೆ.

faggot-vote

ನಾಮವಾಚಕ

(ಚರಿತ್ರೆ) ಸೃಷ್ಟನೆ ವೋಟು; ಹಕ್ಕಿಲ್ಲದವನಿಗೆ ತಕ್ಕಷ್ಟು ಆಸ್ತಿ ವರ್ಗಾಯಿಸಿ ಕೃತಕವಾಗಿ ಸೃಷ್ಟಿಸಿದ ವೋಟು.

faggot-voter

ನಾಮವಾಚಕ

ಸೃಷ್ಟವೋಟುದಾರ; ಚುನಾವಣೆಯ ಹಕ್ಕಿಲ್ಲದವನಿಗೆ ತಕ್ಕಷ್ಟು ಆಸ್ತಿ ವರ್ಗಾಯಿಸಿದ್ದರಿಂದ ಕೃತಕವಾಗಿ ಸೃಷ್ಟಿಗೊಂಡ ವೋಟುದಾರ.

faggoting

ನಾಮವಾಚಕ

  • ಸರಳುಕಸೂತಿ; ಕಂತೆಕಸೂತಿ; ಉಕ್ಕಿನ ಸರಳುಗಳ ಕಟ್ಟಿನಂತೆ ಎಳೆಗಳನ್ನು ಜೋಡಿಸಿರುವ ಕಸೂತಿ. Figure: faggoting-1
  • ಕಂತೆಕಟ್ಟು; ಕಂತೆ ಜೋಡಣೆ; ವಸ್ತುಗಳನ್ನು ಕಂತೆಯಂತೆ ಕಟ್ಟುವಿಕೆ ಯಾ ಜೋಡಿಸುವಿಕೆ.

faggoty

ಗುಣವಾಚಕ

  • ಕಂತೆಕಂತೆಯಾಗಿರುವ; ಕಟ್ಟುಕಟ್ಟಾಗಿರುವ.
  • (ಹೆಂಗಸಿನ ವಿಷಯದಲ್ಲಿ) ಅಹಿತಳಾದ.
  • (ಸಾಮಾನ್ಯವಾಗಿ ಗಂಡಸಿನ ವಿಷಯದಲ್ಲಿ) ಸಲಿಂಗಕಾಮಿಯ.

Fagin

ನಾಮವಾಚಕ

ಕಳ್ಳವ್ಯಾಪಾರಿ ಯಾ ಕಳ್ಳಗುರು; ಕದ್ದ ಮಾಲನ್ನು ಸ್ವೀಕರಿಸುವವನು ಯಾ ಕಳ್ಳರಿಗೆ ತರಪೇತು ಕೊಡುವವನು.

fagot

ನಾಮವಾಚಕ

(ಅಮೆರಿಕನ್‍ ಪ್ರಯೋಗ) = 1faggot.

fagot

ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) = 2faggot.

fah

ನಾಮವಾಚಕ

(ಸಂಗೀತ) (ಒಂದು ಸ್ವರಶ್ರೇಣಿಯ ಯಾವುದೇ ಸ್ವರವನ್ನು ಒಂದು ಉಚ್ಚಾರಾಂಶದಿಂದ ಹೆಸರಿಸುವ ಪದ್ಧತಿಯಲ್ಲಿ) ಸ್ವರಾಷ್ಟಕದ ನಾಲ್ಕನೆಯ ಸ್ವರ.

Fahr.

ಸಂಕ್ಷಿಪ್ತ

Fahrenheit.

Fahrenheit

ಗುಣವಾಚಕ

(ಭೌತವಿಜ್ಞಾನ) (ಜರ್ಮನ್‍ ಭೌತವಿಜ್ಞಾನಿ) ಹ್ಯಾರನ್‍ಹೈಟ್‍ನ; (ಮುಖ್ಯವಾಗಿ ಆತ ನಿರ್ಮಿಸಿದ) ಹ್ಯಾರನ್‍ಹೈಟ್‍ ತಾಪಮಾಪನಪದ್ಧತಿಯ, ಯಾ ಆ ಪದ್ಧತಿಗೆ ಸಂಬಂಧಿಸಿದ.

Fahrenheit scale

ನಾಮವಾಚಕ

ಹ್ಯಾರನ್‍ಹೈಟ್‍ ಮಾನ; ನೀರಿನ ಘನೀಕರಣ ಬಿಂದುವನ್ನು $+32^\circ$ ಎಂದೂ ನೀರಿನ ಕುದಿಬಿಂದುವನ್ನು $+ 212^\circ$ ಎಂದೂ ಪರಿಗಣಿಸಿ ಅವೆರಡರ ಅಂತರವನ್ನು 180 ಡಿಗ್ರಿಗಳಾಗಿ ವಿಭಾಗಿಸಿದ ತಾಪಮಾನ ಪದ್ಧತಿ.

Fahrenheit thermometer

ನಾಮವಾಚಕ

ಹ್ಯಾರನ್‍ಹೈಟ್‍ ತಾಪಮಾಪಕ; ಹ್ಯಾರನ್‍ಹೈಟ್‍ ಪದ್ಧತಿಯಲ್ಲಿ ತಾಪವನ್ನು ಗುರುತಿಸಿರುವ ಥರ್ಮಾಈಟರು.

faience

ನಾಮವಾಚಕ

ನಕಾಸೆ ಪಿಂಗಾಣಿ; ಮಣ್ಣಿನ ಯಾ ಪಿಂಗಾಣಿಯ ಚಿತ್ರಿತ ಸಾಮಾನುಗಳು.

Search Dictionaries

Loading Results

Follow Us :   
  Download Bharatavani App
  Bharatavani Windows App