भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

galenical

ಗುಣವಾಚಕ

= 1galenic.

galenical

ನಾಮವಾಚಕ

= 2galenic.

galere

ನಾಮವಾಚಕ

ಕೂಟ; ಪಟಾಲಂ; (ಸಾಮಾನ್ಯವಾಗಿ ಅನಿಷ್ಟ ವ್ಯಕ್ತಿಗಳ) ಗುಂಪು.

Galilean

ಗುಣವಾಚಕ

ಗೆಲಿಲೀಯ; ಗೆಲಿಲಿಯನ್‍; ಖಗೋಳಶಾಸ್ತ್ರಜ್ಞ ಗೆಲಿಲಿಯೋವಿನ ಯಾ ಅವನಿಗೆ ಸಂಬಂಧಿಸಿದ.

Galilean

ಗುಣವಾಚಕ

  • ಪ್ಯಾಲೆಸ್ಟೈನಿನ ಗೆಲಿಲಿ ಪ್ರದೇಶದ.
  • ಕ್ರೈಸ್ತ ಧರ್ಮದ.

Galilean

ನಾಮವಾಚಕ

  • ಗೆಲಿಲಿ ನಿವಾಸಿ; ಪ್ಯಾಲೆಸ್ಟೈನಿನ ಗೆಲಿಲಿ ಪ್ರದೇಶದಲ್ಲಿ (ಹುಟ್ಟಿದವ(ಳು)) ಯಾ ವಾಸಿಸುವವ(ಳು).
  • ಕ್ರೈಸ್ತ(ಧರ್ಮದವ).
  • (ಹೀನಾರ್ಥಕ ಪ್ರಯೋಗ) ಏಸುಕ್ರಿಸ್ತ.

Galilean satellite

ನಾಮವಾಚಕ

ಗೆಲಿಲಿಯನ್‍ ಉಪಗ್ರಹ; ಗೆಲಿಲಿಯೊ ಮೊದಲ ಬಾರಿಗೆ ದೂರದರ್ಶಕದಲ್ಲಿ ಕಂಡ, ಗುರುಗ್ರಹದ ಅತಿ ದೊಡ್ಡ ನಾಲ್ಕು ಉಪಗ್ರಹಗಳಲ್ಲೊಂದು.

Galilean telescope

ನಾಮವಾಚಕ

ಗೆಲಿಲಿಯೊ ದೂರದರ್ಶಕ; ಗೆಲಿಲಿಯೊ ಮೊತ್ತಮೊದಲು ನಿರ್ಮಿಸಿದ ದ್ವಿಪೀನ ವಸ್ತುಕ (biconvex objective) ಮತ್ತು ದ್ವಿನಿಮ್ನ ನೇತ್ರಕ (biconcave eyepiece)ಗಳಿರುವ ದೂರದರ್ಶಕ.

galilee

ನಾಮವಾಚಕ

ಚರ್ಚಿನ ಮುಖಮಂಟಪ; ಚರ್ಚಿನ ಮಹಾದ್ವಾರದ ಮುಂಭಾಗದಲ್ಲಿರುವ ಮುಖಮಂಟಪ ಯಾ ಆರಾಧನಾ ಮಂದಿರ.

galimatias

ನಾಮವಾಚಕ

ಅರ್ಥವಿಲ್ಲದ ಮಾತು; ಅಸಂಬದ್ಧ ಪ್ರಲಾಪ.

galingale

ನಾಮವಾಚಕ

ಪದಗುಚ್ಛ

English galingale = galingale (2).

  • ದುಂಪರಾಸ್ಮೇ; ಸುಗಂಧವಾಚಿ ಗಿಡ; ಕಚ್ಚೂರ; ಅಡಿಗೆಗೂ, ವೈದ್ಯದಲ್ಲೂ ಬಳಸುವ, ಆಲ್ವಿನಿಯ ಕುಲದ, ಮಲೇಷಿಯಾ, ಇಂಡೊನೇಷಿಯಗಳ ಒಂದು ಸುಗಂಧ ಬೇರು.
  • ಮುಂಜ; ಒಂದು ಜಾತಿಯ ನೊದೆಹುಲ್ಲು.

galiot

ನಾಮವಾಚಕ

galliot ಪದದ ರೂಪಾಂತರ.

galipot

ನಾಮವಾಚಕ

ಗಡ್ಡೆಕಟ್ಟಿದ ಒಂದು ಬಗೆಯ ಟರ್ಪಂಟೈನ್‍ ಯಾ ಕರ್ಪೂರ ತೈಲ.

gall

ನಾಮವಾಚಕ

ನುಡಿಗಟ್ಟು

  • (ಪ್ರಾಣಿಗಳ, ಮುಖ್ಯವಾಗಿ ಎತ್ತಿನ) ಪಿತ್ತ; ಪಿತ್ತರಸ.
  • (ರೂಪ). ಕಡುಕಹಿ(ಯಾದ) ವಸ್ತು.
  • (ರೂಪ) ಕಡುಕಹಿ; ಕಡುಕಟುತ್ವ.
  • ಪಿತ್ತಕೋಶ ಮತ್ತು ಅದರ ಒಳಗಿರುವಂಥದು.
  • ಕಟುಭಾವನೆ; ಪಾರುಷ್ಯ; ಕಾಠಿನ್ಯ; ನಿಷ್ಠುರತೆ; ದ್ವೇಷ; ವೈರ.
  • (ಅಶಿಷ್ಟ) ಧಾರ್ಷ್ಟ್ಯ; ಸೊಕ್ಕು; ದುರಹಂಕಾರ.

gall

ನಾಮವಾಚಕ

  • (ಮುಖ್ಯವಾಗಿ ಕುದುರೆಯ) ಕುರು; ಬೊಬ್ಬೆ; ಹೊಪ್ಪಳೆ; ಕೀವು ತುಂಬಿದ, ನೋವು ಕೊಡುವ – ಗುಳ್ಳೆ, ಬಾವು.
  • ಉಜ್ಜು – ಹುಣ್ಣು, ಗಾಯ.
  • ಬೇಗುದಿ; ಮನೋವೇದನೆ; ಮನಸ್ಸಿನ ನೋವು.
  • (ಏನೂ ಇಲ್ಲದಂತೆ) ಉಜ್ಜಿ ಹಾಕಿದ ಸ್ಥಳ.
  • ದೋಷ; ಊನ; ಕುಂದು; ನ್ಯೂನತೆ.
  • (ಕುರುಚಲು ಕಾಡಿನಲ್ಲಿಯ ಯಾ ಹೊಲದಲ್ಲಿಯ) ಬಟ್ಟಬಯಲು; ಬೋಳು ಪ್ರದೇಶ; ಖಾಲಿ ಜಾಗ.

gall

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಉಜ್ಜಿ ಉಜ್ಜಿ ಹುಣ್ಣಾಗು.

  • ಹುಣ್ಣಾಗುವಂತೆ ಉಜ್ಜು; ಗಾಯವಾಗುವಷ್ಟು ತಿಕ್ಕು.
  • ರೇಗಿಸು;ಪೀಡಿಸು; ಕಾಟಕೊಡು; ಕಾಡು; ಗೋಳು ಹುಯ್ದುಕೊ.
  • ಮಾನ ಕಳೆ; ಅವಮಾನಮಾಡು; ಹೀನಾಯಗೊಳಿಸು.

gall

ನಾಮವಾಚಕ

ಗಾಲ್‍; (ಮುಖ್ಯವಾಗಿ ಓಕ್‍) ಮರದಲ್ಲಿ ಒಂದು ಜಾತಿಯ ಕ್ರಿಮಿಯಿಂದಾದ, ಮಸಿ ತಯಾರಿಕೆ, ಚರ್ಮ ಹದಮಾಡುವುದು, ಬಣ್ಣಕಟ್ಟುವುದು, ಔಷಧ ತಯಾರಿಕೆಗಳಲ್ಲಿ ಬಳಸುವ ಗಂಟು.

gall

ಗುಣವಾಚಕ

(ಕ್ರಿಮಿಗಳ ವಿಷಯದಲ್ಲಿ) ಓಕ್‍ ಮರದಲ್ಲಿ ಗಾಲ್‍ಗಳನ್ನು ಯಾ ಗಂಟುಗಳನ್ನು ಉಂಟುಮಾಡುವ.

gall-bladder

ನಾಮವಾಚಕ

ಪಿತ್ತಕೋಶ; ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಸಂಗ್ರಹವಾಗುವ ಕೋಶ.

gall-fly

ನಾಮವಾಚಕ

ಗಾಲ್‍ ಕೀಟ; ಗಂಟು ಕೀಟ; ಓಕ್‍ ಮರದಲ್ಲಿ ಗಂಟುಂಟುಮಾಡುವ ಒಂದು ಜಾತಿಯ ಕ್ರಿಮಿ.

Search Dictionaries

Loading Results

Follow Us :   
  Download Bharatavani App
  Bharatavani Windows App