भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

gain

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ನುಡಿಗಟ್ಟು

  • (ಅಪೇಕ್ಷಿಸಿದ ಯಾ ಅಪೇಕ್ಷಣೀಯ ವಸ್ತುವನ್ನು) ಪಡೆ; ಹೊಂದು; ಗಳಿಸು; ಸಂಪಾದಿಸು; gain advantage, recognition, one’s ends ಲಾಭ, ಮನ್ನಣೆ, ತನ್ನ ಗುರಿ – ಪಡೆ.
  • ಲಾಭಗಳಿಸು; ನಫೆ ಹೊಂದು; ಪ್ರಯೋಜನ ಪಡೆ.
  • (ಯಾವುದರಲ್ಲಾದರೂ) ಅನುಕೂಲ ಹೊಂದು; ಅಭಿವೃದ್ಧಿ ಪಡೆ.
  • (ತಾರತಮ್ಯದಿಂದ, ಇನ್ನೊಬ್ಬನಿಗಿಂತ) ಮೇಲೆನಿಸಿಕೊ; ಮೇಲಾಗು; ಹೆಚ್ಚಳಿಕೆ ಪಡೆ.
  • ಆಧಿಕ್ಯ ಹೊಂದು; ಅಧಿಕವಾಗು; ಹೆಚ್ಚಿನದಾಗಿ, ಸೇರಿಕೆಯಾಗಿ – ಪಡೆ, ಹೊಂದು: gain momentum, weight ಆವೇಗ, ತೂಕ – ಪಡೆ.
  • (ಸಮುದ್ರ, ಶತ್ರು, ಮೊದಲಾದವುಗಳು ಆಕ್ರಮಿಸಿದ ಜಮೀನು, ಪ್ರದೇಶ, ಮೊದಲಾದವನ್ನು) ಬಿಡಿಸಿಕೊ; ಹಿಂದಕ್ಕೆ ಪಡೆ.
  • (ಹೋರಾಟ, ಸ್ಪರ್ಧೆ, ವಿವಾದ, ಮೊದಲಾದವುಗಳಲ್ಲಿ) ಜಯಗಳಿಸು; ಗೆಲ್ಲು.
  • ಒಲಿಸಿಕೊ; ಒಡಂಬಡಿಸು; ತನ್ನ ಕಡೆಗೆ, ಅಭಿಪ್ರಾಯಕ್ಕೆ ಬರುವಂತೆ ಮಾಡಿಕೊ; ಒಪ್ಪುವಂತೆ ಮಾಡು.
  • (ಉದ್ದೇಶಿಸಿದ ಸ್ಥಳವನ್ನು) ಸೇರು; ಮುಟ್ಟು; ತಲಪು.
  • (ಸಮುದ್ರದ ವಿಷಯದಲ್ಲಿ) ನೆಲವನ್ನು ಆಕ್ರಮಿಸು.
  • (ಗಡಿಯಾರದ ವಿಷಯದಲ್ಲಿ) (ನಿರ್ದಿಷ್ಟ ಕಾಲ) ಮುಂದಾಗು; (ನಿಜವಾದ ಸಮಯಕ್ಕಿಂತ) ಮುಂದೆ ಓಡು.

gainable

ಗುಣವಾಚಕ

  • ಸಂಪಾದಿಸಬಲ್ಲ; ಪಡೆಯಬಲ್ಲ; ಗಳಿಸಬಲ್ಲ; ಸಾಧಿಸಬಲ್ಲ: greatness in art is not a teachable nor gainable thing ಕಲಾಪ್ರೌಢಿಮೆಯು ಕಲಿಸಬಲ್ಲ ಇಲ್ಲವೆ ಗಳಿಸಬಲ್ಲ ವಿಷಯವಲ್ಲ.
  • ಒಲಿಸಿಕೊಳ್ಳಬಲ್ಲ.
  • (ಪ್ರಾಚೀನ ಪ್ರಯೋಗ) (ಜಮೀನಿನ ವಿಷಯದಲ್ಲಿ) ಕೃಷಿ ಸಾಧ್ಯ; ಕೃಷಿ ಮಾಡಲು – ಸಾಧ್ಯವಾದ, ಸುಲಭವಾದ.

gainer

ನಾಮವಾಚಕ

ಲಾಭದಾರ; ಲಾಭ ಪಡೆಯುವವನು; ನಫೆದಾರ; ಪ್ರಯೋಜನ ಹೊಂದುವವನು; ಒಲವು, ಅನುಗ್ರಹ, ಮೊದಲಾದವನ್ನು ಹೊಂದುವವನು.

gainful

ನಾಮವಾಚಕ

  • ಲಾಭದಾಯಕ; ಆದಾಯಕರ.
  • ಲಾಭದೊಲವಿನ; ಲಾಭದೃಷ್ಟಿಯ; ಪ್ರತಿಫಲಾಕಾಂಕ್ಷೆಯ; ಪ್ರಯೋಜನ ದೃಷ್ಟಿಯ; ಲಾಭ ಯಾ ಪ್ರಯೋಜನವನ್ನು ಗಳಿಸುವುದರಲ್ಲಿ ಕಟ್ಟಾಸೆಯಿರುವ.
  • (ಕೆಲಸ, ಉದ್ಯೋಗದ ವಿಷಯದಲ್ಲಿ) ವೇತನಸಹಿತವಾದ; ಸಂಬಳ ಯಾ ಪ್ರತಿಫಲದಿಂದ ಕೂಡಿದ.
  • (ವಿರಳ ಪ್ರಯೋಗ) ಲಾಭಾಕಾಂಕ್ಷೆಯ.

gainfully

ಕ್ರಿಯಾವಿಶೇಷಣ

  • ಲಾಭದಾಯಕವಾಗಿ.
  • ಪ್ರಯೋಜನಕರವಾಗಿ.
  • ಪ್ರತಿಫಲದಿಂದ ಕೂಡಿ.

gainfulness

ನಾಮವಾಚಕ

  • ಲಾಭದಾಯಕತೆ.
  • ಪ್ರಯೋಜನಕರವಾಗಿರುವಿಕೆ.
  • ಪ್ರತಿಫಲದಿಂದ ಕೂಡಿರುವಿಕೆ.

gainings

ನಾಮವಾಚಕ

(ಬಹುವಚನ) ಗಳಿಕೆ; ಸಂಪಾದನೆ.

gainsay

ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ).

  • ಅಲ್ಲವೆನ್ನು; ಇಲ್ಲವೆನ್ನು; ನಿರಾಕರಿಸು.
  • ವಿರುದ್ಧವಾಗಿ ಹೇಳು, ಪ್ರತಿಪಾದಿಸು; ಪ್ರತಿಹೇಳು; ಎದುರಿಸು.

gainsayer

ನಾಮವಾಚಕ

  • ವಿರೋಧಿ; ಪ್ರತಿವಾದಿ; ವಿರುದ್ಧವಾಗಿ ಹೇಳುವವನು.
  • ಅಲ್ಲವೆನ್ನುವವ; ಅಲ್ಲಗಳೆಕ; ನಿರಾಕರ್ತ; ಇಲ್ಲವೆಂದು ಹೇಳುವವನು; ನಿರಾಕರಿಸುವವನು.

gainst

ಉಪಸರ್ಗ

(ಕಾವ್ಯಪ್ರಯೋಗ) against (ಎಂಬುದರ ಸಂಕ್ಷಿಪ್ತ).

gait

ನಾಮವಾಚಕ

ನುಡಿಗಟ್ಟು

go one’s (or one’s own) gait ತನ್ನಿಷ್ಟ ಬಂದ ದಾರಿ ಹಿಡಿ; ತನ್ನ ದಾರಿ ತಾನು ಹಿಡಿ; ತನಗೆ ತೋಚಿದಂತೆ, ಅನಿಸಿದಂತೆ – ನಡೆದುಕೊ, ವರ್ತಿಸು.

  • ನಡಗೆ; ನಡೆ; ಗತಿ; ಗಮನ; ನಡೆಯುವ ಭಂಗಿ, ರೀತಿ.
  • ಮುನ್ನಡಗೆ; ಓಡುವವ, ಕುದುರೆ, ವಾಹನ, ಮೊದಲಾದವುಗಳು ಮುಂದಕ್ಕೆ ಚಲಿಸುವ ರೀತಿ.

gaiter

ನಾಮವಾಚಕ

ಕಣಕಾಲ ಕಾಪು; ಕಣಕಾಲಿಗೆ, ಕಾಲಿನ ಹರಡಿಗೆ, ಯಂತ್ರದ ಭಾಗಕ್ಕೆ ಸುತ್ತುವ ಬಟ್ಟೆಯ ಯಾ ತೊಗಲಿನ ಪಟ್ಟಿ.

gaitered

ಗುಣವಾಚಕ

ಕಣಕಾಲ ಕಾಪು ಕಟ್ಟಿದ ಯಾ ತೊಟ್ಟ.

gal

ನಾಮವಾಚಕ

(ಅಶಿಷ್ಟ) ಹುಡುಗಿ.

gal

ನಾಮವಾಚಕ

(ಭೌತವಿಜ್ಞಾನ) ಗುರುತ್ವದ ಫಲವಾಗಿ ಉಂಟಾಗುವ ವೇಗೋತ್ಕರ್ಷದ ಮಾನ, ಸೆಕೆಂಡ್‍ಗೆ ಒಂದು ಸೆಂಟಿಮೀಟರು.

Gal.

ಸಂಕ್ಷಿಪ್ತ

Galatians (ಬೈಬಲಿನ ಹೊಸ ಒಡಂಬಡಿಕೆ).

gal.

ಸಂಕ್ಷಿಪ್ತ

gallon(s)

gala

ನಾಮವಾಚಕ

  • (ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) ಉತ್ಸವ; ಹಬ್ಬ; ಸಮಾರಂಭ; ವೈಭವ: gala day ಉತ್ಸವ ದಿನ. gala dress ಹಬ್ಬದುಡಿಗೆ; ಸೊಗಸಿನ ಉಡುಪು.
  • (ಬ್ರಿಟಿಷ್‍ ಪ್ರಯೋಗ) ಕ್ರೀಡಾ ಸಮಾರಂಭ; ಕ್ರೀಡೋತ್ಸವ; ಆಟೋಟಗಳಿಗಾಗಿ, ಮುಖ್ಯವಾಗಿ ಈಜಾಟಕ್ಕಾಗಿ, ಸೇರಿದ ಸಂತೋಷ ಕೂಟ.

galactagogue

ಗುಣವಾಚಕ

ಕ್ಷೀರಚೋದಕ; ಹಾಲಿನ ಹರಿವನ್ನು ಪ್ರಚೋದಿಸುವ.

galactagogue

ನಾಮವಾಚಕ

ಕ್ಷೀರಚೋದಕ; ಹಾಲಿನ ಹರಿವನ್ನು ಪ್ರಚೋದಿಸುವ ವಸ್ತು.

Search Dictionaries

Loading Results

Follow Us :   
  Download Bharatavani App
  Bharatavani Windows App