भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hag

ನಾಮವಾಚಕ

  • ಮುದಿ ಗೊಡ್ಡು; ಮುದಿಗೂಬೆ; ಅವಲಕ್ಷಣದ, ವಿಕಾರವಾದ ಮುದುಕಿ.
  • (ಕೆಡಕು ಮಾಡುವ) ಮಾಟಗಾತಿ; ಶೂನ್ಯಗಾತಿ.
  • (ಹಿಂದೆ) ಹೆಣ್ಣುಪಿಶಾಚಿ; ಹೆಣ್ಣುದೆವ್ವ.
  • ಹ್ಯಾಗ್‍ (ಮೀನು); ಹಾವುಮೀನನ್ನು ಹೋಲುವ, ದುಂಡು ಬಾಯಿಯ, 8 ಸ್ಪರ್ಶತಂತುಗಳುಳ್ಳ ಪರಾವಲಂಬಿ ಮೀನು ಜಾತಿ.

hag

ನಾಮವಾಚಕ

  • (ಕುರುಚಲು ಬಂಜರಿನಲ್ಲಿನ) ಮೆದುಸ್ಥಳ.
  • (ಜವುಗು ನೆಲದಲ್ಲಿನ) ಗಟ್ಟಿಪ್ರದೇಶ.

Hag.

ಸಂಕ್ಷಿಪ್ತ

Haggai (ಬೈಬಲಿನ ಹಳೆ ಒಡಂಬಡಿಕೆ).

hagfish

ನಾಮವಾಚಕ

= 1hag(4).

Haggadah

ನಾಮವಾಚಕ

  • (ಯೆಹೂದಿ ಧರ್ಮಶಾಸ್ತ್ರ) ‘ಟಾಲ್‍ಮುಡ್‍’ ಗ್ರಂಥದ ಐತಿಹ್ಯ ಭಾಗ.
  • (ಯೆಹೂದಿ) ‘ಸೇಡರ್‍’ (ಧರ್ಮ) ಗೋಷ್ಠಿಯಲ್ಲಿ ಪಠಿಸುವ ಗ್ರಂಥ.

haggard

ಗುಣವಾಚಕ

  • (ಆಯಾಸ, ದಾರಿದ್ರ್ಯ, ಕಳವಳ, ಮೊದಲಾದವುಗಳಿಂದ) ರಾವುಬಡಿದಂತೆ ಕಾಣುವ; ಹೆಣ ಮುಖದ; ಕಂಗಾಲಾದ; ವಿಕಾರವಾದ.
  • ನರಪೇತಲ; ಮೂಳೆ ಬಿಟ್ಟುಕೊಂಡಿರುವ; ಬಡಕಲಾಗಿರುವ.
  • (ಡೇಗೆಯ ವಿಷಯದಲ್ಲಿ) ಗರಿ ಬಲಿತ ಮೇಲೆ ಹಿಡಿದ; ಪಳಗಿಲ್ಲದ.
  • ಜೋಲುಮೋರೆಯ; ಘೋರ; ವಿಕಾರವಾದ; ಕಂಗೆಟ್ಟ; ವಿಷಣ್ಣ; ಉತ್ಸಾಹಶೂನ್ಯ: haggard eyes ಕಂಗೆಟ್ಟ ಕಣ್ಣುಗಳು.

haggard

ನಾಮವಾಚಕ

ಪಳಗಿಲ್ಲದ ಡೇಗೆ.

haggardness

ನಾಮವಾಚಕ

  • (ಆಯಾಸ, ದಾರಿದ್ರ್ಯ, ಕಳವಳ, ಮೊದಲಾದವುಗಳಿಂದ) ರಾವುಬಡಿದಂತಿರುವುದು; ಕಂಗಾಲಾಗಿರುವುದು.
  • (ಡೇಗೆಯ ವಿಷಯದಲ್ಲಿ) ಪಳಗಿಲ್ಲದಿರುವುಕೆ; ಕಾಡುತನ.
  • ಉತ್ಸಾಹಶೂನ್ಯತೆ; ವಿಷಣ್ಣತೆ: a new haggardness in her face ಅವಳ ಮುಖದಲ್ಲಿ ಹೊಸದಾಗಿ ಕಂಡುಬರುತ್ತಿರುವ ವಿಷಣ್ಣತೆ.
  • ಬಡಕಲಾಗಿರುವುದು.

haggis

ನಾಮವಾಚಕ

ಹ್ಯಾಗಿಸ್‍; ಕುರಿ ಯಾ ಕರುವಿನ ಹೃದಯ, ಶ್ವಾಸಕೋಶ ಮತ್ತು ಯಕೃತ್ತುಗಳ ತುರಿಯನ್ನು ನೆಣ ಮತ್ತು ಓಟ್‍ ಹಿಟ್ಟಿನೊಡನೆ ಆ ಪ್ರಾಣಿಯ ಹೊಟ್ಟೆಚೀಲದಲ್ಲಿ ಯಾ ಕೃತಕವಾದ ಹೊದಿಕೆಯಲ್ಲಿ ಹಾಕಿ ಕುದಿಸಿ ತಯಾರಿಸಿದ ಒಂದು ತಿನಿಸು.

haggish

ಗುಣವಾಚಕ

  • ಮುದಿಗೊಡ್ಡಿನಂಥ.
  • ಮಾಟಗಾತಿಯ ಹಾಗಿರುವ.
  • ಹೆಣ್ಣು ಪಿಶಾಚಿಯಂಥ.
  • ಅವಲಕ್ಷಣವಾಗಿರುವ; ವಿಕಾರವಾಗಿರುವ; ವಿಕಾರವಾದ.

haggle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಜಗಳವಾಡು; ರಂಪಮಾಡು.

  • ವ್ಯಾಪಾರದಲ್ಲಿ ಕೊಸರಾಡು, ಜುಗ್ಗಾಡು; ಚೌಕಾಸಿ ಮಾಡು.
  • ಒರಟೊರಟಾಗಿ ಕೊಚ್ಚಿ ಹಾಕು; ಒಡ್ಡೊಡ್ಡಾಗಿ ಕತ್ತರಿಸು.

haggle

ನಾಮವಾಚಕ

  • ಜಗಳ; ರಂಪಾಟ; ರಂಪ.
  • (ವ್ಯಾಪಾರದಲ್ಲಿ) ಕೊಸರಾಟ; ಜುಗ್ಗಾಟ; ಚೌಕಾಸಿ.

hagio-

ಸಮಾಸ ಪೂರ್ವಪದ

ಸಾಧುಸಂತರ, ಪವಿತ್ರ, ಧಾರ್ಮಿಕ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ, ಉದಾಹರಣೆಗೆ hagiocracy.

hagiocracy

ನಾಮವಾಚಕ

ಸಾಧುಸಂತರ ಆಳ್ವಿಕೆ; ಸಂತ – ಪ್ರಭುತ್ವ, ವ್ಯವಸ್ಥೆ.

hagiographa

ನಾಮವಾಚಕ

ಹೀಬ್ರು ಪವಿತ್ರ ಗ್ರಂಥ; ಹಳೆಯ ಒಡಂಬಡಿಕೆಯ ಮೂರು ಮುಖ್ಯ ಭಾಗಗಳಲ್ಲಿ ಕೊನೆಯದರ 12 ಪ್ರಕರಣಗಳು.

hagiographer

ನಾಮವಾಚಕ

ಸಂತಚರಿತಕಾರ; ಸಾಧುಸಂತರ ಜೀವನಚರಿತ್ರೆ ಬರೆಯುವವನು.

hagiography

ನಾಮವಾಚಕ

  • ಸಂತಚರಿತೆ; ಸಾಧುಸಂತರ ಜೀವನ ಚರಿತ್ರೆ.
  • ಸಾಧುಸಂತರ ಜೀವನ ಚರಿತ್ರೆಯ ಲೇಖನ ರಚನೆ.

hagiolatry

ನಾಮವಾಚಕ

ಸಂತಾರಾಧನೆ; ಸಾಧುಸಂತರ ಪೂಜೆ, ಆರಾಧನೆ.

hagiology

ನಾಮವಾಚಕ

(ಸಾಧುಸಂತರ ಜೀವನ ಚರಿತ್ರೆ, ಕಥೆಗಳು, ಮೊದಲಾದವನ್ನೊಳಗೊಂಡ) ಸಂತಸಾಹಿತ್ಯ.

hagioscope

ನಾಮವಾಚಕ

(ಚರ್ಚು) ದರ್ಶನಗಂಡಿ; ಚರ್ಚಿನ ಬಲಿಪೀಠವು ಹೊರಗೆ ನಿಂತವರಿಗೆ ಕಾಣಿಸಲೋಸುಗ ಗೋಡೆಯೊಳಗೆ ಮಾಡಿದ ಕಂಡಿ, ತೆರಪು.

Search Dictionaries

Loading Results

Follow Us :   
  Download Bharatavani App
  Bharatavani Windows App