भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gypsous

ಗುಣವಾಚಕ

= gypseous.

gypsum

ನಾಮವಾಚಕ

ಜಿಪ್ಸಮ್‍; ಪ್ಲಾಸ್ಟರ್‍ ಆಹ್‍ ಪ್ಯಾರಿಸ್‍ ತಯಾರಿಸಲು ಬಳಸುವ, ಜಲೀಕೃತ ಕ್ಯಾಲ್ಸಿಯಮ್‍ ಸಲ್ಫೇಟ್‍ ಖನಿಜ, ${\rm CaSo}_4. 2{\rm H}_2{\rm O}$.

gypsy

ನಾಮವಾಚಕ

  • ಜಿಪ್ಸಿ; ಕೊರವ; ‘ರೋಮನಿ’ ಎಂದು ಕರೆದುಕೊಳ್ಳುವ, ಭಾರತದ ನೆಲೆಯವರಾಗಿದ್ದ, ಅಶುದ್ಧ ಹಿಂದೀ ಭಾಷೆಯನ್ನಾಡುವ, ಬುಟ್ಟಿ ಹೆಣಿಗೆ, ಕುದುರೆ ವ್ಯಾಪಾರ, ಕಣಿ ಹೇಳುವುದು, ಮೊದಲಾದ ಜೀವನೋಪಾಯಗಳುಳ್ಳ, ಒಂದೆಡೆ ನಿಲ್ಲದೆ ಅಲೆಯುತ್ತಿರುವ, ಕಪ್ಪು ಒಡಲೂ ಕೂದಲೂ ಉಳ್ಳ, ಒಂದು ಜನಾಂಗದವನು.
  • ಜಿಪ್ಸಿ; ಜಿಪ್ಸಿಗಳನ್ನು ಹೋಲುವವನು ಯಾ ಅವರಂತೆ ಜೀವನ ನಡೆಸುವವನು.
  • (ತಮಾಷೆಯಾಗಿ) ತಂಟೆಕೋರಿ ಹೆಂಗಸು ಯಾ ಶ್ಯಾಮಲ ವರ್ಣದ ಹೆಂಗಸು.

gypsy bonnet

ನಾಮವಾಚಕ

ಜಿಪ್ಸಿ ಟೋಪಿ; ಮುದುರು ಪಕ್ಕಪಟ್ಟಿಗಳುಳ್ಳ ಒಂದು ದೊಡ್ಡ ಟೋಪಿ.

gypsy moth

ನಾಮವಾಚಕ

ಜಿಪ್ಸಿ ಪತಂಗ; ಎಲೆಗಳಿಗೆ ತುಂಬ ಹಾನಿಕಾರಕವಾದ, ಗೊಂಚಲು ಕೂದಲಿರುವ ಒಂದು ಬಗೆಯ ಪತಂಗ.

gypsy rose

ನಾಮವಾಚಕ

ಜಿಪ್ಸಿಗುಲಾಬಿ; ಸ್ಕೇಬಿಯಸ್‍ ಕುಲಕ್ಕೆ ಸೇರಿದ ಒಂದು ಹೂಗಿಡ.

gypsy table

ನಾಮವಾಚಕ

ಜಿಪ್ಸಿಮೇಜು; ಮುಗ್ಗಾಲು ಮೇಜು; ಒಂದರ ಮೇಲೊಂದು ಹಾಯ್ದಿರುವ ಮೂರು ಕಾಲುಗಳ ಮೇಲೆ ನಿಂತಿರುವ, ಹಗುರವಾದ ದುಂಡುಮೇಜು.

gypsy’s warning

ನಾಮವಾಚಕ

ಜಿಪ್ಸಿ ಎಚ್ಚರಿಕೆ; ನಿಗೂಢವಾದ ಯಾ ಅನಿಷ್ಟದ ಎಚ್ಚರಿಕೆ.

gypsydom

ನಾಮವಾಚಕ

(ಸಾಮೂಹಿಕವಾಗಿ) ಜಿಪ್ಸಿ ಜಗತ್ತು; ಜಿಪ್ಸಿ ಲೋಕ; ಜಿಪ್ಸಿಗಳು.

gypsyfy

ಸಕರ್ಮಕ ಕ್ರಿಯಾಪದ

ಜಿಪ್ಸೀಕರಿಸು; ಲಕ್ಷಣದಲ್ಲಿ ಯಾ ಸ್ವಭಾವದಲ್ಲಿ ಜಿಪ್ಸಿಯಂತೆ ಮಾಡು.

gypsyhood

ನಾಮವಾಚಕ

ಜಿಪ್ಸಿತನ; ಜಿಪ್ಸಿಸ್ಥಿತಿ; ಜಿಪ್ಸಿಯಾಗಿರುವಿಕೆ.

gypsyish

ಗುಣವಾಚಕ

ಜಿಪ್ಸಿಯಂತಹ; ಜಿಪ್ಸಿ ಸದೃಶ; ಜಿಪ್ಸಿಯನ್ನು ಹೋಲುವ.

gypsyism

ನಾಮವಾಚಕ

ಜಿಪ್ಸಿಧರ್ಮ; ಜಿಪ್ಸಿಗಳ ಜೀವನಕ್ರಮ ಮತ್ತು ವೃತ್ತಿ ಯಾ ಉದ್ಯೋಗ.

gyrate

ಗುಣವಾಚಕ

(ಸಸ್ಯವಿಜ್ಞಾನ) ವಲಯಿತ; ಉಂಗುರುಂಗುರಗಳಾಗಿ, ಸುತ್ತುಸುತ್ತುಗಳಾಗಿ ವ್ಯವಸ್ಥೆಗೊಂಡಿರುವ.

gyrate

ಅಕರ್ಮಕ ಕ್ರಿಯಾಪದ

ಪರಿಭ್ರಮಿಸು; ಒಂದು ಬಿಂದುವಿನ ಸುತ್ತ ವೃತ್ತಾಕಾರವಾಗಿ ಯಾ ಅಕ್ಷದ ಸುತ್ತ ಸುರುಳಿಯಾಕಾರವಾಗಿ ಚಲಿಸು.

gyration

ನಾಮವಾಚಕ

ಪರಿಭ್ರಮಣೆ; ಒಂದು ಬಿಂದುವಿನ ಸುತ್ತ ವೃತ್ತಾಕಾರವಾಗಿ ಯಾ ಅಕ್ಷದ ಸುತ್ತ ಸುರುಳಿಯಾಕಾರವಾಗಿ ಚಲಿಸುವುದು.

gyratory

ಗುಣವಾಚಕ

ಪರಿಭ್ರಾಮಕ; ಪರಿಭ್ರಮಿಸುವ.

gyre

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕಾವ್ಯಪ್ರಯೋಗ) = 2gyrate.

gyre

ನಾಮವಾಚಕ

(ಮುಖ್ಯವಾಗಿ ಕಾವ್ಯಪ್ರಯೋಗ) = gyration.

gyrfalcon

ನಾಮವಾಚಕ

ಉತ್ತರವಲಯದ, ಹಾಲ್ಕೊರಸ್ಟಿಕಲಸ್‍ ಕುಲದ, ಒಂದು ದೊಡ್ಡ ಗಿಡುಗ, ಡೇಗೆ.

Search Dictionaries

Loading Results

Follow Us :   
  Download Bharatavani App
  Bharatavani Windows App