भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hadn’t

had not ಎಂಬುದರ ಹ್ರಸ್ವರೂಪ.

haecceity

ನಾಮವಾಚಕ

(ತತ್ತ್ವಶಾಸ್ತ್ರ)

  • ‘ಇದು’ತನ; ಇದಂತ್ವ; ಇದು, ಈ ಎಂದು ವರ್ಣಿಸಬಹುದುದಾದ, ನಿರೂಪಿಸಬಹುದಾದ ಗುಣಲಕ್ಷಣ.
  • ವ್ಯಕ್ತಿತ್ವ; ವೈಶಿಷ್ಟ್ಯ; ಒಂದು ವಸ್ತು ಮೊದಲಾದವುಗಳಲ್ಲಿ ವಿಶಿಷ್ಟವೆನಿಸುವ ವೈಯಕ್ತಿಕ ಗುಣ, ಲಕ್ಷಣ.

haem

ನಾಮವಾಚಕ

(ಜೀವರಸಾಯನ ವಿಜ್ಞಾನ) ಹೀಮ್‍; ಆಮ್ಲದ ನೆರವಿನಿಂದ ಹೀಮೊಗ್ಲಾಬಿನ್ನಿನಿಂದ ಗ್ಲಾಬಿನ್ನನ್ನು ಪ್ರತ್ಯೇಕಿಸಿದರೆ ಉಳಿಯುವ, ಉತ್ಕರ್ಷಿಸಿದಾಗ ಹೀಮಿನ ಯಾ ಹಿಮಟಿನ್ನನ್ನು ಕೊಡುವ, ಒಂದು ದಟ್ಟ ಕೆಂಪು ವರ್ಣ ದ್ರವ್ಯ, ${\rm C}_{ 34} {\rm H}_{ 32} {\rm N}_4 {\rm O}_4 {\rm Fe}$.

haemal

ಗುಣವಾಚಕ

  • ರಕ್ತದ ಯಾ ರಕ್ತ ಸಂಬಂಧಿ(ಯಾದ).
  • (ಅಂಗರಚನಾಶಾಸ್ತ್ರ) ದೇಹದಲ್ಲಿ ಹೃದಯ ಮತ್ತು ಪ್ರಧಾನ ರಕ್ತನಾಳಗಳಿರುವ ಕಡೆಯಲ್ಲಿ ಯಾ ಪಾರ್ಶ್ವದಲ್ಲಿ ಇರುವ.

haematic

ಗುಣವಾಚಕ

(ವೈದ್ಯಶಾಸ್ತ್ರ)

  • ರಕ್ತದ.
  • ರಕ್ತವಿಳ್ಳ; ಸರಕ್ತ.

haematic

ನಾಮವಾಚಕ

(ವೈದ್ಯಶಾಸ್ತ್ರ) ರಕ್ತವರ್ಧಕ; ರಕ್ತವರ್ಧಿನಿ; ರಕ್ತದ ಮೇಲೆ ವರ್ತಿಸಿ, ಕೆಂಪು ರಕ್ತಕಣಗಳನ್ನು ಯಾ ಹೀಮೊಗ್ಲಾಬಿನ್ನನ್ನು ವರ್ಧಿಸುವ ಔಷಧಿ.

haematin

ನಾಮವಾಚಕ

(ರಸಾಯನವಿಜ್ಞಾನ) ಹೀಮಟಿನ್‍; ಹೀಮ್‍ನ ಉತ್ಕರ್ಷಣದಿಂದ ದೊರಕುವ, ನೀಲಿ ಕಪ್ಪು ಪದಾರ್ಥ ಯಾ ಕಂದು ಛಾಯೆಯ ಕಪ್ಪು ಘನ ಸಂಯುಕ್ತ, ${\rm C}_{ 34} {\rm H}_{ 32} {\rm N}_4 {\rm O}_4 {\rm Fe}. {\rm OH}$.

haematinic

ಗುಣವಾಚಕ

ರಕ್ತವರ್ಧಕ; ರಕ್ತದ ಮೇಲೆ ವರ್ತಿಸಿ ಕೆಂಪು ರಕ್ತಕಣಗಳನ್ನು ಯಾ ಹೀಮೊಗ್ಲಾಬಿನನ್ನು ವರ್ಧಿಸುವ.

haematinic

ನಾಮವಾಚಕ

= 2haematic.

haematite

ನಾಮವಾಚಕ

(ಖನಿಜಶಾಸ್ತ್ರ) ಹೀಮಟೈಟ್‍; ಕೆಂಪು, ಕಂದು ಯಾ ಕಪ್ಪು ಛಾಯೆಯ ಕಬ್ಬಿಣದ ಆಕ್ಸೈಡ್‍ನ ಅದುರು, ${\rm Fe}_2 {\rm O}_3$.

haemato-

ಸಮಾಸ ಪೂರ್ವಪದ

ರಕ್ತ(ದ) ಎಂಬರ್ಥದ ಸಮಾಸ ಪೂರ್ವಪದ.

haematocele

ನಾಮವಾಚಕ

(ವೈದ್ಯಶಾಸ್ತ್ರ) ರಕ್ತನಾಳದಿಂದ ಹೊರಕ್ಕೆ ಹರಿದ ರಕ್ತದಿಂದ ಊದಿಕೊಂಡ ಯಾವುದೇ ದೇಹಕುಹರ.

haematochrome

ನಾಮವಾಚಕ

ಹೀಮಟೋಕೋಮ್‍; ಕೆಲವು ಬಗೆಯ ಪಾಚಿಗಳಲ್ಲಿ ಕಂಡುಬರುವ ಕೆಂಪು ಯಾ ಕಿತ್ತಳೆ ಬಣ್ಣದ ವರ್ಣದ್ರವ್ಯ.

haematocrit

ನಾಮವಾಚಕ

(ಶರೀರ ವಿಜ್ಞಾನ) ಹೀಮಟೋಕ್ರಿಟ್‍:

  • ಕೆಂಪು ರಕ್ತ ಕಣಗಳ ಪ್ರಮಾಣಕ್ಕೂ ಒಟ್ಟು ರಕ್ತದ ಪ್ರಮಾಣಕ್ಕೂ ಇರುವ ದಾಮಾಷಾ.
  • ಈ ದಾಮಾಷಾವನ್ನು ಅಳೆಯಲು ಬಳಸುವ ಸಾಧನ.

haematologic

ಗುಣವಾಚಕ

ರಕ್ತಶಾಸ್ತದ; ರಕ್ತವಿಜ್ಞಾನದ; ರಕ್ತದ ಅಧ್ಯಯನದ.

haematological

ಗುಣವಾಚಕ

= haemotologic.

haematologist

ನಾಮವಾಚಕ

ರಕ್ತಶಾಸ್ತ್ರಜ್ಞ; ರಕ್ತತಜ್ಞ.

haematology

ನಾಮವಾಚಕ

ರಕ್ತಶಾಸ್ತ್ರ; ರಕ್ತವಿಜ್ಞಾನ; ರಕ್ತದ ಅಧ್ಯಯನ.

haematoma

ನಾಮವಾಚಕ

(ವೈದ್ಯಶಾಸ್ತ್ರ) ಊತಕಗಳಲ್ಲಿ ರಕ್ತ ಹೆಪ್ಪುಗಟ್ಟಿ ಊದಿಕೊಳ್ಳುವುದು.

haematuria

ನಾಮವಾಚಕ

(ವೈದ್ಯಶಾಸ್ತ್ರ) ರಕ್ತಮೂತ್ರ; ಮೂತ್ರದಲ್ಲಿ ರಕ್ತವಿರುವ ಒಂದು ರೋಗ.

Search Dictionaries

Loading Results

Follow Us :   
  Download Bharatavani App
  Bharatavani Windows App