भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gutless

ಗುಣವಾಚಕ

(ಆಡುಮಾತು)

  • ದಮ್ಮಿಲ್ಲದ; ಧೈರ್ಯವಿಲ್ಲದ; ಶಕ್ತಿಯಿಲ್ಲದ.
  • ದೃಢಸಂಕಲ್ಪವಿಲ್ಲದ.

gutser

ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍) (ಆಡುಮಾತು) ಜೋರಾಗಿ, ಸಖತ್ತಾಗಿ – ಬೀಳುವುದು; ಭಾರಿ ಪತನ.

gutsily

ಕ್ರಿಯಾವಿಶೇಷಣ

  • ಹೊಟ್ಟೆಬಾಕತನದಿಂದ; ದುರಾಶೆಯಿಂದ.
  • ಕೆಚ್ಚಿನಿಂದ; ಧೈರ್ಯದಿಂದ.

gutsiness

ನಾಮವಾಚಕ

  • ಹೊಟ್ಟೆಬಾಕತನ; ದುರಾಶೆ.
  • ಧೈರ್ಯ; ಕೆಚ್ಚು.

gutsy

ಗುಣವಾಚಕ

(ಆಡುಮಾತು)

  • ದುರಾಶೆಯ; ಹೊಟ್ಟೆಬಾಕತನದ.
  • ಧೈರ್ಯದ; ಕೆಚ್ಚಿನ.

gutta-percha

ನಾಮವಾಚಕ

ಪರ್ಚ ವೃಕ್ಷದ ಗೋಂದು; ಗಟಪರ್ಚ; ಮಲಯ ದ್ವೀಪಗಳಲ್ಲಿಯ ಹಲವು ಬಗೆಯ ಮರಗಳಿಂದ ರಸವಾಗಿ ಸ್ರವಿಸುವ, ಬೂದುಬಣ್ಣದ ಅಂಟು.

guttae

ನಾಮವಾಚಕ

(ಬಹುವಚನ) ಲೋಲಕಮಾಲೆ; ಸಾಲುಲೋಲಕ; ಲೋಲಕಪಂಕ್ತಿ; ಮುಖ್ಯವಾಗಿ ಡೋರಿಕ್‍ ವಾಸ್ತುಶಿಲ್ಪದಲ್ಲಿ, ಅಲಂಕಾರದ ಲೋಲಕಗಳ ಸಾಲು.

guttate

ಗುಣವಾಚಕ

(ಜೀವವಿಜ್ಞಾನ) ಮಚ್ಚೆಮಚ್ಚೆಯಾಗಿರುವ; ಚುಕ್ಕೆಚುಕ್ಕೆಯಾಗಿರುವ; ಬೊಟ್ಟು ಬೊಟ್ಟಾಗಿರುವ.

gutter

ನಾಮವಾಚಕ

ನುಡಿಗಟ್ಟು

  • (ವಿರಳ ಪ್ರಯೋಗ) ತೋಡು; ನೀರು ದಾರಿ; ನೀರಿನ ಜಾಡು; ಹರಿಯುವ ನೀರಿನಿಂದಾದ ಜಾಡು.
  • ಸೂರುಬಾನೆ; ಸೂರು ದೋಣಿ; ಮಳೆಯ ನೀರು ಹರಿದು ಹೋಗುವಂತೆ ಸೂರಿನ ಕೆಳಗಿಟ್ಟಿರುವ ಮರಿಗೆ.
  • ಚರಂಡಿ; ಮೋರಿ; ಗಟಾರ; ರಸ್ತೆಯ ಬದಿಯಲ್ಲಿರುವ ಕಾಲುವೆ.
  • ಕಾಲುವೆ; ತೂಬು; ದ್ರವ ಹರಿದುಹೋಗುವುದಕ್ಕಾಗಿ ಮಾಡಿರುವ ತೆರೆದ ನಾಲೆ.
  • ಗಾಡಿ; ಚಡಿ; ತೋಡು.
  • (ಪುಸ್ತಕಗಳಲ್ಲಿನ) ಎರಡು ಎದುರು ಬದುರು ಪುಟಗಳ ನಡುವೆ ಇರುವ ಮಾರ್ಜಿನ್‍ಗಳ ಜಾಗ.
  • ಹಲ್ಕಾ – ಕೊಂಪೆ, ಗುಂಡಿ; ಚರಂಡಿ; ಗಟಾರ; ಕೊಳಚೆ, ಅನೈತಿಕತೆ, ಅಪರಾಧ ಮೊದಲಾದ ಅಯೋಗ್ಯ ಬದುಕಿನ ಯಾ ನಡತೆಯ ಸ್ಥಿತಿ ಯಾ ಆವಾಸ: the language of the gutter ಗಟಾರದ ಭಾಷೆ; ಹಲ್ಕಾಮಾತು.

gutter

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ನೀರಿನ ಹರಿವಿನಿಂದ) ಕಾಲುವೆ ತೋಡು; ಚರಂಡಿ ತೆಗೆ; ಮೋರಿ ಮಾಡು: a heavy rain guttering the field ಹೊಲದಲ್ಲಿ ಕಾಲುವೆ ಮಾಡುವಂಥ ಭಾರಿ ಮಳೆ.
  • ಚರಂಡಿ, ಮೋರಿ – ಒದಗಿಸು.
  • (ಕಣ್ಣೀರು ಮೊದಲಾದವುಗಳ ವಿಷಯದಲ್ಲಿ) ಗೆರೆ (ಗುರುತು) ಮಾಡು.

gutter journalism

ನಾಮವಾಚಕ

(ಕೀಳು ಅಭಿರುಚಿಯ) ಗಟಾರ ಪತ್ರಿಕೋದ್ಯಮ; ಕೊಚ್ಚೆ, ರೊಚ್ಚು – ಪತ್ರಿಕೋದ್ಯಮ.

gutter press

ನಾಮವಾಚಕ

(ಕೀಳು ಯಾ ತುಚ್ಛ ಅಭಿರುಚಿಯನ್ನು ತೃಪ್ತಿಪಡಿಸುವ) ಗಟಾರ ಪತ್ರಿಕೆಗಳು; ರೊಚ್ಚು, ಕೊಚ್ಚೆ – ಪತ್ರಿಕೆಗಳು.

gutter-child

ನಾಮವಾಚಕ

ಮೋರಿಮಗು; ಗಟಾರದ ಶಿಶು; ಚರಂಡಿಕೂಸು:

  • ಭಿಕಾರಿ ಮಗು; ದಿಕ್ಕಿಲ್ಲದ ಮಗು; ಚರಂಡಿಗಳಲ್ಲೇ ಸುಳಿದಾಡುವ ಮಗು.
  • ಕೀಳು ಹುಟ್ಟಿನ ಯಾ ಕೀಳು ಶಿಕ್ಷಣದ ಮಗು.

guttering

ಗುಣವಾಚಕ

  • ಮೋರಿ ಮಾಡುವಿಕೆ; ಹಳ್ಳತೋಡಿ ಕಾಲುವೆ ಮಾಡುವಿಕೆ.
  • ಮೋರಿ; ಚರಂಡಿ.
  • ಗಾಡಿ ತೋಡುವಿಕೆ; ಗೆರೆ ಮಾಡುವಿಕೆ.
  • ಮೋಂಬತ್ತಿಯಿಂದ ಕರಗಿ ಬಿದ್ದ ಮೇಣ.

guttersnipe

ನಾಮವಾಚಕ

ಬೀದಿಮಗು; ಭಿಕಾರಿಮಗು; ದಿಕ್ಕಿಲ್ಲದೆ, ಮನೆಮಠ ಇಲ್ಲದೆ ಬೀದಿಗಳಲ್ಲಿ ಅಲೆದುಕೊಂಡಿರುವ ಹುಡುಗ.

guttle

ಸಕರ್ಮಕ ಕ್ರಿಯಾಪದ

ಮುಕ್ಕು; ಹೊಟ್ಟೆಬಾಕನಂತೆ ತಿನ್ನು ( ಅಕರ್ಮಕ ಕ್ರಿಯಾಪದ ಸಹ).

guttler

ನಾಮವಾಚಕ

ಹೊಟ್ಟೆಬಾಕ; ತೀನಾಳಿ; ತಿಂಡಿ ಪೋತ.

guttural

ಗುಣವಾಚಕ

  • ಗಂಟಲಿನ.
  • (ಧ್ವನಿಯ ವಿಷಯದಲ್ಲಿ) ಕಂಠ್ಯ; ಗಂಟಲಿನಲ್ಲಿ ಯಾ ನಾಲಗೆಯ ಹಿಂಭಾಗ ಮತ್ತು ತಾಲುವಿನಿಂದ ಹುಟ್ಟುವ.

guttural

ನಾಮವಾಚಕ

ಕಂಠ್ಯ(ವರ್ಣ); ಕಂಠ್ಯ ಧ್ವನಿ; ಗಂಟಲಿನಲ್ಲಿ ಯಾ ನಾಲಿಗೆಯ ಹಿಂಭಾಗ ಮತ್ತು ತಾಲುವಿನಿಂದ ಹುಟ್ಟುವ ವರ್ಣ ಯಾ ಧ್ವನಿ, ಉದಾಹರಣೆಗೆ : ಕ, ಗ.

gutturalism

ನಾಮವಾಚಕ

(ಧ್ವನಿಯ ವಿಷಯದಲ್ಲಿ) ಕಂಠ್ಯತೆ; ಕಂಠ್ಯ ಗುಣ, ಲಕ್ಷಣ.

Search Dictionaries

Loading Results

Follow Us :   
  Download Bharatavani App
  Bharatavani Windows App