भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hypoxic

ಗುಣವಾಚಕ

(ವೈದ್ಯಶಾಸ್ತ್ರ) ಆಮ್ಲಜನಕದ ಕೊರತೆ.

hypso-

ಸಮಾಸ ಪೂರ್ವಪದ

ಎತ್ತರ, ಉನ್ನತಿ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

hypsographic

ಗುಣವಾಚಕ

ನಿಮ್ನೋನ್ನತಿಶಾಸ್ತ್ರದ; ಭೂಮಿಯ ಮೇಲ್ಮೈಯ ಉಬ್ಬು ತಗ್ಗುಗಳನ್ನು ವರ್ಣಿಸುವ ಯಾ ನಕ್ಷೆ ಮಾಡುವ.

hypsographical

ಗುಣವಾಚಕ

= hypsographic.

hypsography

ನಾಮವಾಚಕ

ನಿಮ್ನೋನ್ನತಿಶಾಸ್ತ್ರ; ಉಬ್ಬುತಗುಗ್ಗಳ ಶಾಸ್ತ್ರ; ಸಮುದ್ರ ಮಟ್ಟದಿಂದ ಭೂಪ್ರದೇಶಗಳ ಎತ್ತರತಗ್ಗುಗಳನ್ನು ವಿವರಿಸುವುದಕ್ಕೆ ಯಾ ನಕ್ಷೆ ಮಾಡುವುದಕ್ಕೆ ಸಂಬಂಧಿಸಿದ ಭೂಗೋಳಶಾಸ್ತ್ರ ವಿಭಾಗ.

hypsometer

ನಾಮವಾಚಕ

ಉನ್ನತಿಮಾಪಕ; ಸಮುದ್ರಮಟ್ಟದಿಂದ ಭೂ ಪ್ರದೇಶಗಳ ಎತ್ತರಗಳನ್ನು (ಮುಖ್ಯವಾಗಿ ನೀರಿನ ಕುದಿಬಿಂದು ಮೊದಲಾದವುಗಳ ಮೂಲಕ) ಅಳೆಯುವ ಸಾಧನ.

hypsometric

ಗುಣವಾಚಕ

ಉನ್ನತಿಮಾಪಕಕ್ಕೆ ಯಾ ಉನ್ನತಿಮಾಪನಕ್ಕೆ ಸಂಬಂಧಿಸಿದ.

hypsometrical

ಗುಣವಾಚಕ

= hypsometric.

hypsometry

ನಾಮವಾಚಕ

ಉನ್ನತಿಮಾಪನ; ಎತ್ತರ ಅಳೆಯುವಿಕೆ; ಸಮುದ್ರ ಮಟ್ಟದಿಂದ ಭೂಪ್ರದೇಶಗಳ ಎತ್ತರಗಳನ್ನು ಅಳೆಯುವಿಕೆ.

hyrax

ನಾಮವಾಚಕ

(ಜೀವವಿಜ್ಞಾನ) ಹೈರ್ಯಾಕ್ಸ್‍; ಹೈರಕಾಯ್ಡಿಯ ಗಣಕ್ಕೆ ಸೇರಿದ, ಸಿರಿಯಾ ದೇಶದ ಬಂಡೆ ಮೊಲ ಮತ್ತು ದಕ್ಷಿಣ ಆಫ್ರಿಕದ ಬಂಡೆ ಬ್ಯಾಡ್ಜರ್‍ಗಳನ್ನೊಳಗೊಂಡ ಒಂದು ಸಸ್ತನಿ ಕುಲ.

hyson

ನಾಮವಾಚಕ

ಹೈಸನ್‍; ಚೀನಾದ ಒಂದು ಬಗೆಯ ಹಸುರು ಟೀ – ಎಲೆ, ಸೊಪ್ಪು.

hyssop

ನಾಮವಾಚಕ

  • ಹಿಸಪ್‍; ಹಿಂದೆ ಔಷಧಗಳಲ್ಲಿ ಬಳಸುತ್ತಿದ್ದ, ಪುದೀನ ಬಳಗದ ಒಂದು ಯೂರೋಪಿಯನ್‍ ಸಸ್ಯ.
  • ಹಿಸಪ್‍:
    1. ಯೆಹೂದ್ಯರ ಮತಸಂಸ್ಕಾರಗಳಲ್ಲಿ ಪ್ರೋಕ್ಷಣೆಗಾಗಿ ಬಳಸುವ ಕಡ್ಡಿಗಳನ್ನು ಕೊಡುವ ಒಂದು ಸಸ್ಯ.
    2. ಆ ಕಡ್ಡಿಗಳಿಂದ ಮಾಡಿದ ಪ್ರೋಕ್ಷಣ ಕೂರ್ಚ.

hysterectomize

ಸಕರ್ಮಕ ಕ್ರಿಯಾಪದ

(ಶಸ್ತ್ರವೈದ್ಯ) ಗರ್ಭಕೋಶವನ್ನು ಕತ್ತರಿಸಿ ಹಾಕು.

hysterectomy

ನಾಮವಾಚಕ

(ಶಸ್ತ್ರವೈದ್ಯ) ಗರ್ಭಾಶಯೋಚ್ಛೇದನ; ಗರ್ಭಕೋಶವನ್ನು ಕತ್ತರಿಸಿ ತೆಗೆದುಹಾಕುವಿಕೆ.

hysteresis

ನಾಮವಾಚಕ

(ಭೌತವಿಜ್ಞಾನ) ವಿಲಂಬನ; ಹಿಸ್ಟರೀಸಿಸ್‍; ಯಾವುದೇ ಭೌತಪ್ರೇರಣೆಯಿಂದ ಉಂಟಾಗುವ ಪರಿಣಾಮವು (ಉದಾಹರಣೆಗೆ ಕಾಂತಕ್ಷೇತ್ರದಿಂದ ಉಂಟಾಗುವ ಕಾಂತತೆ, ಅನಿಲದ ಒತ್ತಡದಿಂದ ಯಾವುದೇ ಪದಾರ್ಥವು ಆ ಅನಿಲವನ್ನು ಹೀರಿಕೊಳ್ಳುವುದು, ಇತ್ಯಾದಿ) ಆ ಪ್ರೇರಣೆಗಿಂತ ಹಿಂದೆ ಬೀಳುವುದು.

hysteria

ನಾಮವಾಚಕ

ಹಿಸ್ಟೀರಿಯ; ಉನ್ಮಾದ:

  • ಚಿತ್ತೋನ್ಮಾದ; ಚಿತ್ತವಿಕೋಪ; ತೀವ್ರಭಾವೋದ್ರೇಕ, ಸಂವೇದನೆ ಮತ್ತು ಕ್ರಿಯಾಶಕ್ತಿಗಳ ಪ್ರಕ್ಷೋಭೆ ಮೊದಲಾದ ವಿವಿಧ ಅಪಸಾಮಾನ್ಯ ಪರಿಣಾಮಗಳು, ಅರಿವಳಿಕೆ, ಸೆಳವು ಮೊದಲಾದವುಗಳಿಂದ ಕೂಡಿದ, ಸಾಮಾನ್ಯವಾಗಿ ನೈತಿಕ ಹಾಗು ಬೌದ್ಧಿಕ ಚಾಂಚಲ್ಯಗಳನ್ನು ಒಳಗೊಂಡ, ಒಂದು ನರವ್ಯಾಧಿ.
  • ಚಿತ್ತಕ್ಷೋಭೆ; ಚಿತ್ತೋದ್ರೇಕ ; ಹುಚ್ಚು ಹುಚ್ಚು ನಗು ಯಾ ಅಳು ಮೊದಲಾದವುಗಳಿಂದ ಕೂಡಿದ ಭಾವದ ಯಾ ಭಯದ, ನಿಯಂತ್ರಿಸಲಾಗದ ವಿಸ್ಫೋಟ, ಕೆರಳು.

hysteric

ಗುಣವಾಚಕ

= hysterical.

hysteric

ನಾಮವಾಚಕ

ಹಿಸ್ಟೀರಿಯಾ ರೋಗಿ; ಚಿತ್ತೋನ್ಮಾದಗ್ರಸ್ತ; ಚಿತ್ತೋನ್ಮಾದದಿಂದ ನರಳುತ್ತಿರುವ ವ್ಯಕ್ತಿ.

hysterical

ಗುಣವಾಚಕ

  • ಚಿತ್ತೋನ್ಮಾದದ ಯಾ ಚಿತ್ತೋನ್ಮಾದಕ್ಕೆ ಸಂಬಂಧಿಸಿದ.
  • ಚಿತ್ತೋನ್ಮಾದಗ್ರಸ್ತ; ಚಿತ್ತೋನ್ಮಾದ – ಹತ್ತಿದ, ಹಿಡಿದ.
  • ಚಿತ್ತೋನ್ಮಾದ ಲಕ್ಷಣದ; ಚಿತ್ತೋನ್ಮಾದದ ಗುಣಲಕ್ಷಣಗಳುಳ್ಳ.
  • ಭಾವೋದ್ರೇಕದ; ಭಾವಾವಿಷ್ಟ; ಭಯ, ಭಾವ ಯಾ ಭಾವಾಘಾತದಿಂದ ಸಂಯಮ, ವಿವೇಕ ಕಳೆದುಕೊಂಡ; ನಿಯಂತ್ರಿಸಲಾಗದ ಭಾವಕ್ಕೆ ವಶನಾದ.

hysterically

ಕ್ರಿಯಾವಿಶೇಷಣ

  • ಚಿತ್ತೋನ್ಮಾದದಿಂದ.
  • ಭಾವೋದ್ರೇಕದಿಂದ; ಭಾವಾವೇಶದಿಂದ.

Search Dictionaries

Loading Results

Follow Us :   
  Download Bharatavani App
  Bharatavani Windows App