भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gymnasium

ನಾಮವಾಚಕ

  • ವ್ಯಾಯಾಮಶಾಲೆ; ಗರಡಿ(ಮನೆ); ಅಂಗಸಾಧನೆ ಗೃಹ; ತಾಲೀಮುಖಾನೆ.
  • (ಉಚ್ಚಾರಣೆ ಜಿಮ್ನಾಸಿಉಮ್‍ ಸಹ.) ಉಚ್ಚಶಿಕ್ಷಣ ತರಬೇತಿ ಶಾಲೆ; (ಯೂರೋಪಿನಲ್ಲಿ, ಮುಖ್ಯವಾಗಿ ಜರ್ಮನಿಯಲ್ಲಿ) ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡುವ ಮೇಲುದರ್ಜೆಯ ವಿದ್ಯಾಶಾಲೆ.

gymnast

ನಾಮವಾಚಕ

ಅಂಗಸಾಧಕ; ವ್ಯಾಯಾಮಪಟು; ಗರಡಿಸಾಧಕ; ಅಂಗಸಾಧನೆಯಲ್ಲಿ ಪ್ರವೀಣ.

gymnastic

ಗುಣವಾಚಕ

  • (ದೈಹಿಕ ಶಿಕ್ಷಣ, ಚಟುವಟಿಕೆ, ಶ್ರಮ, ಶಿಸ್ತು, ಮೊದಲಾದವುಗಳನ್ನೊಳಗೊಂಡ) ಅಂಗಸಾಧನೆಯ; ವ್ಯಾಯಾಮದ; ಕಸರತ್ತಿನ.
  • (ರೂಪಕವಾಗಿ) ಬುದ್ಧಿಸಾಧನೆಯ; ಬುದ್ಧಿ ಕಸರತ್ತಿನ; ಮಾನಸಿಕ ಶಿಕ್ಷಣ ಯಾ ತರಬೇತಿಯಿಂದ ಕೂಡಿದ.

gymnastic

ನಾಮವಾಚಕ

  • (ತರಬೇತಿಯ ಯಾ ಶಿಸ್ತಿನ ಕ್ರಮವೆಂದು ಪರಿಗಣಿಸುವ) ಶಿಕ್ಷಣ ಕ್ರಮ; ಸಾಧನೆ; ವ್ಯಾಯಾಮ; ಕಸರತ್ತು: grammar is a good gymnastic ವ್ಯಾಕರಣವು ಬುದ್ಧಿಗೆ ಒಳ್ಳೆಯ ಕಸರತ್ತು, ವ್ಯಾಯಾಮ.
  • ಅಂಗಸಾಧನೆಯ (ಒಂದು) ಸಾಹಸ.
  • ಅಂಗಸಾಧನೆ(ಯೆಂಬ ಒಂದು ಶಿಕ್ಷಣ ಕ್ರಮ).

gymnastically

ಕ್ರಿಯಾವಿಶೇಷಣ

(ಬುದ್ಧಿ ಯಾ ಅಂಗಕ್ಕೆ) ಸಾಧನೆಯಾಗಿ; ಕಸರತ್ತಿನಂತೆ

gymnastics

ನಾಮವಾಚಕ

(ಬಹುವಚನ) (ಕೆಲವೊಮ್ಮೆ ಏಕವಚನವಾಗಿ ಪ್ರಯೋಗ) (ಮಾಂಸಖಂಡಗಳನ್ನು ಬಲಿಸುವ, ಮುಖ್ಯವಾಗಿ ಗರಡಿ ಮನೆಯಲ್ಲಿ ಮಾಡುವಂಥ) ಅಂಗಸಾಧನೆಗಳು; ಕಸರತ್ತುಗಳು; ವ್ಯಾಯಾಮಗಳು.

gymno-

ಸಮಾಸ ಪೂರ್ವಪದ

(ಜೀವವಿಜ್ಞಾನ) ನಗ್ನ, ಹೊದಿಕೆಯಿಲ್ಲದ, ಅನಾಚ್ಛಾದಿತ, ಅನಾವೃತ ಎಂಬ ಅರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

gymnosophist

ನಾಮವಾಚಕ

  • (ಹಿಂದೂ) ಬತ್ತಲೆ ಸಂನ್ಯಾಸಿ; ನಗ್ನ ಸಂನ್ಯಾಸಿ; ದಿಗಂಬರ; ಅತ್ಯಲ್ಪ ಹೊದಿಕೆಯಿಂದಲೋ ಹೊದಿಕೆಯಿಲ್ಲದೆಯೋ ಸಂಚರಿಸುತ್ತ ಧ್ಯಾನಾಸಕ್ತನಾಗಿರುತ್ತಿದ್ದ, ಹಿಂದಿನ ಕಾಲದ, ಒಂದು ಹಿಂದೂ ಸಾಧು ಪಂಗಡದವನು.
  • ವಿರಕ್ತ; ಸಂನ್ಯಾಸಿ.
  • ಅನುಭಾವಿ.

gymnosophy

ನಾಮವಾಚಕ

ಬತ್ತಲೆ ಸಂನ್ಯಾಸಿ ಪಂಥ; ನಗ್ನಸಂನ್ಯಾಸಿ ಸಿದ್ಧಾಂತ.

gymnosperm

ನಾಮವಾಚಕ

(ಸಸ್ಯವಿಜ್ಞಾನ) ಜಿಮ್ನೋಸ್ಪರ್ಮ್‍; ಅನಾವೃತ ಬೀಜಿ; ಪ್ರಕಟಬೀಜಿ; ನಗ್ನಬೀಜಿ; ಬೀಜಕೋಶದೊಳಗಡೆ ಇರದೆ ಹೊರಗೆ ಪ್ರಕಟವಾಗಿರುವ ಬೀಜಗಳನ್ನು ಉತ್ಪತ್ತಿ ಮಾಡುವ ವರ್ಗದ ಸಸ್ಯ.

gymnospermous

ಗುಣವಾಚಕ

ನಗ್ನ ಬೀಜಿಯ; ಜಿಮ್ನೋಸ್ಪರ್ಮ್‍ಗೆ ಸಂಬಂಧಿಸಿದ; ಅನಾವೃತ ಬೀಜಗಳುಳ್ಳ.

gymp

ನಾಮವಾಚಕ

= 1gimp.

gymtunic

ನಾಮವಾಚಕ

ಜಿಮ್‍ ಉಡಿಗೆ; ಶಾಲೆಯ ಹುಡುಗಿಯರು ಹಾಕಿಕೊಳ್ಳುವ, ತೋಳಿಲ್ಲದ, ಮಂಡಿಯವರೆಗೆ ಬರುವ, ನಡುಪಟ್ಟಿಯುಳ್ಳ ಉಡಿಗೆ.

gyn-

ಸಮಾಸ ಪೂರ್ವಪದ

ಹೆಂಗಸು, ಹೆಣ್ಣು, ಸ್ತ್ರೀ ಎಂಬರ್ಥದ ಸಮಾಸ ಪೂರ್ವಪದ.

gynaeceum

ನಾಮವಾಚಕ

  • (ಗ್ರೀಕ್‍ ಮತ್ತು ರೋಮ್‍ ಪ್ರಾಚೀನ ಚರಿತ್ರೆ) ಅಂತಃಪುರ; ಜನಾನ; (ಮನೆಯಲ್ಲಿ) ಹೆಂಗಸರ ಕೋಣೆಗಳು.
  • (ಸಸ್ಯವಿಜ್ಞಾನ) = gynoecium.

gynaeco-

ಸಮಾಸ ಪೂರ್ವಪದ

ಹೆಂಗಸಿನ, ಹೆಂಗಸರ, ಸ್ತ್ರೀಯರ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

gynaecocracy

ನಾಮವಾಚಕ

ಹೆಣ್ಣಾಳ್ವಿಕೆ; ಸ್ತ್ರೀಪ್ರಭುತ್ವ; ಹೆಂಗಸರ ರಾಜ್ಯಭಾರ.

gynaecologic

ಗುಣವಾಚಕ

(ಅಮೆರಿಕನ್‍ ಪ್ರಯೋಗ) = gynaecological.

gynaecological

ಗುಣವಾಚಕ

ಸ್ತ್ರೀರೋಗಶಾಸ್ತ್ರೀಯ; ಸ್ತ್ರೀರೋಗಶಾಸ್ತ್ರದ.

gynaecologist

ನಾಮವಾಚಕ

ಸ್ತ್ರೀರೋಗಶಾಸ್ತ್ರಜ್ಞ; ಸ್ತ್ರೀರೋಗತಜ್ಞ(ಜ್ಞೆ); ಸ್ತ್ರೀರೋಗಶಾಸ್ತ್ರದಲ್ಲಿ ತಜ್ಞ(ಳು).

Search Dictionaries

Loading Results

Follow Us :   
  Download Bharatavani App
  Bharatavani Windows App