English-Kannada Nighantu (University of Mysore)
University of Mysore
G
ಸಂಕ್ಷಿಪ್ತ
- gauss.
- giga.
- gravitational constant.
- (ಅಮೆರಿಕನ್ ಪ್ರಯೋಗ, ಅಶಿಷ್ಟ) ಸಾವಿರ ಡಾಲರ್ಗಳು ಯಾ ಪೌಂಡ್ಗಳು
g
ಸಂಕ್ಷಿಪ್ತ
- gelding.
- gram(s).
- acceleration due to gravity.
- gravity.
G, g
ನಾಮವಾಚಕ
- ಇಂಗ್ಲೀಷ್ ವಮಾಲೆಯ ಏಳನೆಯ ಅಕ್ಷರ.
- (ಸಂಗೀತ)
- ಪಂಚಮಿ; ಇಂಗ್ಲೀಷ್ ಸ್ವರಗ್ರಾಮದಲ್ಲಿ ಐದನೆಯ ಸ್ವರ (“ಪ”).
- ಅದಕ್ಕೆ ಸಂವಾದಿಯಾದ ಆಧಾರ ಸ್ವರ: ಪಂಚಮಿ ಶ್ರುತಿ.
G-man
ನಾಮವಾಚಕ
- (ಅಶಿಷ್ಟ) ಅಮೆರಿಕದ ಕೇಂದ್ರ ಸರ್ಕಾರದ ಪತ್ತೇದಾರಿ ಅಧಿಕಾರಿ; ಸರ್ಕಾರಿ ಪತ್ತೇದಾರ.
- (ಐರಿಷ್ ಭಾಷೆ) ರಾಜಕೀಯ ಪತ್ತೇದಾರ.
G-string
ನಾಮವಾಚಕ
- (ಸಂಗೀತ) ಜೀ – ತಂತಿ; G – ಸ್ವರವನ್ನು ಮಿಡಿಸುವ ಪಿಟೀಲು ಮೊದಲಾದವುಗಳ ತಂತಿ.
- (ಅಮೆರಿಕನ್, ಇಂಡಿಯನ್ ಮೇಳ ಗಾಯಕಿ ಮೊದಲಾದವರು ಧರಿಸುವ) ಕೌಪೀನ; ಲಂಗೋಟಿ.
- ಉಡಿದಾರ; ಕೌಪೀನ ಕಟ್ಟಲು ಸೊಂಟಕ್ಕೆ ಕಟ್ಟಿಕೊಳ್ಳುವ ದಾರ.
G-suit
ನಾಮವಾಚಕ
ಜೀ – ಪೋಷಾಕು; ಜೀ – ಸೂಟು; ಅತ್ಯಂತ ವೇಗದಲ್ಲಿ ಹೋಗುವಾಗ ವಿಮಾನಚಾಲಕರು ಮೊದಲಾದವರು ಹಾಕಿಕೊಳ್ಳುವ, ಗುರುತ್ವಾಕರ್ಷಣ ಬಲಗಳನ್ನು ತಡೆದುಕೊಳ್ಳುವಂತೆ ತಯಾರಿಸಿದ, ದೇಹದ ವಿವಿಧ ಅಂಗಗಳ ಮೇಲೆ ತಾನೇ ತಾನಾಗಿ ತುಂಬಿಕೊಳ್ಳುವಂಥ ಚೀಲಗಳುಳ್ಳ ಪೋಷಾಕು.
GA
ಸಂಕ್ಷಿಪ್ತ
(ಅಮೆರಿಕನ್ ಪ್ರಯೋಗ) Georgia.
Ga
ಸಂಕೇತ
(ರಸಾಯನವಿಜ್ಞಾನ) gallium.
Ga.
ಸಂಕ್ಷಿಪ್ತ
(ಅಮೆರಿಕನ್ ಪ್ರಯೋಗ) Georgia.
gab
ನಾಮವಾಚಕ
ನುಡಿಗಟ್ಟು
(ಆಡುಮಾತು) (ವೃಥಾ) ಮಾತು; ಹರಟೆ; ಗಪ್ಪಿ.
- gift of the gab
- ವಾಕ್ಶಕ್ತಿ;ಭಾಷಣಶಕ್ತಿ; ವಾಕ್ಪಟುತ್ವ; ವಾಗ್ಮಿತೆ; ಮಾತನಾಡುವ ಶಕ್ತಿ;
- ವಾಚಾಳತೆ; ಮಾತಾಳಿತನ; ಹರಟೆ ಮಲ್ಲತನ.
- stop your gab ಹರಟೆ ನಿಲ್ಲಿಸು; ಬಾಯಿಮುಚ್ಚು; ಮಾತು ಸಾಕುಮಾಡು.
gabardine
ನಾಮವಾಚಕ
- ಗಾಬರ್ಡೀನ್:
- ಮುಖ್ಯವಾಗಿ ಉಣ್ಣೆಯ ಯಾ ಹತ್ತಿಯ, ಮೂಲೆ ನೆಯ್ಗೆಯ, ನುಣುಪಾದ ಗಟ್ಟಿ ಬಟ್ಟೆ.
- ಆ ಬಟ್ಟೆಯಿಂದ ತಯಾರಿಸಿದ ಉಡುಪು.
- ಮಳೆಯಂಗಿಗಳನ್ನು ಮಾಡಲು ಬಳಸುವ ಬಟ್ಟೆ, ಅರಿವೆ.
gabber
ನಾಮವಾಚಕ
ಹರಟೆಮಲ್ಲ ಯಾ ಹರಟೆಮಲ್ಲಿ; ಬಾಯಿಬಡುಕ ಯಾ ಬಾಯಿಬಡುಕಿ.
gabble
ಸಕರ್ಮಕ ಕ್ರಿಯಾಪದ
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಓದುವಾಗ) ಗಟ್ಟಿಯಾಗಿ ಬೇಗಬೇಗನೆ ಓದು.
- ಲೊಟಗುಟ್ಟು; ಬಡಬಡಿಸು; ಬಡಬಡನೆ ಅರ್ಥವಾಗದಂತೆ ಮಾತನಾಡು ( ಅಕರ್ಮಕ ಕ್ರಿಯಾಪದ ಸಹ.)
- ಬೇಗಬೇಗ ಗಟ್ಟಿಯಾಗಿ ಓದು ಯಾ ಮಾತನಾಡು.
gabble
ನಾಮವಾಚಕ
ಬಡಬಡಿಕೆ; ಲೊಟಗುಟ್ಟುವಿಕೆ; ಅರ್ಥವಾಗದಂತೆ ಬಡಬಡನೆ ಮಾತನಾಡುವುದು.
gabbler
ನಾಮವಾಚಕ
ಅರ್ಥವಾಗದಂತೆ ಬಡಬಡನೆ ಮಾತನಾಡುವವ.
gabbro
ನಾಮವಾಚಕ
(ಭೂವಿಜ್ಞಾನ) ಗ್ರನೈಟ್ ಮತ್ತು ಡಾಲರೈಟ್ಗಳನ್ನು ಹೋಲುವ, ಒಂದು ತೆರನ ಪ್ರತ್ಯಾಮ್ಲೀಯ ಅಗ್ನಿಶಿಲೆ.
gabbroic
ಗುಣವಾಚಕ
(ಭೂವಿಜ್ಞಾನ) ಗಾಬ್ೋ ಶಿಲೆಯ ಯಾ ಅದಕ್ಕೆ ಸಂಬಂಧಿಸಿದ.
gabbroid
ಗುಣವಾಚಕ
ಗ್ಯಾಬ್ರಾಯ್ಡ್; ಗ್ಯಾಬ್ರಾಭ; ಗ್ರ್ಯಾಬ್ರೋ ಶಿಲೆಯನ್ನು ಹೋಲುವ.
gabby
ಗುಣವಾಚಕ
(ಆಡುಮಾತು) ವಾಚಾಳಿಯಾದ; ಮಾತಾಳಿಯಾದ; ಹರಟೆಮಲ್ಲನಾದ.
gabelle
ನಾಮವಾಚಕ
(ಚರಿತ್ರೆ) ತೆರಿಗೆ; ಕರ (ಸಾಮಾನ್ಯವಾಗಿ ವಿದೇಶೀ ತೆರಿಗೆ, ಮುಖ್ಯವಾಗಿ ಹ್ರಾನ್ಸಿನ ಕ್ರಾಂತಿಪೂರ್ವ ಕಾಲದ ಉಪ್ಪಿನ ತೆರಿಗೆ).