भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gadgety

ಗುಣವಾಚಕ

  • ಯಂತ್ರದಂಥ; ಸಣ್ಣ ಯಂತ್ರದ ಲಕ್ಷಣಗಳುಳ್ಳ.
  • ಸಣ್ಣಪುಟ್ಟ ಯಂತ್ರ (ಗಳನ್ನು) ಜೋಡಿಸಿದ; ಯಂತ್ರಕಗಳನ್ನು ಅಳವಡಿಸಿದ.

gadoid

ಗುಣವಾಚಕ

(ಮೀನಿನ ವಿಷಯದಲ್ಲಿ) ‘ಕಾಡ್‍’ ಜಾತಿಗೆ ಸೇರಿದ.

gadoid

ನಾಮವಾಚಕ

(ಮೀನಿನ ವಿಷಯದಲ್ಲಿ) ‘ಕಾಡ್‍’ ಜಾತಿಗೆ ಸೇರಿದ ಮೀನು.

gadolinite

ನಾಮವಾಚಕ

ವಿರಳಭಸ್ಮಧಾತುಗಳ ಸಿಲಿಕೇಟುಗಳನ್ನುಳ್ಳ ಕಪ್ಪು ಖನಿಜ.

gadolinium

ನಾಮವಾಚಕ

ಪರಮಾಣುಸಂಖ್ಯೆ 64, ಪರಮಾಣು ತೂಕ 157.25 ಉಳ್ಳ, ಒಂದು ತ್ರಿವೇಲೆನ್ಸೀಯ ವಿರಳ ಭಸ್ಮಧಾತು, ಸಂಕೇತ Gd.

gadroon

ನಾಮವಾಚಕ

ಅಲಂಕಾರಕ್ಕಾಗಿ ಗೋಡೆ ಮೊದಲಾದವುಗಳ ಮೇಲೆ ಸಾಲಾಗಿ ಕೊರೆದು ಯಾ ಗಾರೆ ಮೊದಲಾದವುಗಳಿಂದ ಮಾಡಿದ ಹೊರ ಉಬ್ಬಿನ ತಿರುವುಗಳು.

gadwall

ನಾಮವಾಚಕ

(ಅಮೆರಿಕ ಹಾಗೂ ಯೂರೋಪಿನ ಉತ್ತರ ಭಾಗದ) ಸಿಹಿನೀರಿನ ಬಾತುಕೋಳಿ.

gadzooks

ಭಾವಸೂಚಕ ಅವ್ಯಯ

(ಪ್ರಮಾಣ, ಸಮರ್ಥನೆ, ಮೊದಲಾದವನ್ನು ಮಾಡುವಾಗ ಬಳಸುವ ಪದ) ದೇವರಾಣೆ(ಯಾಗಿ)!

Gael

ನಾಮವಾಚಕ

ಗೇಲ್‍:

  • ಸ್ಕಾಟ್ಲಂಡಿನ (ಐರ್ಲಂಡ್‍ ಮತ್ತು ಮಾನ್‍ ದ್ವೀಪದ) ಕೆಲ್ಟ್‍ ಕುಲದವನು.
  • (ಪ್ರಾಚೀನ ಪ್ರಯೋಗ) ಐರ್ಲಂಡಿನ ಕೆಲ್ಟ್‍ ಕುಲದವನು.

Gaeldom

ನಾಮವಾಚಕ

  • ಗೇಲ್‍ ಸಂಸ್ಕೃತಿ ಯಾ ನಾಗರಿಕತೆ.
  • ಗೇಲ್‍ ಜನ; ಗೇಲ್‍ ಪ್ರಪಂಚ; ಗೇಲ್‍ ಸಮುದಾಯ.

Gaelic

ಗುಣವಾಚಕ

ಗೇಲಿಕ್‍; ಸ್ಕಾಟ್ಲಂಡಿನ, ಐರ್ಲಂಡಿನ, ಮಾನ್‍ ದ್ವೀಪದ ಕೆಲ್ಟ್‍ ಜನರ ಯಾ ಅವರ ಭಾಷೆಯ.

Gaelic

ನಾಮವಾಚಕ

ಸ್ಕಾಟ್ಲಂಡಿನ, ಐರ್ಲಂಡಿನ, ಮ್ಯಾನ್‍ ದ್ವೀಪದ ಕೆಲ್ಟ್‍ ಜನರ ಭಾಷೆ.

Gaelic coffee

ನಾಮವಾಚಕ

ಕೆನೆ ಮತ್ತು ಐರಿಷ್‍ ವಿಸ್ಕಿ ಸೇರಿಸಿದ ಕಾಹಿ.

Gaeltacht

ನಾಮವಾಚಕ

ಗೇಲ್‍ ನಾಡು; ಐರಿಷ್‍ ಭಾಷೆಯೇ ದೇಶಭಾಷೆಯಾಗಿರುವ. ಐರ್ಲಂಡಿನ ಒಂದು ಪ್ರದೇಶ.

gaff

ನಾಮವಾಚಕ

  • ಕೊಕ್ಕೆ ಈಟಿ; ಮೀನು ಹಿಡಿಯಲು ಬಳಸುವ, ಕೊಕ್ಕೆ ಮುಳ್ಳುಳ್ಳ ಈಟಿ.
  • ಮೀನುಕೊಕ್ಕೆ; ದೊಡ್ಡ ಮೀನುಗಳನ್ನು ಚುಚ್ಚಿ ದಡಕ್ಕೆ ತರುವ, ಕಬ್ಬಿಣದ ಕೊಕ್ಕೆ ಹಾಕಿದ ದಡಿ.
  • ಗ್ಯಾಹ್‍; ಹಡಗಿನ ಹಿಂತುದಿಯಿಂದ ಮುಂತುದಿಯವರೆಗೆ ಚಾಚಿದ, ಕೂವೆ ಹಗ್ಗದ ಮೇಲೆ ನಿಲ್ಲಿಸಿರದ ಚೌಕಾಕಾರದ ಹಾಯಿಪಟದ ಮೇಲ್ಭಾಗವನ್ನು ಬಿಚ್ಚಿಡಲು, ಚಾಚಲು ಕಟ್ಟುವ ದಂಡ, ಅಡ್ಡಗೋಲು.

gaff

ಸಕರ್ಮಕ ಕ್ರಿಯಾಪದ

ಕೊಕ್ಕೆ ಈಟಿಯಿಂದ (ಮೀನು) ಹಿಡಿ.

gaff

ನಾಮವಾಚಕ

ನುಡಿಗಟ್ಟು

ಠಕ್ಕು; ಮೋಸ; ವಂಚನೆ.

  • blow the gaff (ಅಶಿಷ್ಟ)
    1. ಒಳಸಂಚನ್ನು ಹೊರಗೆಡವು; ಪಿತೂರಿ ಬಯಲು ಮಾಡು.
    2. ಗುಟ್ಟು ರಟ್ಟು ಮಾಡು; ರಹಸ್ಯ ಬಿಟ್ಟುಕೊಡು.
  • stand the gaff (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಕಷ್ಟ ಸಹಿಸಿಕೊ; ತೊಂದರೆ, ಉಪಟಳ, ಟೀಕೆ, ಮೊದಲಾದವನ್ನು – ತಡೆದುಕೊ.

gaff

ನಾಮವಾಚಕ

ಪದಗುಚ್ಛ

(ಬ್ರಿಟಿಷ್‍ ಪ್ರಯೋಗ) penny gaff = 4gaff(2).

  • (ಪ್ರಾಚೀನ ಪ್ರಯೋಗ) (ಅಶಿಷ್ಟ)ಸಾರ್ವಜನಿಕ ವಿನೋದ ಸ್ಥಳ.
  • ಕೆಳದರ್ಜೆಯ ಅಗ್ಗದ ನಾಟಕ ಶಾಲೆ ಯಾ ಸಂಗೀತ ಮಂದಿರ.

gaffe

ನಾಮವಾಚಕ

  • ತಪ್ಪು; ಪ್ರಮಾದ; ಅವಿವೇಕ; ಎಡವಟ್ಟು; ತಪ್ಪು ಹೆಜ್ಜೆ.
  • ಅವಿವೇಕದ ಕೆಲಸ ಯಾ ವಿವೇಚನೆಯಿಲ್ಲದ ಮಾತು.

gaffer

ನಾ

  • ಹಿರಿಯ ಹಳ್ಳಿಗ; ಹಳ್ಳಿಯ ಹಿರಿಯ.
  • ಮುದುಕ ಯಾ ಮುದಿಹಳ್ಳಿಗ.
  • (ಮನುಷ್ಯ, ಅಧಿಕಾರ, ಮೊದಲಾದವುಗಳ ಹೆಸರುಗಳ ಹಿಂದೆ ಮರ್ಯಾದೆಯಾಗಿ ಸೇರಿಸುವ ಯಾ ಸಂಬೋಧನೆಯಲ್ಲಿ ಬಳಸುವ ಪದವಾಗಿ) ಯಜಮಾನ; ಗೌಡ.
  • (ಆಡುಮಾತು) (ಬ್ರಿಟಿಷ್‍ ಪ್ರಯೋಗ) ತಂಡದ ನಾಯಕ; ಮುಖ್ಯ ಕೆಲಸಗಾರ; ಒಂದು ಗುಂಪಿನ ಯಾ ತಂಡದ ಮುಂದಾಳು, ಮುಖಂಡ, ನಾಯಕ.
  • (ಆಡುಮಾತು) ಗಾಹರ್‍; ಸಿನಿಮಾ ಯಾ ಟೆಲಿವಿಷನ್‍ ನಿರ್ಮಾಣ ತಂಡದಲ್ಲಿನ ಪ್ರಧಾನ ವಿದ್ಯುತ್‍ ಕೆಲಸಗಾರ.

Search Dictionaries

Loading Results

Follow Us :   
  Download Bharatavani App
  Bharatavani Windows App