भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gallows humour

ನಾಮವಾಚಕ

ಫಾಸಿ ಹಾಸ್ಯ; ನಿರ್ದಯವಾದ, ವ್ಯಂಗ್ಯವಾದ ಹಾಸ್ಯ.

gallows-bird

ನಾಮವಾಚಕ

ಫಾಸಿ ಯೋಗ್ಯ; ಗಲ್ಲಿಗೆ ಹಾಕಲು ತಕ್ಕ ಅಪರಾಧಿ.

gallows-ripe

ಗುಣವಾಚಕ

ಗಲ್ಲಿಗೆ (ಹಾಕಲು) – ಸಿದ್ಧವಾಗಿರುವ, ತಕ್ಕವನಾಗಿರುವ.

gallows-tree

ನಾಮವಾಚಕ

ಗಲ್ಲುಮರ; ನೇಣುಗಂಬ; ನೇಣುಮರ.

gallstone

ನಾಮವಾಚಕ

ಪಿತ್ತಾಶ್ಮರಿ; ಪಿತ್ತಗಲ್ಲು; ಪಿತ್ತಕೋಶದಲ್ಲಿ ಕೆಲವುವೇಳೆ ಉಂಟಾಗುವ ಕಲ್ಲುಹರಳಿನಂಥ ಕಾಯ.

Gallup poll

ನಾಮವಾಚಕ

ಗ್ಯಾಲಪ್‍ ಮತ ಸಂಗ್ರಹಣೆ; ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ; ಯಾವುದೇ ಒಂದು ವಿಷಯದಲ್ಲಿ ಸಾರ್ವಜನಿಕರ ಅಭಿಪ್ರಾಯ ಗ್ರಹಿಸಲು ಪರೀಕ್ಷಾರ್ಥವಾಗಿ ನಡೆಸುವ ಮತಸಂಗ್ರಹಣೆ.

galluses

ನಾಮವಾಚಕ

(ಬಹುವಚನ) ( ಪ್ರಾಂತೀಯ ಪ್ರಯೋಗ ಮತ್ತು ಅಮೆರಿಕನ್‍ ಪ್ರಯೋಗ) ಷರಾಯಿಪಟ್ಟಿ; ಷರಾಯಿನೇಲು; ಷರಾಯಿ ಕೆಳಗೆ ಬೀಳದಂತೆ ಭುಜದ ಮೇಲಿಂದ ತೂಗಹಾಕುವ ಪಟ್ಟಿಗಳು.

galoot

ನಾಮವಾಚಕ

(ಆಡುಮಾತು) ಒಡ್ಡ (ಮನುಷ್ಯ); ಒರಟ.

galop

ನಾಮವಾಚಕ

ಗ್ಯಾಲಪ್‍; ಒಂದು ಬಗೆಯ ಗೆಲವಿನ ಕುಣಿತ ಯಾ ಅದರ ಸಂಗೀತ.

galop

ಅಕರ್ಮಕ ಕ್ರಿಯಾಪದ

ಗ್ಯಾಲಪ್‍ ಕುಣಿತ ಕುಣಿ; ಗ್ಯಾಲಪ್‍ ನರ್ತನಮಾಡು.

galore

ನಾಮವಾಚಕ

(ಗತಪ್ರಯೋಗ) ಸಮೃದ್ಧಿ; ಪುಷ್ಕಳತೆ; ಹೇರಳ; ದಂಡಿ; ವಿಪುಲತೆ; ಯಥೇಷ್ಟತೆ.

galore

ಕ್ರಿಯಾವಿಶೇಷಣ

ಸಮೃದ್ಧಿಯಾಗಿ; ಪುಷ್ಕಳವಾಗಿ; ದಂಡಿಯಾಗಿ; ಹೇರಳವಾಗಿ: with beef and ale galore ಮಾಂಸಮದ್ಯಗಳು ಸಮೃದ್ಧಿಯಾಗಿ. galore of alcohol ಮದ್ಯ ಕೋಡಿ ಹರಿಯುವಂತೆ.

galosh

ನಾಮವಾಚಕ

(golosh ಎಂದೂ ಪ್ರಯೋಗ)

  • (ಸಾಮಾನ್ಯವಾಗಿ ಬಹುವಚನದಲ್ಲಿ) (ಪಾದರಕ್ಷೆ ಮಣ್ಣಾಗದಂತೆ, ನೆನೆಯದಂತೆ ಅದರ ಮೇಲೆ ತೊಡುವ, ಸಾಮಾನ್ಯವಾಗಿ ರಬ್ಬರಿನ) ಮೇಲ್ಜೋಡು.
  • ಪಾದರಕ್ಷೆ ಕವಚ; ಪಾದರಕ್ಷೆ ಹೊದಿಕೆ; ಬೂಟ್ಸಿನ ಕೆಳಭಾಗವನ್ನು ಯಾ ಪಾದರಕ್ಷೆಯ ಮೇಲ್ಭಾಗವನ್ನು ಮುಚ್ಚುವ ಚರ್ಮ ಮೊದಲಾದವುಗಳ ಚೂರು, ಪಟ್ಟಿ.

galoshed

ಗುಣವಾಚಕ

(ಪಾದರಕ್ಷೆಯ ವಿಷಯದಲ್ಲಿ) ಮುಚ್ಚುಪಟ್ಟಿಯಿಂದ ಮುಚ್ಚಿದ; ಮುಚ್ಚುಪಟ್ಟಿ ಹಾಕಿದ; ಕವಚ ಹಾಕಿದ; ಹೊದಿಕೆ ಹೊದಿಸಿದ.

galumph

ಅಕರ್ಮಕ ಕ್ರಿಯಾಪದ

(ಆಡುಮಾತು)

  • ಗೆಲವಿನಿಂದ, ಉತ್ಸಾಹದಿಂದ ನೆಗೆಯುತ್ತ, ಕುಣಿಯುತ್ತ ಹೋಗು.
  • ಒಡ್ಡೊಡ್ಡಾಗಿ ಯಾ ಶಬ್ದಮಾಡುತ್ತ ಹೋಗು, ಸಾಗು, ಚಲಿಸು.

galvanic

ಗುಣವಾಚಕ

  • (ಚರಿತ್ರೆ) ವಿದ್ಯುತ್ತಿನ ಯಾ ವಿದ್ಯುತ್ತಿನಂಥ; ವಿದ್ಯುತ್ತಿನಿಂದ ಉತ್ಪತ್ತಿಯಾದ; ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ಪ್ರವಾಹವನ್ನು ಉತ್ಪತ್ತಿ ಮಾಡುವ.
  • (ರೂಪಕವಾಗಿ) ವಿದ್ಯುತ್ಸಂಚಾರದಂಥ; ಥಟ್ಟನೆಯ ಮತ್ತು ಅಸಾಧಾರಣವಾದ: had a galvanic effect ಥಟ್ಟನೆಯ ಮತ್ತು ಅಸಾಧಾರಣವಾದ ಪರಿಣಾಮ ಬೀರಿತು.
  • ಹುರಿದುಂಬಿಸುವ; ಉತ್ತೇಜಕವಾದ; ಉದ್ದೀಪಿಸುವ; ಪ್ರಚೋದಿಸುವ.
  • ಶಕ್ತಿಪೂರ್ಣವಾದ; ಭರ್ಜರಿ: a galvanic performance ಭರ್ಜರಿ ಪ್ರದರ್ಶನ ಯಾ ನಿರ್ವಹಣೆ.

galvanic battery

ನಾಮವಾಚಕ

ಗ್ಯಾಲ್ವನಿಕ ಬ್ಯಾಟರಿ; ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ತನ್ನು ಉತ್ಪತ್ತಿ ಮಾಡುವ ಬ್ಯಾಟರಿ.

galvanic electricity

ನಾಮವಾಚಕ

ಗ್ಯಾಲ್ವನಿಕ ವಿದ್ಯುತ್ತು; ಪ್ರಾಥಮಿಕ ಬ್ಯಾಟರಿಯಲ್ಲಿ ಹೇಗೋ ಹಾಗೆ ರಾಸಾಯನಿಕ ಕ್ರಿಯೆಯಿಂದ ಹುಟ್ಟುವ ನೇರ ವಿದ್ಯುತ್ಪ್ರವಾಹ.

galvanic pile

ನಾಮವಾಚಕ

ಗ್ಯಾಲ್ವನಿಕ ಪೇರಿಕೆ; ಭಿನ್ನ ಲೋಹದ ತಗಡುಗಳು ಮತ್ತು ವಿದ್ಯುದ್ವಿಚ್ಛೇದ್ಯದಲ್ಲಿ ಅದ್ದಿದ ರಟ್ಟು ಮುಂತಾದುವನ್ನು ಒಂದರ ಮೇಲೊಂದರಂತೆ ಪೇರಿಸಿ ಅದರಿಂದ ವಿದ್ಯುತ್ಪ್ರವಾಹ ಹುಟ್ಟುವಂತೆ ಏರ್ಪಡಿಸಿರುವ ಪೇರಿಕೆ.

galvanically

ಕ್ರಿಯಾವಿಶೇಷಣ

  • ಥಟ್ಟನೆ; ಹಠಾತ್ತಾಗಿ.
  • ಉತ್ತೇಜಕವಾಗಿ; ಹುರಿದುಂಬಿಸುವಂತೆ.

Search Dictionaries

Loading Results

Follow Us :   
  Download Bharatavani App
  Bharatavani Windows App