भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

japonica

ನಾಮವಾಚಕ

ಜಪಾನಿಕ; ಅಲಂಕಾರಕ್ಕಾಗಿ ಬೆಳೆಸುವ, ಕೆಂಪು ಹೂಗಳನ್ನೂ ಬಿಳಿ, ಹಳದಿ ಯಾ ಹಸಿರು ಬಣ್ಣದ ತಿನ್ನಬಲ್ಲ ಹಣ್ಣುಗಳನ್ನೂ ಬಿಡುವ ಕ್ವಿನ್ಸ್‍ ಗಿಡ.

jar

ನಾಮವಾಚಕ

  • ಕರ್ಕಶ ಧ್ವನಿ, ಕಂಪನ.
  • ನರಗಳಿಗೂ ಭಾವಗಳಿಗೂ ಅಹಿತವಾದ ರೋಮಾಂಚನ.
  • ಆಘಾತ; ಧಕ್ಕೆ.
  • ವಿರಸ; ವಿಷಮತೆ; ಅಸಾಮರಸ್ಯ.
  • ಭಿನ್ನಾಭಿಪ್ರಾಯ; ವಾದವಿವಾದ.
  • ಜಗಳ; ಕಲಹ.

jar

ಕ್ರಿಯಾಪದ

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • ಕಿರುಗುಟ್ಟಿಸು; ಕರ್ಕಶವಾಗಿಸು; ಕರ್ಕಶ ಧ್ವನಿಯಾಗುವಂತೆ ಮಾಡು.
  • (ನರಗಳಿಗೆ) ಧಕ್ಕೆ ಉಂಟು ಮಾಡು; ನೋವುಂಟು ಮಾಡು; ಆಘಾತವುಂಟು ಮಾಡು; that word jars me ಆ ಮಾತು ನನಗೆ ನೋವುಂಟು ಮಾಡುತ್ತದೆ.

jar

ನಾಮವಾಚಕ

  • (ಮಣ್ಣು, ಗಾಜು, ಪಿಂಗಾಣಿ ಅಥವಾ ಪ್ಲಾಸ್ಟಿಕ್‍ನ ಸಾಮಾನ್ಯವಾಗಿ ಉರುಳೆಯಾಕಾರದ, ಹಿಡಿಯುಳ್ಳ ಯಾ ಹಿಡಿ ಇಲ್ಲದ) ಜಾಡಿ; ಜಾಲಿ.
  • ಜಾಡಿ; ಜಾಡಿ – ತುಂಬ, ಭರ್ತಿ.
  • ಜಾಡಿಯಲ್ಲಿರುವ ವಸ್ತು.
  • (ಆಡುಮಾತು) ಒಂದು ಜಾಡಿ ಬಿಯರ್‍ ಮೊದಲಾದವು.

jar

ನಾಮವಾಚಕ

ಪದಗುಚ್ಛ

(ಪ್ರಾಚೀನ ಪ್ರಯೋಗ ಅಥವಾ ಆಡುಮಾತು) ತಿರುವು. on the jar ಅರೆತೆರೆದು; ಅರ್ಧ ತಿರುಗಿ.

jardiniere

ನಾಮವಾಚಕ

  • ಹೂದಾನಿ; ಹೂಬಾನಿ; ಹೂಕುಂಡ; ಪುಷ್ಪಪಾತ್ರೆ; (ಕೊಠಡಿಯಲ್ಲಿ, ಕಿಟಕಿಯ ತಳ ಮೊದಲಾದವುಗಳಲ್ಲಿ, ಹೂಬಿಡುವ ಸಸ್ಯಗಳನ್ನು ಇಡುವ, ಅಲಂಕಾರದ) ಹೂವಿನ ಕುಂಡ. Figure: jardiniere
  • (ಹಲವು ತರಕಾರಿಗಳನ್ನು ಬೆರಸಿ ಮಾಡಿದ) ಕೂಟು; ಮೇಲೋಗರ; ತಾಳದ.

jarful

ಗುಣವಾಚಕ

ಜಾಡಿ – ತುಂಬ, ಭರ್ತಿ; ಜಾಡಿ ತುಂಬುವಷ್ಟು: a jarful of honey ಒಂದು ಜಾಡಿ (ತುಂಬ) ಜೇನುತುಪ್ಪ.

jargon

ನಾಮವಾಚಕ

  • ಲೊಟಗುಟ್ಟಿಕೆ; ಲೊಡಲೊಡ; ಗೊಜಗೊಜ; ಅರ್ಥವಾಗದ ಮಾತುಗಳು.
  • ಗ್ರಾಮ್ಯ, ಅನಾಗರಿಕ, ಕ್ಷುಲ್ಲಕ, ಕೀಳು – ಭಾಷೆ.
  • ಪರಿಭಾಷೆ; ವೃತ್ತಿಭಾಷೆ; ಕಸುಬು – ಮಾತು, ನುಡಿ; ವಿವಿಧ ವೃತ್ತಿಗಳಲ್ಲಿ, ಪಂಗಡಗಳಲ್ಲಿ ಬಳಸುವ, ದಿನಬಳಕೆಯಲ್ಲಿಲ್ಲದ ಪದಗಳನ್ನು ಬಳಸುವ ಭಾಷೆ: critics jargon ವಿಮರ್ಶಕರ ಪರಿಭಾಷೆ. scientific, law-jargon ವೈಜ್ಞಾನಿಕ, ನ್ಯಾಯಶಾಸ್ತ್ರದ – ಪರಿಭಾಷೆ.
  • ಹಕ್ಕಿಗಳ ಕಿಚಕಿಚ (ಧ್ವನಿ).

jargon

ನಾಮವಾಚಕ

(ಶ್ರೀಲಂಕಾ ದ್ವೀಪದಲ್ಲಿ ದೊರೆಯುವ) ಜಾರ್ಗನ್‍; ಅರೆಪಾರದರ್ಶಕವಾದ ವರ್ಣರಹಿತ ಅಥವಾ ಹೊಗೆ ಬಣ್ಣದ ಜಿರ್ಕಾನ್‍ ಎಂಬ ಪ್ರಶಸ್ತ ಶಿಲೆ.

jargonelle

ನಾಮವಾಚಕ

ಜಾರ್ಗನೆಲ್‍; ಬೇಗನೆ ಹಣ್ಣಾಗುವ ಒಂದು ಬಗೆಯ ಪೇರ್‍ ಹಣ್ಣು.

jargonic

ಗುಣವಾಚಕ

  • (ಭಾಷೆಯ ವಿಷಯದಲ್ಲಿ) ಗ್ರಾಮ್ಯವಾದ; ಅನಾಗರಿಕವಾದ.
  • (ಬೇರೆ ಬೇರೆ ವೃತ್ತಿಯವರು ಬಳಸುವ, ಸಾಮಾನ್ಯರಿಗೆ ತಿಳಿಯದ) ಪಾರಿಭಾಷಿಕಮಯವಾದ; ಪಾರಿಭಾಷಿಕ ರೂಪದ.

jargonistic

ಗುಣವಾಚಕ

= jargonic.

jargonize

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

  • (ಭಾಷೆಯನ್ನು)ಗ್ರಾಮ್ಯಗೊಳಿಸು; ಕೆಡಿಸು; ಕೀಳಾಗಿಸು.
  • ಪಾರಿಭಾಷಿಕಗೊಳಿಸು; ಪಾರಿಭಾಷಿಕ ರೂಪಕ್ಕೆ ತರು.

jargoon

ನಾಮವಾಚಕ

= 2jargon.

jarl

ನಾಮವಾಚಕ

(ಚರಿತ್ರೆ)(ಪುರಾತನ ನಾರ್ವೆಯ ಅಥವಾ ಡೆನ್ಮಾರ್ಕಿನ) ಮುಖಂಡ; ಮುಖ್ಯಸ್ಥ; ಪ್ರಮುಖ; ನಾಯಕ; ಹಿರಿಯ; ತಲೆಯಾಳು.

jarrah

ನಾಮವಾಚಕ

ಜಾರ; ಆಸ್ಟ್ರೇಲಿಯದ ಮಹಾಗನಿ ಗೋಂದುಮರ ಅಥವಾ ಅದರ ಗಟ್ಟಿಯಾದ, ಬಾಳಿಕೆ ಬರುವ ದಾರು.

jarringly

ಕ್ರಿಯಾವಿಶೇಷಣ

  • ಕರ್ಕಶವಾಗಿ; ಅಪಶ್ರುತಿಯಿಂದ; ಕಿರುಗುಟ್ಟುತ್ತಾ; ಕರ್ಣಕಠೋರವಾಗಿ.
  • ಅಹಿತವಾಗಿ.
  • ಅಸಂಗತವಾಗಿ; ಅಸಂಬದ್ಧವಾಗಿ; ಹೊಂದಿಕೆಯಿಲ್ಲದೆ.
  • ಜಗಳವಾಡುತ್ತಾ; ಕಚ್ಚಾಡುತ್ತಾ; ಕಿತ್ತಾಡುತ್ತಾ.

jarvey

ನಾಮವಾಚಕ

  • (ಬಾಡಿಗೆ) ಗಾಡಿ ಹೊಡೆಯುವವನು; ಕುದುರೆಗಾಡಿ ಚಾಲಕ.
  • (ಐರ್ಲೆಂಡ್‍, ಐರಿಶ್‍) ಕಾರಿನ ಚಾಲಕ.

Jas.

ಸಂಕ್ಷಿಪ್ತ

James(ಬೈಬಲ್ಲಿನ ಹೊಸ ಒಡಂಬಡಿಕೆಯಲ್ಲಿ ಸಹ).

jasey

ನಾಮವಾಚಕ

(ಪ್ರಾಚೀನ ಪ್ರಯೋಗ) ಕೂದಲ – ಕುಲಾವಿ, ಟೋಪಿ; ಒರಟಾದ, ಕೃತಕ ಕೂದಲಿನ ಟೋಪಿ.

Search Dictionaries

Loading Results

Follow Us :   
  Download Bharatavani App
  Bharatavani Windows App