भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hacking coat

ನಾಮವಾಚಕ

(ಪಕ್ಕಗಳಲ್ಲೋ ಹಿಂಭಾಗದಲ್ಲೋ ಸೀಳಿರುವ ಮತ್ತು ಓರೆ ಜೇಬುಗಳಿರುವ) ಬಾಲದಂಗಿ.

hacking jacket

ನಾಮವಾಚಕ

= hacking coat.

hackle

ನಾಮವಾಚಕ

ನುಡಿಗಟ್ಟು

  • ಹಿಕ್ಕಣಿಕೆ; ಸಿಕ್ಕಟಿಗೆ; (ಸೆಣಬು ಮೊದಲಾದವುಗಳನ್ನು ಹಿಕ್ಕುವ) ಉಕ್ಕಿನ ಹಿಕ್ಕು, ಹಣಿಗೆ.
  • ಕೊರಳ ಗರಿ; ಸಾಕುಹುಂಜ ಮೊದಲಾದ ಹಕ್ಕಿಗಳ ಕುತ್ತಿಗೆಯ ಮೇಲಿನ ಉದ್ದ ಗರಿಗಳು.
  • (ಹಕ್ಕಿಯ ಕೊರಳ ಗರಿ ಕಟ್ಟಿದ, ಮೀನು ಹಿಡಿಯಲು ಬಳಸುವ) ಕೃತಕ ನೊಣ.
  • (ಸ್ಕಾಟ್ಲೆಂಡಿನ) ಹೈಲಾಂಡ್‍ ಪ್ರದೇಶದ ಸೈನಿಕ ಟೋಪಿಗೆ ಸಿಕ್ಕಿಸಿದ ಗರಿ.

hackle

ಸಕರ್ಮಕ ಕ್ರಿಯಾಪದ

  • (ಸೆಣಬನ್ನು) ಹಿಕ್ಕಣಿಕೆಯಿಂದ ಹೆಕ್ಕು.
  • (ವಿರಳ ಪ್ರಯೋಗ) (ಗಾಳದ ಕೃತಕ ನೊಣಕ್ಕೆ) ಗರಿಕಟ್ಟು.

hackle

ಸಕರ್ಮಕ ಕ್ರಿಯಾಪದ

  • ತರಿ; ಕೊಚ್ಚು.
  • ಕಚ್ಚುಕಚ್ಚು ಮಾಡು.

hackly

ಗುಣವಾಚಕ

(ಮೇಲ್ಮೈ) ತರಕಲಾಗಿರುವ; ಕಚ್ಚುಕಚ್ಚಾದ; ಒರಟೊರಟಾದ; ತರಿತರಿಯಾದ.

hackmatack

ನಾಮವಾಚಕ

ಲ್ಯಾರಿಕ್ಸ್‍ ಕುಲಕ್ಕೆ ಸೇರಿದ, ಅಮೆರಿಕದ ಶಂಕುಧಾರಿ ಮರ ಯಾ ಅದರ ದಾರು.

hackney

ನಾಮವಾಚಕ

  • (ಸಾಮಾನ್ಯವಾದ) ಸವಾರಿಕುದುರೆ; ಎತ್ತರದಲ್ಲಿಯೂ ಮಧ್ಯಸ್ಥವಾದಸಾಮಾನ್ಯವಾಗಿ ಸವಾರಿಗೆ ಬಳಸುವ ಕುದುರೆ.
  • (ವಿರಾಮವಿಲ್ಲದ) ದುಡಿಯಾಳು; ಕತ್ತೆಯಂತೆ ದುಡಿಯುವವನು; ಗುಲಾಮಚಾಕರಿ ಮಾಡುವವನು.

hackney

ಸಕರ್ಮಕ ಕ್ರಿಯಾಪದ

(ವಿರಳ ಪ್ರಯೋಗ) ಹಳಸಲು ಮಾಡು; (ಅತಿಯಾದ ಬಳಕೆಯಿಂದ) ಸಾಮಾನ್ಯವಾದದ್ದನ್ನಾಗಿ ಯಾ ಕಳಪೆಯಾದದ್ದನ್ನಾಗಿ ಮಾಡು.

hackney-carriage

ನಾಮವಾಚಕ

ಬಾಡಿಗೆಯ ಕುದುರೆಗಾಡಿ, ಕೋಚು.

hackney-coach

ನಾಮವಾಚಕ

= hackney-carriage.

hackneyed

ಗುಣವಾಚಕ

(ಪದಗುಚ್ಚ ಮೊದಲಾದವುಗಳ ವಿಷಯದಲ್ಲಿ) ಚರ್ವಿತಚರ್ವಣವಾದ; ಹಳಸಲಾದ.

hacksaw

ನಾಮವಾಚಕ

ಹ್ಯಾಕ್‍ಸಾ; ಲೋಹವನ್ನು ಕತ್ತರಿಸಲು ಬಳಸುವ, ಚೌಕಟ್ಟೊಂದರಲ್ಲಿ ಅಳವಡಿಸಬಲ್ಲ ಗರಗಸ.

had

ಕ್ರಿಯಾಪದ

have ಧಾತುವಿನ ಭೂತರೂಪ ಮತ್ತು ಭೂತಕೃದಂತ ರೂಪ.

haddock

ನಾಮವಾಚಕ

(ಬಹುವಚನ ಅದೇ)ಹ್ಯಾಡಕ್‍ ಮೀನು; ಕಾಡ್‍ಮೀನಿನಂಥ, ಆದರೆ ಅದಕ್ಕಿಂತ ಚಿಕ್ಕದಾದ, ಉತ್ತರ ಅಟ್ಲಾಂಟಿಕ್‍ನ ಒಂದು ಮೀನು.

hade

ಅಕರ್ಮಕ ಕ್ರಿಯಾಪದ

(ಭೂವಿಜ್ಞಾನ, ಗಣಿ) ಓಲಿರು; ಲಂಬದಿಂದ ಓಲಿರು.

Hades

ನಾಮವಾಚಕ

(ಗ್ರೀಕ್‍ ಪುರಾಣ) ಅಧೋಲೋಕ; ಮೃತರ ಆತ್ಮಗಳ ಲೋಕ.

Hadith

ನಾಮವಾಚಕ

ಹ್ಯಾಡಿತ್‍; ಮುಹಮ್ಮದನಿಗೆ ಸಂಬಂಧಿಸಿದ ಪರಂಪರಾಗತ ನಂಬಿಕೆಗಳ ಸಮುದಾಯ.

hadj

ನಾಮವಾಚಕ

hajj ಎಂಬುದರ ರೂಪಾಂತರ.

hadji

ನಾಮವಾಚಕ

= hajji.

Search Dictionaries

Loading Results

Follow Us :   
  Download Bharatavani App
  Bharatavani Windows App