भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

isomorphism

ನಾಮವಾಚಕ

(ಮುಖ್ಯವಾಗಿ ಹರಳುಗಳ ವಿಷಯದಲ್ಲಿ) ಸಮರೂಪತೆ; ಸಮಾಕಾರತೆ; ಹೊರ ಆಕೃತಿ ಒಂದೇ ಸಮನಾಗಿರುವಿಕೆ.

isomorphous

ಗುಣವಾಚಕ

= isomorphic.

isonomy

ನಾಮವಾಚಕ

ರಾಜಕೀಯ ಹಕ್ಕುಗಳ ಸರಿಸಮಾನತೆ.

isoperimetrical

ಗುಣವಾಚಕ

(ಜ್ಯಾಮಿತೀಯ ಆಕೃತಿಗಳ ವಿಷಯದಲ್ಲಿ) ಸಮಪರಿಧಿಯ; ಪರಿಧಿ ಸಮವಾಗಿರುವ.

isophote

ನಾಮವಾಚಕ

ಸಮಪ್ರಕಾಶರೇಖೆ; ಸಮಾನ ಪ್ರಕಾಶ ಯಾ ಹೊಳಪುಳ್ಳ (ಕಾಲ್ಪನಿಕ ಯಾ ರೇಖಾಚಿತ್ರದಲ್ಲಿನ) ರೇಖೆ.

isopleth

ನಾಮವಾಚಕ

ಸಮಪ್ರಭಾವ ರೇಖೆ; ಪವನಶಾಸ್ತ್ರೀಯ ಮೊದಲಾದವುಗಳ ಲಕ್ಷಣ, ಪ್ರಭಾವ, ಪರಿಣಾಮಗಳು ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.

isopod

ನಾಮವಾಚಕ

ಸಮಪಾದಿ; ಮರಹೇನು ಮತ್ತು ಅದೇ ಬಗೆಯ ಉಪ್ಪುನೀರಿನ ಹಾಗೂ ಸಿಹಿ ನೀರಿನ ಹುಳುಗಳನ್ನೊಳಗೊಂಡ, ಅನೇಕವೇಳೆ ಪರಾವಲಂಬಿಯಾದ ಮತ್ತು ಮಟ್ಟಸವಾದ ಶರೀರ ಹಾಗು ಏಳು ಜೊತೆ ಕಾಲುಗಳುಳ್ಳ, ವಲ್ಕವಂತ ಪ್ರಾಣಿ.

isosceles

ಗುಣವಾಚಕ

(ತ್ರಿಕೋನದ ವಿಷಯದಲ್ಲಿ) ಸಮದ್ವಿಬಾಹು; ಎರಡು ಸಮಬಾಹುಗಳುಳ್ಳ; ಎರಡು ಬಾಹುಗಳು ಸಮವಾಗಿರುವ.

isoseismal

ಗುಣವಾಚಕ

ಸಮಭೂಕಂಪನದ; ಭೂಕಂಪದ ತೀವ್ರತೆಯು ಸಮವಾಗಿರುವ.

isoseismal

ನಾಮವಾಚಕ

= isoseismal line.

isoseismal line

ನಾಮವಾಚಕ

ಸಮಭೂಕಂಪನ ರೇಖೆ; ಭೂಕಂಪನ ತೀವ್ರತೆ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದ ರೇಖೆ.

isoseismic

ಗುಣವಾಚಕ

= 1isoseismal.

isostasy

ನಾಮವಾಚಕ

(ಭೂವಿಜ್ಞಾನ) ಸಮಸ್ಥಿತಿ; ಒಳಗಡೆಯ ಶಿಲಾವಸ್ತು ಗುರುತ್ವದ ಪ್ರಭಾವದಿಂದ ಹರಿಯುವುದರ ಪರಿಣಾಮವಾಗಿ ಭೂಮಿಯ ಚಿಪ್ಪಿನಲ್ಲಿ ಏರ್ಪಡುವ ಸಮತೋಲ.

isostatic

ಗುಣವಾಚಕ

(ಭೂವಿಜ್ಞಾನ) ಸಮಸ್ಥಿತಿಯ; (ಭೂಮಿಯ ಚಿಪ್ಪಿಗೆ ಸಂಬಂಧಿಸಿದಂತೆ) ಸಮಸ್ಥಿತಿಯಲ್ಲಿರುವ.

isotheral

ನಾಮವಾಚಕ

ಸಮಗ್ರೀಷ್ಮ; ಬೇಸಗೆಯಲ್ಲಿ ಸರಾಸರಿ ತಾಪ ಸಮನಾಗಿರುವ.

isotheral

ನಾಮವಾಚಕ

= isotheral line.

isotheral line

ನಾಮವಾಚಕ

ಸಮಗ್ರೀಷ್ಮ ರೇಖೆ; ಬೇಸಗೆಯಲ್ಲಿ ಸರಾಸರಿ ತಾಪ ಸಮನಾಗಿರುವ ಸ್ಥಳಗಳನ್ನೆಲ್ಲ ಸೇರಿಸಿ ಭೂಪಟದ ಮೇಲೆ ಎಳೆದಿರುವ ರೇಖೆ.

isothere

ನಾಮವಾಚಕ

= isotheral line.

isotherm

ನಾಮವಾಚಕ

ಸಮತಾಪಿರೇಖೆ:

  • ನಿರ್ದಿಷ್ಟ ಸಮಯದಲ್ಲಿ ತಾಪ ಒಂದೇ ಆಗಿರುವ ಯಾ ನಿರ್ದಿಷ್ಟ ಅವಧಿಯಲ್ಲಿ ಸರಾಸರಿ ತಾಪ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದಿರುವ ರೇಖೆ.
  • (ಭೌತವಿಜ್ಞಾನ) ನಿರ್ದಿಷ್ಟ ತಾಪದಲ್ಲಿ ಒಂದು ಅನಿಲದ ಗಾತ್ರ ಮತ್ತು ಒತ್ತಡಗಳಿಗಿರುವ ಸಂಬಂಧವನ್ನು ಸೂಚಿಸುವ ಗೆರೆ, ವಕ್ರರೇಖೆ.

isothermal

ಗುಣವಾಚಕ

ಸಮತಾಪೀಯ:

  • ತಾಪ ಸಮನಾಗಿರುವ, ಅದಕ್ಕೆ ಸಂಬಂಧಿಸಿದ.
  • ಒಂದೇ ತಾಪದಲ್ಲಿ ಅನಿಲದ ಒತ್ತಡ ಮತ್ತು ತಾಪಗಳು ಬದಲಾವಣೆಯಾಗುವ ಯಾ ಅದಕ್ಕೆ ಸಂಬಂಧಿಸಿದ.

Search Dictionaries

Loading Results

Follow Us :   
  Download Bharatavani App
  Bharatavani Windows App