भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

isochromatic

ಗುಣವಾಚಕ

ಒಂದೇ ಬಣ್ಣದ; ಸಮವರ್ಣದ; ಏಕವರ್ಣದ; ಏಕವರ್ಣೀಯ.

isochronous

ಗುಣವಾಚಕ

  • ಸಮಾವಧಿಯ; ಸಮಕಾಲ ವ್ಯಾಪ್ತಿಯ; ಇರುವ, ಜರುಗುವ ಕಾಲಾವಧಿ ಸಮನಾಗಿರುವ.
  • ಏಕಕಾಲಿಕ; ಸಮಕಾಲಿಕ; ಸಮಕಾಲೀನ; ಏಕಕಾಲೀನ; ಒಂದೇ ಯಾ ಅದೇ ಕಾಲದಲ್ಲಿ ಹುಟ್ಟಿದ, ರೂಪಿತವಾದ.

isochronously

ಕ್ರಿಯಾವಿಶೇಷಣ

  • ಸಮಾವಧಿಯಲ್ಲಿ; ಕಾಲಾವಧಿ ಸಮವಾಗಿರುವಂತೆ.
  • ಏಕಕಾಲಿಕವಾಗಿ; ಸಮಕಾಲೀನವಾಗಿ; ಒಂದೇ ಕಾಲದಲ್ಲಿ ಹುಟ್ಟಿದ ಯಾ ರೂಪಿತವಾದ ರೀತಿಯಲ್ಲಿ.

isoclinal

ಗುಣವಾಚಕ

  • ಸಮನಮನದ; ಕಾಂತೀಯ ನಮನ ಸಮನಾಗಿರುವ.
  • (ಭೂವಿಜ್ಞಾನ) ಶಿಲಾಸ್ತರಗಳು ಸಮಾನಾಂತರವಾಗಿರುವ; ಮಡಿಕೆಗಳು ಒಂದೇ ಕೋನದಲ್ಲಿ ಪ್ರವಣವಾಗಿರುವ.

isoclinic

ಗುಣವಾಚಕ

= isoclinal.

isoclinic lines

ನಾಮವಾಚಕ

(ಬಹುವಚನ) ಸಮನಮನ ರೇಖೆಗಳು; ಕಾಂತೀಯ ನಮನ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದಿರುವ ರೇಖೆಗಳು.

isocracy

ನಾಮವಾಚಕ

ಸಮಾನಾಧಿಕಾರ ರಾಜ್ಯ; ಎಲ್ಲರಿಗೂ ಸಮಾನ ರಾಜಕೀಯ ಅಧಿಕಾರವುಳ್ಳ ರಾಜ್ಯ ಪದ್ಧತಿ.

isocratic

ಗುಣವಾಚಕ

ಸಮಾನಾಧಿಕಾರ ರಾಜ್ಯ ಪದ್ಧತಿಯ.

isodynamic

ಗುಣವಾಚಕ

ಸಮಬಲದ; ಸಮಬಲೀಯ; ಬಲವು, ಮುಖ್ಯವಾಗಿ ಕಾಂತಬಲವು, ಸಮನಾಗಿರುವ.

isodynamic line

ನಾಮವಾಚಕ

ಸಮಬಲೀಯ ರೇಖೆ; ಕಾಂತಬಲವು ಸಮನಾಗಿರುವ ಸ್ಥಳಗಳನ್ನು ಭೂಪಟದ ಮೇಲೆ ಸೇರಿಸಿ ಎಳೆದ ರೇಖೆ.

isoenzyme

ನಾಮವಾಚಕ

(ಜೀವರಸಾಯನ ವಿಜ್ಞಾನ) ಐಸೋಎನ್‍ಸೆಮ್‍; ರಾಸಾಯನಿಕವಾಗಿ ಭಿನ್ನವಾಗಿರುವ, ಆದರೆ ಒಂದೇ ರೀತಿಯಲ್ಲಿ ಕೆಲಸ ಮಾಡುವ ಎನ್‍ಸೆಮುಗಳಲ್ಲಿ ಒಂದು.

isogeotherm

ನಾಮವಾಚಕ

ಸಮಭೂತಾಪಿ; ಭೂಮಿಯ ಒಳಗಡೆ ತಾಪವು ಸಮನಾಗಿರುವ ಬಿಂದುಗಳನ್ನು ಸೇರಿಸಿ ಪಡೆದ ಕಾಲ್ಪನಿಕ ರೇಖೆ ಯಾ ತಲ.

isogeothermal

ಗುಣವಾಚಕ

ಸಮಭೂತಾಪಿಯ; ಭೂಮಿಯೊಳಗಡೆಯ ತಾಪವು ಸಮನಾಗಿರುವ ಬಿಂದುಗಳನ್ನು ಸೇರಿಸಿ ಪಡೆದ ಕಾಲ್ಪನಿಕ ರೇಖೆಯ ಯಾ ತಲದ.

isogloss

ನಾಮವಾಚಕ

ಸಮಾನ ಭಾಷಾರೇಖೆ:

  • ಒಂದು ವಿಶಿಷ್ಟ ಭಾಷಾ ಲಕ್ಷಣವುಳ್ಳ ಪ್ರದೇಶವನ್ನು ಗುರುತಿಸಿರುವ, ಭೂಪಟದ ಮೇಲಿನ ರೇಖೆ.
  • (ಉಪಭಾಷೆಯೊಂದರ ಪ್ರಾದೇಶಿಕ ವ್ಯಾಪ್ತಿಯ ಅಧ್ಯಯನದಲ್ಲಿ) ಭಾಷೆಯ ಯಾವುದಾದರೂ ಒಂದು ವಿಶಿಷ್ಟ ಲಕ್ಷಣದಲ್ಲಿ, ಅಂಶದಲ್ಲಿ ಪರಸ್ಪರ ಭಿನ್ನವಾಗಿರುವ ಪ್ರದೇಶಗಳನ್ನು ಬೇರ್ಪಡಿಸಿ ತೋರಿಸಲು ಭೂಪಟದ ಮೇಲೆ ಎಳೆದಿರುವ ಗೆರೆ.

isogonic

ಗುಣವಾಚಕ

ಸಮದಿಕ್ಚ್ಯುತಿಯ; ಕಾಂತೀಯ ದಿಕ್ಚ್ಯುತಿ ಸಮನಾಗಿರುವ.

isogonic line

ನಾಮವಾಚಕ

ಸಮದಿಕ್ಚ್ಯುತಿ ರೇಖೆ; ಕಾಂತೀಯ ದಿಕ್ಚ್ಯುತಿ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.

isohel

ನಾಮವಾಚಕ

ಸಮಸೂರ್ಯರೇಖೆ; ಸಮಬಿಸಿಲು ಗೆರೆ; ಸೂರ್ಯನ ಬೆಳಕಿನ ಅವಧಿ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.

isohyet

ನಾಮವಾಚಕ

ಸಮವೃಷ್ಟಿರೇಖೆ; ಸಮಮಳೆರೇಖೆ; ಒಂದು ನಿರ್ದಿಷ್ಟ ಅವಧಿಯಲ್ಲಿ ಮಳೆಯ ಪ್ರಮಾಣ ಒಂದೇ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.

isolable

ಗುಣವಾಚಕ

ಪೃಥಕ್ಕರಣೀಯ; ಬೇರೆಯಾಗಿಡಬಲ್ಲ; ಒಂಟಿಯಾಗಿಡಬಲ್ಲ; ಪ್ರತ್ಯೇಕವಾಗಿಡಬಲ್ಲ.

isolatable

ಗುಣವಾಚಕ

= isolable.

Search Dictionaries

Loading Results

Follow Us :   
  Download Bharatavani App
  Bharatavani Windows App