भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ivoried

ಗುಣವಾಚಕ

  • ದಂತದಿಂದ ಮಾಡಿದ, ರಚಿಸಿದ.
  • ದಂತ ಹೊದಿಸಿದ; ದಂತದಿಂದ ಮುಚ್ಚಿದ.

ivory

ನಾಮವಾಚಕ

ಪದಗುಚ್ಛ

vegetable ivory ಸಸ್ಯದಂತ; ವೃಕ್ಷದಂತ; ಮರದಂತ; ದಕ್ಷಿಣ ಅಮೆರಿಕದ ಕೊರೊಜೊ ತಾಳೆ ಮರದ ಬೀಜದೊಳಗಿನ ಗಟ್ಟಿಯಾದ ಸಸಾರಜನಕ ಪದಾರ್ಥ.

  • (ಆನೆ, ನೀರಾನೆ, ವಾಲ್‍ರಸ್‍, ಮೊದಲಾದ ಪ್ರಾಣಿಗಳ ಕೋರೆಹಲ್ಲುಗಳ ಭಾಗವಾದ) ದಂತ: fossil ivory (‘ಮ್ಯಾಮತ್‍’ ಎಂಬ ವಂಶನಷ್ಟ ಗಜದ) ಪಳೆಯುಳಿಕೆ ದಂತ; ಅವಶಿಷ್ಟ ದಂತ; ಹಾಸಿಲ್‍ದಂತ.
  • ದಂತವರ್ಣ; ದಂತದ ಬಣ್ಣ.
  • (ಸಾಮಾನ್ಯವಾಗಿ ಬಹುವಚನದಲ್ಲಿ)
    1. ದಂತದ ವಸ್ತುಗಳು; ದಂತದಿಂದ ಮಾಡಿದ ಪದಾರ್ಥಗಳು.
    2. (ಅಶಿಷ್ಟ) ದಾಳಗಳು.
    3. (ಅಶಿಷ್ಟ) ಬಿಲ್ಯರ್ಡ್ಸ್‍ ಆಟದ ಚೆಂಡುಗಳು.
    4. (ಅಶಿಷ್ಟ) ಪಿಯಾನೋ (ವಾದ್ಯದ) ಕೀಲುಗಳು, ಬಿರಡೆಗಳು.
  • (ಅಶಿಷ್ಟ, ಏಕವಚನ ಯಾ ಬಹುವಚನ) ಹಲ್ಲುಗಳು.

ivory black

ನಾಮವಾಚಕ

ದಂತದ ಕಪ್ಪು; ಸುಟ್ಟ ದಂತ ಯಾ ಮೂಳೆಯಿಂದ ತಯಾರಿಸಿದ ಕಪ್ಪು ಬಣ್ಣ.

ivory tower

ನಾಮವಾಚಕ

ದಂತಗೋಪುರ; ಬಾಳಿನ ಕಟುವಾಸ್ತವಿಕತೆಗಳಿಂದ ರಕ್ಷಣೆ, ಆಶ್ರಯ.

ivory-nut

ನಾಮವಾಚಕ

ದಂತಬೀಜ; ದಕ್ಷಿಣ ಅಮೆರಿಕದ ಕೊರೊಜೊ ತಾಳೆಯ ಬೀಜ.

ivy

ನಾಮವಾಚಕ

‘ಐವಿ’ (ಲತೆ); ಐದು ಮೂಲೆಗಳುಳ್ಳ, ಕಪ್ಪು ಹಸುರಿನ ಹೊಳೆಯುವ ಎಲೆಗಳಿಂದ ಕೂಡಿದ, ನಿತ್ಯ ಹಸುರಿನ ಬಳ್ಳಿ.

ivy geranium

ನಾಮವಾಚಕ

‘ಐವಿ’ ತೆರನ ಎಲೆಗಳುಳ್ಳ ‘ಜೆರೇನಿಯಂ’ ಸಸ್ಯ.

IWW

ಸಂಕ್ಷಿಪ್ತ

Industrial Workers of the World.

ixia

ನಾಮವಾಚಕ

  • ‘ಇಕ್ಸಿಯ’; ದೊಡ್ಡ ಬೆಡಗಿನ ಹೂಗಳನ್ನು ಬಿಡುವ, ದಕ್ಷಿಣ ಆಹ್ರಿಕದ ಒಂದು ಸಸ್ಯಕುಲ.
  • ಈ ಕುಲದ ಸಸ್ಯ.

Ixion’s wheel

ನಾಮವಾಚಕ

(ಗ್ರೀಕ್‍ ಪುರಾಣ) ಇಕ್ಸಯನ್‍ ಚಕ್ರ; ಅಧೋಲೋಕದಲ್ಲಿ ಶಿಕ್ಷೆಗೊಳಪಟ್ಟ ಇಕ್ಸಿಯನ್‍ನನ್ನು ನಿರಂತರವಾಗಿ ತನ್ನ ಸುತ್ತ ತಿರುಗಿಸುತ್ತಿರುವ ಚಕ್ರ.

Ixionion

ಗುಣವಾಚಕ

(ಗ್ರೀಕ್‍ ಪುರಾಣದ ಪ್ರಕಾರ, ತನ್ನ ತಪ್ಪೊಂದರ ಶಿಕ್ಷೆಗಾಗಿ ಪಾತಾಳ ಲೋಕದಲ್ಲಿ ನಿರಂತರವಾಗಿ ಸುತ್ತುತ್ತಿರುವ ಚಕ್ರಕ್ಕೆ ಬಿಗಿಯಲ್ಪಟ್ಟ, ಥೆಸಲಿಯದ ದೊರೆ) ಇಕ್ಸಿಯನನ.

izard

ನಾಮವಾಚಕ

ಇಸಾರ್ಡ್‍; ಷ್ಯಾಮ್ವಾ (chamois) ಎಂಬ ಕಾಡು ಜಿಂಕೆಗೆ ಸಂಬಂಧಪಟ್ಟ, ಪಿರಿಣೀಸ್‍ ಪರ್ವತ ಪ್ರಾಂತದ, ಮೇಕೆಯನ್ನು ಹೋಲುವ ಜಿಂಕೆ, ಚಿಗರೆ.

izzard

ನಾಮವಾಚಕ

(ಪ್ರಾಚೀನ ಪ್ರಯೋಗ) Z ಅಕ್ಷರ: from A to izzard ಎ ಇಂದ ಸೆಡ್‍ ವರೆಗೆ; ಅ ಇಂದ ಕ್ಷ ವರೆಗೆ.

izzat

ನಾಮವಾಚಕ

(ಭಾರತ)

  • ಮರ್ಯಾದೆ; ಗೌರವ.
  • ಹೆಸರು; ಪ್ರಸಿದ್ಧಿ.
  • ಆತ್ಮಗೌರವ; ಸ್ವಾಭಿಮಾನ.

Search Dictionaries

Loading Results

Follow Us :   
  Download Bharatavani App
  Bharatavani Windows App