भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gung-ho

ಗುಣವಾಚಕ

ಉತ್ಸಾಹಿ; ಉತ್ಸಾಹಭರಿತ; ಉತ್ಸಾಹಪೂರ್ಣ; ಉತ್ಸುಕ.

gunge

ನಾಮವಾಚಕ

= gunk.

gunk

ನಾಮವಾಚಕ

(ಅಶಿಷ್ಟ) ಅಂಟಂಟಾದ ಯಾ ದ್ರವರೂಪದಲ್ಲಿರುವ ವಸ್ತು.

gunless

ಗುಣವಾಚಕ

ಬಂದೂಕಿಲ್ಲದ; ಕೋವಿ ರಹಿತ.

gunman

ನಾಮವಾಚಕ

  • ಕೋವಿಕೋರ; ಬಂದೂಕು ಹಾರಿಸಿ ಬೆದರಿಸುವ ಯಾ ಕೊಲ್ಲುವ ದರೋಡೆಖೋರ.
  • ಬಂದೂಕುಧಾರಿ; ಕೋವಿಧಾರಿ; ಬಂದೂಕು ಹಿಡಿದಿರುವವನು ಯಾ ಹಾರಿಸುವುದರಲ್ಲಿ ಕುಶಲನಾದವನು.
  • ಕೋವಿಗಾರ; ಬಂದೂಕು ತಯಾರಿಸುವವ.

gunned

ಗುಣವಾಚಕ

ತುಪಾಕಿಸಜ್ಜಿತ; ಕೋವಿ, ಬಂದೂಕು, ಫಿರಂಗಿ, ಮೊದಲಾದವುಗಳಿಂದ ಕೂಡಿದ, ಸಜ್ಜಿತವಾದ.

gunnel

ನಾಮವಾಚಕ

ಕೋವಿಈನು; ಹಾವು ಈನಿನಾಕಾಕಾರದ ಸಣ್ಣ ಕಡಲ ಈನು.

gunnel

ನಾಮವಾಚಕ

= gunwale.

gunner

ನಾಮವಾಚಕ

ಪದಗುಚ್ಛ

ನುಡಿಗಟ್ಟು

Master Gunner (ದೊರೆಯ) ಆಯುಧಾಗಾರದ ಅಧಿಕಾರಿ; ಶಸ್ತ್ರಾಸ್ತ್ರದ ಉಗ್ರಾಣವನ್ನು ನೋಡಿಕೊಳ್ಳುವ ಅಧಿಕಾರಿ.

  • (ಮುಖ್ಯವಾಗಿ ಸೈನಿಕನ ಹುದ್ದೆಯ ಹೆಸರಾಗಿ) ಗೋಲಂದಾಜ ತೋಪುಗಾರ; ಫಿರಂಗಿದಾರ; ಫಿರಂಗಿ – ಸೈನಿಕ ಯಾ ಅಧಿಕಾರಿ.
  • (ನೌಕಾಯಾನ) ತೋಪಧಿಕಾರಿ; ತೋಪುಖಾನೆ, ಮದ್ದಿನ ಮನೆ, ಮೊದಲಾದವುಗಳ ಅಧಿಕಾರಿ.
  • (ಕಾಡುಪ್ರಾಣಿ, ಹಕ್ಕಿ, ಮೊದಲಾದವುಗಳ) ಬೇಟೆಗಾರ; ಷಿಕಾರಿ(ಯವ).
  • ವಿಮಾನ ಕೋವಿಗಾರ; ಬಂದೂಕು ಹಾರಿಸುವ ವಿಮಾನ ಚಾಲಕ ವರ್ಗದ ಸದಸ್ಯ.

gunnera

ನಾಮವಾಚಕ

ಗನರ:

  • ಅಲಂಕಾರಕ್ಕಾಗಿ ಬೆಳೆಸುವ, ಸುಂದರವಾದ ದೊಡ್ಡ ದೊಡ್ಡ ಎಲೆಗಳನ್ನು ಬಿಡುವ ಗಿಡಗಳ ಒಂದು ಕುಲ.
  • ಈ ಕುಲದ ಗಿಡ.

gunnery

ನಾಮವಾಚಕ

  • ತೋಪುಗಾರಿಕೆ; ಫಿರಂಗಿ ವಿದ್ಯೆ; ದೊಡ್ಡ ಫಿರಂಗಿಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ವಿದ್ಯೆ; ಭಾರೀ ಫಿರಂಗಿಗಳ ನಿರ್ಮಾಣ ಮತ್ತು ನಿರ್ವಹಣ.
  • ಫಿರಂಗಿ ಹೊಡೆತ; ತೋಪು, ಬಂದೂಕು – ಹಾರಿಸುವುದು.
  • (ಸಾಮೂಹಿಕಾರ್ಥದಲ್ಲಿ) ಫಿರಂಗಿಗಳು; ತೋಪುಗಳು; ಬಂದೂಕುಗಳು; ತುಪಾಕಿಗಳು.

gunning

ನಾಮವಾಚಕ

ಪದಗುಚ್ಛ

go gunning ಷಿಕಾರಿಗೆ ಹೋಗು; ಬೇಟೆಗೆ ಹೋಗು.

  • (ಮುಖ್ಯವಾಗಿ ಬೇಟೆಯ ಪ್ರಾಣಿಗೆ) ಬಂದೂಕು ಹೊಡೆಯುವುದು.
  • (ಷಿಕಾರಿ ದೋಣಿಯಲ್ಲಿ ಕುಳಿತು ಮಾಡುವ) ಕಾಡು ಹಕ್ಕಿಯ ಬೇಟೆ.

gunny

ನಾಮವಾಚಕ

(ಸಾಮಾನ್ಯವಾಗಿ ಸೆಣಬುನಾರಿನ) ಗೋಣಿಚೀಲ ಯಾ ಗೋಣಿ ತಟ್ಟು.

gunpower

ನಾಮವಾಚಕ

ಬಂದೂಕುಬಲ; ಫಿರಂಗಿಬಲ; ಲಭ್ಯವಿರುವ ಫಿರಂಗಿಗಳ ಒಟ್ಟು ಸಂಖ್ಯೆ.

gunroom

ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  • ತೋಪು ಕೋಣೆ; ಯುದ್ಧನೌಕೆಯಲ್ಲಿ ಕಿರಿಯ ಅಧಿಕಾರಿಗಳಿಗೆ ಬಿಡಾರವೋ, ಲೆಹ್ಟಿನೆಂಟ್‍ಗಳಿಗೆ ಊಟದ ಸ್ಥಳವೋ ಆದ ಕೊಠಡಿ.
  • ಬಂದೂಕು ಕೊಠಡಿ; ಮನೆಯಲ್ಲಿ ಷಿಕಾರಿ ಬಂದೂಕನ್ನು ಇಡುವ ಕೊಠಡಿ.

gunship

ನಾಮವಾಚಕ

ಶಸ್ತ್ರಾಸ್ತ್ರಸಜ್ಜಿತ ಹೆಲಿಕಾಪ್ಟರು ಯಾ ವಿಮಾನ.

gunshot

ನಾಮವಾಚಕ

  • ಬಂದೂಕು ಹೊಡೆತ; ಬಂದೂಕಿನಿಂದ ಹೊಡೆದ ಗುಂಡು.
  • ಬಂದೂಕು ದೂರ; ಕೋವಿದೂರ; ಕೋವಿಯಳತೆ; ಬಂದೂಕು ಗುಂಡು ತಲಪುವ ದೂರ: within gunshot ಬಂದೂಕು ದೂರದೊಳಗೆ; ಕೋವಿಯಳತೆಯೊಳಗೆ.

gunsmith

ನಾಮವಾಚಕ

ಕೋವಿಕಮ್ಮಾರ; ಬಂದೂಕುಗಾರ; ಫಿರಂಗಿ, ತೋಪು, ಮೊದಲಾದವುಗಳನ್ನು ತಯಾರಿಸುವವನು ಯಾ ರಿಪೇರಿ ಮಾಡುವವನು.

gunter

ನಾಮವಾಚಕ

  • ಗಂಟರು; ಗಂಟರ್‍ (ಅಳತೆ) ಕಡ್ಡಿ; ಮೋಜಿಣಿಯ ಮತ್ತು ನೌಕಾಗತಿ ಶಾಸ್ತ್ರದ ಲೆಕ್ಕಗಳನ್ನು ಸುಗಮಗೊಳಿಸಲು ಬಳಸುವ, ಅಳತೆಗೆರೆ ಲಾಗರಿದಮ್ಮುಗಳ ಗಣನರೇಖೆ, ಮೊದಲಾದವನ್ನು ಗುರುತುಮಾಡಿರುವ, ಎರಡು ಅಡಿ ಉದ್ದದ ಚಪ್ಪಟೆ ಅಳತೆಪಟ್ಟಿ.
  • ಗಂಟರ್‍; ನೆತ್ತಿಕೂವೆ ಯಾ ಅದರ ಪಟ; ಕೆಳಕೂವೆಯ ಮೇಲೆ ಬಳೆಗಳ ಮೂಲಕ ಮೇಲಕ್ಕೂ ಕೆಳಕ್ಕೂ ಸರಿಯಬಲ್ಲ ನೆತ್ತಿಕೂವೆ ಯಾ ಅದರ ಪಟ.

Gunter’s chain

ನಾಮವಾಚಕ

ಗಂಟರ್‍ ಸರಪಣಿ; 66 ಅಡಿ ಉದ್ದದ ಮೋಜಿಣಿ ಸರಪಣಿ.

Search Dictionaries

Loading Results

Follow Us :   
  Download Bharatavani App
  Bharatavani Windows App