भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gusher

ನಾಮವಾಚಕ

  • ಉಕ್ಕೇರುವ ವ್ಯಕ್ತಿ ಯಾ ವಸ್ತು; ಉಕ್ಕಿಹರಿಯುವಂತೆ, ಭಾವಗದ್ಗದತೆಯಿಂದ – ಮಾತನಾಡುವವ, ವರ್ತಿಸುವವ.
  • ಎಣ್ಣೆಬುಗ್ಗೆ; ತೈಲಬುಗ್ಗೆ; ಪಂಪುಮಾಡದೆ ತೈಲ ತಾನೇತಾನಾಗಿ ಚಿಮ್ಮುವ ಎಣ್ಣೆ ಬಾವಿ.

gushing

ಗುಣವಾಚಕ

  • (ತುಂಬುಪ್ರವಾಹದಂತೆ) ನುಗ್ಗುವ; ಹರಿಯುವ; ಸುರಿಯುವ; ಚಿಮ್ಮುವ: gushing fountains ಚಿಮ್ಮುವ ಬುಗ್ಗೆಗಳು.
  • (ದ್ರವವನ್ನು) ಯಥೇಚ್ಛವಾಗಿ – ಹರಿಸುವ, ಹೊರಡಿಸುವ, ಚಿಮ್ಮಿಸುವ, ಸುರಿಸುವ: gushing eyes ಕಣ್ಣೀರು ಸುರಿಸುವ ಕಣ್ಣುಗಳು.
  • (ರೂಪಕವಾಗಿ) ಉಕ್ಕೇರುವ; ತುಂಬಿ ಹರಿಯುವ; ಭಾವಾವೇಗವನ್ನು ಪ್ರದರ್ಶಿಸುವ.
  • ಯಥೇಚ್ಛವಾದ; ತುಂಬಿ ತುಳುಕುವ.

gushingly

ಕ್ರಿಯಾವಿಶೇಷಣ

  • (ತುಂಬು ಪ್ರವಾಹ) ನುಗ್ಗುವಂತೆ; ಹರಿಯುವಂತೆ; ಸುರಿಯುವಂತೆ; ಚಿಮ್ಮುವಂತೆ.
  • (ರೂಪಕವಾಗಿ) ಉಕ್ಕೇರುವಂತೆ; ತುಂಬಿ ಹರಿಯುವಂತೆ; ಭಾವಾವೇಗವನ್ನು ಪ್ರದರ್ಶಿಸುವಂತೆ.
  • ಯಥೇಚ್ಛವಾಗಿ; ತುಂಬಿ ತುಳುಕುವಂತೆ.

gushy

ಗುಣವಾಚಕ

ಉಕ್ಕಿಹರಿಯುವಂತೆ ಅತಿಯಾಗಿ – ಮಾತನಾಡುವ, ವರ್ತಿಸುವ; ಉಕ್ಕಿ ಹರಿಯುವ ಮಾತು, ವರ್ತನೆ, ಮೊದಲಾದ ಲಕ್ಷಣವುಳ್ಳ: gushy poetry (ಭಾವಾತಿರೇಕದಿಂದ, ಶಬ್ದಬಾಹುಳ್ಯದಿಂದ) ಉಕ್ಕಿ ಹರಿಯುವ ಕಾವ್ಯ; ಅತಿಭಾವುಕ ಕಾವ್ಯ.

gusset

ನಾಮವಾಚಕ

  • ಮೂಲೆಪಟ್ಟಿ; ಉಡುಪಿನ ಯಾವುದಾದರೂ ಭಾಗವನ್ನು ಬಲಗೊಳಿಸಲು ಯಾ ಹಿಗ್ಗಿಸಲು ಅದರೊಳಗಿಡುವ ಪಟ್ಟಿ. Figure: gussets-1
  • (ಕಟ್ಟಡದ ಕೋನಭಾಗವನ್ನು ಬಲಪಡಿಸಲು ಹಾಕುವ) ಕಬ್ಬಿಣದ ಮೂಲೆಕಟ್ಟು.

gusseted

ಗುಣವಾಚಕ

  • ಮೂಲೆಪಟ್ಟಿ ಯಾ ಪಟ್ಟಿಗಳು – ಉಳ್ಳ.
  • ಕಬ್ಬಿಣದ – ಮೂಲೆಕಟ್ಟು ಯಾ ಕಟ್ಟುಗಳು ಉಳ್ಳ.

gussy

ಸಕರ್ಮಕ ಕ್ರಿಯಾಪದ

(ಅಶಿಷ್ಟ) ನೀಟಾದ ಉಡಿಗೆತೊಡಿಗೆ ಹಾಕಿಕೊ; ಠಾಕುಠೀಕಾಗು.

gust

ನಾಮವಾಚಕ

  • ಹೊಯ್ಗಾಳಿ; ನುಗ್ಗುಗಾಳಿ; ಥಟ್ಟನೆ ಬಿರುಸಿನಿಂದ ನುಗ್ಗುವ ಗಾಳಿ.
  • (ಮಳೆ, ಬೆಂಕಿ, ಶಬ್ದ ಯಾ ಭಾವೋದ್ರೇಕಗಳ) ಹೊಡೆತ; ಜಡಿತ; ಸ್ಫೋಟ; ರಭಸದ ಹೊಮ್ಮಿಕೆ; ಉದ್ರೇಕ; ಉದ್ವೇಗ: unruly gusts of passion ಹದ್ದು ಮೀರಿದ ರಾಗೋದ್ರೇಕಗಳು.

gust

ಅಕರ್ಮಕ ಕ್ರಿಯಾಪದ

  • (ಗಾಳಿಯ ವಿಷಯದಲ್ಲಿ) ಥಟ್ಟನೆ ಬಿರುಸಾಗಿ – ಬೀಸು, ನುಗ್ಗು.
  • (ಮಳೆ, ಬೆಂಕಿ, ಶಬ್ದ, ರಾಗಭಾವಗಳ ವಿಷಯದಲ್ಲಿ) ಹೊಡಿ; ಸ್ಫೋಟಿಸು; ರಭಸವಾಗಿ – ಹೊಮ್ಮು, ಕೆರಳು, ಉದ್ರೇಕಗೊಳ್ಳು: pride gusts up again ಗರ್ವ ಮತ್ತೆ ಕೆರಳುತ್ತದೆ.

gust

ನಾಮವಾಚಕ

(ಪ್ರಾಚೀನ ಪ್ರಯೋಗಯಾ ಕಾವ್ಯಪ್ರಯೋಗ)

  • ರಸನೇಂದ್ರಿಯ; ಆಸ್ವಾದನಶಕ್ತಿ.
  • ವಿಶೇಷ ರುಚಿ; ಅಭಿರುಚಿ; ವಿಶಿಷ್ಟಾಭಿರುಚಿ; ಇಷ್ಟ(ವಾದ) ರುಚಿ: have a gust of ಇಷ್ಟಪಡು; ಮೆಚ್ಚು. gust of the things of the world ಪ್ರಾಪಂಚಿಕ ವಸ್ತುಗಳಲ್ಲಿ ವಿಶೇಷ ಅಭಿರುಚಿ.
  • ರುಚಿ; ಸವಿ; ರಸ.

gustation

ನಾಮವಾಚಕ

  • ರುಚಿನೋಡುವುದು; ರುಚಿಗ್ರಹಣ; ಆಸ್ವಾದನೆ.
  • ರುಚಿ(ಗ್ರಹಣ) ಶಕ್ತಿ; ಆಸ್ವಾದನಶಕ್ತಿ.

gustative

ಗುಣವಾಚಕ

  • ರುಚಿಗ್ರಾಹಕ; ರುಚಿ ಗ್ರಹಿಸುವ; ರುಚಿನೋಡುವ.
  • ರುಚಿ ಸಂಬಂಧಿ; ರುಚಿನೋಡುವುದಕ್ಕೆ, ರುಚಿಗ್ರಹಣಕ್ಕೆ – ಸಂಬಂಧಿಸಿದ.

gustatory

ಗುಣವಾಚಕ

ರುಚಿಸಂಬಂಧಿ; ರುಚಿಗ್ರಹಣಕ್ಕೆ ಯಾ ರಸನೇಂದ್ರಿಯಕ್ಕೆ ಸಂಬಂಧಿಸಿದ: gustatory nerve ರುಚಿ ನರ; ರುಚಿಗ್ರಾಹಕ ನರ; ನಾಲಿಗೆಯಲ್ಲಿರುವ, ರುಚಿಯನ್ನು ಗ್ರಹಿಸುವ ನರ.

gustily

ಕ್ರಿಯಾವಿಶೇಷಣ

  • (ಗಾಳಿ, ಮಳೆ, ಬಿರುಗಾಳಿ, ಮೊದಲಾದವು) ಬಿರುಸಾಗಿ ಬೀಸುವಂತೆ; ಥಟ್ಟನೆ ಬರುವ ಹಾಗೆ.
  • (ಗಾಳಿ, ಮಳೆ, ಮೊದಲಾದವುಗಳ) ಥಟ್ಟನೆಯ ಹೊಡೆತದಂತೆ; ಬಿರುಸು ಬೀಸಿನ ರೀತಿಯಲ್ಲಿ.
  • (ಶಬ್ದ, ನಗು, ಮೊದಲಾದವು) ಥಟ್ಟನೆ ಸ್ಫೋಟಿಸುವಂತೆ; ಫಕ್ಕನೆ ಬಿರಿಯುವಂತೆ.
  • ನಿರರ್ಥಕ ಮಾತಿನಿಂದ ಕೂಡಿದಂತೆ; ಪೊಳ್ಳು ಮಾತಿನಿಂದ; ಸೋಗುಮಾತಿನಲ್ಲಿ.
  • ಹುರುಪಿನಿಂದ; ಉತ್ಸಾಹದಿಂದ; ಖುಷಿಯಾಗಿ; ಉಲ್ಲಾಸದಿಂದ; ಉತ್ಸಾಹಪೂರ್ಣವಾಗಿ; ಉಲ್ಲಾಸಭರಿತವಾಗಿ.

gustiness

ನಾಮವಾಚಕ

  • (ಗಾಳಿ, ಮಳೆ, ಮೊದಲಾದವುಗಳ) ಬಿರುಸಾದ ಬೀಸು.
  • (ಶಬ್ದ, ನಗು, ಮೊದಲಾದವುಗಳು) ಥಟ್ಟನೆ ಸ್ಫೋಟಿಸುವಿಕೆ.
  • (ಮಾತಿನ) ನಿರರ್ಥಕತೆ; ಪೊಳ್ಳು.
  • ಹುರುಪು; ಉತ್ಸಾಹ; ಉಲ್ಲಾಸ; ಖುಷಿ.

gusto

ನಾಮವಾಚಕ

  • (ಪ್ರಾಚೀನ ಪ್ರಯೋಗ) ರಸ; ರುಚಿ; ಆಸ್ವಾದನೆ; ರಸಾಸ್ವಾದ: enjoy the full gusto of ಪೂರ್ಣರುಚಿಯನ್ನು, ರಸವನ್ನು ಸವಿ.
  • ಉತ್ಸಾಹ; ಹುಮ್ಮಸ್ಸು; ಉಮೇದು; ಖುಷಿ: he describes the adventure with enormous gusto ಅವನು ಸಾಹಸವನ್ನು ಅತ್ಯುತ್ಸಾಹದಿಂದ ವರ್ಣಿಸುತ್ತಾನೆ.
  • ಕಲಾಕೌಶಲ; ಕೃತಿಯನ್ನು ರಚಿಸುವ ಶೈಲಿ, ರೀತಿ.
  • (ವೈಯಕ್ತಿಕ) ಅಭಿರುಚಿ; ರುಚಿ; ಒಲವು.

gusty

ಗುಣವಾಚಕ

  • (ಗಾಳಿ, ಮಳೆ, ಬಿರುಗಾಳಿ, ಮೊದಲಾದವುಗಳಂತೆ) ಬಿರುಸಾಗಿ ಬೀಸುವ; ಥಟ್ಟನೆ ಬರುವ.
  • (ಗಾಳಿ, ಮಳೆ, ಮೊದಲಾದವುಗಳ) ಥಟ್ಟನೆಯ ಹೊಡೆತದ; ಬಿರುಸು ಬೀಸಿನ: a gusty day ಬಿರುಸು ಗಾಳಿಯ ದಿನ.
  • (ಶಬ್ದ, ನಗು, ಮೊದಲಾದವುಗಳು) ಥಟ್ಟನೆ ಸ್ಫೋಟಿಸುವ; ಫಕ್ಕನೆ ಬಿರಿಯುವ.
  • ನಿರರ್ಥಕ ಮಾತಿನಿಂದ ಕೂಡಿದ; ಪೊಳ್ಳುಮಾತಿನ; ಸೋಗುಮಾತಿನಿಂದ ತುಂಬಿದ: an evening of gusty speech making ನಿರರ್ಥಕ ಭಾಷಣ ಮಾಡುವುದರಲ್ಲಿ ಕಳೆದ ಸಂಜೆ.
  • ಹುರುಪಿನ; ಉಲ್ಲಾಸದ; ಉಮೇದಿನ; ಖುಷಿಯಾದ; ಉತ್ಸಾಹಭರಿತ: a gusty woman ಹುರುಪಿನ ಹೆಂಗಸು.

gut

ನಾಮವಾಚಕ

ನುಡಿಗಟ್ಟು

  • (ಬಹುವಚನದಲ್ಲಿ) (ಮುಖ್ಯವಾಗಿ ಪ್ರಾಣಿಗಳ) ಕರುಳು; ಅಂತ್ರ.
  • (ಯಾವುದೇ ವಸ್ತುವಿನ) ಒಳಭಾಗ; ಅಂತರ್ಭಾಗ; ಒಳಗಿರುವುದು.
  • ಕರುಳು; ಅಂತ್ರ; ಕೆಳ ಅನ್ನನಾಳದ ನಿರ್ದಿಷ್ಟ ಭಾಗ.
  • (ಬಹುವಚನದಲ್ಲಿ) (ಅಸಂಸ್ಕೃತ) (ಹಸಿವಿನ ಸ್ಥಾನವಾದ) ಹೊಟ್ಟೆ: gave the man a poke in the guts ಆ ಮನುಷ್ಯನ ಹೊಟ್ಟೆ ತಿವಿದೆ.
  • (ಬಹುವಚನದಲ್ಲಿ) (ಆಡುಮಾತು) ಕೆಚ್ಚು; ಧೈರ್ಯ; ಶೀಲಶಕ್ತಿ; ಚಾರಿತ್ರ್ಯಬಲ; ಸತ್ತ್ವ; ಧೃತಿ; ಸಹನ ಶಕ್ತಿ; ತಾಕತ್ತು; ದಾರ್ಢ್ಯ; ದಮ್ಮು: he alone has the guts to grapple with the enemy ಶತ್ರುವಿನೊಡನೆ ಮಲ್ಲಾಮಲ್ಲಿಯಾಗಿ ಹೋರಾಡುವ ಕೆಚ್ಚು ಅವನಿಗೆ ಮಾತ್ರ ಇದೆ.
  • (ಪ್ರಾಣಿಗಳ ಕರುಳಿನಿಂದ ಮಾಡಿದ, ಪಿಟೀಲು ತಂತಿ, ಬ್ಯಾಟಿನ ಹುರಿ ಯಾ ಶಸ್ತ್ರಚಿಕಿತ್ಸೆಯಲ್ಲಿ ಹೊಲಿಯುವ ಹುರಿಗಾಗಿ ಬಳಸುವ) ಕರುಳು – ಹುರಿ, ನರ, ತಂತಿ, ತಂತು.
  • (ರೇಷ್ಮೆಹುಳುಗಳ ಕರುಳಿನಿಂದ ಮಾಡಿದ) ಈನುಗಾಳದ ಹುರಿ.
  • ಜಲಸಂಧಿ; ಜಲಕಂಠ; ಸಮುದ್ರ, ಸರೋವರ, ಮೊದಲಾದ ಎರಡು ಜಲರಾಶಿಗಳನ್ನು ಕೂಡಿಸುವ ಇಕ್ಕಟ್ಟಾದ ಜಲಮಾರ್ಗ.
  • (ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ಗಳಲ್ಲಿ) ದೋಣಿಪಂದ್ಯ ಮಾರ್ಗದಲ್ಲಿ ನದಿಗಳ ತಿರುವು.
  • ಕಣಿವೆ; ಇಕ್ಕಟ್ಟು ಹಾದಿ.
  • (ಬೀದಿಯ) ಓಣಿ; ಕಿರುಸಂದಿ; ಚಿಕ್ಕ ಗಲ್ಲಿ.

gut

ಗುಣವಾಚಕ

  • ಮೂಲಭೂತವಾದ: a gut issue ಮೂಲಭೂತವಾದ ವಿಷಯ.
  • ನೈಸರ್ಗಿಕವಾದ; ಸ್ವಾಭಾವಿಕವಾದ; ಪ್ರಕೃತಿಸಹಜವಾದ: a gut reaction ಪ್ರಕೃತಿಸಹಜವಾದ ಯಾ ಸ್ವಾಭಾವಿಕವಾದ ಪ್ರತಿಕ್ರಿಯೆ.

gut

ಸಕರ್ಮಕ ಕ್ರಿಯಾಪದ

  • (ಈನಿನ) ಕರುಳು ತೆಗೆ.
  • (ಮುಖ್ಯವಾಗಿ ಬೆಂಕಿಯಿಂದ) (ಮನೆ ಮೊದಲಾದವುಗಳ) ಒಳಜೋಡಣೆಗಳನ್ನು ಕಿತ್ತುಹಾಕು, ತೆಗೆದುಹಾಕು, ನಾಶಮಾಡು: fire gutted the building ಬೆಂಕಿಯು ಕಟ್ಟಡದ ಒಳಭಾಗವನ್ನೆಲ್ಲಾ ನಾಶಮಾಡಿತು.
  • (ಗ್ರಂಥ ಮೊದಲಾದವುಗಳ) ಸಾರ ಗ್ರಹಿಸು; ತಿರುಳು – ಹಿಡಿ, ತೆಗೆ: I am pleased when I see my books well gutted ನನ್ನ ಗ್ರಂಥಗಳ ಸಾರವತ್ತಾದ ಭಾಗಗಳ ಆಯ್ಕೆಯನ್ನು ನೋಡಿದಾಗ ನನಗೆ ಸಂತೋಷವಾಗುವುದು.

Search Dictionaries

Loading Results

Follow Us :   
  Download Bharatavani App
  Bharatavani Windows App