भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

idle

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಕಾಲ ಮೊದಲಾದವನ್ನು) ವ್ಯಯಮಾಡು; ಸೋಮಾರಿತನದಲ್ಲಿ ಕಳೆ; ವ್ಯರ್ಥವಾಗಿ ಕಳೆದುಬಿಡು.
  • ಕೆಲಸವಿಲ್ಲದಂತೆ ಮಾಡು; ಸೋಮಾರಿಯಾಗಿಸು: the strike idled many workers ಮುಷ್ಕರವು ಅನೇಕ ಕಾರ್ಮಿಕರನ್ನು ಸೋಮಾರಿಗಳನ್ನಾಗಿ ಮಾಡಿತು.

idle wheel

ನಾಮವಾಚಕ

ಸೋಮಾರಿಚಕ್ರ; ಎರಡು ಹಲ್ಲು ಚಕ್ರಗಳ ನಡುವೆ ಇರುವ, ಮುಖ್ಯವಾಗಿ ಅವು ಒಂದೇ ದಿಕ್ಕಿನಲ್ಲಿ ಸುತ್ತುವಂತೆ ಸಹಾಯಮಾಡುವ, ಹಲ್ಲುಚಕ್ರ.

idleness

ನಾಮವಾಚಕ

  • ನಿಷ್ಪ್ರಯೋಜಕತೆ; ವ್ಯರ್ಥತೆ; ನಿಷ್ಫಲತೆ: the idleness of the proceedings ಕಾರ್ಯಕಲಾಪಗಳ ನಿಷ್ಫಲತೆ.
  • ಸೋಮಾರಿತನ; ಮೈಗಳ್ಳತನ; ಆಲಸ್ಯ.
  • ನಿರಾಧಾರತೆ.
  • ನಿಷ್ಕ್ರಿಯತೆ:
    1. ಕೆಲಸವಿಲ್ಲದಿರುವುದು.
    2. ಕೆಲಸಮಾಡದಿರುವುದು.

idler

ನಾಮವಾಚಕ

  • ಸೋಮಾರಿ; ಮೈಗಳ್ಳ; ಅಲಸ.
  • = idle wheel.

idly

ಕ್ರಿಯಾವಿಶೇಷಣ

  • ಸೋಮಾರಿಯಾಗಿ; ಮೈಗಳ್ಳತನದಿಂದ.
  • ವ್ಯರ್ಥವಾಗಿ; ನಿಷ್ಫಲವಾಗಿ; ನಿರರ್ಥಕವಾಗಿ.

Ido

ನಾಮವಾಚಕ

ಈಡೋ(ಭಾಷೆ); ಎಸ್ಪರಾಂಟೋ ಭಾಷೆಯನ್ನು ಪರಿಷ್ಕರಿಸಿ ಸರಳೀಕರಿಸಿದ ಭಾಷೆ.

idol

ನಾಮವಾಚಕ

ಪದಗುಚ್ಛ

idols of the tribe, cave, market, theatre (ಹ್ರಾನ್ಸಿಸ್‍ ಬೇಕನ್‍ ವರ್ಗೀಕರಿಸಿರುವ) ಮನಸ್ಸಿನ ಇತಿಮಿತಿಗಳಿಂದ, ವ್ಯಕ್ತಿ ವೈಲಕ್ಷಣ್ಯದ ಪೂರ್ವಗ್ರಹಗಳಿಂದ, ಪದಗಳ ಪ್ರಭಾವದಿಂದ, ತಾತ್ತ್ವಿಕ ಮತ್ತು ತಾರ್ಕಿಕ ಒಲವುಗಳಿಂದ ಹುಟ್ಟುವ – (ನಾಲ್ಕು ಬಗೆಯ) ತರ್ಕಾಭಾಸಗಳು ಯಾ ಮಿಥ್ಯಾಕಲ್ಪನೆಗಳು.

  • (ಪೂಜೆಗಾಗಿ ಬಳಸುವ) ದೇವತಾ – ವಿಗ್ರಹ, ಮೂರ್ತಿ, ಪ್ರತಿಮೆ.
  • ಮಿಥ್ಯಾ ದೇವತೆ; ಹುಸಿದೈವ.
  • ಅತ್ಯಂತ ಪೂಜ್ಯ ಯಾ ಆರಾಧ್ಯ – ವ್ಯಕ್ತಿ, ವಸ್ತು; ಪರಮಾದರಕ್ಕೆ ಪಾತ್ರನಾ(ವಾ)ದ ಯಾ ಅಚ್ಚುಮೆಚ್ಚಿನ – ವ್ಯಕ್ತಿ, ವಸ್ತು: a hero who was the idol of his army ಅವನು ಸೇನೆಯ ಆರಾಧ್ಯ ವ್ಯಕ್ತಿಯಾಗಿದ್ದ ವೀರ.
  • (ಪ್ರಾಚೀನ ಪ್ರಯೋಗ) ಭ್ರಮೆ; ಭ್ರಾಂತಿ: so many idols and phantoms of their imagination ಅವರ ಕಲ್ಪನೆಯ ಎಷ್ಟೋ ಭ್ರಮೆ, ಭ್ರಾಂತಿಗಳು.
  • (ತರ್ಕಶಾಸ್ತ್ರ) ಮಿಥ್ಯಾಕಲ್ಪನೆ; ತರ್ಕದೋಷ; ತರ್ಕಾಭಾಸ.

idolater

ನಾಮವಾಚಕ

  • ವಿಗ್ರಹಾರಾಧಕ; ಮೂರ್ತಿಪೂಜಕ.
  • (ವ್ಯಕ್ತಿಯ, ವಸ್ತುವಿನ) ಆರಾಧಕ; ಮಹಾಭಕ್ತ; ಅತ್ಯಭಿಮಾನಿ: idolaters of wealth ಸಿರಿಪೂಜಕರು; ಐಶ್ವರ್ಯದ ಆರಾಧಕರು.

idolatress

ನಾಮವಾಚಕ

  • ವಿಗ್ರಹಾರಾಧಕಿ; ಮೂರ್ತಿಪೂಜಕಿ.
  • ಆರಾಧಕಿ; ಅತಿ ಭಕ್ತೆ.

idolatrous

ಗುಣವಾಚಕ

  • ಮೂರ್ತಿ ಪೂಜೆಯ; ವಿಗ್ರಹಾರಾಧನೆಯ; ಮೂರ್ತಿ ಪೂಜೆಗೆ ಸಂಬಂಧಪಟ್ಟ; ಮೂರ್ತಿಪೂಜೆಯ ಸ್ವರೂಪದ.
  • (ವ್ಯಕ್ತಿಯ ವಿಷಯದಲ್ಲಿ) ಮೂರ್ತಿಪೂಜಕ; ವಿಗ್ರಹಪೂಜೆ ಮಾಡುವ.
  • (ವ್ಯಕ್ತಿಯ ವಿಷಯದಲ್ಲಿ) ಮಿಥ್ಯಾದೇವತೆಗಳನ್ನು ಆರಾಧಿಸುವ.
  • ಅಂಧಾಭಿಮಾನಿಯ.

idolatrously

ಕ್ರಿಯಾವಿಶೇಷಣ

  • ಮೂರ್ತಿಪೂಜೆಯಂತೆ; ಮೂರ್ತಿಪೂಜೆಯ ರೀತಿಯಲ್ಲಿ; ವಿಗ್ರಹಾರಾಧನೆಯ ವಿಧಾನದಲ್ಲಿ.
  • ಮಿಥ್ಯಾ ದೇವತೆಗಳನ್ನು ಆರಾಧಿಸುವಂತೆ.
  • ಆರಾಧಕನಂತೆ; ಅತ್ಯಭಿಮಾನಿಯಂತೆ; ಮಹಾಭಕ್ತನಂತೆ.

idolatry

ನಾಮವಾಚಕ

  • ಮೂರ್ತಿಪೂಜೆ; ವಿಗ್ರಹಾರಾಧನೆ.
  • (ವ್ಯಕ್ತಿಯಲ್ಲಿ, ವಸ್ತುವಿನಲ್ಲಿ) ಗೌರವಾತಿರೇಕ; ಅತಿಭಕ್ತಿ; ಮಿತಿಈರಿದ ಅಭಿಮಾನ, ಪೂಜ್ಯಭಾವ: honour one on this side of idolatry (ದೇವರ ಮಟ್ಟಕ್ಕೇರಿಸುವುದೊಂದು ಬಿಟ್ಟು) (ವ್ಯಕ್ತಿಯನ್ನು) ಅತಿಯಾಗಿ ಗೌರವಿಸು.

idolise

ಕ್ರಿಯಾಪದ

= idolize.

idolization

ನಾಮವಾಚಕ

(ಯಾರನ್ನೇ, ಯಾವುದನ್ನೇ) ದೇವರಂತೆ ಭಾವಿಸುವುದು; ಅತಿಯಾಗಿ – ಗೌರವಿಸುವುದು, ಪೂಜಿಸುವುದು; ಮಿತಿಈರಿ ಪ್ರೀತಿಸುವುದು: an idolization of childhood ಶಿಶುತ್ವವನ್ನು ದೇವರೆಂದು ಪೂಜಿಸುವುದು.

idolize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ವ್ಯಕ್ತಿಯನ್ನು ವಸ್ತುವನ್ನು) ದೈವತ್ವಕ್ಕೇರಿಸು; ದೇವತೆಯನ್ನಾಗಿ ಭಾವಿಸು.
  • ಅತಿಯಾಗಿ – ಗೌರವಿಸು, ಪೂಜಿಸು; ಮಿತಿಈರಿ ಪ್ರೀತಿಸು: idolizing military or sports heroes ಸೇನಾ ಯಾ ಕ್ರೀಡಾವೀರರನ್ನು ದೈವತ್ವಕ್ಕೇರಿಸುವುದು, ಮಿತಿಈರಿ ಗೌರವಿಸುವುದು.

idolum

ನಾಮವಾಚಕ

  • ಮನೋಬಿಂಬ; ಮನಶ್ಚಿತ್ರ; ವಾಸ್ತವವಲ್ಲದ ಮನಃಕಲ್ಪನೆ.
  • (ತರ್ಕಶಾಸ್ತ್ರ) ಮಿಥ್ಯಾಕಲ್ಪನೆ; ತರ್ಕದೋಷ; ಹೇತ್ವಾಭಾಸ: idola made by education, tradition, etc. ಶಿಕ್ಷಣ, ಸಂಪ್ರದಾಯ, ಮೊದಲಾದವು ಸೃಷ್ಟಿಸಿದ ಮಿಥ್ಯಾಕಲ್ಪನೆಗಳು.

idyl

ನಾಮವಾಚಕ

= idyll.

idyll

ನಾಮವಾಚಕ

  • ಹಳ್ಳಿಕವಿತೆ; ಗ್ರಾಈಣ ಕವನ; ಗ್ರಾಈಣ ವರ್ಣನ ಕಾವ್ಯ; ಮುಖ್ಯವಾಗಿ ಹಳ್ಳಿಯ ಜೀವನದ ಯಾವುದಾದರೂ ರಮ್ಯ ದೃಶ್ಯವನ್ನು ಯಾ ಘಟನೆಯನ್ನು ವರ್ಣಿಸುವ ಯಾ ನಿರೂಪಿಸುವ ಸಣ್ಣ ಗದ್ಯಭಾಗ ಯಾ ಪದ್ಯ.
  • ಗ್ರಾಈಣ ವರ್ಣನೆಗೆ ತಕ್ಕ ಪ್ರಸಂಗ, ಸಾಮಾನ್ಯವಾಗಿ ಪ್ರಣಯಕಥೆ.
  • (ದೀರ್ಘ) ಕಥನಕಾವ್ಯ.

idyllic

ಗುಣವಾಚಕ

  • ಗ್ರಾಮೀಣ ಕವನಕ್ಕೆ ತಕ್ಕ ವಸ್ತುವುಳ್ಳ.
  • ಗ್ರಾಮೀಣ-ಕವನದ, ಕವನಕ್ಕೆ ಸಂಬಂಧಪಟ್ಟ ಯಾ ಕವನದ ಲಕ್ಷಣವುಳ್ಳ.
  • ಸಹಜ ಸುಂದರ; ಸಹಜವಾಗಿ, ಸರಳವಾಗಿ, ಮೋಹಕವಾಗಿ – ಇರುವ: idyllic memories of his boyhood ಅವನ ಬಾಲ್ಯದ ಸಹಜ ಸುಂದರ ಸ್ಮರಣೆಗಳು.

idyllically

ಕ್ರಿಯಾವಿಶೇಷಣ

  • ಗ್ರಾಮೀಣ ಕವನದ ರೀತಿಯಲ್ಲಿ.
  • ಸಹಜ ಸರಳ ಸೊಬಗಿನಿಂದ.

Search Dictionaries

Loading Results

Follow Us :   
  Download Bharatavani App
  Bharatavani Windows App