भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Gunter’s scale

ನಾಮವಾಚಕ

= gunter(1).

gunwale

ನಾಮವಾಚಕ

ಪದಗುಚ್ಛ

(ಮುಖ್ಯವಾಗಿ ಚಿಕ್ಕ) ಹಡಗಿನ ಯಾ ದೋಣಿಯ ಪಕ್ಕದ ಮೇಲಂಚು.

  • gunwale to ನೀರಿನ ಮಟ್ಟಕ್ಕೆ ಸಮನಾಗಿ.
  • gunwale under ನೀರಿನ ಮಟ್ಟದ ಕೆಳಗೆ.

gunyah

ನಾಮವಾಚಕ

(ಆಸ್ಟ್ರೇಲಿಯ) (ಆದಿವಾಸಿಗಳ) ಜೋಪಡಿ; ಗುಡಿಸಲು; ಗುಡಿಲು.

gup

ನಾಮವಾಚಕ

(ಆಡುಮಾತು) ಗುಡ್ಡುಹರಟೆ; ಕಾಡುಹರಟೆ.

guppy

ನಾಮವಾಚಕ

ಗಫಿ; ಜಲೋದ್ಯಾನಗಳಲ್ಲಿ ಸಾಕುವ, ವೆಸ್ಟ್‍ಇಂಡೀಸ್‍ನ ಸಣ್ಣ ಈನು.

guppy

ನಾಮವಾಚಕ

ಗಪಿ; ನೀರಿನ ಪ್ರತಿರೋಧವನ್ನು ತಗ್ಗಿಸುವಂತೆ ಈನಿನಾಕಾರದಲ್ಲಿ ರಚಿಸಿದ, ಗಾಳಿಯನ್ನು ಒದಗಿಸುವ ವ್ಯವಸ್ಥೆಯುಳ್ಳ, ಜಲಾಂತರ್ಗಾಮಿ ನೌಕೆ.

gurdwara

ನಾಮವಾಚಕ

ಗುರುದ್ವಾರ; ಸಿಖ್ಖರ ದೇವಸ್ಥಾನ.

gurgitation

ನಾಮವಾಚಕ

  • ಉಕ್ಕೇರುವುದು; ಅಲೆಯಲೆಯಾಗಿ-ತೊನೆದಾಟ, ಹೊಯ್ದಾಟ: the gurgitation of the waves ಅಲೆಗಳು ಉಕ್ಕೇರುವುದು.
  • ಉಕ್ಕೇರುವ ಯಾ ಬುಳಬುಳ ಕುದಿತ ಯಾ ಅದರ ಶಬ್ದ.

gurgle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಗುಳುಗುಳಿಸುತ್ತಾ ಹೇಳು: the woman gurgled her greetings ಮಹಿಳೆಯು ಅವಳ ವಂದನೆಗಳನ್ನು ಗುಳುಗುಳಿಸುತ್ತಾ ಹೇಳಿದಳು. (ಸೀಸೆಯಿಂದ ನೀರು ಸುರಿಯುವಾಗ, ಕಲ್ಲುಗಳ ಮಧ್ಯೆ ನೀರು ಹರಿಯುವಾಗ) ಗುಳುಗುಳಿಸು; ಜುಳು ಜುಳಿಸು; ಜುಳಜುಳ, ಗುಳಗುಳ – ಶಬ್ದ ಮಾಡು: he sent the wine gurgling down his throat ಅವನು ಗಂಟಲಿನಲ್ಲಿ ಗುಳುಗುಳು ಸದ್ದು ಮಾಡುತ್ತಾ ಮದ್ಯವನ್ನು ಕುಡಿದನು.

gurgle

ನಾಮವಾಚಕ

ಜುಳುಜುಳು; ಗುಳುಗುಳು ಸದ್ದು.

gurjun

ನಾಮವಾಚಕ

ಗರ್ಜನ್‍ ಮರ; ಔಷಧಿಯಾಗಿ ಯಾ ವಾರ್ನಿಷ್‍ ತಯಾರಿಕೆಯಲ್ಲಿ ಗುಗ್ಗುಲ ದ್ರವ ಯಾ ಎಣ್ಣೆಯನ್ನು ಕೊಡುವ, ಡಿಪ್ಟರೊಕಾರ್ಪಸ್‍ ಕುಲಕ್ಕೆ ಸೇರಿದ, ಪೂರ್ವ ಇಂಡಿಯಾದ ಮರ.

gurjun balsam

ನಾಮವಾಚಕ

ಗರ್ಜನ್‍ (ಮರದ) ಗುಗ್ಗುಲ.

gurk

ಕ್ರಿಯಾಪದ

(ಆಡುಮಾತು) = $^1$belch.

gurk

ನಾಮವಾಚಕ

(ಆಡುಮಾತು) = $^2$belch.

Gurkha

ನಾಮವಾಚಕ

ಗೂರ್ಖ; ನೇಪಾಲದ ಹಿಂದೂ ರಾಜವಂಶಕ್ಕೆ ಸೇರಿದವನು.

gurnard

ನಾಮವಾಚಕ

ಗರ್ನರ್ಡ್‍; ಮುಳ್ಳುಗಳಿಂದ ಕೂಡಿದ ಉದ್ದನೆಯ ಮೂತಿಯಿರುವ, ಟ್ರಿಗ್ಲಿಡೇ ವಂಶಕ್ಕೆ ಸೇರಿದ, ಒಂದು ಕಡಲ ಈನು.

gurnet

ನಾಮವಾಚಕ

= gurnard.

guru

ನಾಮವಾಚಕ

  • ಗುರು; ಆಚಾರ್ಯ; ಹಿಂದೂಗಳ ಆಧ್ಯಾತ್ಮಿಕ ಗುರು ಯಾ ಧಾರ್ಮಿಕ ಪಂಥದ ಮುಖಂಡ.
  • ಗುರು; ಪ್ರಭಾವಶಾಲಿಯಾದ – ಉಪದೇಶಕ, ಬೋಧಕ.
  • ಗುರು; ಭಕ್ತಿ ಗೌರವಗಳಿಂದ ಪುರಸ್ಕೃತನಾದ ಸಲಹೆಗಾರ, ಬುದ್ಧಿ ಹೇಳುವವ.

gush

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ನೀರನ್ನು) ಹಠಾತ್ತನೆ ಯಾ ಯಥೇಚ್ಛವಾಗಿ ಹರಿಸು, ಹೊರಡಿಸು, ಚಿಮ್ಮಿಸು, ಸುರಿಸು (ಮಾತು, ಅನುಕಂಪ, ಮೊದಲಾದವುಗಳ ವಿಷಯದಲ್ಲಿರೂಪಕವಾಗಿಸಹ): the broken pipe gushed a stream of water ಮುರಿದ ಕೊಳವೆ ನೀರಿನ ಹೊಳೆಯನ್ನು ಹರಿಸಿತು.

  • (ಥಟ್ಟನೆ ಯಾ ತುಂಬು ಪ್ರವಾಹದಂತೆ) ನುಗ್ಗು; ಹರಿ; ಸುರಿ; ಚಿಮ್ಮು; ಹೊರಡು (ಅನೇಕ ವೇಳೆ ಭಾಷಣ, ಕರುಣೆ, ಪ್ರೀತಿ, ಮೊದಲಾದವುಗಳ ವಿಷಯದಲ್ಲಿರೂಪಕವಾಗಿ): the blood gushed from the wound ಗಾಯದಿಂದ ರಕ್ತ ಚಿಮ್ಮಿತು.
  • ಉಕ್ಕಿ ಹರಿಯುವಂತೆ, ಭಾವಗದ್ಗದತೆಯ ಸೋಗಿನಿಂದ ಮಾತನಾಡು, ವರ್ತಿಸು: girls who gush over film stars ಸಿನಿಮಾ ನಟರ ಬಗ್ಗೆ ಉಕ್ಕಿ ಹರಿಯುವಂತೆ, ಅತ್ಯುತ್ಸಾಹದಿಂದ ಮಾತನಾಡುವ ಹುಡುಗಿಯರು.

gush

ನಾಮವಾಚಕ

  • ಪ್ರವಾಹ; ಸುರಿತ; ಹರಿವು; ಚಿಮ್ಮುಗೆ.
  • (ದ್ರವದ) ಥಟ್ಟನೆಯ ಯಾ ಯಥೇಷ್ಟ – ವಿಸರ್ಜನೆ, ಹೊರಚೆಲ್ಲಿಕೆ.
  • ಹಾಗೆ ವಿಸರ್ಜಿಸಲ್ಪಟ್ಟ ದ್ರವದ ಪರಿಣಾಮ.
  • (ರೂಪಕವಾಗಿ) ಚಿಮ್ಮುಗೆ; ಥಟ್ಟನೆಯ ಹೊರಹೊಮ್ಮಿಕೆ.
  • (ಆಡುಮಾತು) ಭಾವನೆಯ ಉಕ್ಕೇರಿಕೆ; ಭಾವೋದ್ವೇಗದ ಪ್ರದರ್ಶನ.

Search Dictionaries

Loading Results

Follow Us :   
  Download Bharatavani App
  Bharatavani Windows App