भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

galactic

ಗುಣವಾಚಕ

  • ಕ್ಷೀರಪಥದ; ಆಕಾಶಗಂಗೆಯ.
  • ಗ್ಯಾಲಕ್ಸಿಯ; ಗಾಲಕ್ಸಿಗಳ ಯಾ ಅವುಗಳಿಗೆ ಸಂಬಂಧಿಸಿದ.

galacto-

ಸಮಾಸ ಪೂರ್ವಪದ

(ವೈದ್ಯಶಾಸ್ತ್ರಮೊದಲಾದವು) ಕ್ಷೈರ, ಹಾಲು, ಕ್ಷೀರ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.

galago

ನಾಮವಾಚಕ

ಗಲೇಗೋ; ಗಲೇಗೋ ಕುಲದ, ದೊಡ್ಡ ಕಣ್ಣುಗಳು ಮತ್ತು ಕಿವಿಗಳು ಹಾಗೂ ಉದ್ದ ಬಾಲವೂ ಇರುವ, ಮರ ಹತ್ತುವ, ದಕ್ಷಿಣ ಆಫಿಕದ ಕಾಡುಪಾಪ.

galah

ನಾಮವಾಚಕ

  • (ಆಸ್ಟ್ರೇಲಿಯ) ಗುಲಾಬಿ ಬಣ್ಣದ ಎದೆಯ, ಬೂದುಬೆನ್ನಿನ, ಜುಟ್ಟುಗಿಳಿ.
  • (ಅಶಿಷ್ಟ) ದಡ್ಡ; ಗುಗ್ಗು; ಪೆದ್ದ.

Galahad

ನಾಮವಾಚಕ

ಸಜ್ಜನ; ಸಭ್ಯ; ಉದಾತ್ತ ಗುಣ, ಪ್ರಾಮಾಣಿಕತೆ, ಸಭ್ಯತೆ, ಮೊದಲಾದ ಶ್ರೇಷ್ಠ ಗುಣಗಳುಳ್ಳ ವ್ಯಕ್ತಿ.

galantine

ನಾಮವಾಚಕ

ಗ್ಯಾಲಂಟೀನ್‍; ಮೂಳೆಗಳನ್ನು ತೆಗೆದು, ಮಸಾಲೆ ತುಂಬಿಸಿ ಕರಿದು, ತಣ್ಣಗೆ (ಮಾಡಿ) ಬಡಿಸುವ ಬಿಳಿಮಾಂಸ.

galanty show

ನಾಮವಾಚಕ

(ಚರಿತ್ರೆ) ನೆರಳು ಬೊಂಬೆಯಾಟ; ಪರದೆಯ ಮೇಲೆ ಬೊಂಬೆಗಳ ನೆರಳು ಬೀಳಿಸಿ ತೋರಿಸುವ ಮೂಕಾಭಿನಯದ ಆಟ.

galaxy

ನಾಮವಾಚಕ

  • (Galaxy) (ಖಗೋಳ ವಿಜ್ಞಾನ)
    1. ಗಾಲಕ್ಸಿ; ಆಕಾಶಗಂಗೆ ಗಾಲಕ್ಸಿ; ರಾತ್ರಿಯ ವೇಳೆ ಆಕಾಶದಲ್ಲಿ ಹಾಲು ಚೆಲ್ಲಿರುವಂತೆ ಕಾಣುವ ಆಕಾಶಗಂಗೆಯಲ್ಲಿರುವ ಕೋಟ್ಯಂತರ ನಕ್ಷತ್ರಗಳನ್ನೂ ಆಕಾಶದಲ್ಲಿ ಕಾಣಿಸುವ ಇತರ ನಕ್ಷತ್ರಗಳನ್ನೂ ನಮ್ಮ ಸೌರವ್ಯೂಹವನ್ನೂ ಒಳಗೊಂಡ ಒಟ್ಟಿಲು.
    2. ಗಾಲಕ್ಸಿ; ನಮ್ಮ ಆಕಾಶಗಂಗೆ ಗಾಲಕ್ಸಿಯ ಹೊರಗಡೆ ದೂರದಲ್ಲಿ(ರುವ), ದೂರದರ್ಶಕದಲ್ಲಿ ಅನೇಕವೇಳೆ ನೀಹಾರಿಕೆಗಳಂತೆ ಕಾಣುವ ಆಕಾಶಗಂಗೆ ಗಾಲಕ್ಸಿಯಂಥದೇ ಆದ ಇತರ ತಾರಾ ಸಮೂಹಗಳು.
  • ತಾರಾಗಣ; ತೇಜೋಗಣ; ಸುಂದರಿಯರು, ಪ್ರತಿಭಾವಂತರು, ಮೊದಲಾದವರ ಉಜ್ವಲ ಗುಂಪು.

galbanum

ನಾಮವಾಚಕ

(ಪರ್ಷಿಯಾ ದೇಶದ) ಒಂದು ಜಾತಿಯ ಮರದ ಹಾಲು ಗುಗ್ಗುಲ.

gale

ನಾಮವಾಚಕ

= bog myrtle.

gale

ನಾಮವಾಚಕ

  • ಬಿರುಗಾಳಿ; ಚಂಡಮಾರುತ; ಕಡುಗಾಳಿ; ಮುಖ್ಯವಾಗಿ ಬೋಹೋರ್ಟ್‍ ಮಾನದಲ್ಲಿ ಘಂಟೆಗೆ 32ರಿಂದ 54 ಮೈಲಿ ವೇಗದಲ್ಲಿ ಬೀಸುವ ಗಾಳಿ.
  • (ನೌಕಾಯಾನ) ಬಿರುಗಾಳಿ; ಚಂಡಮಾರುತ.
  • (ಕಾವ್ಯಪ್ರಯೋಗ) ನಸುಗಾಳಿ; ಮಂದಮಾರುತ.
  • (ಮುಖ್ಯವಾಗಿ) ನಗುವಿನ ಸ್ಫೋಟ; ಭಾರಿ ನಗು; ಕೇಕೆಯ ನಗು.

gale

ನಾಮವಾಚಕ

ಪದಗುಚ್ಛ

(ಬ್ರಿಟಿಷ್‍ ಪ್ರಯೋಗ) (ಕಾಲಕಾಲಕ್ಕೆ ಕೊಡಬೇಕಾದ) ಬಾಡಿಗೆ. hanging gale ಬಾಡಿಗೆಯ ಬಾಕಿ.

galea

ನಾಮವಾಚಕ

(ಸಸ್ಯವಿಜ್ಞಾನಮತ್ತು ಪ್ರಾಣಿವಿಜ್ಞಾನ)(ಆಕಾರದಲ್ಲಿ, ಕೆಲಸದಲ್ಲಿ, ಯಾ ಸ್ಥಾನದಲ್ಲಿ) ಶಿರಸ್ತ್ರಾಣವನ್ನು ಹೋಲುವ ಅಂಗರಚನೆ.

galeate

ಗುಣವಾಚಕ

(ಸಸ್ಯವಿಜ್ಞಾನಮತ್ತು ಪ್ರಾಣಿವಿಜ್ಞಾನ) ಶಿರಸ್ತ್ರಾಣಿತ; ಶಿರಸ್ತ್ರಾಣದಂಥ ಯಾ ಶಿರಸ್ತ್ರಾಣದಂಥ ಆಕಾರದ ಅಂಗವುಳ್ಳ.

galeated

ಗುಣವಾಚಕ

= galeate.

galeeny

ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಗಿನಿ ಕೋಳಿ; ಒಂದು ಬಗೆಯ ನೀರು ಕೋಳಿ.

Galen

ನಾಮವಾಚಕ

  • ಗೇಲನ್‍; ಕ್ರಿಸ್ತಶಕ ಎರಡನೆ ಶತಮಾನದ ಗ್ರೀಕ್‍ ವೈದ್ಯ ಮತ್ತು ವೈದ್ಯಶಾಸ್ತ್ರಜ್ಞ.
  • (ಹಾಸ್ಯ ಪ್ರಯೋಗ) (ಯಾವನೇ) ವೈದ್ಯ.

galena

ನಾಮವಾಚಕ

ನಿಸರ್ಗದಲ್ಲಿ ದೊರೆಯುವ ಸೀಸದ ಸಲ್ಫೈಡ್‍ ಸಂಯೋಜನೆಯುಳ್ಳ ಸೀಸದ ಅದಿರು.

galenic

ಗುಣವಾಚಕ

  • (ಗ್ರೀಕ್‍ ವೈದ್ಯಶಾಸ್ತ್ರಜ್ಞ) ಗೇಲನನ; ಗೇಲನನ ವಿಧಾನದ.
  • ಮೂಲಿಕೆಗಳಿಂದ, ಸಸ್ಯಗಳಿಂದ ತಯಾರಿಸಿದ.

galenic

ನಾಮವಾಚಕ

ಹಸಿರು ಔಷಧಿ; ರಾಸಾಯನಿಕವಾಗಿ ತಯಾರಿಸದೆ, ಮೂಲಿಕೆಗಳಿಂದ, ಸಸ್ಯಗಳಿಂದ ತಯಾರಿಸಿದ ಔಷಧಿ.

Search Dictionaries

Loading Results

Follow Us :   
  Download Bharatavani App
  Bharatavani Windows App