भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gaberdine

ನಾಮವಾಚಕ

  • (ಚರಿತ್ರೆ) ಕಪನಿ; ಮೇಲುದಗಲೆ (ಮುಖ್ಯವಾಗಿ ಯೆಹೂದ್ಯರೂ ಭಿಕ್ಷುಕರೂ ಹಾಕಿಕೊಳ್ಳುವ, ಸಡಿಲವಾಗಿಯೂ ಉದ್ದವಾಗಿಯೂ ಇರುವ, ಒರಟು ಬಟ್ಟೆಯ ಮೇಲುಡುಪು).
  • gabardine ಪದದ ರೂಪಾಂತರ.
  • ಗಟ್ಟಿ ಹುರಿಯ ಬಟ್ಟೆ.
  • ಉಡುಪು; ಹೊದಿಕೆ; ಕವಚ; (ಮೈಗೆ) ರಕ್ಷಣೆ.

gabfest

ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  • ಹರಟೆ ಗುಂಪು; ಮಾತಿಗಾಗಿ ಸೇರಿದ ಕೂಟ.
  • ದೀರ್ಘ ಸಂಭಾಷಣೆ; ಬಹಳ ಕಾಲ ಎಳೆದ ಸಂಭಾಷಣೆ, ಮಾತುಕತೆ, ಸಂಭಾಷಣಾಕೂಟ.

gabion

ನಾಮವಾಚಕ

ಹೊದರುಕಡ್ಡಿ, ಬೆತ್ತ, ಮೊದಲಾದವುಗಳಿಂದ ಯಾ ಕಬ್ಬಿಣದ ಪಟ್ಟಿಗಳಿಂದ ಗೆರಸೆಯಂತೆ ಹೆಣೆದು, ಮಣುತುಂಬಿ, ಹಿಂದೆ ಕೋಟೆ ಮೊದಲಾದವುಗಳನ್ನು ಕಟ್ಟುವಲ್ಲಿ ಯಾ ಈಗ ಕಾಮಾಟಿ ಕೆಲಸಗಳಲ್ಲಿ ಬಳಸುವ ತೊಂಬೆ.

gabionade

ನಾಮವಾಚಕ

(ಮಣ್ಣು ತುಂಬಿದ) ತೊಂಬೆ(ಗಳ) ಸಾಲು.

gable

ನಾಮವಾಚಕ

  • ಚಂದಾಯ; ಗೇಬಲು; ಇಪ್ಪಾರು ಚಾವಣಿಯ ಕೊನೆಯಲ್ಲಿರುವ ತ್ರಿಕೋನಾಕಾರದ ಭಾಗ.
  • (ಕಿಟಕಿ ಯಾ ಬಾಗಿಲ ಮೇಲಿನ) ಗೇಬಲ್‍ (ಆಕಾರದ) – ಚಪ್ಪರ, ಚೆಜ್ಜ.
  • = gable-end.

gable-end

ನಾಮವಾಚಕ

ಗೇಬಲ್ಲು ಗೋಡೆ; ತುದಿಯಲ್ಲಿ ಗೇಬಲ್ಲಿರುವ ಗೋಡೆ.

gabled

ಗುಣವಾಚಕ

ಗೇಬಲ್ಲು – ಹಾಕಿದ, ಹೊದಿಸಿದ; ಗೇಬಲ್ಲಿನಿಂದ ಅಲಂಕರಿಸಿದ.

gablet

ನಾಮವಾಚಕ

(ಸಾಮಾನ್ಯವಾಗಿ ಅಲಂಕಾರಕ್ಕಾಗಿ ಮಾಡಿದ) ಚಿಕ್ಕ ಗೇಬಲ್ಲು .

gaby

ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗ) ತಿಳಿಗೇಡಿ; ಬೆಪ್ಪ; ಹೆಡ್ಡ; ಗಾಂಪ.

gad

ಭಾವಸೂಚಕ ಅವ್ಯಯ

(ಯಾ by gad!)

gad

ಭಾವಸೂಚಕ ಅವ್ಯಯ

ಅಕರ್ಮಕ ಕ್ರಿಯಾಪದ

  • ಅಲೆದಾಡು; ಅಂಡಲೆ; ಮನೆಮನೆ ತಿರುಗು; ತಿರುಗಾಡು; ಕೆಲಸವಿಲ್ಲದೆ ಸುತ್ತಾಡು; ತಿರಿದಾಡು.
  • (ಸಾಮಾನ್ಯವಾಗಿ ವರ್ತಮಾನ ಕೃದಂತದಲ್ಲಿ ಪ್ರಯೋಗ) (ಸಸ್ಯಗಳ ವಿಷಯದಲ್ಲಿ) (ನೇರ ಹೋಗದೆ) ಅತ್ತಿತ್ತ ಹರಡು; ಆಕಡೆ ಈಕಡೆ ಹಬ್ಬು.

gad

ಭಾವಸೂಚಕ ಅವ್ಯಯ ನಾಮವಾಚಕ

ಪದಗುಚ್ಛ

(ದನ ಅಟ್ಟಲು ಬಳಸುವ) ಚೂಪಾದ ಕೋಲು. (up) on the gad ಸುತ್ತಾಟದಲ್ಲಿ; ಅಲೆದಾಟದಲ್ಲಿ; ಸುತ್ತುತ್ತ; ಅಲೆಯುತ್ತ.

gadabout

ನಾ

  • ಅಲೆಮಾರಿ; ಅಂಡಲೆಗ; ಹಾರುಗಾಲಿ; ಅಲೆದಾಡುವವನು,
  • ಅಲಸ ವಿಲಾಸಿ; ಸೋಮಾರಿಯಾಗಿದ್ದುಕೊಂಡು ಭೋಗಜೀವನ ನಡೆಸುವವ.

gadabout

ಗುಣವಾಚಕ

ಅಲೆಮಾರಿಯಾದ; ಅಂಡಲೆಯುವ; ಸದಾ – ಅಲೆದಾಡುತ್ತಿರುವ, ತಿರುಗುತ್ತಿರುವ.

Gadarene

ಗುಣವಾಚಕ

  • (ಪ್ರಾಚೀನ ಪಾಲಸ್ಟೈನಿನ) ಗಡಾರಾ ಪಟಣದ.
  • ಸಿಕ್ಕಾಪಟ್ಟೆ ನುಗ್ಗಾಟದ; ವಿಪರೀತ ಜನಜಂಗುಳಿ ಇರುವ.

gaddi

ನಾಮವಾಚಕ

  • (ಚರಿತ್ರೆ)(ಭಾರತೀಯ ರಾಜರ) ಸಿಂಹಾಸನ; ಗದ್ದುಗೆ; ಗಾದಿ.
  • ದೊರೆತನ; ರಾಜತ್ವ; ಆಳ್ವಿಕೆ.

gadfly

ನಾಮವಾಚಕ

  • ತೊಣಚಿ; ದನಗಳನ್ನು ಕಚ್ಚುವ ನೊಣ.
  • ಪೀಡಕ; ರಗಳೆಮಾರಿ; ಕಿತಾಪತಿ; ಕಾಟಗಾರ; ಉಪದ್ರವಕಾರಿ; ರೇಗಿಸುವವನು ಯಾ ಪೀಡಿಸುವವನು.
  • ಉದ್ರೇಕ; ಅತ್ಯಾವೇಶ; ಕೆರಳಿಕೆ; ಹುಚ್ಚುಹುಚ್ಚು; ಯಾವುದೇ ಕಾರ್ಯಕ್ಕೆ ಹಠಾತ್ತಾಗಿ ಕೈಹಚ್ಚುವ ಪ್ರವೃತ್ತಿ.

gadget

ನಾಮವಾಚಕ

(ಆಡುಮಾತು)

  • ಯಂತ್ರೋಪಕರಣ; ಯಂತ್ರ ಸಲಕರಣೆ; ಯಂತ್ರ ಮೊದಲಾದವುಗಳಲ್ಲಿ ಅಳವಡಿಸಿರುವ ಒಂದು ಸಣ್ಣ ಉಪಕರಣ ಯಾ ಸಲಕರಣೆ.
  • ಅನುಷಂಗ; ಅನುಬಂಧ; ಗೌಣವಾದ ಯಾ ಪ್ರಾಸಂಗಿಕವಾದ ವಸ್ತು ಯಾ ಸಾಧನ.
  • ಯಂತ್ರಕ; ಯಂತ್ರವಿಶೇಷ; ಸಾಮಾನ್ಯವಾಗಿ ಚಿಕ್ಕ, ನವೀನ, ಚಿತ್ರವಿಚಿತ್ರ ಯಾಂತ್ರಿಕ ವಸ್ತು.
  • (ಕೇವಲ) ಥಳಕುಪಳಕು ವಸ್ತು; ನಿರುಪಯುಕ್ತವಾದ, ಕೇವಲ ಆಲಂಕಾರಿಕವಾದ ಹಗುರ ಪೀಠೋಪಕರಣ, ಒಡವೆ, ಮೊದಲಾದವು.

gadgeteer

ನಾಮವಾಚಕ

ಯಂತ್ರಕನಿರ್ಮಾಪಕ; ಚಿಕ್ಕ, ನವೀನ ಯಂತ್ರಗಳನ್ನು ನಿರ್ಮಿಸುವವ ಯಾ ಬಳಸುವವ.

gadgetry

ನಾಮವಾಚಕ

  • ಸಣ್ಣಪುಟ್ಟ ಯಂತ್ರಗಳು; ಯಂತ್ರಕಗಳು.
  • ಸಣ್ಣಪುಟ್ಟ ಯಂತ್ರಗಳ ಬಳಕೆ; ಯಂತ್ರಕ ಬಳಕೆ.

Search Dictionaries

Loading Results

Follow Us :   
  Download Bharatavani App
  Bharatavani Windows App