भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gallimaufry

ನಾಮವಾಚಕ

ವಿಜಾತೀಯ ಮಿಶ್ರಣ; ಕಲಬೆರಕೆ; ತೊಳಸುಂಬಳಸು; ಕಲಸುಮೇಲೋಗರ.

gallinacean

ಗುಣವಾಚಕ

ಕುಕ್ಕುಟ ಜಾತಿಯ.

gallinacean

ನಾಮವಾಚಕ

ಕುಕ್ಕುಟ ಜಾತಿಯ ಪಕ್ಷಿ.

gallinaceous

ಗುಣವಾಚಕ

ಕುಕ್ಕುಟ ಜಾತಿಯ.

gallinazo

ನಾಮವಾಚಕ

  • ಅಮೆರಿಕದ ಒಂದು ಜಾತಿಯ ರಣಹದ್ದು.
  • ತುರ್ಕಿ ಡೇಗೆ; ತುರ್ಕಿ ದೇಶದ ಒಂದು ಜಾತಿಯ ಡೇಗೆ.

galling

ಗುಣವಾಚಕ

  • ರೇಗಿಸುವ; ಪೀಡಿಸುವ; ಕಾಟಕೊಡುವ.
  • ಮಾನ ಕಳೆಯುವಂಥ; ಅವಮಾನಕರ; ಹೀನಾಯವೆನಿಸುವಂಥ.

gallingly

ಕ್ರಿಯಾವಿಶೇಷಣ

  • ರೇಗಿಸುವಂತೆ; ಕಾಟ ಕೊಡುವ ಹಾಗೆ.
  • ಅವಮಾನಕರವಾಗಿ.

gallinule

ನಾಮವಾಚಕ

  • ಗ್ಯಾಲಿನ್ಯೂಲ್‍ ಕುಲದ ಸಣ್ಣ ನೀರು ಹಕ್ಕಿ, ಜಲಪಕ್ಷಿ.
  • ಪಾರ್ಹಿರುಲ ಯಾ ಪಾರ್ಹಿರಿಯೋ ಕುಲದ ಇದೇ ತರಹದ ವಿವಿಧ ಪಕ್ಷಿಗಳಲ್ಲೊಂದು.

Gallio

ನಾಮವಾಚಕ

  • (ಮುಖ್ಯವಾಗಿ ಅಧಿಕಾರಿಯ ವಿಷಯದಲ್ಲಿ) ತನ್ನ ಅಧಿಕಾರವ್ಯಾಪ್ತಿಗೆ ಸಂಬಂಧಿಸದ ವಿಷಯದಲ್ಲಿ ಕೈಹಾಕಲೊಲ್ಲದವನು.
  • ಉಡಾಫೆಯವನು; ಉದಾಸೀನ; ಬೇಜವಾಬ್ದಾರಿಯಿಂದಿದ್ದು ಎಲ್ಲವನ್ನೂ ಲಘುವಾಗಿ ತೆಗೆದುಕೊಳ್ಳುವವ.

galliot

ನಾಮವಾಚಕ

  • ಸಾಮಾನು ಸಾಗಿಸುವ ಯಾ ಈನು ಹಿಡಿಯುವ ಡಚ್ಚರ ಹಡಗು.
  • (ಸಾಮಾನ್ಯವಾಗಿ ಮೆಡಿಟರೇನಿಯನ್ನಿನ) ಚಿಕ್ಕ ಗ್ಯಾಲಿ ಹಡಗು.

gallipot

ನಾಮವಾಚಕ

(ಮುಲಾಮು ಮೊದಲಾದವನ್ನು ಇಡುವ) ಪಿಂಗಾಣಿ, ಲೋಹ, ಮೊದಲಾದವುಗಳ ಕುಡಿಕೆ.

gallium

ನಾಮವಾಚಕ

(ರಸಾಯನವಿಜ್ಞಾನ) ಗ್ಯಾಲಿಯಂ; ನೀಲಿ ಛಾಯೆಯ ಬಿಳಿ ಬಣ್ಣದ, ತ್ರಿವೇಲೆನ್ಸೀಯ ಮೃದು ಲೋಹಧಾತು (ಸಂಕೇತ Ga.)

gallivant

ಅಕರ್ಮಕ ಕ್ರಿಯಾಪದ

(ಆಡುಮಾತು)

  • ಸುತ್ತಾಡು; ಅಲೆದಾಡು; ಠಳಾಯಿಸು.
  • ಚೆಲ್ಲಾಟವಾಡು; ಪ್ರಣಯಚೇಷ್ಟೆಯಲ್ಲಿ ತೊಡಗು.

galliwasp

ನಾಮವಾಚಕ

ವೆಸ್ಟ್‍ ಇಂಡೀಸ್‍ನ ಒಂದು ಬಗೆಯ ಹಲ್ಲಿ.

gallless

ಗುಣವಾಚಕ

ಸೌಮ್ಯ; ಮೃದುಸ್ವಭಾವದ; ಕಟುಭಾವನೆ, ಕಾಠಿನ್ಯ, ನಿಷ್ಠುರತೆ, ದ್ವೇಷ, ವೈರ – ಇಲ್ಲದ.

gallnut

ನಾಮವಾಚಕ

= 4gall.

Gallo-

ಸಮಾಸ ಪೂರ್ವಪದ

  • ಹ್ರೆಂಚ್‍ – ; ಹ್ರೆಂಚ್‍ ಮತ್ತು – ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ: Gallo-Briton ಹ್ರೆಂಚ್‍ ಬ್ರಿಟನ್‍. Gallo-German ಹ್ರೆಂಚ್‍ಜರ್ಮನ್‍.
  • = Gaul: Gallo-Roman ಗಾಲ್‍ರೋಮನ್‍.

Gallo-Roman

ನಾಮವಾಚಕ

ಗ್ಯಾಲೋರೋಮನ್‍; ರೋಮನ್‍ ಆಳ್ವಿಕೆಯ ಅಂಗವಾಗಿದ್ದಾಗಿನ ಕಾಲದ ಗಾಲ್‍ ಪ್ರಾಂತಕ್ಕೆ ಸೇರಿದವನು ಯಾ ಅಲ್ಲಿಯ ಭಾಷೆ.

Gallo-Roman

ಗುಣವಾಚಕ

ಗ್ಯಾಲೋರೋಮನ್‍; ರೋಮನ್‍ ಆಳ್ವಿಕೆಯ ಅಂಗವಾಗಿದ್ದಾಗಿನ ಕಾಲದ ಗಾಲ್‍ ಪ್ರಾಂತಕ್ಕೆ ಸೇರಿದ.

Gallomania

ನಾಮವಾಚಕ

ಹ್ರೆಂಚ್‍ ಮೋಹ; ಹ್ರೆಂಚ್‍ಗೀಳು; ಹ್ರಾನ್ಸಿನ ಯಾ ಹ್ರೆಂಚರ ವಿಷಯವಾಗಿ ಹುಚ್ಚು ಮೋಹ ಯಾ ಅಭಿಮಾನ.

Search Dictionaries

Loading Results

Follow Us :   
  Download Bharatavani App
  Bharatavani Windows App