भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gag

ನಾಮವಾಚಕ

  • ಬಾಯಿಗಿಡುಗು; ಬಾಯಿಗಿಡಿ; ಮಾತನಾಡದಂತೆ ಯಾ ಶಸ್ತ್ರಚಿಕಿತ್ಸೆಯಲ್ಲಿ ಚಿಕಿತ್ಸೆಯ ಸೌಲಭ್ಯಕ್ಕೆ ಬಾಯನ್ನು ತೆರೆದಿಡಲು ಬಾಯಿಗೆ ತುರುಕುವ ಪದಾರ್ಥ.
  • (ಶಾಸನ ಸಭೆ) ಮಾತು ತಡೆತ; ವಾಕ್‍ಸ್ತಂಭನ; ಚರ್ಚೆ ಮುಗಿತ; ಚರ್ಚೆ ಸಾಕುಮಾಡಬೇಕೆಂಬ ತಡೆ, ಅಡ್ಡಿ.
  • ಮುಕ್ತ ಭಾಷಣಕ್ಕೆ ತಡೆಮಾಡುವ ವಸ್ತು ಯಾ ಪರಿಸ್ಠಿತಿ.
  • ನಟನ ಪ್ರಕ್ಷಿಪ್ತಗಳು; ನಾಟಕ ಸಂಭಾಷಣೆಯಲ್ಲಿ ನಟನು ಸೇರಿಸುವ ಮಾತುಗಳು.
  • (ನಾಟಕಶಾಲೆ) (ಮುಖ್ಯವಾಗಿ ನಾಟಕ, ಸಂಗೀತ ಶಾಲೆ, ಮನರಂಜನೆ), ಮೊದಲಾದವುಗಳ ನಡುವೆ ಮೊದಲೇ ಸಿದ್ಧಪಡಿಸಿದ ಒಡ್ಡಿದ (ಸೇರಿಸಿದ) ನಕಲಿ ಶ್ಯ; ಹಾಸ್ಯ ಪ್ರಸಂಗ.
  • ತಮಾಷೆ; ಗೇಲಿ.
  • ತಮಾಷೆಯ ಕಾರ್ಯ ಯಾ ಸಂದರ್ಭ.
  • ಸುಳ್ಳು; ಮೋಸ; ವಂಚನೆ.

gag

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ವರ್ತಮಾನ ಕೃದಂತ gagging ಭೂತರೂಪ ಮತ್ತು ಭೂತಕೃದಂತ gagged.)

  • ಬಾಯಿ ಗಿಡಿ; ಬಾಯಿಕಟ್ಟು; ಮಾತಾಡದಂತೆ ಯಾ ಬಾಯಿ ತೆರೆದಿಡುವಂತೆ ಯಾವುದೇ ಪದಾರ್ಥವನ್ನು ಬಾಯಿಗೆ ತುರುಕು.
  • ಬಾಯಿ ಮುಚ್ಚಿಸು; ಮಾತನಾಡದಂತೆ ಮಾಡು; ವಾಕ್‍ ಸ್ವಾತಂತ್ರಕ್ಕೆ ತಡೆಯೊಡ್ಡು.
  • (ನಟನ ವಿಷಯದಲ್ಲಿ, ನಾಟಕ ಸಂಭಾಷಣೆಯಲ್ಲಿ) ಮಧ್ಯೆ ಮಾತು ಸೇರಿಸು.
  • ಕುದುರೆಗೆ ಗಿಡುಗು ಕಡಿವಾಣ ಹಾಕು.
  • ವಂಚಿಸು; ಮೋಸಮಾಡು.
  • ಗಂಟಲು ಕಟ್ಟಿಸು.
  • ವಾಂತಿ ಮಾಡಿಸು.

gag man

ನಾಮವಾಚಕ

ಗಿಡುಗು ವಿನೋದಕರ್ತ; ನಾಟಕ ಮೊದಲಾದವುಗಳಿಗೆ ತಮಾಷೆ ಪ್ರಸಂಗಗಳನ್ನು ಬರೆಯುವವ.

gag-bit

ನಾಮವಾಚಕ

(ಕುದುರೆಯನ್ನು ಪಳಗಿಸಲು ಹಾಕುವ ಬಲವಾದ) ಗಿಡುಗು ಕಡಿವಾಣ.

gag-rein

ನಾಮವಾಚಕ

(ಕಡಿವಾಣವನ್ನು ಮತ್ತಷ್ಟು ಬಲವಾಗಿ ಮಾಡುವ) ಬಿಗಿ ಲಗಾಮು.

gaga

ಗುಣವಾಚಕ

  • (ಅಶಿಷ್ಟ) ಮೊದ್ದ; ಮಂಕ; ಪೆದ್ದ; ಬೆಪ್ಪ; ಬೆಪ್ಪು ಮೋರೆಯ.
  • ಅರಳು ಮರಳಿನ; ಮಂಕುಬುದ್ಧಿಯ.
  • ಪೆದ್ದು ಉತ್ಸಾಹದ; ಹುಚ್ಚುಹುಚ್ಚಾಗಿ ಆಸಕ್ತಿ ತೋರಿಸುವ: had been so gaga about him at first ಮೊಟ್ಟಮೊದಲು ಅವನ ವಿಷಯವಾಗಿ ಅತಿಯಾದ ಹುಚ್ಚು ಉತ್ಸಾಹ ತೋರಿಸಿದ್ದ(ಳು).

gage

ನಾಮವಾಚಕ

  • ಒತ್ತೆ; ಓಲು; ಅಡವು; ಗಿರವಿ; ಈಡು; ಹೊಣೆ.
  • ಹೋರಾಟಕ್ಕೆ ಸವಾಲು; ಕಾಳಗಕ್ಕೆ ಆಹ್ವಾನ.
  • (ಸವಾಲಿಗಾಗಿ ಎಸೆದ ಕೈಗವುಸು ಮೊದಲಾದ) ಪಣ; ಪೈಜೆ.

gage

ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಗಿರವಿಯಿಡು; ಒತ್ತೆ ಇಡು; ಓಲು ಕೊಡು; ಈಡುಮಾಡು.

gage

ನಾಮವಾಚಕ

(ಅಮೆರಿಕನ್‍ ಪ್ರಯೋಗ) = 1gauge.

gage

ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) = 1gauge.

gage

ನಾಮವಾಚಕ

= greengage.

gageable

ಗುಣವಾಚಕ

(ಅಮೆರಿಕನ್‍ ಪ್ರಯೋಗ)= gaugeable.

gager

ನಾಮವಾಚಕ

(ಅಮೆರಿಕನ್‍ ಪ್ರಯೋಗ) = gauger.

gaggle

ನಾಮವಾಚಕ

  • (ಬಾತಿನ) ಹಿಂಡು; ಗುಂಪು.
  • (ಆಡುಮಾತು) ಜನರ ಗುಂಪು; ಜನಗಳ ಸಮೂಹ.

gaggle

ಅಕರ್ಮಕ ಕ್ರಿಯಾಪದ

(ಬಾತಿನ ವಿಷಯದಲ್ಲಿ) ಕ್ಲಕ್ಕಿಸು; ಕ್ಲಕ್‍ ಕ್ಲಕ್‍ ಅನ್ನು.

gagster

ನಾಮವಾಚಕ

  • = gag man.
  • ನಕಲಿಶ್ಯಾಮ; ಜೋಕರು; ಹಾಸ್ಯಗಾರ; ಜೋಕುಗಳನ್ನು ಸೃಷ್ಟಿಸುವವ.

gaiety

ನಾಮವಾಚಕ

ನುಡಿಗಟ್ಟು

gaiety of nations ಜನಸ್ೋಮದ ಹರ್ಹೋಲ್ಲಾಸ; ಅಪಾರ ಜನತೆಯ ನಲಿವು: that stroke of death, which has eclipsed the gaiety of nations ಸಾವಿನ ಆ ಪ್ರಹಾರ, ಜನಸ್ತೋಮದ ಹರ್ಷೋಲ್ಲಾಸವನ್ನು ಮರೆ ಮಾಡಿತು.

  • ಉಲ್ಲಾಸ; ಹರ್ಷ; ಗೆಲವು; ನಲಿವು; ನಲಿದಾಟ; ಖುಷಿ.
  • (ಸಾಮಾನ್ಯವಾಗಿ ಬಹುವಚನ ದಲ್ಲಿ) ವಿನೋದ ಕೇಳಿ; ಕ್ೀಡೆ; ವಿಲಾಸ.
  • ಬೆಡಗು; ಥಳಕು.
  • ಸೊಗಸುಗಾರಿಕೆ; ಶಿಸ್ತು(ಗಾರಿಕೆ); ಷೋಕಿ; ಠೀಕಾದ ಉಡುಪು.

gaillardia

ನಾಮವಾಚಕ

ಗೇಲಾರ್ಡಿಯ ಕುಲದ, ಆಲಂಕಾರಿಕ ಪುಷ್ಪ ಬಿಡುವ ಒಂದು ಸಸ್ಯ.

gaily

ಕ್ರಿಯಾವಿಶೇಷಣ

  • ಖುಷಿಯಾಗಿ; ಉಲ್ಲಾಸದಿಂದ; ಗೆಲವಿನಿಂದ.
  • ನಿರಾತಂಕವಾಗಿ; ನಿಶ್ಚಿಂತೆಯಿಂದ.
  • ಹಗುರ ಮನಸ್ಸಿನಿಂದ.
  • ವಿನೋದವಾಗಿ; ಲೀಲೆಯಂತೆ; ಕ್ರೀಡೆಯಂತೆ.
  • (ಉಡುಪು ಮೊದಲಾದವುಗಳ ವಿಷಯದಲ್ಲಿ)
    1. ಬೆಡಗಿನಿಂದ; ಆಡಂಬರದಿಂದ; ಷೋಕಿಯಾಗಿ; ಸೊಗಸುಗಾರಿಕೆಯಿಂದ.
    2. ಹೊಳೆಯುತ್ತ; ಥಳಥಳಿಸುತ್ತ; ಉಜ್ವಲ ವರ್ಣದಿಂದ ಕೂಡಿ.
  • ತುಂಬ; ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ.

gain

ನಾಮವಾಚಕ

  • (ಆಸ್ತಿ ಮೊದಲಾದವುಗಳ) ಅಭಿವೃದ್ಧಿ; ಹೆಚ್ಚಳ.
  • ಲಾಭ; ಸಂಪಾದನೆ; ಪಡಪು; ಹಾಯಿದೆ; ನಫೆ.
  • ಮುಂದುವರೆತ; ಮುಂದುವರೆಯುವುದು.
  • ಉತ್ತಮಿಕೆ; ಉತ್ತಮ ಸ್ಥಿತಿಗೆ ಬರುವುದು.
  • ಐಶ್ವರ್ಯ ಸಂಪಾದನೆ; ಸಿರಿಗಳಿಕೆ; ಹಣ ಮೊದಲಾದವುಗಳ ಗಳಿಕೆ.
  • (ಬಹುವಚನದಲ್ಲಿ) ಸಂಪಾದನೆ; ಗಳಿಕೆ; ಸಂಬಳ ಸಾರಿಗೆ; ವರಮಾನ; ಆದಾಯ; ವ್ಯಾಪಾರ ಮೊದಲಾದವುಗಳಿಂದ ಸಂಪಾದಿಸಿದ, ಜೂಜಿನಲ್ಲಿ ಗೆದ್ದ – ಹಣ, ದುಡ್ಡು.
  • (ಮೊತ್ತದಲ್ಲಿ) ವೃದ್ಧಿ; ಹೆಚ್ಚಳ; ಏರಿಕೆ
  • (ಇಲೆಕ್ಟ್ರಾನಿಕ್ಸ್‍)
    1. ಲಾಭ; ಹೆಚ್ಚಳ; ಆಧಿಕ್ಯ; ಅಧಿಕಾಂಶ; ವಿದ್ಯುಚ್ಛಕ್ತಿ ಮೊದಲಾದವುಗಳ ಹೆಚ್ಚಳದ ಪ್ರಮಾಣ (ಸಾಮಾನ್ಯವಾಗಿ ಲಾಗರಿದಮ್‍ನಲ್ಲಿ ವ್ಯಕ್ತಪಡಿಸುವುದು).
    2. ಇದರ ಲಾಗರಿದಮ್‍.

Search Dictionaries

Loading Results

Follow Us :   
  Download Bharatavani App
  Bharatavani Windows App