भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

habitation

ನಾಮವಾಚಕ

  • ವಾಸಮಾಡುವುದು; ವಾಸಮಾಡುವಿಕೆ: fit for human habitation ಮನುಷ್ಯರು ವಾಸಿಸಲು ಯೋಗ್ಯವಾದ ಮನೆ, ಗೃಹ.
  • ನಿವಾಸ; ವಸತಿ; ವಾಸಿಸುವ ಸ್ಥಳ.

habitual

ಗುಣವಾಚಕ

  • ಸಂಪ್ರದಾಯದ; ಪದ್ಧತಿಯ; ಅಭ್ಯಾಸದ; ರೂಢಿಯ; ಬಳಕೆಯ; ವಾಡಿಕೆಯ.
  • ನಿತ್ಯಗಟ್ಟಲೆಯ; ಅನುದಿನದ; ದಿನಂಪ್ರತಿಯ.
  • (ಗೊತ್ತಾದ) ಚಾಳಿಗೆ, ಅಭ್ಯಾಸಕ್ಕೆ – ಬಿದ್ದ; ಚಟಕ್ಕೆ ಸಿಕ್ಕಿದ: a habitual drunkard ಕುಡಿತದ ಚಾಳಿಯವನು.

habitually

ಕ್ರಿಯಾವಿಶೇಷಣ

  • ಪದ್ದತಿಯಾಗಿ; ರೂಢಿಯಾಗಿ.
  • ದಿನಂಪ್ರತಿ; ಸದಾ; ಯಾವಾಗಲೂ.
  • ಅಭ್ಯಾಸದಂತೆ; ಬಳಕೆಯಂತೆ.
  • ಚಾಳಿಯಾಗಿ; ಚಟವಾಗಿ.

habituate

ಸಕರ್ಮಕ ಕ್ರಿಯಾಪದ

ರೂಢಿ, ಅಭ್ಯಾಸ – ಮಾಡು, ಮಾಡಿಕೊ; ಬಳಕೆಯಾಗಿಸು; ಬಳಕೆಗೆ ತರು; ಒಗ್ಗಿಸು; ಒಗ್ಗಿಸಿಕೊ.

habituation

ನಾಮವಾಚಕ

ರೂಢಿ, ಅಭ್ಯಾಸ – ಮಾಡಿಕೊಳ್ಳುವುದು; ಬಳಕೆಗೆ ತರುವುದು; ಒಗ್ಗಿಸುವುದು ಯಾ ಒಗ್ಗಿಸಿಕೊಳ್ಳುವುದು.

habitude

ನಾಮವಾಚಕ

  • ಮನಃಪ್ರಕೃತಿ ಯಾ ದೇಹಪ್ರಕೃತಿ; ಮನಸ್ಸಿನ ಯಾ ದೇಹದ – ಸ್ವಭಾವ, ಒಲವು, ಪ್ರವೃತ್ತಿ, ಪದ್ಧತಿ, ರೂಢಿ.
  • ವಾಡಿಕೆ; ಸಂಪ್ರದಾಯ; ಬಳಕೆ.
  • ಸ್ವಭಾವ ಒಲವು; ಪ್ರವೃತ್ತಿ.

habitue

ನಾಮವಾಚಕ

  • (ಒಂದು ಸ್ಥಳಕ್ಕೆ) ವಾಡಿಕೆಯಾಗಿ ಬಂದು ಹೋಗುವವನು.
  • (ಒಂದು ಸ್ಥಳದಲ್ಲಿ) ವಾಡಿಕೆಯಾಗಿ ವಾಸಮಾಡುವವನು.

hachures

ನಾಮವಾಚಕ

(ಬಹುವಚನ) ಇಳಿಜಾರು ರೇಖೆಗಳು; ಭೂಪಟದಲ್ಲಿ ಬೆಟ್ಟಗುಡ್ಡ ಮೊದಲಾದವುಗಳ ಇಳಿಜಾರನ್ನು ಸೂಚಿಸಲು ಬಳಸುವ ಸಮಾನಾಂತರ ರೇಖೆಗಳು.

hacienda

ನಾಮವಾಚಕ

(ಸ್ಪ್ಯಾನಿಷ್‍ ಅಮೆರಿಕದಲ್ಲಿನ)

  • ಕಾರ್ಖಾನೆ ಯಾ ನಿವಾಸಗಳನ್ನೊಳಗೊಂಡ ಜಮೀನು, ಕಾನು, ತೋಟ, ಮೊದಲಾದ ಭೂ ಸ್ವಾಮ್ಯ.
  • (ಗ್ರಾಮಾಂತರ ಪ್ರದೇಶದಲ್ಲಿನ) ಕಾರ್ಖಾನೆ ಯಾ ಗಣಿ.

hack

ನಾಮವಾಚಕ

  • (ಒಂದು ಕೊನೆ ಎಲೆಗುದ್ದಲಿಯಂತೆಯೂ ಇನ್ನೊಂದು ಕೊನೆ ಮೊನಚಾಗಿಯೂ ಇರುವ) ವ್ಯವಸಾಯದ ಗುದ್ದಲಿ.
  • (ಗಣಿಗಾರನ) ಪಿಕಾಸಿ.
  • ಬೂಟಿನ ಮೂತಿಯಿಂದ ಕೊಟ್ಟ ಒದೆತ.
  • (ಮುಖ್ಯವಾಗಿ ಬೂಟಿನ ಮೂತಿಯಿಂದ ಒದ್ದಾಗ ಆಗುವ) ಆಳವಾದ ಸೀಳುಗಾಯ.

hack

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಪದಗುಚ್ಛ

a hacking cough (ಸ್ವಲ್ಪ ಹೊತ್ತು ಬಿಟ್ಟು ಪದೇಪದೇ ಬರುವ) ಒಣಕೆಮ್ಮಲು; ಹುಡುಗೆಮ್ಮು.

  • ಕಡಿ; ತರಿ.
  • ಕೊಚ್ಚು; ಕಚ್ಚುಕಚ್ಚು ಮಾಡು.
  • ಒರಟೊರಟಾಗಿ, ಛಿನ್ನಭಿನ್ನವಾಗಿ, ವಿಕಾರವಾಗುವಂತೆ — ಕತ್ತರಿಸು: the editor hacked the story to bits ಸಂಪಾದಕನು ಕಥೆಯನ್ನು ಛಿನ್ನಭಿನ್ನವಾಗಿ ಕತ್ತರಿಸಿ ಹಾಕಿದ.
  • ಬೂಟಿನ ಮೂತಿಯಿಂದ ಗಾಯವಾಗುವಂತೆ ಒದೆ.
  • ಹುಟ್‍ಬಾಲ್‍ ಆಟದಲ್ಲಿ ಎದುರಾಳಿಯ ಕಣಕಾಲನ್ನು ಒದೆ.

hack

ನಾಮವಾಚಕ

ಪದಗುಚ್ಛ

at hack (ಮರಿಡೇಗೆಯ ವಿಷಯದಲ್ಲಿ) ಸ್ವತಂತ್ರವಾಗಿ ಯಾ ತಾನೇ ಬೇಟೆಯಾಡಲು ಅವಕಾಶ ಪಡೆದಿರದ.

  • ಡೇಗೆಗೆ ಮಾಂಸವಿಡಲು ಬಳಸುವ ಹಲಗೆ.
  • ಒಣಗಲಿಟ್ಟ ಇಟ್ಟಿಗೆ ಸಾಲು.
  • (ಸುಡುವುದಕ್ಕೆ ಮುಂಚೆ) ಇಟ್ಟಿಗೆಗಳನ್ನು ಒಣಗಲಿಡುವ ಚೌಕಟ್ಟು.

hack

ನಾಮವಾಚಕ

  • ಬಾಡಿಗೆ ಕುದುರೆ.
  • ಕಳಪೆ ಕುದುರೆ.
  • ಸುಸ್ತುಬಿದ್ದ ಕುದುರೆ.
  • (ಸಾಮಾನ್ಯ) ಸವಾರಿ – ಕುದುರೆ, ತಟ್ಟು.
  • ದುಡಿತದ ಕತ್ತೆ.
  • ಗುಲಾಮಚಾಕರಿ ಮಾಡುವವನು; ದುಡಿತದ ಲೇಖಕ ಯಾ ಕೆಲಸಗಾರ; ಸ್ಫೂರ್ತಿಯಿಲ್ಲದ ಲೇಖಕ ಯಾ ಇತರ ಕೆಲಸಗಾರ.
  • (ಅಮೆರಿಕನ್‍ ಪ್ರಯೋಗ) ಬಾಡಿಗೆ ಕಾರು; ಟ್ಯಾಕ್ಸಿ.

hack

ಗುಣವಾಚಕ

  • ದುಡಿತದ ಕತ್ತೆಯಂತೆ ಬಳಸುವ.
  • ದುಡಿತದ ಬರಹಗಾರನ ರೀತಿಯ.
  • ಕೇವಲ ಸಾಧಾರಣವಾದ; ಕಳಪೆಯ: hack work ಕಳಪೆ ಕೆಲಸ.

hack

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

(ಕುದುರೆ ಯಾ ಸವಾರನ ವಿಷಯದಲ್ಲಿ) ಸಾಧಾರಣ ನಡಗೆಯಲ್ಲಿ ನಡೆ; ಸಾಮಾನ್ಯ ಗತಿಯಲ್ಲಿ ಸವಾರಿ ಮಾಡು.

  • (ಪದೇಪದೇ ಬಳಸಿ) ಹಳಸಲು ಮಾಡು; ಸವಕಲು ಮಾಡು; ಸಾಮಾನ್ಯವಾಗಿಸು.
  • ಬಾಡಿಗೆ ಕುದುರೆಸವಾರಿ ಮಾಡು.
  • ಜೀತದ ಲೇಖಕನಾಗಿ ನೇಮಕ ಮಾಡು; (ಬರೆಹಗಾರನನ್ನು) ಕತ್ತೆಯಂತೆ ದುಡಿಸು.

hack-stand

ನಾಮವಾಚಕ

ಕುದುರೆಗಾಡಿ ನಿಲ್ದಾಣ.

hack-writer

ನಾಮವಾಚಕ

ದುಡಿತದ ಬರಹಗಾರ; ಜೀತದ ಲೇಖಕ; ಇನ್ನೊಬ್ಬರಿಗಾಗಿ ಪುಸ್ತಕ, ಲೇಖನ, ಮೊದಲಾದವನ್ನು ಬರೆದುಕೊಡುವ ಬರಹಗಾರ.

hackberry

ನಾಮವಾಚಕ

(ಅಮೆರಿಕನ್‍ ಪ್ರಯೋಗ) ಹ್ಯಾಕ್‍ಬೆರಿ; ಕೆಲ್ಟಿಸ್‍ ವಂಶದ, ನೇರಳೆ ಬಣ್ಣದ ತಿನ್ನಬಹುದಾದ ಹಣ್ಣು ಬಿಡುವ, ಉತ್ತರಅಮೆರಿಕದ ಒಂದು ಮರ ಯಾ ಅದರ ಹಣ್ಣು.

hacker

ನಾಮವಾಚಕ

  • ಕೊಚ್ಚುಗ; ಕೊಚ್ಚುವ ವಸ್ತು ಯಾ ವ್ಯಕ್ತಿ.
  • (ಆಡುಮಾತು) ಹ್ಯಾಕರ್‍ ಮುಖ್ಯವಾಗಿ ಮಾಹಿತಿಯನ್ನು ಅಕ್ರಮವಾಗಿ ಪಡೆಯಲು ಕಂಪ್ಯೂಟರ್‍ಗಳನ್ನು ಬಳಸುವವ.

hackery

ನಾಮವಾಚಕ

(ಇಂಡಿಯಾ ದೇಶದ) ಎತ್ತಿನ ಗಾಡಿ.

Search Dictionaries

Loading Results

Follow Us :   
  Download Bharatavani App
  Bharatavani Windows App