भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

Hab.

ಸಂಕ್ಷಿಪ್ತ

Habakkuk (ಹಳೆಯ ಒಡಂಬಡಿಕೆ).

habanera

ನಾಮವಾಚಕ

  • ವಿಳಂಬಕಾಲದ ದ್ವಿ – ತಾಳದಲ್ಲಿ ಮಾಡುವ, ಕ್ಯೂಬಾ ದೇಶದ ನರ್ತನ.
  • ಈ ನರ್ತನದ ಸಂಗೀತ.

habeas corpus

ನಾಮವಾಚಕ

ಹೇಬಿಯಸ್‍ ಕಾರ್ಪಸ್‍; ಆಸಾಮಿ ಹಾಜರಿ ಹುಕುಂ; ವ್ಯಕ್ತಿ ಹಾಜರಿ ಆಜ್ಞೆ; (ಒಬಬನ ಬಂಧನ ನ್ಯಾಯವಿಹಿತವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡಲು ನ್ಯಾಯಾಧಿಪತಿಯ ಮುಂದೆ) ವ್ಯಕ್ತಿಯನ್ನು ಸಾಕ್ಷಾತ್ತಾಗಿ ಹಾಜರು ಮಾಡಬೇಕೆಂದು ಕೊಟ್ಟ ಆಜ್ಞಾ ಪತ್ರ.

Habeas Corpus Act

ನಾಮವಾಚಕ

‘ಹೇಬಿಯಸ್‍ ಕಾರ್ಪಸ್‍’ ಶಾಸನ; ಆಸಾಮಿ ಹಾಜರಿ ಹುಕುಂ ಮಸೂದೆ; 1679 ರಲ್ಲಿ ಇಂಗ್ಲಡಿನ ಎರಡನೆಯ ಚಾರ್‍ಲ್ಸ್‍ ದೊರೆಯು ಜಾರಿಗೆ ತಂದ, ಹೇಬಿಯಸ್‍ ಕಾರ್ಪಸ್‍ ಶಾಸನ.

haberdasher

ನಾಮವಾಚಕ

  • ಸಣ್ಣ ಪುಟ್ಟ ಉಡುಪಿನ ವಸ್ತುಗಳ ಚಿಲ್ಲರೆ ವ್ಯಾಪಾರಿ; ಉಡುಪಿಗೆ ಸಂಬಂಧಿಸಿದ ದಾರ, ಸೂಜಿ, ರಿಬ್ಬನ್‍, ಮೊದಲಾದವುಗಳ ಸಣ್ಣ ವ್ಯಾಪಾರಿ.
  • (ಅಮೆರಿಕನ್‍ ಪ್ರಯೋಗ) ಗಂಡಸರ ಉಡುಗೆ – ತೊಡಿಗೆಗಳ ವ್ಯಾಪಾರಿ.

haberdashery

ನಾಮವಾಚಕ

  • ಸಣ್ಣಪುಟ್ಟ ಉಡುಪುಗಳ್ಳನ್ನು ಮಾರುವ ಚಿಲ್ಲರೆ ಅಂಗಡಿ.
  • ಅಂಥ ಅಂಗಡಿಯಲ್ಲಿ ಮಾರಾಟವಾಗುವ ಸಣ್ಣಪುಟ್ಟ ಬಟ್ಟೆಬರೆ ಮೊದಲಾದವು.
  • ಗಂಡಸರ ಉಡುಪಿನ ಅಂಗಡಿ.

habergeon

ನಾಮವಾಚಕ

(ಚರಿತ್ರೆ) ತೋಳಿಲ್ಲದ ಉಕ್ಕಿನ ಕವಚ.

habile

ಗುಣವಾಚಕ

(ಸಾಹಿತ್ಯಕ ಪ್ರಯೋಗ) ಚಾಕಚಕ್ಯವುಳ್ಳ; ಕುಶಲನಾದ; ನಿಪುಣನಾದ; ಕೈಚಳಕದ; ಜಾಣ್ಮೆಯ; ಚತುರ; ಚತುರತೆಯ.

habiliment

ನಾಮವಾಚಕ

  • (ಬಹುವಚನದಲ್ಲಿ) ಯಾವುದೇ ಉದ್ಯೋಗಕ್ಕೆ, ಅಧಿಕಾರ ಸ್ಥಾನಕ್ಕೆ ಯಾ ಸಂದರ್ಭಕ್ಕೆ ತಕ್ಕುದಾಗುವ – ಉಡುಪು, ಪೋಷಾಕು.
  • (ಹಾಸ್ಯ ಪ್ರಯೋಗ) ಸಾಮಾನ್ಯ ಬಟ್ಟೆಬರೆ, ಉಡುಪು.
  • (ಪ್ರಾಚೀನ ಪ್ರಯೋಗ) ಸಜ್ಜು; ಉಡುಗೆ ತೊಡಿಗೆ; ವೇಷ ಭೂಷಣ.

habilitate

ಅಕರ್ಮಕ ಕ್ರಿಯಾಪದ

ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಜರ್ಮನ್‍ ವಿಶ್ವವಿದ್ಯಾನಿಲಯದಲ್ಲಿ ಉಪಾಧ್ಯಾಯನ) ಹುದ್ದೆಗೆ ಅರ್ಹನಾಗು, ಅರ್ಹತೆ ಗಳಿಸಿಕೊ. (ಪ್ರಾಚೀನ ಪ್ರಯೋಗ) ಉಡುಗೆ, ತೊಡಿಗೆ – ಒದಗಿಸು.

habilitation

ನಾಮವಾಚಕ

  • ಉದ್ಯೋಗಾರ್ಹತೆ; ಉದ್ಯೋಗ ಪಡೆಯಲು ಅರ್ಹತೆ, ಶಿಕ್ಷಣ ಪಡೆಯುವಿಕೆ ಯಾ ನೀಡುವಿಕೆ.
  • ಪುನಶ್ಚೇತನಗೊಳಿಸುವುದು: habilitation of palsy patients ಅದುರುವಾಯು ರೋಗಿಗಳನ್ನು ಪುನಶ್ಚೇತನಗೊಳಿಸುವುದು.

habit

ನಾಮವಾಚಕ

ಪದಗುಚ್ಛ

ನುಡಿಗಟ್ಟು

  • ಪದ್ದತಿ; ರೂಢಿ; ಅಭ್ಯಾಸ; ಬಳಕೆ; ವಾಡಿಕೆ; ಪಾಟಿ; ಚಾಳಿ; ಚಾಲು; ಚಟ: he is in the habit of contradiction ಏತಿ ಎಂದರೆ ಪ್ರೇತಿ ಎನ್ನುವುದು ಅವನ ಚಾಳಿ. daily bathing is a good habit ದಿನಾ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.
  • ಮನಃ ಪ್ರಕೃತಿ; ಮನಸ್ಸಿನ – ಪ್ರವೃತ್ತಿ, ಸ್ವಭಾವ: habit of mind ಮನಸ್ಸಿನ ಸ್ವಭಾವ.
  • ದೇಹಪ್ರಕೃತಿ: a man of corpulent habit ಸ್ಥೂಲ ದೇಹಪ್ರಕೃತಿಯವನು.
  • (ಸಸ್ಯವಿಜ್ಞಾನ, ಜೀವವಿಜ್ಞಾನ) ಬೆಳೆಯುವ ಸ್ವಭಾವ ರೀತಿ: a grass ubiquitous in its habit ಎಲ್ಲೆಲ್ಲೂ ಬೆಳೆಯುವ ಸ್ವಭಾವದ ಹುಲ್ಲು.
  • (ಮುಖ್ಯವಾಗಿ ದಾರ್ಮಿಕ ಪಂಥಕ್ಕೆ ಸಂಬಂಧಿಸಿದ) ಪೋಷಾಕು.
  • ಸ್ತ್ರೀಯ ಕುದುರೆ ಸವಾರಿಯ ಪೋಷಾಕು.
  • (ಪ್ರಾಚೀನ ಪ್ರಯೋಗ) ಉಡುಪು.
  • (ಮನಶ್ಶಾಸ್ತ್ರ) ಅನೈಚಿಕ ಪ್ರತಿಕ್ರಿಯೆ; ಅಪ್ರಾಜ್ಞಿಕ ಪ್ರತಿಕ್ರಿಯೆ; ನಿರ್ದಿಷ್ಟ ಸಂದರ್ಭವೊಂದಕ್ಕೆ ತನ್ನಷ್ಟಕ್ಕೆ ತಾನೆ ಒದಗುವ, ಪ್ರಜ್ಞಾಪೂರ್ವಕವಾಗಿ ಆಗಿರದ ಪ್ರತಿಕ್ರಿಯೆ.
  • (ಆಡುಮಾತು) ದುರಭ್ಯಾಸ; ಕೆಟ್ಟ ಚಾಳಿ, ಉದಾಹರಣೆಗೆ ಮಾದಕವಸ್ತುಗಳನ್ನು ತಿನ್ನುವ ಯಾ ಕುಡಿಯುವ ಅಭ್ಯಾಸ, ಚಾಳಿ.

habit

ಸಕರ್ಮಕ ಕ್ರಿಯಾಪದ

  • (ಸಾಮಾನ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ) ಉಡುಪು ತೊಡಿಸು; ಬಟ್ಟೆಹಾಕು.
  • (ಪ್ರಾಚೀನ ಪ್ರಯೋಗ) ವಾಸಿಸು; ವಾಸಮಾಡು.

habit-forming

ಗುಣವಾಚಕ

ಚಾಳಿಯಾಗಿಸುವ; ಅಭ್ಯಾಸವಾಗಿಸುವ; ರೂಢಿ ಹಿಡಿಸುವ.

habitability

ನಾಮವಾಚಕ

ವಾಸಾರ್ಹತೆ; ವಾಸಯೋಗ್ಯವಾಗಿರುವುದು.

habitable

ಗುಣವಾಚಕ

ವಾಸಯೋಗ್ಯ; ವಾಸಮಾಡಲು ಸಾಧ್ಯವಾದ.

habitableness

ನಾಮವಾಚಕ

= habitability.

habitably

ಕ್ರಿಯಾವಿಶೇಷಣ

ವಾಸಯೋಗ್ಯವಾಗಿ; ವಾಸಿಸಲು ಸಾಧ್ಯವಾಗುವ ರೀತಿಯಲ್ಲಿ.

habitant

ನಾಮವಾಚಕ

  • ನಿವಾಸಿ.
  • (ಉಚ್ಚಾರಣೆ ಆಬಿಟಾಙ್‍) (ಕೆನಡಾ ಮೊದಲಾದ ದೇಶದಲ್ಲಿ) ಮೊಟ್ಟ ಮೊದಲಲ್ಲೇ ನೆಲಸಿದ ಹ್ರಾನ್ಸಿನ ವಲಸೆಗಾರ ಯಾ ಅವನ ಸಂತತಿಯವನು.

habitat

ನಾಮವಾಚಕ

  • ಆವಾಸಸ್ಥಾನ; ಸಸ್ಯದ ಯಾ ಪ್ರಾಣಿಯ ಸ್ವಾಭಾವಿಕ ನೆಲೆ, ಹುಟ್ಟಿ ಬೆಳೆಯುವ ಸ್ಥಳ.
  • ತವರು; ಇರುನೆಲೆ.

Search Dictionaries

Loading Results

Follow Us :   
  Download Bharatavani App
  Bharatavani Windows App