भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gyro

ನಾಮವಾಚಕ

(ಆಡುಮಾತು)

gyro-

ಸಮಾಸ ಪೂರ್ವಪದ

ಪರಿಭ್ರಮಣ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

gyrocompass

ನಾಮವಾಚಕ

ಜೈರೊಕಂಪಾಸು; ಜೈರೋದಿಕ್ಸೂಚಿ; ಭ್ರಾಮಕ ದಿಕ್ಸೂಚಿ; (ಎಡೆಬಿಡದೆ) ಸುತ್ತು(ತ್ತಿರು)ವ ಜೈರೋಸ್ಕೋಪು; ಒಂದರ ಭ್ರಮಣಚಕ್ರದ ಅಕ್ಷವು ಸದಾ ಭೂಮಿಯ ಮೇಲ್ಮೈಗೆ ಸಮಾಂತರವಾಗಿರುವಂತೆ ಅಳವಡಿಸಿ, ಅದರ ಸಹಾಯದಿಂದ ಭೌಗೋಳಿಕ ಉತ್ತರವನ್ನೂ, ಅದರಿಂದ ಇತರ ದಿಕ್ಕುಗಳನ್ನೂ ನಿರ್ಣಯಿಸುವ ಉಪಕರಣ.

gyrograph

ನಾಮವಾಚಕ

ಜೈರೋಗ್ರಾಹು; ಪರಿಭ್ರಮಣಲೇಖಿ; ಪರಿಭ್ರಮಣಗಳ ಸಂಖ್ಯೆಯನ್ನು ದಾಖಲಿಸುವ ಉಪಕರಣ.

gyromagnetic

ಗುಣವಾಚಕ

ಭ್ರಮಣಕಾಂತೀಯ; ಗಿರಕಿ ಹೊಡೆಯುತ್ತಿರುವ ವಿದ್ಯುತ್ಕಣದ ಕಾಂತೀಯ ಗುಣಲಕ್ಷಣಗಳ.

gyropilot

ನಾಮವಾಚಕ

ಜೈರೋಚಾಲಕ; ಸ್ವಯಂಚಾಲನೆಯಲ್ಲಿ ಬಳಸುವ ಜೈರೋ ದಿಕ್ಸೂಚಿ.

gyroplane

ನಾಮವಾಚಕ

ಭ್ರಮಣ ವಿಮಾನ; ಗಿರಿಗಟ್ಟೆ ವಿಮಾನ; ಮೇಲ್ಭಾಗದಲ್ಲಿ ಸುತ್ತುತ್ತಿರುವ ಗಿರಿಗಟ್ಟೆಯ ಸಹಾಯದಿಂದ ಏರುವ ವಿಮಾನ.

gyroscope

ನಾಮವಾಚಕ

ಜೈರೋಸ್ಕೋಪು; ಭ್ರಮಣ ದರ್ಶಕ:

  • ಗಿರಿಕಿ ಹೊಡೆಯುವ ಕಾಯಗಳ ಚಲನೆಯ ಲಕ್ಷಣಗಳನ್ನು ನಿದರ್ಶಿಸುವ ಉಪಕರಣ.
  • ಗಿರಿಕಿ ಹೊಡೆಯುತ್ತಿರುವ ಚಕ್ರವೊಂದರ ಅಕ್ಷವು ಸಲೀಸಾಗಿ ದಿಕ್ಕು ಬದಲಿಸುವಂತಿದ್ದು, ಅದನ್ನು ಹೊತ್ತಿರುವ ಕಾಯವು ಯಾವ ಕಡೆಗೆ ತಿರುಗಿಕೊಂಡರೂ ತಾನು ಮಾತ್ರ ಸದಾ ಒಂದೇ ದಿಕ್ಕಿಗೆ ತಿರುಗಿಕೊಂಡಿರುವಂತೆ ಏರ್ಪಾಟು ಮಾಡಿರುವ ಒಂದು ಉಪಕರಣ. Figure: gyroscope

gyroscopic

ಗುಣವಾಚಕ

  • ಭ್ರಮಣದರ್ಶಕದ; ಜೈರೋಸ್ಕೋಪಿನ; ಭ್ರಮಣದರ್ಶಕಕ್ಕೆ ಸಂಬಂಧಿಸಿದ.
  • ಪರಿಭ್ರಮಣದ.

gyrose

ಗುಣವಾಚಕ

(ಸಸ್ಯವಿಜ್ಞಾನ)

  • ನಿರಿಗೆಯುಳ್ಳ.
  • ಅಲೆಗಳಂಥ ಗೆರೆಗಳುಳ್ಳ.

gyrostabilizer

ನಾಮವಾಚಕ

ಜೈರೋಸ್ಟೆಬಿಲೈಸರ್‍; ಹಡಗು, ವಿಮಾನ, ಮೊದಲಾದವುಗಳ ಸಮತೋಲನವನ್ನು ಕಾಪಾಡಲು ಬಳಸುವ, ಜೈರೋಸ್ಕೋಪಿನಂಥ ಸಾಧನ.

gyrostat

ನಾಮವಾಚಕ

= gyrostabilizer.

gyrotiller

ನಾಮವಾಚಕ

ಗಿರಕಿಕುಂಟೆ; ಜೈರೋ ಕುಂಟೆ; ಒಂದು ಅಚ್ಚಿನ ಸುತ್ತಲೂ ಸುತ್ತುವ ಹಲ್ಲುಗಳಿರುವ ಕುಂಟೆ.

gyrus

ನಾಮವಾಚಕ

(ಮುಖ್ಯವಾಗಿ ಮಿದುಳಿನ) ಮಡಿಕೆ; ಸುತ್ತು.

gyttja

ನಾಮವಾಚಕ

(ಭೂವಿಜ್ಞಾನ) ಯಿಚ; ಜೈವಿಕ ಪದಾರ್ಥಗಳಿಂದ ತುಂಬಿದ, ಹಿಮಯುಗದ ನಂತರ ಸರೋವರಗಳಲ್ಲಿ ನಿಕ್ಷೇಪಗೊಂಡ, ಮುಖ್ಯವಾಗಿ ಕಪ್ಪು ಬಣ್ಣದ ಮಣ್ಣು.

gyve

ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) (ಕಾವ್ಯಪ್ರಯೋಗ) ಸಂಕೋಲೆ; ಬೇಡಿ; ಕೋಳ.

gyve

ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) ಸಂಕೋಲೆ ತೊಡಿಸು; ಬೇಡಿಹಾಕು; ಕೋಳಹಾಕು.

Search Dictionaries

Loading Results

Follow Us :   
  Download Bharatavani App
  Bharatavani Windows App