भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

galley

ನಾಮವಾಚಕ

ನುಡಿಗಟ್ಟು

in this etc. galley ಈ ಅನಿರೀಕ್ಷಿತ ಪರಿಸ್ಥಿತಿಯಲ್ಲಿ.

  • (ಮುಖ್ಯವಾಗಿ ಚರಿತ್ರೆ) (ಹಾಯಿಗಳನ್ನೂ ಹುಟ್ಟುಗಳನ್ನೂ ಬಳಸುವ, ಸಾಮಾನ್ಯವಾಗಿ ಗುಲಾಮರೋ ಕೈದಿಗಳೋ ನಡೆಸುವ) ಒಂದಂತಸ್ತಿನ ಚಪ್ಪಟೆಯ ಹಡಗು. Figure: galley-1
  • (ಚರಿತ್ರೆ) (ಒಂದು ಯಾ ಹೆಚ್ಚು ಅಂತಸ್ತುಗಳಲ್ಲಿ ಹುಟ್ಟು ಹಾಕಿ ನಡೆಸುವ) ಪ್ರಾಚೀನ ರೋಮನ್ನರ ಯಾ ಗ್ರೀಕರ ಯುದ್ಧನೌಕೆ.
  • (ಯುದ್ಧದ ಹಡಗಿನ ಕ್ಯಾಪ್ಟನ್‍ ಉಪಯೋಗಿಸುವ ತರಹದ) ತೆರಪು ದೋಣಿ; ಮೇಲುಗಡೆಯಲ್ಲಿ ಮುಚ್ಚಿರದ ದೊಡ್ಡ ಹುಟ್ಟು ದೋಣಿ.
  • ಹಡಗಿನ ಯಾ ವಿಮಾನದ ಅಡಿಗೆಮನೆ.
  • (ಮುದ್ರಣ) ಗ್ಯಾಲಿ; ಜೋಡಿಸಿದ ಮೊಳೆಗಳ ಸಾಲುಗಳನ್ನು ಇಡುವ, ಮೂರು ಕಡೆ ಅಂಚಿರುವ ಆಯತಾಕಾರದ ತಟ್ಟೆ.
  • = galley proof.

galley proof

ನಾಮವಾಚಕ

ಗ್ಯಾಲಿ – ಕರಡಚ್ಚು, ಪ್ರೂಹು; ಗೊತ್ತಾದ ಒಂದು ಆಕಾರದ ಪುಟಗಳಲ್ಲಿಯೋ, ಹಾಳೆಗಳಲ್ಲಿಯೋ ತೆಗೆಯದೆ, ಒಂದೇ ಕಾಲಮ್ಮಿನ ಉದ್ದದ ಕಾಗದಗಳಲ್ಲಿ ತೆಗೆದ ಕರಡಚ್ಚು ಪ್ರತಿ.

galley-slave

ನಾಮವಾಚಕ

  • ಗ್ಯಾಲಿ ಗುಲಾಮ; ಹಡಗಿನಲ್ಲಿ ಹುಟ್ಟು ಹಾಕುವ ದಂಡನೆಗೆ ಗುರಿಯಾದವನು.
  • (ರೂಪಕವಾಗಿ) ದುಡಿತದ ಕತ್ತೆ; ವಿರಾಮವಿಲ್ಲದೆ ದುಡಿಯಬೇಕಾದವನು.

galley-west

ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ) ಉಸಿರಾಡದಂತೆ; ಸೊಲ್ಲೆತ್ತದಂತೆ: he knocked his opponent galley-west ಅವನು ತನ್ನ ಎದುರಾಳಿಯನ್ನು ಸೊಲ್ಲೆತ್ತದಂತೆ ಹೊಡೆದು ಮಲಗಿಸಿದ.

galleyworm

ನಾಮವಾಚಕ

ಗ್ಯಾಲಿ ಹುಳು; ಹುಟ್ಟುಗಳಂತೆ ಅನೇಕ ಕಾಲುಗಳುಳ್ಳ, ಒಂದು ಬಗೆಯ ಹುಳು.

galliambic

ಗುಣವಾಚಕ

ಗ್ಯಾಲಿಯಾಂಬಿಕ್‍ ಛಂದಸ್ಸಿನ; ದ್ವಿಅಯಾಂಬಿಕ್‍ ಗಣದ; ಪಂಕ್ತಿಯಲ್ಲಿ ಎರಡು ಅಯಾಂಬಿಕ್‍ (U – ) ಗಣಗಳಿರುವ.

galliambic

ನಾಮವಾಚಕ

(ಸಾಮಾನ್ಯವಾಗಿ ಬಹುವಚನ) ಗ್ಯಾಲಿಯಾಂಬಿಕ್‍ ಛಂದಸ್ಸಿನಲ್ಲಿ, ಎರಡು ಅಯಾಂಬಿಕ್‍ ಗಣಗಳಿರುವ ಪಂಕ್ತಿಗಳಲ್ಲಿ, ರಚಿತವಾದ ಕವನ, ಪದ್ಯ.

galliard

ನಾಮವಾಚಕ

  • ಗ್ಯಾಲಿಯರ್ಡ್‍ (ನೃತ್ಯ); ವೇಗವಾದ, ಉಲ್ಲಾಸದ, ಇಬ್ಬರು ಕುಣಿಯುವ ತ್ರಿಪುಟಗತಿಯ ನೃತ್ಯ.
  • ಈ ನೃತ್ಯದ ಸಂಗೀತ.

gallic

ಗುಣವಾಚಕ

ಓಕ್‍ ಮರದ ಮೇಲೆ ಆಗುವ ಗಂಟಿನ ಯಾ ಆ ಗಂಟಿನಿಂದ ತಯಾರಿಸಿದ.

Gallic

ಗುಣವಾಚಕ

  • ಗಾಲ್‍ ಜನರ.
  • ಗಾಲ್‍ ಭಾಷೆಯ.
  • (ಹಾಸ್ಯ ಪ್ರಯೋಗ) ಹ್ರೆಂಚರ; ಹ್ರೆಂಚ್‍ ರೀತಿಯ.

gallic acid

ನಾಮವಾಚಕ

(ರಸಾಯನವಿಜ್ಞಾನ) ಗ್ಯಾಲಿಕ್‍ ಆಮ್ಲ; ಸಸ್ಯಪ್ರಪಂಚದಲ್ಲಿ ಅನೇಕವೇಳೆ ಮುಕ್ತ ಸ್ಥಿತಿಯಲ್ಲಿರುವ, ಟ್ಯಾನಿನ್‍ಗಳಲ್ಲಿ ಸಂಯುಕ್ತ ಸ್ಥಿತಿಯಲ್ಲಿರುವ, ಬರೆಯುವ ಶಾಯಿಯ ತಯಾರಿಕೆಯಲ್ಲಿ ಬಳಸುವ, ${\rm G}_7{\rm H}_6{\rm O}_7$ ಅಣುಸೂತ್ರವುಳ್ಳ, ಬಿಳಿಯ ಸ್ಫಟಿಕ ರೂಪದ, ಕಾರ್ಬನಿಕ ಸಂಯುಕ್ತ.

Gallican

ಗುಣವಾಚಕ

  • ‘ಗಾಲ್‍’ ಯಾ ಹ್ರಾನ್ಸಿನ ಪ್ರಾಚೀನ ಚರ್ಚಿನ.
  • (ಪೋಪನಿಗೆ ಸಂಬಂಧಿಸಿದಂತೆ ಸ್ವಲ್ಪಮಟ್ಟಿಗೆ ಸ್ವಯಮಾಧಿಪತ್ಯ ಸಾಧಿಸುವ, ಮೊದಲಿಗೆ ಹ್ರಾನ್ಸಿನ) ರೋಮನ್‍ ಕ್ಯಾಥೊಲಿಕ್‍ ಪಕ್ಷದ, ಪಂಗಡದ.

Gallican

ನಾಮವಾಚಕ

ಗ್ಯಾಲಿಕನ್‍ ಪಕ್ಷದ ಅನುಯಾಯಿ.

Gallicanism

ನಾಮವಾಚಕ

  • ಗ್ಯಾಲಿಕನ್‍ ಸಿದ್ಧಾಂತ; ಹಿಂದೆ ಹ್ರಾನ್ಸಿನಲ್ಲಿ ಪ್ರತಿಪಾದಿತವಾದ,ಪೋಪನಿಂದ ಸ್ವಲ್ಪಮಟ್ಟಿಗೆ ಸ್ವಯಮಾಧಿಪತ್ಯ ಸಾಧಿಸುವ ಹ್ರೆಂಚ್‍ ರೋಮನ್‍ ಕ್ಯಾಥೊಲಿಕ್‍ ಪಂಗಡದ ಸಿದ್ಧಾಂತ ಮತ್ತು ಆಚರಣೆಗಳ ಸೂತ್ರ.
  • ಗ್ಯಾಲಿಕನ್‍ ಸಿದ್ಧಾಂತದ ಯಾ ಅದಕ್ಕೆ ಸ್ವಯಮಾಧಿಪತ್ಯ ಬೇಕೆಂಬ ಸಮರ್ಥನೆ.

Gallicanist

ನಾಮವಾಚಕ

ಗ್ಯಾಲಿಕನ್‍ ಸಿದ್ಧಾಂತಿ ಯಾ ಸಮರ್ಥಕ.

gallice

ಕ್ರಿಯಾವಿಶೇಷಣ

ಹ್ರೆಂಚಿನಲ್ಲಿ; ಹ್ರೆಂಚ್‍ ರೀತಿಯಲ್ಲಿ (ಇಂಗ್ಲಿಷ್‍ ಮಾತು ಮೊದಲಾದವಕ್ಕೆ ಹೊಂದುವ ಹ್ರೆಂಚ್‍ ಮಾತು ಮೊದಲಾದವನ್ನು ಹೇಳುವಲ್ಲಿ ಬಳಕೆ).

Gallicise

ಕ್ರಿಯಾಪದ

= Gallicize.

Gallicism

ನಾಮವಾಚಕ

  • ಹ್ರೆಂಚ್‍ ನುಡಿಗಟ್ಟು; ಪ್ರೆಂಚ್‍ ಭಾಷಾ – ವೈಶಿಷ್ಟ್ಯ, ಸಂಪ್ರದಾಯ; (ಮುಖ್ಯವಾಗಿ ಅನ್ಯ ಭಾಷೆಯ ಭಾಷಣಕಾರ ಯಾ ಲೇಖಕ ಬಳಸುವಂಥ) ಹ್ರೆಂಚ್‍ ವಾಕ್ಸರಣಿ.
  • ಧಾರಾಳವಾಗಿ ಹ್ರೆಂಚ್‍ ಭಾಷಾ ಸರಣಿಯನ್ನು ಬಳಸುವುದು.
  • (ನಡೆನುಡಿ, ಆಚಾರವಿಚಾರ. ಮೊದಲಾದವುಗಳಲ್ಲಿ) ಹ್ರೆಂಚ್‍ತನ; ಹ್ರೆಂಚರ ವೈಶಿಷ್ಟ್ಯ, ವೈಲಕ್ಷಣ್ಯ, ಪದ್ಧತಿ, ರೀತಿ: cheek kissing is a gallicism ಕೆನ್ನೆಗೆ ಮುತ್ತಿಡುವುದುಒಂದು ಹ್ರೆಂಚ್‍ ಪದ್ಧತಿ.

Gallicize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಹ್ರೆಂಚರಂತಾಗು; ಹ್ರೆಂಚರ ನಡೆನುಡಿ, ಆಲೋಚನೆ, ಮನೋಧರ್ಮ, ಮೊದಲಾದವುಗಳನ್ನು ಅನುಸರಿಸು ಯಾ ಅನುಕರಿಸು.

  • ಹ್ರೆಂಚೀಕರಿಸು; ಹ್ರೆಂಚರ ಗುಣಲಕ್ಷಣಗಳನ್ನು ಪಡೆಯುವಂತೆ ಮಾಡು: Gallicize an English writer ಇಂಗ್ಲಿಷ್‍ ಲೇಖಕನನ್ನು ಹ್ರೆಂಚ್‍ ಲೇಖಕನನ್ನಾಗಿ ಕಾಣುವಂತೆ ಮಾಡು.
  • (ಬೇರೆ ಭಾಷೆಯ ಪದ ಯಾ ಪದಗುಚ್ಛವನ್ನು) ಹ್ರೆಂಚ್‍ ಕಾಗುಣಿತಕ್ಕೆ ಯಾ ಉಚ್ಚಾರಣೆಗೆ ಯಾ ಹ್ರೆಂಚ್‍ ಸಂವಾದಿ ಪದಕ್ಕೆ ಯಾ ಪದಗುಚ್ಛಕ್ಕೆ ಅಳವಡಿಸು: Walker gallicized his name to Marcheur ವಾಕರ್‍ ತನ್ನ ಹೆಸರನ್ನು ಮಾರ್ಚರ್‍ ಎಂದು ಅಳವಡಿಸಿಕೊಂಡ.

galligaskins

ನಾಮವಾಚಕ

(ಬಹುವಚನ) (ಹಾಸ್ಯ ಪ್ರಯೋಗ) ಷರಾಯಿ; ಚಲ್ಲಣ; ಇಜಾರ.

Search Dictionaries

Loading Results

Follow Us :   
  Download Bharatavani App
  Bharatavani Windows App