भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

iconology

ನಾಮವಾಚಕ

  • ಪ್ರತಿಮಾಶಾಸ್ತ್ರ; ಪ್ರತಿಮೆಗಳ ಅಧ್ಯಯನ.
  • = symbolism.

iconometer

ನಾಮವಾಚಕ

  • (ಛಾಯಾಚಿತ್ರಣ) ಬಿಂಬಮಾಪಕ; ಕ್ಯಾಮರಾಕ್ಕೆ ಲಗತ್ತಿಸಿರುವ, ಯಾ ಬಿಡಿಯಾಗಿದ್ದು ಬೇರೆಬೇರೆ ಲೆನ್ಸು ಮತ್ತು ಛಾಯಾಚಿತ್ರ ಪ್ಲೇಟುಗಳಿಗೆ ಅಳವಡಿಸಬಹುದಾಗಿರುವ, ನೇರ ದೃಶ್ಯದರ್ಶಕ; ಕ್ಯಾಮರಾದಲ್ಲಿ ಹಿಡಿಯಬಹುದಾದಷ್ಟು ಇದಿರಿನ ದೃಶ್ಯದ ಪ್ರಮಾಣವನ್ನು ತೋರಿಸುವ ಸಾಧನ.
  • (ಸರ್ವೇಕ್ಷಣೆಯಲ್ಲಿ) ಬಿಂಬಮಾಪಕ; ವಸ್ತುವಿನ ಗಾತ್ರ ಯಾ ದೂರವನ್ನು ತಿಳಿದುಕೊಳ್ಳಲು ಬಳಸುವ ದ್ಯುತಿ ಉಪಕರಣ.

iconometry

ನಾಮವಾಚಕ

ಬಿಂಬಮಾಪನ; ಒಂದು ಪ್ರದೇಶದ ಛಾಯಾಚಿತ್ರಗಳಿಂದ ಅದರ ಅಳತೆಗಳನ್ನು ತೆಗೆದುಕೊಂಡು ಅವನ್ನು ನಕಾಸೆಗೆ ಯಾ ಸರ್ವೆಗೆ ಬಳಸುವುದು.

iconoscope

ನಾಮವಾಚಕ

(ಟೆಲಿವಿಷನ್‍) ಬಿಂಬದರ್ಶಕ; ದ್ಯುತಿಚಿತ್ರವನ್ನು ರೇಡಿಯೋ ಅಲೆಗಳಾಗಿ ಪರಿವರ್ತಿಸುವುದಕ್ಕೆ ಪೂರ್ವಭಾವಿಯಾಗಿ ಅದನ್ನು ವಿದ್ಯುತ್‍ ಪ್ರವಾಹಗಳನ್ನಾಗಿ ಪರಿವರ್ತಿಸುವ ಉಪಕರಣ.

iconostasis

ನಾಮವಾಚಕ

ಗ್ರೀಕ್‍ ಚರ್ಚಿನಲ್ಲಿ ಪವಿತ್ರ ಪ್ರದೇಶವನ್ನು ಮಂದಿರದ ಪ್ರಧಾನ ಭಾಗದಿಂದ ಪ್ರತ್ಯೇಕಿಸುವ, ಮತ್ತು ಪ್ರತಿಮೆಗಳನ್ನು ಇಟ್ಟಿರುವ ಅಡ್ಡ ತಡೆ.

icosahedral

ಗುಣವಾಚಕ

ವಿಂಶತಿಮುಖಿಯ; ಇಪ್ಪತ್ತು ಸಮತಲಮುಖಗಳಿರುವ ಘನಾಕೃತಿಯ ಯಾ ಅದಕ್ಕೆ ಸಂಬಂಧಿಸಿದ.

icosahedron

ನಾಮವಾಚಕ

ವಿಂಶತಿಮುಖಿ; ಇಪ್ಪತ್ತು ಸಮತಲ ಮುಖಗಳಿರುವ ಘನಾಕೃತಿ.

icosi-

ಸಮಾಸ ಪೂರ್ವಪದ

ಇಪ್ಪತ್ತು, ವಿಂಶತಿ ಎಂಬರ್ಥದ ಸಮಾಸ ಪೂರ್ವಪದ.

icosidodecahedran

ನಾಮವಾಚಕ

ವಿಂಶತಿದ್ವಾದಶಮುಖಿ; ವಿಂಶತಿ ತ್ರಿಕೋನ ದ್ವಾದಶಪಂಚಕೋನಮುಖಿ; 20 ತ್ರಿಕೋನಾಕಾರದ ಮುಖಗಳನ್ನೂ 12 ಪಂಚಕೋನಾಕಾರದ ಮುಖಗಳನ್ನೂ ಉಳ್ಳ ಘನಾಕೃತಿ.

ICS

ಸಂಕ್ಷಿಪ್ತ

(ಚರಿತ್ರೆ) Indian Civil Service.

ICSU

ಸಂಕ್ಷಿಪ್ತ

International Council of Scientific Unions.

icteric

ಗುಣವಾಚಕ

(ರೋಗಶಾಸ್ತ್ರ) ಕಾಮಾಲೆಯ; ಕಾಮಾಲೆರೋಗಕ್ಕೆ ಸಂಬಂಧಿಸಿದ.

icterus

ನಾಮವಾಚಕ

(ರೋಗಶಾಸ್ತ್ರ) ಕಾಮಾಲೆ (ರೋಗ); ಅರಶಿನಮುಂಡಿಗೆ.

ictus

ನಾಮವಾಚಕ

(ಛಂದಸ್ಸು) ಸ್ವರಭಾರ; ಲಯದ ಯಾ ಛಂದಸ್ಸಿನ ಒತ್ತು.

icy

ಗುಣವಾಚಕ

  • ಹಿಮಮಯ; ಹಿಮಾವೃತ; ನೀರ್ಗಲ್ಲಿನಿಂದ ತುಂಬಿದ.
  • ಬಹಳ ಚಳಿಯ; ಅತಿಶೀತಲದ; ಶೈತ್ಯದ; ತಣ್ಣಗೆ ಕೊರೆಯುವ.
  • (ರೂಪಕವಾಗಿ) ಆದರವಿಲ್ಲದ; ನಿರಾದರ; ಜಡವಾಗಿರುವ; ನಿರುತ್ಸಾಹದ; ಬಿಸುಪಿಲ್ಲದ: icy manners ಆದರಶೂನ್ಯ ನಡವಳಿಕೆ.

id

ನಾಮವಾಚಕ

ಇಡ್‍:

  • (ಜೀವವಿಜ್ಞಾನ) ಜೀವಿಯ ಆನುವಂಶೀಯತೆಯನ್ನು ನಿರ್ಧರಿಸುವ ಕೋಶ ದ್ರವ್ಯಭಾಗದ ಏಕಮಾನ.
  • (ಮನಶ್ಶಾಸ್ತ್ರ) ಪ್ರಾಕೃತ ಪ್ರವೃತ್ತಿ; ಪ್ರಕೃತಿದತ್ತ ಪ್ರವೃತ್ತಿ; ಸುಪ್ತವಾಸನೆ; ವ್ಯಕ್ತಿಯ ಆನುವಂಶಿಕ ಪ್ರವೃತ್ತಿಗಳಿಗೆ ಮೂಲವಾದ ಸುಪ್ತ ಪ್ರಜ್ಞೆಯ ಅಂಶ.

ID

ಸಂಕ್ಷಿಪ್ತ

  • (ಅಮೆರಿಕನ್‍ ಪ್ರಯೋಗ) Idaho.
  • (ಅಮೆರಿಕನ್‍ ಪ್ರಯೋಗ) identification, identity.

id.

ಸಂಕ್ಷಿಪ್ತ

idem.

IDA

ಸಂಕ್ಷಿಪ್ತ

International Development Association.

IDB

ಸಂಕ್ಷಿಪ್ತ

illicit diamond-buying.

Search Dictionaries

Loading Results

Follow Us :   
  Download Bharatavani App
  Bharatavani Windows App