भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

ichthyosaur

ನಾಮವಾಚಕ

= ichthyosaurus.

ichthyosaurus

ನಾಮವಾಚಕ

ಇಕ್ತಿಯಸಾರಸ್‍; ಈನುಗೌಳಿ; ದೊಡ್ಡತಲೆ, ಒಂದು ದಿಕ್ಕಿನಲ್ಲಿ ಚೂಪಾಗುವ ದೇಹ, ಉದ್ದಬಾಲ, ನಾಲ್ಕು ಈಜು ರೆಕ್ಕೆಗಳು ಇರುವ, ನಷ್ಟವಂಶದ ಒಂದು ಸಮುದ್ರಜೀವಿ.

ichthyosis

ನಾಮವಾಚಕ

ಇಕ್ತಿಯೋಸಿಸ್‍; ಮತ್ಸ್ಯವ್ಯಾಧಿ; ಈನುದೊಗಲು ರೋಗ; ಹೊರಚರ್ಮ ಹರುಕಲಾಗಿ ಈನಿನ ಹೊರಮೈಯಂತೆ ಚೆಕ್ಕೆಚೆಕ್ಕೆಯಂತಾಗುವ ಒಂದು ಚರ್ಮರೋಗ.

ichthyotic

ಗುಣವಾಚಕ

ಈನುದೊಗಲು ರೋಗ ತಗುಲಿದ ಯಾ ಅದರಿಂದ ನರಳುತ್ತಿರುವ.

ICI

ಸಂಕ್ಷಿಪ್ತ

Imperial Chemical Industries.

icicle

ನಾಮವಾಚಕ

ಹಿಮಬಿಳಲು; ಹಿಮದ, ನೀರ್ಗಲ್ಲ-ತೊಂಗಲು; ಮಾಳಿಗೆಯಿಂದ ತೊಟ್ಟಿಕ್ಕುವ ನೀರು ಹನಿಗಳು ಹಾಗೆಯೇ ಘನೀಭವಿಸಿ ತೂಗು ಬಿದ್ದಿರುವ ಹಿಮದ ಚೂಪು ಕೊನೆಗಳು.

icily

ಕ್ರಿಯಾವಿಶೇಷಣ

  • ಹಿಮಶೀತದಿಂದ; ಕೊರೆಯುತ್ತ; ತೀರ ಚಳಿಚಳಿಯಾಗಿ: the wind blew icily cold ಗಾಳಿ ಬಹಳ ಚಳಿಚಳಿಯಾಗಿ ಬೀಸಿತು.
  • ಆದರಶೂನ್ಯವಾಗಿ; ನಿರುತ್ಸಾಹದಿಂದ: an icily unenthusiastic audience ಆದರಶೂನ್ಯ, ನಿರುತ್ಸಾಹಭರಿತ – ಪ್ರೇಕ್ಷಕರು.

iciness

ನಾಮವಾಚಕ

  • ಅತಿಶೈತ್ಯ; ಕೊರೆತ.
  • ನಿರುತ್ಸಾಹ; ಆದರಶೂನ್ಯತೆ.

icing

ನಾಮವಾಚಕ

  • ಸಕ್ಕರೆ ಅಲಂಕಾರ; ಶರ್ಕರಾಲಂಕರಣ; ಕೇಕ್‍ ಮೊದಲಾದ ಭಕ್ಷ್ಯಗಳ ಮೇಲೆ ಸಕ್ಕರೆ ಪಾಕ ಹರವಿ ಅಲಂಕರಿಸುವುದು.
  • (ಮುಖ್ಯವಾಗಿ ಪಾನೀಯಗಳಿಗೆ) ಮಂಜುಗಡ್ಡೆ ಹಾಕಿ ತಂಪಾಗಿಸುವುದು.
  • (ವಿಮಾನದ ಮೇಲೆ) ಹಿಮಾಚ್ಛಾದನ; ಹಿಮದ ಪದರು ಕಟ್ಟುವುದು; ಮಂಜುಗಡ್ಡೆಗಳು ಮುಚ್ಚಿಕೊಳ್ಳುವುದು.

icon

ನಾಮವಾಚಕ

  • ಮೂರ್ತಿ; ಪ್ರತಿಮೆ; ವಿಗ್ರಹ; ಬಿಂಬ.
  • (ಗ್ರೀಕ್‍ ಚರ್ಚಿನಲ್ಲಿ) ಪೂಜನೀಯರೆಂದು ಗಣಿಸಲಾದ ಏಸುಕ್ರಿಸ್ತ, ಸಂತರು, ಮೊದಲಾದವರ ಪವಿತ್ರ ಶಿಲ್ಪ, ಚಿತ್ರ, ಶಬಲಚಿತ್ರ, ಮೊದಲಾದವು.

iconic

ಗುಣವಾಚಕ

  • ಪ್ರತಿಮೆಯ; ವಿಗ್ರಹದ.
  • ಪ್ರತಿಮಾರೂಪದ; ವಿಗ್ರಹದಂತಿರುವ.
  • (ಶಿಲ್ಪದ ವಿಷಯದಲ್ಲಿ) ಸಾಂಪ್ರದಾಯಿಕ; ಸಾಂಪ್ರದಾಯಿಕ ಮಾದರಿಯನ್ನನುಸರಿಸಿದ.

icono-

ಸಮಾಸ ಪೂರ್ವಪದ

ವಿಗ್ರಹದ, ವಿಗ್ರಹಕ್ಕೆ ಸಂಬಂಧಿಸಿದ, ಪ್ರತಿರೂಪದ, ಎಂಬರ್ಥಗಳಲ್ಲಿ ಬಳಸುವ ಪೂರ್ವಪ್ರತ್ಯಯ: iconography.

iconoclasm

ನಾಮವಾಚಕ

ವಿಗ್ರಹಭಂಜನೆ; ಮೂರ್ತಿಭಂಜನೆ; ವಿಗ್ರಹಗಳನ್ನು ಒಡೆದು ಹಾಕುವುದು (ರೂಪಕವಾಗಿ ಸಹ).

iconoclast

ನಾಮವಾಚಕ

  • ಮೂರ್ತಿಭಂಜಕ; ವಿಗ್ರಹಭಂಜಕ; ಮುಖ್ಯವಾಗಿ ಪೌರಸ್ತ್ಯ ಚರ್ಚುಗಳಲ್ಲಿ ಮೂರ್ತಿಪೂಜೆಗೆ ವಿರೋಧವಾಗಿ ಕ್ರಿಸ್ತಶಕ 8-9ನೆಯ ಶತಮಾನಗಳಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದವನು ಯಾ $16-17$ನೆ ಶತಮಾನದ ಪ್ಯೂರಿಟನ್‍.
  • ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ನಂಬಿಕೆ, ಭಾವನೆಗಳನ್ನು ಖಂಡಿಸುವವನು.

iconoclastic

ಗುಣವಾಚಕ

  • ವಿಗ್ರಹ ಭಂಜಕ; ವಿಗ್ರಹಗಳನ್ನು ಒಡೆದು ಹಾಕಬೇಕೆನ್ನುವ.
  • ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ಭಾವನೆಗಳನ್ನು ಖಂಡಿಸುವ.

iconographer

ನಾಮವಾಚಕ

  • ಪ್ರತಿಮಾ ಶಿಲ್ಪಿ; ಮೂರ್ತಿಶಿಲ್ಪಕಾರ.
  • ಮೂರ್ತಿ ಚಿತ್ರಕಾರ.

iconographical

ಗುಣವಾಚಕ

  • ಮೂರ್ತಿ ಶಿಲ್ಪದ ಯಾ ಅದಕ್ಕೆ ಸಂಬಂಧಿಸಿದ.
  • ಚಿತ್ರೀಯ; ಒಂದು ವಿಷಯವನ್ನು ಚಿತ್ರ, ರೇಖನಗಳಿಂದ ನಿರೂಪಿಸುವ ಯಾ ವರ್ಣಿಸುವ.
  • ಸಚಿತ್ರ; ಚಿತ್ರಪ್ರಧಾನವಾದ.
  • ಮೂರ್ತಿ ಶಿಲ್ಪಿಯ; ಪ್ರತಿಮಾ ವಿವರಣೆಗಳನ್ನುಳ್ಳ; ಚಿತ್ರ, ಶಿಲ್ಪ ಮೊದಲಾದವನ್ನು ವಿವರಿಸುವ.

iconography

ನಾಮವಾಚಕ

  • ಪ್ರತಿಮಾಶಿಲ್ಪ; ಮೂರ್ತಿಶಿಲ್ಪ; ಮೂರ್ತಿಚಿತ್ರಣ; ಯಾವುದೇ ವಿಷಯವನ್ನು ಚಿತ್ರದ ಯಾ ಪ್ರತಿಮೆಯ ಮೂಲಕ ನಿರೂಪಿಸುವುದು.
  • ಸಚಿತ್ರಪುಸ್ತಕ; ಚಿತ್ರಗಳೇ ಪ್ರಧಾನವಾಗಿರುವ ಪುಸ್ತಕ.
  • ಪ್ರತಿಮಾಶಾಸ್ತ್ರ; ಚಿತ್ರ, ಶಿಲ್ಪ, ಮೊದಲಾದವುಗಳನ್ನು ವಿವರಿಸುವ ಗ್ರಂಥ.
  • ಪ್ರತಿಮಾಧ್ಯಯನ; ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಕುರಿತ ಚಿತ್ರ ಯಾ ಶಿಲ್ಪಗಳ ಅಧ್ಯಯನ.

iconolater

ನಾಮವಾಚಕ

ಮೂರ್ತಿಪೂಜಕ; ವಿಗ್ರಹಾರಾಧಕ.

iconolatry

ನಾಮವಾಚಕ

ಮೂರ್ತಿಪೂಜೆ; ವಿಗ್ರಹಾರಾಧನೆ.

Search Dictionaries

Loading Results

Follow Us :   
  Download Bharatavani App
  Bharatavani Windows App