भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

hair’s breadth

ನಾಮವಾಚಕ

ಕೂದಲೆಳೆಯಷ್ಟು ಅಂತರ; ಅತ್ಯಲ್ಪ ಅಂತರ.

hair-cloth

ನಾಮವಾಚಕ

ಕೂದಲಬಟ್ಟೆ: ಕೇಶವಸ್ತ್ರ: (ಬಗೆಬಗೆಯ ಕೆಲಸಗಳಿಗೆ ಬಳಸುವ) ಕೂದಲಿನಿಂದ ಮಾಡಿದ ಬಟ್ಟೆ.

hair-do

ನಾಮವಾಚಕ

(ಆಡುಮಾತು) (ಹೆಂಗಸಿನ) ಕೇಶಾಲಂಕಾರ; ಹೆಂಗಸು ತಲೆಗೂದಲನ್ನು ಅಲಂಕರಿಸಿಕೊಳ್ಳುವುದು ಯಾ ಅಂಕರಿಸಿಕೊಳ್ಳುವ ವಿಧಾನ.

hair-dresser

ನಾಮವಾಚಕ

ಕ್ಷೌರಿಕ; ಕೂದಲಣಿಗ; (ಮುಖ್ಯವಾಗಿ ಹೆಂಗಸರ) ತಲೆಗೂದಲನ್ನು ಕತ್ತರಿಸಿ ಅಣಿ ಮಾಡುವವನು.

hair-line

ನಾಮವಾಚಕ

  • ಕೂದಲ – ಹುರಿ, ಹಗ್ಗ; ಕೇಶರಜ್ಜು; ಕೂದಲಿನಿಂದ ತಯಾರಿಸಿದ ಹುರಿ, ಹಗ್ಗ.
  • ಕೂದಲಗೀಟು; ಬರವಣಿಗೆಯಲ್ಲಿ ಅಕ್ಷರಗಳ ಸೂಕ್ಷ್ಮ ಮೇಲ್ಗೆರೆ.
  • ಕೂದಲ ಗೆರೆ; ಮುದ್ರಣದಲ್ಲಿ ತೆಳುವಾದ ಓರೆಗೆರೆ.
  • (ವ್ಯಕ್ತಿಯ ಹಣೆ ಮೊದಲಾದವುಗಳಲ್ಲಿನ) ಕೂದಲ ಅಂಚು.
  • ಕೂದಲಗೆರೆ; ಕೇಶರೇಖೆ; ತೀರ ತೆಳುವಾದ ಗೆರೆ, ಬಿರುಕು, ಪಟ್ಟೆ, ಮೊದಲಾದವು.

hair-net

ನಾಮವಾಚಕ

ತುರುಬು (ಮುಚ್ಚುವ) ಬಲೆ.

hair-oil

ನಾಮವಾಚಕ

ಕೂದಲೆಣ್ಣೆ: ಕೇಶ ತೈಲ.

hair-pin

ನಾಮವಾಚಕ

ಹೇರ್‍ಪಿನ್ನು; ಕೂದಲನ್ನು ಹಿಡಿದಿಡುವ – ಪಿನ್ನು, ಸೂಜಿ.

hair-pin

ಗುಣವಾಚಕ

ಪದಗುಚ್ಛ

(ಹೇರ್‍ಪಿನ್ನಿನಂತೆ) ಬಾಗಿರುವ; ಹೇರ್‍ಪಿನ್ನಿನಂತಿರುವ. hair-pin bend (ರಸ್ತೆಯಲ್ಲಿ) ಹೇರ್‍ಪಿನ್‍ ತಿರುವು; ಹೇರ್‍ಪಿನ್ನಿನಂತೆ ಇರುವ ಯಾ ಹೇರ್‍ಪಿನ್ನಿನಂತೆ ಬಾಗಿರುವ ತಿರುವು.

hair-powder

ನಾಮವಾಚಕ

ಹೇರ್‍ಪೌಡರು; ಕೇಶಚೂರ್ಣ; ಕೂದಲಪುಡಿ; ತಲೆಗೂದಲಿಗೆ ಹಾಕಿಕೊಳ್ಳುವ ಸುವಾಸನೆಯ ಪುಡಿ, ಸುಗಂಧಚೂರ್ಣ.

hair-raiser

ನಾಮವಾಚಕ

ರೋಮಾಂಚಕ ಕಥೆ, ಕಾದಂಬರಿ, ನಾಟಕ; ನವಿರೇಳಿಸುವಷ್ಟು ಆಶ್ಚರ್ಯಕರವಾದ ಯಾ ಭಯಂಕರವಾದ ಕಥೆ ಮೊದಲಾದವು.

hair-raising

ಗುಣವಾಚಕ

(ಆಡುಮಾತು) (ನವಿರೇಳಿಸುವಷ್ಟು)

  • ಭಯಂಕರ; ಘೋರವಾದ.
  • ಚಕಿತಗೊಳಿಸುವ; ಆಶ್ಚರ್ಯಕರವಾದ.

hair-restorer

ನಾಮವಾಚಕ

ಕೇಶವರ್ಧಕ; ತಲೆಗೂದಲ ಬೆಳವಣಿಗೆಯನ್ನು ಹೆಚ್ಚಿಸಲು ಬಳಸುವ ದ್ರವ್ಯ.

hair-shirt

ನಾಮವಾಚಕ

(ಕ್ರೈಸ್ತಧರ್ಮ) ಪ್ರಾಯಶ್ಚಿತ್ತ ಮಾಡಿಕೊಳ್ಳುವವರು ಯಾ ಕ್ರೈಸ್ತ ಸಂನ್ಯಾಸಿಗಳು ಧರಿಸಬೇಕಾದ – ಕೂದಲ ಜುಬ್ಬ, ಕೂದಲ ಬಟ್ಟೆಯ ಅಂಗಿ, ಕೂದಲಂಗಿ.

hair-slide

ನಾಮವಾಚಕ

ಕೇಶಬಂಧನಿ; ಕೊಂಬಿನಿಂದಾಗಲಿ ಆಮೆ ಚಿಪ್ಪಿನಿಂದಾಗಲಿ ಮಾಡಿದ ಕೂದಲ ಚಿಪ್ಪು; ಬಾಚಿದ ಕೂದಲನ್ನು ಬಿಗಿಗೊಳಿಸಲು ಬಳಸುವ ಸಾಮಾನ್ಯವಾಗಿ ಅಲಂಕಾರದ, ಕೂದಲಹಿಡಿಕೆ.

hair-space

ನಾಮವಾಚಕ

(ಮುದ್ರಣ) ಕೂದಲ ಮೊಳೆ; (ಅಕ್ಷರಗಳ ಮಧ್ಯೆ) ಕೂದಲೆಳೆಯಷ್ಟು ಸಣ್ಣ ತೆರಪು ಬಿಡಿಸುವ ಮೊಳೆ.

hair-splitting

ಗುಣವಾಚಕ

ಕೂದಲು ಸೀಳುವಂಥ; (ಸಾಮಾನ್ಯವಾಗಿ ಕುತರ್ಕಗಳಲ್ಲಿ) ವಿಪರೀತ ಸೂಕ್ಷ್ಮ ಅರ್ಥಕ್ಕೆ ಹೋಗುವ.

hair-splitting

ನಾಮವಾಚಕ

ಕೂದಲು ಸೀಳುವಂಥದು; ಅತಿ ಸೂಕ್ಷ್ಮ ತರ್ಕ; (ಸಾಮಾನ್ಯವಾಗಿ ಕುತರ್ಕ) ವಿಪರೀತ ಸೂಕ್ಷ್ಮ ಅರ್ಥಕ್ಕೆ ಹೋಗುವುದು.

hair-streak

ನಾಮವಾಚಕ

ಕೂದಲಗೆರೆ ಚಿಟ್ಟೆ; ಕೇಶರೇಖೆ ಪತಂಗ; ರೆಕ್ಕೆಗಳ ಮೇಲೆ ಸೂಕ್ಷ್ಮ ಗೆರೆಗಳಿರುವ, ಸ್ಟ್ರೈಮನ್‍ ಮೊದಲಾದ ವರ್ಗದ ಚಿಟ್ಟೆ.

hair-stroke

ನಾಮವಾಚಕ

ಕೂದಲಗೀಟು; ಬರವಣಿಗೆಯಲ್ಲಿ ಅಕ್ಷರದಿಂದ ಮೇಲಕ್ಕೆಳೆದ ಸೂಕ್ಷ್ಮ ಗೆರೆ.

Search Dictionaries

Loading Results

Follow Us :   
  Download Bharatavani App
  Bharatavani Windows App